ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಳ

Saturday, September 23rd, 2023
MIA

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಕಾರ್ಯಾಚರಿಸುತ್ತಿರುವ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸುತ್ತಿವೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಐದು ತಿಂಗಳ ಆಗಮನದ ದತ್ತಾಂಶವನ್ನು ಪರಿಶೀಲಿಸಿದಾಗ, ವಿಮಾನಯಾನ ಸಂಸ್ಥೆಗಳು – ಇಂಡಿಗೊ ಮತ್ತು ಏರ್ ಇಂಡಿಯಾ ಅವರು ನೇರವಾಗಿ ಸಂಪರ್ಕಿಸುವ ದೇಶೀಯ ತಾಣಗಳಲ್ಲಿ 87.5% ಪ್ರಯಾಣಿಕರ ಹೊರೆಯನ್ನು ದಾಖಲಿಸಿವೆ ಎಂದು ಸೂಚಿಸುತ್ತದೆ. ಏರ್ ಇಂಡಿಯಾ ಎಕ್ಸ್ಪ್ರೆಸ್ ಮತ್ತು ಇಂಡಿಗೊ ಅಂತರರಾಷ್ಟ್ರೀಯ ಮಾರ್ಗಗಳಲ್ಲಿ 81.7% ಲೋಡ್ ಅನ್ನು ಹೊಂದಿವೆ. ಬೆಂಗಳೂರು, ಚೆನ್ನೈ, […]

ಭಾರತೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ 10 ವರ್ಷಗಳ ಡೇಟಾ ಸೋರಿಕೆ, 45 ಲಕ್ಷ ಪ್ರಯಾಣಿಕರ ವೈಯಕ್ತಿಕ ಮಾಹಿತಿ ಹ್ಯಾಕ್

Saturday, May 22nd, 2021
AirIndia

ನವದೆಹಲಿ : ಏರ್ ಇಂಡಿಯಾದ ಡೇಟಾ ಸೋರಿಕೆಯಾಗಿದ್ದು, ಕಳೆದ 10 ವರ್ಷಗಳ ಸುಮಾರು 45 ಲಕ್ಷ ಏರ್ ಇಂಡಿಯಾ ಪ್ರಯಾಣಿಕರ ವೈಯಕ್ತಿಕ ಮಾಹಿತಿಯನ್ನು ಹ್ಯಾಕ್ ಮಾಡಲಾಗಿದೆ ಎಂದು  ಸಂಸ್ಥೆ ಹೇಳಿಕೊಂಡಿದೆ. ಡೇಟಾ  ಸರ್ವರ್ ಅನ್ನು ತಂತ್ರಜ್ಞಾನ ಪೂರೈಕೆ ಸಂಸ್ಥೆ ಎಸ್‌ಐಟಿಎ(ಸಿಟಾ) ನಿರ್ವಹಣೆ ಮಾಡುತ್ತಿದ್ದು, ಏರ್ ಇಂಡಿಯಾದ ‘ಡಾಟಾ ಪ್ರೊಸೆಸರ್ ಆಫ್ ಪ್ಯಾಸೆಂಜರ್ ಸರ್ವಿಸ್ ಸಿಸ್ಟಂ’ನಲ್ಲಿ ಸೈಬರ್ ದಾಳಿಯಾಗಿ ಸುಮಾರು 45 ಲಕ್ಷ ಪ್ರಯಾಣಿಕರ ವೈಯಕ್ತಿಕ ಮಾಹಿತಿ ಹ್ಯಾಕ್ ಮಾಡಲಾಗಿದೆ ಎಂದು ಹೇಳಿದೆ. ಆಗಸ್ಟ್ 26, 2011 ಮತ್ತು ಫೆಬ್ರವರಿ 20, 2021 […]

ಲಾಕ್ ಡೌನ್ : ದುಬೈಯಲ್ಲಿ ಉಳಿದಿರುವ ಕರಾವಳಿಗರ ಮೊದಲ ವಿಮಾನ ಮೇ 14 ಕ್ಕೆ ಮಂಗಳೂರಿಗೆ

Friday, May 8th, 2020
Air-India

ಮಂಗಳೂರು: ಲಾಕ್ ಡೌನ್ ನಿಂದ ದುಬೈಯಲ್ಲಿ ಉಳಿದಿರುವ ಕರಾವಳಿಗರನ್ನು ಹೊತ್ತ ಮೊದಲ ವಿಮಾನ ಮೇ 14 ಕ್ಕೆ ಮಂಗಳೂರಿಗೆ ಬರಲಿದೆ ಎಂದು ಏರ್ ಇಂಡಿಯಾ ಮೂಲಗಳು ತಿಳಿಸಿವೆ. ದುಬೈನಿಂದ ಮಂಗಳೂರಿಗೆ ಮೇ 12 ರಂದು ಮೊದಲ ವಿಮಾನ ತಲುಪಬೇಕಿತ್ತು, ಅದನ್ನು ಈಗ ಮೇ 14 ಕ್ಕೆ ಮರು ನಿಗದಿಪಡಿಸಲಾಗಿದೆ. ಯುಎಇ ಸಮಯ 16.10 ಕ್ಕೆ ಏರ್ ಇಂಡಿಯಾ ವಿಮಾನ ದುಬೈನಿಂದ ಮೇ 14 ರಂದು ಹೊರಟು ರಾತ್ರಿ 9.10 ಕ್ಕೆ ಮಂಗಳೂರು ತಲುಪಲಿದೆ. ವಿಮಾನದಲ್ಲಿ ಪ್ರಯಾಣಿಕರನ್ನು ಸಾಮಾಜಿಕ ಅಂತರವನ್ನು ಕಾಯ್ದು […]

