ಡ್ರಗ್ಸ್ ದಂಧೆಯಲ್ಲಿ ತೊಡಗಿಕೊಂಡಿರುವವರನ್ನು ತಕ್ಷಣವೇ ಬಂಧಿಸಲು ಎಬಿವಿಪಿಯಿಂದ ಸಹಿಸಂಗ್ರಹ ಅಭಿಯಾನ

Tuesday, September 15th, 2020
Abvp

ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಶಾಖೆಯ ವತಿಯಿಂದ ಡ್ರಗ್ಸ್ ದಂಧೆಯಲ್ಲಿ ತೊಡಗಿಕೊಂಡಿರುವವರನ್ನು ತಕ್ಷಣವೇ ಬಂಧಿಸಿ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಬೇಕೆಂದು ಸಹಿಸಂಗ್ರಹ ಅಭಿಯಾನವನ್ನು ಮಂಗಳವಾರ ನಗರದ ಪುರಭವನದ ಎದುರು ಹಮ್ಮಿಕೊಳ್ಳಲಾಗಿತ್ತು, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಶ್ರೀ ಡಾ. ರಾಜಶೇಖರ್ ಹೆಬ್ಬಾರ್ ರವರು ಸಹಿ ಮಾಡುವ ಮೂಲಕ ಚಾಲನೆ ನೀಡಿದರು. ನಾಗರಿಕರು ಸ್ವತಃ ಸಹಿ ಮಾಡುವ ಮೂಲಕ ಕಾರ್ಯಕ್ರಮವನ್ನು ಬೆಂಬಲಿಸಿದರು. ನಗರ ಸಂಘಟನಾ ಕಾರ್ಯದರ್ಶಿ ವೀರೇಶ್ ಅಜ್ಜಣನವರ್, ರಾಜ್ಯ ಸಹ ಕಾರ್ಯದರ್ಶಿ ಸಂದೇಶ್ ರೈ, […]

ದೇಶದ ಯುವ ಶಕ್ತಿಯನ್ನು ರಕ್ಷಿಸಿಕೊಳ್ಳಲು ಡ್ರಗ್ಸ್ ಜಾಲವನ್ನು ಸಂಪೂರ್ಣ ಕಿತ್ತು ಹಾಕಬೇಕು : ಎಬಿವಿಪಿ

Thursday, September 3rd, 2020
Abvp protest

ಮಂಗಳೂರು :  ಸ್ಯಾಂಡಲವುಡ್ ನೊಂದಿಗೆ ನಂಟಿರುವ ಬೃಹತ್ ಡ್ರಗ್ಸ್ ಜಾಲವನ್ನು ಎನ್‌ಸಿಬಿ ಅಧಿಕಾರಿಗಳು ಭೇದಿಸಿರುವ ಬಗ್ಗೆ ಮತ್ತು ಡ್ರಗ್ಸ್ ಜಾಲದ ಹಿಂದೆ ಸಮಾಜದಲ್ಲಿ ಇರುವಂಥ ಪ್ರತಿಷ್ಠಿತ ಪ್ರಭಾವಿ ಶ್ರೀಮಂತ ಕುಟುಂಬಗಳ ವ್ಯಕ್ತಿಗಳು, ಸಿನಿಮಾ ನಟ, ನಟಿಯರು, ರಾಜಕಾರಣಿಗಳ ಮಕ್ಕಳು ಇರುವ ಮಾಹಿತಿಗಳು  ಈಗ ಜಗಜ್ಜಾಹೀರಾಗಿದೆ.  ಸಮಾಜಕ್ಕೆ ಮಾದರಿ ಆಗಬೇಕಾದವರೆಲ್ಲ ಇಂತಹ ಚಟಗಳಿಗೆ ಅಂಟಿಕೊಂಡಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಡ್ರಗ್ಸ್ ಜಾಲದ ಪಿಡುಗಿನಿಂದ ದೇಶದ ಯುವ ಶಕ್ತಿಯನ್ನು ರಕ್ಷಿಸಿಕೊಳ್ಳಲು ಡ್ರಗ್ಸ್ ಜಾಲವನ್ನು ಸಂಪೂರ್ಣವಾಗಿ ಬುಡಸಮೇತ ಕಿತ್ತು ಹಾಕಲು ಕೇಂದ್ರ […]

