ನೀರಿನ ಬಿಲ್‌ ಪಾವತಿಸಲು ರಿಮೋಟ್ ಸೆನ್ಸಾರ್‌ ಮೆಶಿನ್‌

Monday, January 28th, 2019
Urva Market

ಮಂಗಳೂರು : ನೀರಿನ ಬಿಲ್‌ ಪಾವತಿಸಲು ನಾಲ್ಕು ಅಂತಸ್ತು ಮೇಲ್ಪಟ್ಟ ವಾಣಿಜ್ಯ ಮತ್ತು ವಸತಿ ಸಮುಚ್ಚಯಗಳಲ್ಲಿ ‘ಸ್ವಯಂಚಾಲಿತ ರಿಮೋಟ್ ಸೆನ್ಸಾರ್‌ ಮೆಶಿನ್‌’ ಅಳವಡಿಸಲು ಚಿಂತಿಸಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಅವರು ಹೇಳಿದರು. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಮಹಾನಗರ ಪಾಲಿಕೆ ಜಂಟಿ ಸಹಭಾಗಿತ್ವದಲ್ಲಿ ಉರ್ವ ಮಾರುಕಟ್ಟೆ ನೂತನ ವಾಣಿಜ್ಯ ಸಂಕೀರ್ಣವನ್ನು ರವಿವಾರ ಉದ್ಘಾಟಿಸಿ ಮಾತನಾಡಿದ ಅವರು, ನೀರಿನ ಬಿಲ್‌, ಮನೆ ತೆರಿಗೆಯನ್ನು ಬಡವರು ಸಕಾಲಕ್ಕೆ ಕಟ್ಟುತ್ತಿದ್ದು, ಶ್ರೀಮಂತರು ಇನ್ನೂ ಬಾಕಿ ಇರಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ […]

ಉರ್ವ ಮಾರುಕಟ್ಟೆ ಕಾಮಗಾರಿ..ಶಾಸಕ ವೇದವ್ಯಾಸ್ ಕಾಮತ್ ಅವರು ಭೇಟಿ ನೀಡಿ ಪರಿಶೀಲನೆ!

Thursday, June 28th, 2018
urva-store

ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ನಿರ್ಮಿಸುತ್ತಿರುವ ಉರ್ವ ಮಾರುಕಟ್ಟೆಯ ಕಾಮಗಾರಿಯನ್ನು ಮಂಗಳೂರು ನಗರ ದಕ್ಷಿಣದ ಶಾಸಕ ವೇದವ್ಯಾಸ್ ಕಾಮತ್ ಅವರು ಭೇಟಿ ನೀಡಿ ಪರಿಶೀಲಿಸಿದರು. ತಳ ಮಹಡಿಯಲ್ಲಿರುವ ಮೀನು ಮತ್ತು ಮಾಂಸದ ಅಂಗಡಿಗಳ ಬಗ್ಗೆ,ನೆಲ ಮಹಡಿಯ ತರಕಾರಿ ಹಾಗೂ ಹಣ್ಣುಹಂಪಲು ಮಳಿಗೆಗಳನ್ನು ವೀಕ್ಷಣೆ ಮಾಡಿ,ಎರಡನೇ ಮತ್ತು ಮೂರನೇ ಮಹಡಿಯಲ್ಲಿ ನಿರ್ಮಾಣವಾಗುತ್ತಿರುವ ಕಚೇರಿ ಸ್ಥಳಾವಕಾಶದ ಮಾಹಿತಿಯನ್ನು ಪಡೆದುಕೊಂಡರು.ಕಟ್ಟಡದ ಎಂಜಿನಿಯರ್ ಅವರನ್ನು ಕರೆದು ಇಲ್ಲಿನ ತ್ಯಾಜ್ಯ ನಿರ್ವಹಣೆಯನ್ನು ಯಾವ ರೀತಿ ಮಾಡಲಾಗುತ್ತಿದೆ. ಇಡೀ ಮಾರುಕಟ್ಟೆಗೆ ನೀರು ಒದಗಿಸಲು ಸಂಪು ಮತ್ತು […]

ಉರ್ವ ಮಾರುಕಟ್ಟೆ ಹಾಗೂ ವಾಣಿಜ್ಯ ಸಂಕೀರ್ಣ ಕಟ್ಟಡಕ್ಕೆ ರಮಾನಾಥ ರೈ ಶಿಲಾನ್ಯಾಸ

Tuesday, November 8th, 2016
Urwa market

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸುಮಾರು 12 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನಗರದ ಉರ್ವ ಮಾರುಕಟ್ಟೆ ಹಾಗೂ ವಾಣಿಜ್ಯ ಸಂಕೀರ್ಣ ಕಟ್ಟಡಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಇಂದು ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಪಾಲಿಕೆಯು ಉತ್ತಮವಾಗಿ ಆಡಳಿತವನ್ನು ನಿರ್ವಹಿಸುತ್ತಿದೆ. ಪಾಲಿಕೆಯ ವಾರ್ಡ್‌ಗಳಲ್ಲಿ ಸದಸ್ಯರು ಇನ್ನಷ್ಟು ಸಮರ್ಪಕವಾಗಿ ಕೆಲಸಗಳನ್ನು ಮಾಡಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಮೇಯರ್ ಹರಿನಾಥ್, ಮಾರುಕಟ್ಟೆಯ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದರು. ಉಪ ಮೇಯರ್ […]