ಹಜ್ ಸಬ್ಸಿಡಿ ರದ್ದು ನಿರ್ಧಾರ ಸ್ವಾಗತಿಸಿದ ಸಚಿವ ಯುಟಿ ಖಾದರ್

Wednesday, January 17th, 2018
cancellation

ಮಂಗಳೂರು: ಹಜ್ ಯಾತ್ರೆಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ರದ್ದು ಪಡಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಆಹಾರ ಮತ್ತು ನಾಗರೀಕ ಸಚಿವ ಯು.ಟಿ.ಖಾದರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಜ್ ಸಬ್ಸಿಡಿಯಿಂದ ಏರ್ ಇಂಡಿಯಾಗೆ ಮಾತ್ರ ಲಾಭವಾಗುತ್ತಿತ್ತು, ಸಬ್ಸಿಡಿ ಪಡೆದವರು ಏರ್ ಇಂಡಿಯಾ ವಿಮಾನದಲ್ಲೇ ಪ್ರಯಾಣಿಸಬೇಕೆಂಬ ನಿಯಮ ಹಾಕಲಾಗಿತ್ತು, ಬೇರೆ ವಿಮಾನಗಳು ಅದಕ್ಕಿಂತಲೂ ಕಡಿಮೆ ದರದಲ್ಲಿ ಹಜ್ ಗೆ ಹೋಗಬಹುದು ಎಂದರು. ಯಾವುದೋ ಕಾಲದಲ್ಲಿ ಹಜ್ ಸಬ್ಸಿಡಿ ಜಾರಿಯಾಗಿತ್ತು, ಆದರೆ ಈಗ ಹಜ್‌ಗೆ ಹೋಗುವ ಯಾತ್ರಿಕರು ಸರ್ಕಾರದ […]

ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅವಘಡ

Thursday, January 11th, 2018
mangaluru

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯಲಿದ್ದ ಭಾರೀ ಅವಘಡವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಪೈಲಟ್ ಸಮಯ ಪ್ರಜ್ಞೆಯಿಂದಾಗಿ ಅಪಘಾತ ತಪ್ಪಿದ್ದು ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದ ರನ್ ವೇ ಸುತ್ತಲಿದ್ದ ಹುಲ್ಲು ತೆಗೆಯಲು ಟ್ರಾಕ್ಟರ್ ಕರೆಸಲಾಗಿತ್ತು. ಈ ಟ್ರಾಕ್ಟರನ್ನು ಅದರ ಚಾಲಕ ರನ್ ವೇ ಅಂತ್ಯದಲ್ಲಿ ನಿಲ್ಲಿಸಿದ್ದ. ಇನ್ನೇನು ಮುಂಬೈಗೆ ಹೊರಬೇಕಿದ್ದ ಜೆಟ್ ಏರ್ ವೇಸ್ ವಿಮಾನ ಟೇಕ್ ಆಫ್ ಆಗುವುದರಲ್ಲಿತ್ತು. ಆದರೆ ಚಾಲಕನಿಗೆ ಟ್ರಾಕ್ಟರ್ ನಿಂತಿರುವುದು ತಿಳಿದಿರಲಿಲ್ಲ. ಆಗ ಈ ಟ್ರಾಕ್ಟರ್ […]

ಏರ್ ಇಂಡಿಯಾ ಹಾಗು ಜೆಟ್ ಏರ್ ವೇಸ್ ನ ಮಂಗಳೂರು – ದುಬೈ ವಿಮಾನ ಯಾನದಲ್ಲಿ ಬದಲಾವಣೆ

Thursday, March 21st, 2013
Jet Air flights

ಮಂಗಳೂರು : ಭಾರತದ ಪ್ರಮುಖ ವಿಮಾನ ಯಾನ ಸಂಸ್ಥೆಗಳಾದ  ಏರ್ ಇಂಡಿಯಾ ಹಾಗು ಜೆಟ್ ಏರ್ ವೇಸ್ ಸಂಸ್ಥೆಗಳು ಮಂಗಳೂರು – ದುಬಾಯಿಗೆ ಪ್ರಾರಂಭಿಸಿದ್ದ ತಮ್ಮ ವಿಮಾನ ಯಾನದ ಸಮಯವನ್ನು ಬದಲಿಸಿದ್ದು ಇದು ಮಾರ್ಚ್ ೩೧ ರಿಂದ ಜಾರಿಗೆ ಬರಲಿದೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ ನ ಎರಡು ವಿಮಾನಗಳಲ್ಲಿ ಮೊದಲ ವಿಮಾನವು ದುಬಾಯಿಯಿಂದ ಮುಂಜಾನೆ ಬೆಳಿಗ್ಗೆ 4.25 ಕ್ಕೆ ಹೊರಟು ಬೆಳಿಗ್ಗೆ 9.30 ಕ್ಕೆ ಮಂಗಳೂರು ತಲುಪಲಿದೆ. ಎರಡನೇ ವಿಮಾನದ ಸಮಯವನ್ನು ಬದಲಿಸದೇ ಇದ್ದು, ಈ […]