ಎಬಿವಿಪಿ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನ ಆಚರಣೆ

Wednesday, March 11th, 2020
ABVP

ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಮಂಗಳೂರು ವಿಶ್ವವಿದ್ಯಾಲಯ ಘಟಕದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಕಾರ್ಯಗಾರವನ್ನು ದಿನಾಂಕ 08.03.2020 ರಂದು ಅಸೇಗೂಳಿಯ ಲಯನ್ಸ್ ಕ್ಲಬ್ ನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯಲ್ಲಿ ರೋಶನಿ ನಿಲಯದ ಮೌಲ್ಯಮಾಪನ ಕುಲಸಚಿವರಾದ ಶ್ರೀಮತಿ ವಿನುತಾ ರೈ, ಶ್ರೀಮತಿ ಕಮಲಾ ಪ್ರಭಾಕರ್ ಭಟ್, ವಿದ್ಯಾರ್ಥಿ ಸಂಘದ ಸದಸ್ಯರಾದ ಕು. ದಿಕ್ಷೀತಾ, ಕು. ಮಂಜುಳಾ ಹಾಗೂ ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿಯಾದ ಶ್ರೀ ಬಸವೇಶ್ ಕುಮಾರ್ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು […]

ಎಬಿವಿಪಿಯಿಂದ ಕುದ್ಮುಲ್ ರಂಗರವ್ ಸಮಾಧಿಗೆ ಪುಷ್ಪನಮನ

Friday, February 7th, 2020
ABVP

ಮಂಗಳೂರು : ಶಿಕ್ಷಣದಿಂದ ಪರಿವರ್ತನೆ ಸಾಧ್ಯ ಎಂದು ತಿಳಿಸಿಕೊಟ್ಟ ಕುದ್ಮುಲ್ ರಂಗರಾವ್ ಸಮಾಜಕ್ಕೆ ಪ್ರೇರಣೆ. ಮಂಗಳೂರಿನ ಪುರಭವನದಲ್ಲಿ ನಡೆಯುತ್ತಿರುವ ಅಭಾವಿಪದ 39ನೇ ರಾಜ್ಯ ಸಮ್ಮೇಳನಕ್ಕೆ ಅವರ ತತ್ವ ಆದರ್ಶಗಳು ಮಾದರಿಯಾಗಿವೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ಹರ್ಷ ನಾರಾಯಣ ತಿಳಿಸಿದರು. ಇವರು ಗುರವಾರ ಮಂಗಳೂರಿನ ಬಾಬುಗುಡ್ಡೆಯ ಬಳಿ ಇರುವ ಕುದ್ಮುಲ್ ರಂಗರಾವ್ ಸ್ಮಾರಕಕ್ಕೆ ಪುಷ್ಪರ್ಚಾನೆ ಮಾಡಿ ಮಾತನಾಡಿದರು. ಸಶಕ್ತ ಸಮಾಜಕ್ಕೆ ಮಾರಕವಾದ ಅಸ್ಪೃಶ್ಯತೆಯ ನಿವಾರಣೆಗಾಗಿ ಜೀವ ಸವೆಸಿದ ಕುದ್ಮುಲ್ ರಂಗರಾವ್ ಒಬ್ಬ ಸಮಾಜ […]

