ಜಿಲ್ಲಾ ಕಾರಾಗೃಹದಲ್ಲಿ ಕಲಿಕೆಯಿಂದ ಬದಲಾವಣೆ ಸಾಕ್ಷರ ಕಾರ್ಯಕ್ರಮಕ್ಕೆ ಚಾಲನೆ

Monday, November 1st, 2021
Jail Education

ಮಂಗಳೂರು :  ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವೆ, ಬೆಂಗಳೂರಿನ ಲೋಕ ಶಿಕ್ಷಣ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸಾಕ್ಷರತಾ ಸಮಿತಿಯ ಸಹಭಾಗಿತ್ವದೊಂದಿಗೆ ಕಾರಾಗೃಹದಲ್ಲಿನ ಅನಕ್ಷರಸ್ಥ ಮತ್ತು ಅರೆ ಅಕ್ಷರಸ್ಥ ಬಂದಿಗಳಿಗೆ ‘ಕಲಿಕೆಯಿಂದ ಬದಲಾವಣೆ’ ಎಂಬ ಸಾಕ್ಷರತಾ ಕಾರ್ಯಕ್ರಮದ ಖಾಯಂ ಕಲಿಕಾ ಕೇಂದ್ರವನ್ನು ಮಂಗಳೂರಿನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ನವೆಂಬರ್ 01ರ ಸೋಮವಾರ ಉದ್ಟಾಟಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ. ವಿ., ಜೈಲಿನಲ್ಲಿರುವ ಅನಕ್ಷರಸ್ಥ ಮತ್ತು ಆರೆ ಅಕ್ಷರಸ್ಥ ಬಂದಿಗಳು ಈ ಕಾರ್ಯಕ್ರಮದ […]

ಕೊರೋನಾ ಸೋಂಕು ಹೆಚ್ಚಳ : 20 ಮಂದಿ ಕೈದಿಗಳನ್ನು ಬಿಡುಗಡೆ ಮಾಡಿದ ಜಿಲ್ಲಾ ಕಾರಾಗೃಹ

Friday, May 28th, 2021
mandya-jail

ಮಂಡ್ಯ:  ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ನ ನಿರ್ದೇಶನ ಮೇರೆಗೆ ಜಿಲ್ಲಾ ಕಾರಾಗೃಹದಿಂದ 20 ಮಂದಿ ಕೈದಿಗಳನ್ನುಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿದ್ದ 20 ಮಂದಿಗೆ 45ದಿನಗಳ ಮಧ್ಯಂತರ ಜಾಮೀನು ದೊರಕಿದೆ. ಕೊರೊನಾ ಸೋಂಕು ನಿಮಿತ್ತ ಕೊಲೆ, ದರೋಡೆ, ಸಣ್ಣಪುಟ್ಟಪ್ರಕರಣಗಳು ಸೇರಿದಂತೆ 7 ವರ್ಷ ಮೇಲ್ಮಟ್ಟ ಶಿಕ್ಷೆಯಾಗುವ ಬಂಧಿತರನ್ನು ಹೊರತುಪಡಿಸಿ 7 ವರ್ಷದೊಳಗಿನ ಕಾರಾಗೃಹ ಶಿಕ್ಷೆಯಾಗುವ ನ್ಯಾಯಾಂಗ ಬಂಧಿತರಿಗೆ ಮಧ್ಯಂತರ ಜಾಮೀನು ನೀಡಲು ಸುಪ್ರಿಂಕೋರ್ಟ್‌ಹಾಗೂ ಹೈಕೋರ್ಟ್‌ ನಿರ್ದೇಶನ ನೀಡಿದೆ. ಆಮೇರೆಗೆ ಬಂಧಿತರು ಜಿಲ್ಲಾ ಕಾನೂನುಸೇವೆಗಳ ಪ್ರಾ ಧಿಕಾರಕ್ಕೆ […]

