ನರಿಂಗಾನ ಗ್ರಾಮದ ಮರೀಕಳದ ಕಸಾಯಿಖಾನೆಗೆ ಅಕ್ರಮ ದನ ಸಾಗಾಟ, ಒಬ್ಬ ಆರೋಪಿಯನ್ನು ಬಿಟ್ಟ ಪೊಲೀಸರು – ಬಜರಂಗದಳ ಖಂಡನೆ

Friday, September 17th, 2021
Marikkala

ಮಂಗಳೂರು :  ಮುಡಿಪು ಸಮೀಪದ ನರಿಂಗಾನ ಗ್ರಾಮದ ಮೊಂಟೆಪದವು ಸರಕಾರೀ ಶಾಲೆ ಸಮೀಪ ದ ಮರೀಕಳದ ಕಸಾಯಿಖಾನೆಗೆ ಸಾಗಿಸುತ್ತಿದ್ದ ಎರಡು ದನಗಳನ್ನು ಹಾಗು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದರು ಕಾಣದ ಕೈಗಳ ಪ್ರಭಾವದಿಂದ ಒಬ್ಬ ಆರೋಪಿಯನ್ನು ಕೇಸು ದಾಖಲಿಸದೆ ಬಿಟ್ಟಿರುವ ಪೊಲೀಸ್ ಇಲಾಖೆಯ ಈ ಕೃತ್ಯ ಖಂಡನೀಯ ಎಂದು ಬಜರಂಗದಳ  ಹೇಳಿದೆ. ನರಿಂಗಾನ ಗ್ರಾಮದ ಮರೀಕಳದಲ್ಲಿ ನಿರಂತರವಾಗಿ ದನಗಳನ್ನು ವಧೆಗೋಸ್ಕರ ಪಿಕ್ ಅಪ್ ವಾಹನ ಸಂಖ್ಯೆ KA 18 8539 ದಲ್ಲಿ ಕಾನೂನು ಬಾಹಿರವಾಗಿ ಸಾಗಿಸುತ್ತಿರುವ ಮಾಹಿತಿ ಪ್ರಕಾರ ಈ ವಾಹನದಲ್ಲಿ […]

ದನದ ಎರಡೂ ಕಾಲುಗಳನ್ನು ಅಮಾನುಷವಾಗಿ ಕಡಿದು ಕ್ರೂರತೆ ಮೆರೆದ ದೂರ್ತರು

Saturday, April 18th, 2020
Thirthahalli

ತೀರ್ಥಹಳ್ಳಿ : ಬಾಳೇಬೈಲು ಶಾಲೆಯ ಎದುರು ದನದ ಹಿಂದಿನ ಎರಡೂ ಕಾಲುಗಳನ್ನು ಕಡಿದು ಕಸಾಯಿಖಾನೆಗೆ ಸಾಗಿಸುವ ಪ್ರಯತ್ನದಲ್ಲಿ ಅಲ್ಲಿಯೇ ಇದ್ದ ಮನೆಯವರು ಹೊರಬಂದರೆಂದು ಬಿಟ್ಟು ಪರಾರಿಯಾದ  ಘಟನೆ  ಶುಕ್ರವಾರ ರಾತ್ರಿ ನಡೆದಿದೆ. ಹೆದರಿದ ಆ ದನವು ಅಲ್ಲಿಂದ ಸುಮಾರು ದೂರ ಮನುಷ್ಯರೇ ನಡೆಯಲು ಕಷ್ಟವಾಗುವ ಜಾಗದಲ್ಲಿ ಮುಂದಿನ ಎರಡು ಕಾಲಗಳಲ್ಲೇ ಓಡಿ ಹೋಗಿ ಒಂದು ಪೊದೆಯಲ್ಲಿ ಮಲಗಿದೆ. ಇಷ್ಟು ಗಂಭೀರವಾದ ಕತ್ತಿಯೇಟು ಬಿದ್ದು ಎರಡು ಕಾಲುಗಳು ತುಂಡಾಗಿದ್ದರೂ ಆ ದನ ಅಲ್ಲಿ ತನಕ ಹೋಗಿದ್ದೆ ಆಶ್ಚರ್ಯ. ವೈದ್ಯರಾದ ಯುವರಾಜ್ […]

ಸ್ಮಾರ್ಟ್ ಸಿಟಿ ಯೋಜನೆಯಡಿ ಸ್ಮಾರ್ಟ್ ಕಸಾಯಿಖಾನೆ ನಿರ್ಮಾಣಕ್ಕೆ ವಿರೋಧ, ಯೋಜನೆ ರದ್ದುಗೊಳಿಸಲು ಆಗ್ರಹ