ಶಿಥಿಲಗೊಂಡ ಕೆ.ಪಿ.ಟಿ ಕಟ್ಟಡ ದುರಸ್ತಿಗೆ ಆಗ್ರಹಿಸಿ ಬೀದಿಗಿಳಿದ ಎಬಿವಿಪಿ

Wednesday, January 22nd, 2020
ABVP

ಮಂಗಳೂರು : ಮಂಗಳೂರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕೆ.ಪಿ.ಟಿ ಘಟಕದ ವತಿಯಿಂದ ಕೆ.ಪಿ.ಟಿ ಡಿಪ್ಲೋಮಾ ಕಾಲೇಜಿನ ಸಮಸ್ಯೆಯನ್ನು ಸರಿಪಡಿಸುವ ಕುರಿತು ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಸೇರಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಸರ್ವಕಾಲೇಜು ಎಬಿವಿಪಿ ಅಧ್ಯಕ್ಷ ವಚನ್ ಕುಮಾರ್ ಮಾತನಾಡಿ ಅನೇಕ ಬಾರಿ ಕೆ.ಪಿ.ಟಿ ಕಾಲೇಜಿನ ಪಾಲಿಮರ್, ಕೆಮಿಕಲ್ ಮತ್ತು ಎಲೆಕ್ಟ್ರಾನಿಕ್ ವಿಭಾಗದ ಕಟ್ಟಡವು ಶಿಥಿಲಗೊಂಡಿದ್ದು ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಕಾಲೇಜಿನ ಪ್ರಾಂಶುಪಾಲರನ್ನು ಮನವಿ ಮಾಡಿದ್ದು, ಈ ವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ […]

ಸಿಎಫ್ಐ, ಪಿಎಫ್ಐ ಸಂಘಟನೆಗಳನ್ನು ನಿಷೇಧಿಸುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪರವರಲ್ಲಿ ಮನವಿ ಸಲ್ಲಿಸಿದ ಎಬಿವಿಪಿ

Wednesday, December 25th, 2019
ABVP

ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವತಿಯಿಂದ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಗಲಭೆಗಳಲ್ಲಿ ಸಿ.ಎಫ್.ಐ ಮತ್ತು ಪಿ.ಎಫ್.ಐ ಸಂಘಟನೆಗಳು ರಾಷ್ಟ್ರೀಯತೆಯೊಂದಿಗೆ ತೊಡಗುತ್ತಿರುವಂತಹ ಹಲವಾರು ನಿದರ್ಶಗಳ ಆಧಾರದ ಮೇಲೆ ಈ ಸಂಘಟನೆಗಳನ್ನು ನಿಷೇಧಿಸಿ ಸಂಘಟನೆಯ ಪ್ರಮುಖರ ಮೇಲೆ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಮಂಗಳೂರಿನ ಸರ್ಕಿಟ್‌ಹೌಸ್ ನಲ್ಲಿ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪರವರು ಈ ವಿಷಯದ ಕುರಿತಂತೆ ಗಮನವನ್ನು ಹರಿಸುವ ಬಗ್ಗೆ ಗೃಹ ಸಚಿವರಾದ ಎಸ್.ಆರ್ ಬೊಮ್ಮಾಯಿಯವರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ […]

ಎಬಿವಿಪಿ ಯಿಂದ ಡಾ| ಬಿ.ಆರ್ ಅಂಬೇಡ್ಕರ್ ರವರ ಪುಣ್ಯ ತಿಥಿ ಸಾಮರಸ್ಯ ಕಾರ್ಯಕ್ರಮ

Saturday, December 7th, 2019
abvp

ಮಂಗಳೂರು  :  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ನಗರದ ವತಿಯಿಂದ ಡಾ| ಬಿ.ಆರ್ ಅಂಬೇಡ್ಕರ್ ರವರ ಪುಣ್ಯ ತಿಥಿಯ ದಿನವಾದ ಡಿಸೆಂಬರ್ 6 ರಂದು ಸಾಮಾಜಿಕ ಸಾಮರಸ್ಯ ಕಾರ್ಯಕ್ರಮವನ್ನು ಕೆ.ಪಿ.ಟಿಯ ಡಿ. ದೇವರಾಜ್ ಅರಸು ಹಿಂದುಳಿದ ವರ್ಗಗಳ ವಸತಿ ನಿಲಯ ಟೌನ್ ಹಾಲಿನ ಅಂಬೇಡ್ಕರ್ ಪ್ರತಿಮೆಯ ಬಳಿ ಹಾಗೂ ಅಶೋಕ ನಗರದ ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕೆಪಿಟಿ, ಬಿಸಿಎಂ ವಿದ್ಯಾರ್ಥಿನಿಲಯದಲ್ಲಿ ಮುಂಜಾನೆ ಸಾಮಾಜಿಕ ಸಾಮರಸ್ಯದ ಕುರಿತು ಹಾಗೂ ಅಂಬೇಡ್ಕರ್‌ರವರ ಜೀವನದ […]