ಏರ್ ಇಂಡಿಯಾ ವಿಮಾನ ದುರಂತದ ಒಂದು ವರ್ಷದ ಕಹಿ ನೆನಪು

Saturday, May 21st, 2011
ಏರ್ ಇಂಡಿಯಾ ದುರಂತದ ಒಂದು ವರುಷ

ಮಂಗಳೂರು : ಏರ್ ಇಂಡಿಯಾ  ಬೋಯಿಂಗ್ ಏರ್‌ಕ್ರಾಫ್ಟ್ 737- 800  ವಿಮಾನ ದುರಂತ ನಡೆದು  ಮೇ 22 ಕ್ಕೆ   ಒಂದು ವರ್ಷವಾದ ಕಹಿ ನೆನಪಿನ ದಿನವನ್ನು ಮಂಗಳೂರು ವಿಮಾನ ದುರಂತ ಸಂತ್ರಸ್ತರ ಕುಟುಂಬಗಳ ಸಂಘ ಇಂದು ಆಚರಿಸಿತು. ಇಂದು ಬೆಳಿಗ್ಗೆ ಬಲ್ಮಠದ ಸಹೋದಯ ಸಭಾಂಗಣದಲ್ಲಿ ನಡೆದ ಸಂತಾಪ ಸಭೆಯ ಅಧ್ಯಕ್ಷತೆಯನ್ನು ಮಾಹೆಯ ಮಾಜಿ ಡೀನ್ ಡಾ.ಬಿ.ಎಂ. ಹೆಗ್ಡೆ ವಹಿಸಿದ್ದರು. ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿಕೋರಿ ರಾಜ ಯೋಗಿಣಿ ಬ್ರಹ್ಮಕುಮಾರಿ ಪಿ.ಕೆ. ನಿರ್ಮಲಾ, ಅಬ್ದುಲ್ ಅಝೀಝ್ ಫೈಝಿ, ರೆ.ಫಾ. […]

ಡಿ.ವೈ.ಎಫ್.ಐ ನೇತೃತ್ವದಲ್ಲಿ ವಿಮಾನ ದುರಂತ ಸಂತ್ರಸ್ತರಿಗೆ ನ್ಯಾಯಯುತವಾದಪರಿಹಾರ ಒದಗಿಸಬೇಕೆಂದು ಪ್ರತಿಭಟನೆ

Thursday, September 9th, 2010
 ಡಿ.ವೈ.ಎಫ್.ಐ ನೇತೃತ್ವದಲ್ಲಿ ವಿಮಾನ ದುರಂತ ಸಂತ್ರಸ್ತರಿಗೆ ನ್ಯಾಯಯುತವಾದಪರಿಹಾರ ಒದಗಿಸಬೇಕೆಂದು ಪ್ರತಿಭಟನೆ

ಮಂಗಳೂರು: ಡಿ.ವೈ.ಎಫ್.ಐ ನೇತೃತ್ವದಲ್ಲಿ ಜೈಲ್ ರೋಡ್ ನಿಂದ ಏರ್ ಇಂಡಿಯಾ ಕಛೇರಿ ತನಕ ಪ್ರತಿಭಟನಾ ಮೆರವಣಿಗೆ ನಿನ್ನೆ ಬೆಳಿಗ್ಗೆ ನಡೆಯಿತು. ಬಜಪೆಯಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮಾಂಟ್ರಿಯಲ್ ಒಪ್ಪಂದದ ಪ್ರಕಾರ ನ್ಯಾಯಯುತವಾದ ಪರಿಹಾರ ಸಿಗಬೇಕೆಂದು ಆಗ್ರಹಿಸಿ ಬ್ರಹತ್ ಏರ್ ಇಂಡಿಯಾ ಕಛೇರಿ ಚಲೋ ಜರಗಿತು. ಕಾಸರಗೋಡು ಲೋಕಸಭಾ ಸದಸ್ಯ ಪಿ. ಕರುಣಾಕರನ್ ಸಭೆಯನ್ನು ಉದ್ಘಾಟಿಸಿದರು , ಬಳಿಕ ಮಾತನಾಡಿದ ಅವರು ಸಂತ್ರಸ್ತರಿಗೆ ಆಗಿರುವ ಅನ್ಯಾಯದ ಕುರಿತು ಲೋಕಸಭೆಯಲ್ಲಿ ಪ್ರಸ್ತಾಪಿಸುವುದಾಗಿ ತಿಳಿಸಿದರು. ಏರ್ ಇಂಡಿಯಾ ದುರಂತದ […]