ನಗರದ ಕಾರಾಗೃಹದಲ್ಲಿ ಕೈದಿಗಳ ನಡುವೆ ಜಗಳ, ಇಬ್ಬರು ಆಸ್ಪತ್ರೆಗೆ ದಾಖಲು

Sunday, April 25th, 2021
jail clash

ಮಂಗಳೂರು: ದರೋಡೆ ಪ್ರಕರಣದ ಆರೋಪಿ ಮತ್ತು ಇಬ್ಬರು ವಿಚಾರಣಾಧೀನ ಕೈದಿಗಳ ನಡುವೆ ಮಾರಾಮಾರಿ ನಡೆದು ಇಬ್ಬರು ಗಾಯಗೊಂಡಿರುವ ಘಟನೆ ನಗರದ ಕಾರಾಗೃಹದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಅನ್ಸಾರ್ ಮತ್ತು ಝೈನುದ್ದೀನ್ ಗಾಯಾಳುಗಳು. ಬೆಳಗ್ಗೆ ಉಪಹಾರ ವಿತರಣೆ ವೇಳೆ ಘರ್ಷಣೆ ನಡೆದಿದೆ. ಪಣಂಬೂರು ಪೊಲೀಸರು ಬಂಧಿಸಿದ ದರೋಡೆ ಪ್ರಕರಣದ ಆರೋಪಿ ಸಮೀರ್ ಎಂಬಾತ ಹಲ್ಲೆ ನಡೆಸಿದ್ದಾನೆ. ಚಮಚೆ ಮತ್ತಿತರ ಅಡುಗೆ ಪಾತ್ರೆಗಳಿಂದ ಹಲ್ಲೆ ನಡೆದಿದೆ. ಅನ್ಸಾರ್ ನ ಕೈ ಮತ್ತು ಕಾಲಿಗೆ, ಝೈನುದ್ದೀನ್ ಭುಜಕ್ಕೆ ಗಾಯವಾಗಿದೆ. ಗಾಯಾಳುಗಳನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ […]

ಮಂಗಳೂರು ಕಾರಾಗೃಹದಲ್ಲೂ ಮಕ್ಕಳಿಗೆ ಶಿಕ್ಷಣ..ಅಂಗನವಾಡಿ ಶಿಕ್ಷಕಿಯಿಂದ ಮಕ್ಕಳಿಗೆ ಪಾಠ!

Thursday, July 5th, 2018
education

ಮಂಗಳೂರು: ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸುವ ಸ್ಥಿತಿ ಜೈಲಿನಲ್ಲಿರುವ ಪೋಷಕರ ಮಕ್ಕಳದ್ದು. ವಿವಿಧ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಬಂಧಿತರಾಗಿ ವಿಚಾರಣಾಧೀನ ಕೈದಿಗಳಾಗಿ ಬದುಕುತ್ತಿರುವ ಮಹಿಳಾ ಕೈದಿಗಳ ಮಕ್ಕಳಿಗೆ ಜೈಲಿನಲ್ಲಿ ಶಿಕ್ಷಣ ಎನ್ನುವುದು ಮರೀಚೀಕೆಯಾಗಿದೆ ಎನ್ನುವುದನ್ನು ಮನಗಂಡಿರುವ ಸುಪ್ರೀಂಕೋರ್ಟ್ ಜೈಲಿನಲ್ಲಿ ಪೋಷಕರ ಜೊತೆಗೆ ಇರುವ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ತಾಕೀತು ಮಾಡಿದೆ. ಇದರ ಪರಿಣಾಮವಾಗಿ ಈಗ ಮಂಗಳೂರು ಕಾರಾಗೃಹದಲ್ಲೂ ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸ ಆರಂಭಗೊಂಡಿದೆ. ಕಾರಾಗೃಹದಲ್ಲಿರುವ ವಿಚಾರಣಾಧೀನ ಬಂದಿಗಳ ಮೂವರು ಮಕ್ಕಳಿಗೆ ಜುಲೈ 3 […]

ಜೈಲಿಗೆ ಹೊರಗಿನಿಂದ ಬೇಯಿಸಿದ ಆಹಾರ ಎಗ್ಗಿಲ್ಲದೆ ಪೂರೈಕೆ, ಜಿಲ್ಲಾ ಕಾರಾಗೃಹಕ್ಕೆ ಅಪವಾದ

Tuesday, October 17th, 2017
Mangalore jail

ಮಂಗಳೂರು: ವಿಚಾರಣಾಧೀನ ಕೈದಿಗಳಿಗೆ ಹೊರಗಿನಿಂದ ಊಟ, ತಿಂಡಿ ಪೂರೈಕೆ ಮಾಡುವುದನ್ನು ನಿಷೇಧಿಸಿದ್ದರೂ ಮಂಗಳೂರಿನ ಜಿಲ್ಲಾ ಕಾರಾಗೃಹ ಇದಕ್ಕೆ ಅಪವಾದವಾಗಿದೆ. ಏಕೆಂದರೆ ಈ ಜೈಲಿಗೆ ಹೊರಗಿನಿಂದ ಬೇಯಿಸಿದ ಆಹಾರ ಎಗ್ಗಿಲ್ಲದೆ ಪೂರೈಕೆಯಾಗುತ್ತಿದೆ. ಸಾಮಾನ್ಯವಾಗಿ ಜೈಲಿನಲ್ಲಿರುವ ಕೈದಿಗಳಿಗೆ ಹೊರಗಿನಿಂದ ಹಣ್ಣು ಹಂಪಲುಗಳ ಸರಬರಾಜಿಗೆ ಮಾತ್ರ ಅವಕಾಶ ಇದೆ. ಆದರೆ ಸೋಮವಾರ ದಿನ ಮಂಗಳೂರು ಜೈಲಿನ ವಿಚಾರಣಾಧೀನ ಕೈದಿಗಳಿಗೆ ಅವರ ಸಂಬಂಧಿಕರಿಂದ ಅಥವಾ ಸಂದರ್ಶಕರಿಂದ ಅನ್ನ, ಸಾಂಬಾರು, ಪುಂಡಿ (ಕಡುಬು), ಮೀನಿನ ಸಾಂಬಾರು, ಉಪ್ಪಿನಕಾಯಿ ಇತ್ಯಾದಿಗಳು ಪೂರೈಕೆಯಾಗಿವೆ ಶನಿವಾರ ಮತ್ತು ರವಿವಾರ […]