ಹಿಮಾಪಾತದಿಂದ ವೀರಮರಣ ಹೊಂದಿದ ಸೈನಿಕರಿಗೆ ಎಬಿವಿಪಿ ಯಿಂದ ಶೃದ್ಧಾಂಜಲಿ

Thursday, November 21st, 2019
abvp

ಮಂಗಳೂರು  :  ಸಿಯಾಚಿನ್ ನಲ್ಲಿ ನವೆಂಬರ್ 8ನೇ ತಾರೀಕಿನಂದು ಹಿಮಾಪಾತದಿಂದ ವೀರಮರಣ ಹೊಂದಿದ ಎನ್.ಕೆ ಮನಿಂದರ್ ಸಿಂಗ್, ಮನೀಶ್ ಕುಮಾರ್, ದೀಪಾಲ್ ಕುಮಾರ್ ಹಾಗೂ ವೀರ್‌ಪಾಲ್ ಸಿಂಗ್ ಇವರಿಗೆ ಕದ್ರಿ ಯುದ್ಧ ಸ್ಮಾರಕದಲ್ಲಿ ಗುರುವಾರ ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್ ಮಂಗಳೂರು ಇವರು  ಶೃದ್ಧಾಂಜಲಿ ಸಮರ್ಪಿಸಿದರು. ಈ ಸಂದರ್ಭದಲ್ಲಿ ನಗರ ಕಾರ್ಯದರ್ಶಿಯಾದ ಮಣಿಕಂಠ ಕಳಸ ಮಾತನಾಡಿ ಸಿಯಾಚಿನ್ ಯುದ್ಧ ಭೂಮಿಯ ಸ್ವರೂಪವನ್ನು ತಿಳಿಸಿ ಕಳೆದ ಹಲವು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಹಿಮಪಾತದಿಂದ ಮಡಿದವರನ್ನು ನೆನೆಸಿಕೊಳ್ಳುತ್ತಾ ನಮ್ಮ ರಾಜ್ಯದವರೇ ಆದಂತಹ ಲಯನ್ಸ್ […]

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ಧು ಎಬಿವಿಪಿಯಿಂದ ವಿಜಯೋತ್ಸವ ; ಪೊಲೀಸರಿಂದ ವಿರೋಧ

Tuesday, August 6th, 2019
Abvp

ಮಂಗಳೂರು : ಸೋಮವಾರ ಕೇಂದ್ರ ಸರ್ಕಾರ ಐತಿಹಾಸಿಕ ತೀರ್ಮಾನವನ್ನು ತೆಗೆದುಕೊಂಡು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ರದ್ಧುಗೊಳಿಸಿರುವುದನ್ನು ಮಂಗಳೂರು ಎಬಿವಿಪಿ ಘಟಕವು ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ವಿಜಯೋತ್ಸವವನ್ನಾಗಿ ಆಚರಿಸಿತು. ಈ ಸಂದರ್ಭ ಅಲ್ಲೇ ಇದ್ದ ಪೊಲೀಸರು ವಿಜಯೋತ್ಸವವನ್ನು ತಡೆಯಲು ಮುಂದಾದರು. ಇದನ್ನು ವಿರೋಧಿಸಿದ ಎಬಿವಿಪಿ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.  

ಪುತ್ತೂರು : ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ವಿಡಿಯೋ ವೈರಲ್

Wednesday, July 3rd, 2019
Abvp-Girl

ಪುತ್ತೂರು : ಪುತ್ತೂರು ಕಾಲೇಜಿನ ವಿದ್ಯಾರ್ಥಿನಿ ಯೊಬ್ಬಳಿಗೆ ಗಾಂಜಾ ನೀಡಿ ನಾಲ್ಕು ಮಂದಿ ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಕುರಿತ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯವಿವೇಕಾನಂದ ಕಾಲೇಜಿನ  ನಾಲ್ವರು ವಿದ್ಯಾರ್ಥಿಗಳು ತಮ್ಮದೇ ಕಾಲೇಜಿನ ಸಹಪಾಠಿ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದು, ಅಮಲು ಬರುವಂತೆ ಮಾಡಿ ಅತ್ಯಾಚಾರ ನಡೆಸಿರುವುದಲ್ಲದೆ, ಈ ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲೂ ಹರಿಬಿಟ್ಟಿದ್ದಾರೆ ಎನ್ನಲಾಗಿದೆ. ಈ ವಿಚಾರ […]