Monday, March 2nd, 2020
vishwa-hindu

ಮಂಗಳೂರು : ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರಿನ ಕುದ್ರೋಳಿ ಕಸಾಯಿಖಾನೆಯನ್ನು ಹೊಸ ಸ್ಮಾರ್ಟ್ ಕಸಾಯಿಖಾನೆಯನ್ನಾಗಿ ನಿರ್ಮಾಣ ಮಾಡಲು ನಿರ್ಧರಿಸಿದ್ದು, ಈಗಾಗಲೇ ಡಿಪಿಆರ್ (ವಿವರವಾದ ಯೋಜನೆ ವರದಿ) ತಯಾರಿಸಿದ್ದನ್ನು ವಿಶ್ವಹಿಂದೂ ಪರಿಷದ್ ಮತ್ತು ಬಜರಂಗದಳ ತೀವ್ರವಾಗಿ ವಿರೋಧಿಸುತ್ತದೆ, ಈ ಕಸಾಯಿಖಾನೆಯೂ ಅವೈಜ್ಞಾನಿಕ, ಕಾನೂನು ಬಾಹಿರವಾಗಿದ್ದು. ಈ ಕಸಾಯಿಖಾನೆಯಲ್ಲಿ ನಿರಂತರ ಗೋಹತ್ಯೆಯಾಗುತ್ತಿದ್ದು, ಜಿಲ್ಲೆಯಲ್ಲಿ ಹಲವಾರು ಗಲಭೆ ಕೂಡ ಕಾರಣವಾಗಿದೆ ಅದರಿಂದ ಈ ಕಸಾಯಿಖಾನೆಯನ್ನು ವಿರೋಧಿಸಿ ಈಗಾಗಲೇ ಮಾನ್ಯ ನಗರಾಭಿವೃದ್ಧಿ ಸಚಿವರಾದ ಶ್ರೀ ಬೈರಟ್ಟಿ ಬಸವರಾಜ್ ರವರಿಗೆ ಮನವಿಪತ್ರ ನೀಡಲಾಗಿದ್ದು, ಈ […]

ಕಸಾಯಿಖಾನೆ ವಿವಾದ: ಮಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲಿ ವಾಗ್ವಾದ

Wednesday, October 31st, 2018
kavitha-sanil

ಮಂಗಳೂರು: ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಇಂದು ಕಸಾಯಿಖಾನೆ ಅಭಿವೃದ್ಧಿಗೆ ಸ್ಮಾರ್ಟ್ ಸಿಟಿ ಅನುದಾನ ನೀಡಿಕೆ ವಿಚಾರ ಸಂಬಂಧಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದ ನಡೆಯಿತು. ಸ್ಮಾರ್ಟ್ ಸಿಟಿ ಅನುದಾನದಲ್ಲಿ ಕಸಾಯಿಖಾನೆ ಅಭಿವೃದ್ಧಿ ಪಡಿಸುವ ಬಗ್ಗೆ ಪಾಲಿಕೆಯಲ್ಲಿ ಯಾವುದೇ ಚರ್ಚೆ ಮಾಡದೆ ನೇರವಾಗಿ ಸ್ಮಾರ್ಟ್ ಸಿಟಿ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿರುವುದರ ವಿರುದ್ಧ ಪ್ರತಿಪಕ್ಷದಲ್ಲಿರುವ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಅಂತಿಮವಾಗಿ ಸಭೆಗೆ ಉತ್ತರಿಸಿದ ಮನಪಾ ಮೇಯರ್ ಭಾಸ್ಕರ್ ಮೊಯ್ಲಿ, ಸದ್ಯ ಕುದ್ರೋಳಿಯಲ್ಲಿರುವ ಕಸಾಯಿಖಾನೆಯನ್ನು ಅಭಿವೃದ್ಧಿ ಪಡಿಸೋಣ. […]

ಕಸಾಯಿಖಾನೆ ವಿವಾದ: ಪ್ರಧಾನಮಂತ್ರಿ ಮತ್ತು ಅರ್ಬನ್ ಡೆವಲಪ್​ಮೆಂಟ್ ಸಚಿವರಿಗೆ ಪತ್ರ ಬರೆದ ಯು ಟಿ ಖಾದರ್

Tuesday, October 16th, 2018
u-t-kadher

ಮಂಗಳೂರು: ಸ್ಮಾರ್ಟ್ ಸಿಟಿ ಅನುದಾನದಲ್ಲಿ ಕಸಾಯಿಖಾನೆಯ ಸ್ವಚ್ಛತ ಮತ್ತು ಅಭಿವೃದ್ಧಿಗೆ ಹೋಲಿಸುವ ಸಂಬಂಧ ನೀಡಿರುವ ಸಲಹೆ ವಿವಾದಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರಧಾನಮಂತ್ರಿ ಮತ್ತು ಅರ್ಬನ್ ಡೆವಲಪ್ಮೆಂಟ್ ಸಚಿವರಿಗೆ ಪತ್ರ ಬರೆಯುತ್ತಿದ್ದೇನೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ತಿಳಿಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರದ ಸ್ವಚ್ಛತೆ ಅಭಿವೃದ್ಧಿಗೆ ಉತ್ತಮವಾದ ಆಹಾರ ಜನರಿಗೆ ಸಿಗಬೇಕೆಂದು ಈ ಪ್ರಪೋಸಲ್ ಅನ್ನು ಸ್ಮಾರ್ಟ್ ಸಿಟಿ ಸಮಿತಿಯ ಮುಂದೆ ಇಟ್ಟಿದ್ದೆ. ಆದರೆ ಈ ಬಗ್ಗೆ ಚುನಾಯಿತ […]