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಸಾದ ವಿತರಣೆ

Wednesday, September 7th, 2016
Parappana-agrahara

ಉಡುಪಿ: ಬೆಂಗಳೂರಿನಲ್ಲಿ ಚಾತುರ್ಮಾಸ್ಯವ್ರತ ಕೈಗೊಂಡಿರುವ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಭೇಟಿ ನೀಡಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಸಾದ ವಿತರಿಸಿದರು. ಶ್ರೀಕೃಷ್ಣನ ಅವತಾರವಾದದ್ದೂ ಜೈಲಿನಲ್ಲಿ, ಅದು ಲೋಕಕಲ್ಯಾಣಕ್ಕಾಗಿ, ಸತ್ಯವನ್ನು ಎತ್ತಿಹಿಡಿಯಲು. ದೇವರಿಗೆ ಸಂಪೂರ್ಣ ಶರಣಾದರೆ ಸಹಜವಾಗಿ ಸರಿಯಾದ ಜೀವನ ಪಥ ಕಾಣುತ್ತದೆ. ಕಾರಾಗೃಹವಾಸಿಗಳಿಗೆ ವಾಲ್ಮೀಕಿ ಮಾದರಿ. ವಾಲ್ಮೀಕಿಯವರು ನಾರದರನ್ನು ಭೇಟಿ ಮಾಡುವವರೆಗೆ ಸತ್ಯ ಮತ್ತು ಸನ್ಮಾರ್ಗದಲ್ಲಿ ನಂಬಿಕೆ ಹೊಂದಿರಲಿಲ್ಲ. ಅನಂತರ ವಾಲ್ಮೀಕಿಗೆ ತಪ್ಪಿನ ಅರಿವಾಯಿತು. ಅವರಿಗೆ ರಾಮ ಮಂತ್ರವನ್ನು ನಾರದರು ಉಪದೇಶಿಸಿದರು.ಮುಂದೇನಾಯಿ […]

ಗಾಂಜಾ ಸಾಗಾಟಕ್ಕೆ ಯತ್ನಿಸಿದ ಮಹಿಳೆಯೊಬ್ಬರ ಬಂಧನ

Saturday, August 20th, 2016
Ganja

ಮಂಗಳೂರು: ನಗರದಲ್ಲಿ ಗಾಂಜಾ ಸಾಗಾಟಕ್ಕೆ ಯತ್ನಿಸಿದ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ. ಬಂಧಿತ ಮಹಿಳೆಯನ್ನು ಕಸಬಾ ಬೆಂಗರೆಯ ಫಾತಿಮಾ (21) ಎಂದು ಗುರುತಿಸಲಾಗಿದೆ. ನಗರದ ಕಾರಾಗೃಹದೊಳಗೆ ಗಾಂಜಾ ಸಾಗಿಸಲು ಯತ್ನಿಸಿದ ಈಕೆಯನ್ನು ಕೈಗಾರಿಕಾ ಭದ್ರತಾ ಪಡೆ ಪೊಲೀಸರು ಬಂಧಿಸಿದ್ದಾರೆ. ಮಹಿಳೆ ತನ್ನ ಬಟ್ಟೆಯೊಳಗೆ 47 ಗ್ರಾಂ ಗಾಂಜಾವನ್ನಿಟ್ಟುಕೊಂಡು ಕೈದಿ ಅಸಿಪ್‌‌ ಎಂಬಾತನಿಗೆ ಸಾಗಿಸಲು ಯತ್ನಿಸುತ್ತಿದ್ದ ವೇಳೆ ಬಂಧಿಸಲಾಗಿದೆ. ಆರೋಪಿ ಮಹಿಳೆಯನ್ನು ಬರ್ಕೆ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.