ಕಾರ್ಮಿಕರನ್ನು ನಿರ್ಲಕ್ಷಿಸಿದೆ ಸರಕಾರಕ್ಕೇ ತೊಂದರೆ

Wednesday, January 8th, 2020
mushkara

ಮಂಗಳೂರು : ಕಾರ್ಮಿಕರ ಕನಿಷ್ಠ ವೇತನ, ಸಾಮಾಜಿಕ ಸುರಕ್ಷೆ, ಕೆಲಸದ ಭದ್ರತೆ ಮುಂತಾದುವುಗಳು ಸರಕಾರದ ಹೊಣೆಯಾಗಿದೆ. ದೇಶದ ಸಂಪತ್ತಿನ ಉತ್ಪಾದಕರು ಕಾರ್ಮಿಕರು. ಅಂತಹ ಕಾರ್ಮಿಕ ವರ್ಗವನ್ನು ಸರಕಾರ ಒಟ್ಟಾರೆಯಾಗಿ ನಿರ್ಲಕ್ಷಿಸುತ್ತಿದೆ. ಸರಕಾರದ ಮುಂದಿಟ್ಟಿರುವ ನಮ್ಮ12 ಅಂಶಗಳ ಬೇಡಿಕೆಗಳು ಜೀವನ ನಿರ್ವಹಣೆಗಿರುವ ಕನಿಷ್ಠ ಬೇಡಿಕೆಗಳು. ಇಂದಿನ ಮುಷ್ಕರದ ಮೂಲಕ ನಾವು ಸರಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇವೆ. ಕಾರ್ಮಿಕ ದಂಗೆಯೆದ್ದರೆ ಸರಕಾರಕ್ಕೇ ತೊಂದರೆ.’ ಎಂದು ಸಿಐಟಿಯುನ ದಕ ಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಸರಕಾರವನ್ನು ಎಚ್ಚರಿಸಿದರು. ಅವರು ಕಾರ್ಮಿಕ ಸಂಘಟನೆಗಳ […]

ನಾಳೆ ಭಾರತ ಬಂದ್‌ : ಕಾರ್ಮಿಕ ಸಂಘಟನೆಗಳಿಂದ ಮುಷ್ಕರಕ್ಕೆ ಕರೆ

Tuesday, January 7th, 2020
bharat-band

ಬೆಂಗಳೂರು : ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ದೇಶದ ಪ್ರಮುಖ ಕಾರ್ಮಿಕ ಸಂಘಟನೆಗಳು ಬುಧವಾರ “ಭಾರತ ಬಂದ್‌’ಗೆ ಕರೆ ನೀಡಿದ್ದು, ಬ್ಯಾಂಕಿಂಗ್‌ ಸಹಿತ ಕೆಲವು ಸೇವೆಗಳಿಗೆ ಅಡಚಣೆಯಾಗುವ ಸಂಭವವಿದೆ. ರಾಜ್ಯದಲ್ಲೂ ಕೆಲವು ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿದ್ದು, ಜನಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮುಷ್ಕರದ ದಿನ ರಾಜ್ಯದಲ್ಲಿ ತುರ್ತು ಸೇವೆಗಳಾದ ಆಸ್ಪತ್ರೆ, ಔಷಧ ಮಳಿಗೆ, ಆ್ಯಂಬುಲೆನ್ಸ್‌ ಸೇವೆ ಗಳನ್ನು ಹೊರತುಪಡಿಸಿ ಉತ್ಪಾ ದನ ವಿಭಾಗ, ಅಸಂಘಟಿತ ಕಾರ್ಮಿಕ ವಲಯಗಳ ಸೇವೆಗಳಲ್ಲಿ ವ್ಯತ್ಯಯ ವಾಗುವ […]

ಸಿಐಟಿಯು ಜಾಥಾಕ್ಕೆ ಮಂಗಳೂರಿನಲ್ಲಿ ಅದ್ದೂರಿ ಸ್ವಾಗತ

Sunday, August 13th, 2017
citu-jatha

ಮಂಗಳೂರು : ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸಿಐಟಿಯು ಕರ್ನಾಟಕ ರಾಜ್ಯ ಸಮಿತಿ ನೇತೃತ್ವದಲ್ಲಿ ಕಳೆದ ಜುಲೈ 29ರಿಂದ ರಾಜ್ಯಾದ್ಯಂತ ಸಂಚರಿಸಿರುವ ಜಾಗೃತಿ ಜಾಥಾ ಶನಿವಾರ ನಗರಕ್ಕೆ ಆಗಮಿಸಿತು. ದ.ಕ. ಜಿಲ್ಲೆಯ ಸಿಐಟಿಯು ಸಂಯೋಜಿತ ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಜಾಥಾಕ್ಕೆ ಅದ್ದೂರಿ ಸ್ವಾಗತ ಕೋರಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಆವರಣ ಎದುರು ಸಭೆ ಏರ್ಪಡಿಸಲಾಯಿತು. ಸಿಐಟಿಯು ರಾಜ್ಯ ಮುಖಂಡ ಕೆ. ಎನ್. ಉಮೇಶ್ ಮಾತನಾಡಿ ರಾಜ್ಯವ್ಯಾಪಿ ಕಾರ್ಮಿಕರಿಗೆ ಕನಿಷ್ಠ 18,000 ರೂ. ಸಮಾನ ವೇತನ ನೀಡಬೇಕು, ಅಸಂಘಟಿತ […]

ಅಖಿಲ ಭಾರತ ಮುಷ್ಕರವನ್ನು ಬೆಂಬಲಿಸಿ ವಾಹನ ಪ್ರಚಾರ ಜಾಥಾ

Thursday, August 18th, 2016
labour-union

ಮಂಗಳೂರು: ವಿವಿಧ ಬೇಡಿಕೆಗಳನ್ನು ಮುಂದಿಟ್ಟು ದ.ಕ. ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಸೆ. 2ರ ಅಖಿಲ ಭಾರತ ಮುಷ್ಕರವನ್ನು ಬೆಂಬಲಿಸಿ ಆ. 17ರಿಂದ 19ರ ವರೆಗೆ ಜಿಲ್ಲಾದ್ಯಂತ ವಾಹನ ಪ್ರಚಾರ ಜಾಥಾ ಹಮ್ಮಿಕೊಳ್ಳಲಾಗಿದ್ದು, ಈ ನಿಮಿತ್ತ ಕೇಂದ್ರ ಬಸ್‌ ನಿಲ್ದಾಣದ ಎದುರು ಜಾಥಾಕ್ಕೆ ಚಾಲನೆ ನೀಡಲಾಯಿತು ಜಾಥಾವ ಉದ್ಘಾಟಿಸಿದ ಹೆಚ್ಎಂಎಸ್ ಸಂಘಟನೆಯ ರಾಜ್ಯಾಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ, ದೇಶದ ಆಸ್ತಿಯಾಗಿರುವ ಕಾರ್ಮಿಕ ವರ್ಗ ಇಂದಿನ ಕೇಂದ್ರ ಸರ್ಕಾರದ ನೀತಿಗಳಿಂದ ಸಹಿಸಲಾರದ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಅದಕ್ಕಾಗಿಯೇ ಕಾರ್ಮಿಕ ಸಂಘಟನೆಗಳು […]

ಎರಡನೇ ದಿನದ ಕಾರ್ಮಿಕ ಸಂಘಟನೆಗಳ ಮುಷ್ಕರಕ್ಕೆ ಕರಾವಳಿಯಲ್ಲಿ ಮಿಶ್ರ ಪ್ರತಿಕ್ರಿಯೆ

Thursday, February 21st, 2013
Strike mixed response in DK

ಮಂಗಳೂರು : ವಿವಿಧ ಕಾರ್ಮಿಕ ಸಂಘಟನೆಗಳು ನೀಡಿದ ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಮಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಆದರೆ ಎರಡನೇ ದಿನವಾದ ಇಂದು ಯಾವುದೇ ರೀತಿಯ ಮುಷ್ಕರಗಳು ನಡೆಯದೆ ಎಂದಿನಂತೆ ಜನರು ತಮ್ಮ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು, ಬಸ್ ಸಂಚಾರ ಆರಂಭವಾಗಿದೆ. ಬೆಲೆ ಏರಿಕೆ ವಿರುದ್ಧ ಭುಗಿಲೆದ್ದ ರಾಷ್ಟ್ರವ್ಯಾಪಿ ಪ್ರತಿಭಟನೆಯಲ್ಲಿ ಕಾರ್ಮಿಕ ಸಂಘಟನೆಗಳು ಹಲವಾರು ಬೇಡಿಕೆಗಳನ್ನು ಮುಂದಿಟ್ಟಿದ್ದರು. ಎಲ್ಲ ಕಾರ್ಮಿಕರು ಹತ್ತು ಸಾವಿರ ಕನಿಷ್ಠ ಕೂಲಿ ನಿಗದಿ ಪಡಿಸಿ, ಬೋನಸ್ ಗಿರುವ ಎಲ್ಲ ಮಿತಿಗಳನ್ನು ತೆಗೆದುಹಾಕಬೇಕು, ಆಟೋ ಚಾಲಕರ ನೋಂದಾವಣೆ […]

ವಿವಿಧ ಕಾರ್ಮಿಕ ಸಂಘಟನೆಗಳಿಂದ ಬೆಲೆಯೇರಿಕೆ ವಿರೋಧಿಸಿ ಜೈಲ್ ಭರೋ ಚಳುವಳಿ

Thursday, December 20th, 2012
jail bharo

ಮಂಗಳೂರು :ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿವಿಧ ಕಾರ್ಮಿಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಮಿಕರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಜೈಲ್‌ ಭರೋ ಚಳವಳಿ ನಡೆಸಿದರು. ಸಿಐಟಿಯು, ಎಐಟಿಯುಸಿ, ಬಿಎಂಎಸ್‌, ಎಐಸಿಸಿಟಿಯು, ಇಂಟಕ್‌, ಎಚ್‌ಎಂಎಸ್‌ ಮೊದಲಾದ ವಿವಿಧ ಸಂಘಟನೆಗಳಿಗೆ ಸೇರಿದ ಕಾರ್ಮಿಕರು ಹಾಗು ಮುಖಂಡರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸಿಪಿಐಎಂ ಜಿಲ್ಲಾಧ್ಯಕ್ಷ ಹಾಗೂ ಸಿಐಟಿಯು ರಾಜ್ಯಾಧ್ಯಕ್ಷ ಬಿ.ಮಾದವ ರವರು ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಹುರಾಷ್ಟ್ರೀಯ ಕಂಪನಿಗಳು ಹಾಗೂ ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳ ಜತೆ ಸೇರಿಕೊಂಡು […]

ಕಾರ್ಮಿಕ ಸಂಘಟನೆಗಳ ಸಾರ್ವತ್ರಿಕ ಮುಷ್ಕರ ಮಂಗಳೂರು ಉಡುಪಿ ಬಹುತೇಕ ಯಶಸ್ವೀ

Wednesday, February 29th, 2012
Trade Strike

ಮಂಗಳೂರು : ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿದ್ದ ದೇಶವ್ಯಾಪಿ ಕಾರ್ಮಿಕರ ಸಾರ್ವತ್ರಿಕ ಮುಷ್ಕರ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಯಶಸ್ವಿಯಾಗಿದೆ. ಮುಂಜಾನೆ ಕೆಲವು ಸರಕಾರಿ ಹಾಗೂ ಖಾಸಗಿ ಬಸ್‌ಗಳು ಸಂಚಾರ ಆರಂಭಿಸಿದ ವೇಳೆ ಅವುಗಳ ಮೇಲೆ ಕಲ್ಲುತೂರಾಟ ನಡೆಸಿದ ಘಟನೆಗಳು ಸಂಭವಿಸಿದೆ. ಲಾಲ್‌ಬಾಗ್‌, ಕರಂಗಲ್ಪಾಡಿ, ಅಡ್ಯಾರ್‌, ಕಣ್ಣೂರು, ಪಡೀಲ್‌ಗ‌ಳಲ್ಲಿ ಸರಕಾರಿ ಬಸ್‌ಗಳ ಮೇಲೆ ನಡೆದ ಕಲ್ಲು ತೂರಾಟದಲ್ಲಿ ಗಾಜುಗಳಿಗೆ ಹಾನಿಯಾಗಿದೆ. ಲಾಲ್‌ಬಾಗ್‌, ಪಿವಿಎಸ್‌ ವೃತ್ತ,, ಫಳ್ನೀರ್‌ ಮುಂತಾದ ಕಡೆಗಳಲ್ಲಿ ಕಲ್ಲುತೂರಾಟದಿಂದ ಕೆಲವು ಖಾಸಗಿ […]