Blog Archive

ಬಂದ್ಯೋಡು ವಸತಿ ಗೃಹವೊಂದರ ಮೇಲೆ ದಾಳಿ, ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ವಶ

Wednesday, April 10th, 2013
drugs mafia

ಕಾಸರಗೋಡು : ಜಿಲ್ಲೆಯಲ್ಲಿ ಗಾಂಜಾ ಸಾಗಾಣಿಕೆಯ ವಿರುದ್ದ ಪೊಲೀಸ್ ಕಾರ್ಯಾಚರಣೆ ಮುಂದುವರಿದಿದ್ದು ಬಂದ್ಯೋಡು ಬಳಿಯ ವಸತಿ ಗೃಹವೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ಅಬ್ದುಲ್ ಅಜೀಝ್ ಎಂಬಾತನನ್ನು ಬಂಧಿಸಿದ್ದಾರೆ. ಬಳಿಕ ಆತನ ನೆರೆಮನೆಯ ರಿಕ್ಷಾ ಚಾಲಕ ಅಬ್ಬಾಸ್ (35) ಎಂಬಾತನ ಮನೆ ಮೇಲೆ  ದಾಳಿ ನಡೆಸಿದ ಪೊಲೀಸರು ಮನೆಯಲ್ಲಿ 3 ಗೋಣಿ ಚೀಲಗಳಲ್ಲಿ ತುಂಬಿಸಿಡಲಾಗಿದ್ದ ಗಾಂಜಾವನ್ನು ಪತ್ತೆ ಹಚ್ಚಿ ಮನೆಯಲ್ಲಿದ್ದ ಆತನ ಪತ್ನಿ ಸೆಮೀರಾ ಯಾನೆ ಸೆಮೀಮಾ(26) ಎಂಬಾಕೆಯನ್ನು ಬಂಧಿಸಿದ್ದಾರೆ. ಬಳಿಕ ಬಂಧಿತರು ನೀಡಿದ ಮಾಹಿತಿ ಮೇರೆಗೆ […]

ಕಾಸರಗೋಡು : ಮೊಗ್ರಾಲ್ ಪುತ್ತೂರು ಪೇಟೆಯಲ್ಲಿ ಭೀಕರ ರಸ್ತೆ ಅಪಘಾತ ಬೈಕ್ ಸವಾರರಿಬ್ಬರ ಸಾವು

Saturday, March 30th, 2013
Mishap at Mogral Puttur

ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಮೊಗ್ರಾಲ್ ಪುತ್ತೂರು ಪೇಟೆಯಲ್ಲಿ ಗುರುವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಮೃತರನ್ನು ಮೊಗ್ರಾಲ್ ಪುತ್ತೂರು ಕೆ.ಕೆ. ರಸ್ತೆಯ ಕುನ್ನಿಲ್‌ನ ಸಾದಿಕ್(19) ಮತ್ತು ಕುನ್ನಿಲ್ ಸಬೀನಾ ಮಂಝಿಲ್‌ನ ಸಮೀರ್ ಆಸಿಫ್ (20) ಎಂದು ಗುರುತಿಸಲಾಗಿದೆ. ಆಟೊ ಪ್ರಯಾಣಿಕರಾದ ಮುಹಮ್ಮದ್ ಎಂಬವರ ಪುತ್ರಿ ಡಾನಿಯಾ ಗಂಭೀರ ಗಾಯ ಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸ ಲಾಗಿದೆ. ಉಳಿದ ಪ್ರಯಾ ಣಿಕರಾದ ಅಬ್ದುಲ್ ಖಾದರ್ ಎಂಬವರ ಪತ್ನಿ ಮರಿಯಾ, […]

ದುಬೈಯಿಂದ ಮಂಗಳೂರಿಗೆ ಬಂದಿದ್ದ ವ್ಯಕ್ತಿ ನಾಪತ್ತೆ

Tuesday, March 26th, 2013
Mohammad Ashraf

ಮಂಗಳೂರು : ದುಬೈಯಿಂದ ಮಂಗಳೂರಿಗೆ ಬಂದಿದ್ದ ಕಾಸರಗೋಡು ತ್ರಿಕಾರಿಪುರ ನಿವಾಸಿ ಮಹಮ್ಮದ್ ಅಶ್ರಫ್ ಎಂಬಾತ ನಾಪತ್ತೆಯಾದ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಸರಗೋಡು ತ್ರಿಕ್ಕಾರಿಪುರದ ಮುಹಮ್ಮದ್ ಕುಂಞಿ ಎಂಬವರ ಪುತ್ರ ಮುಹಮ್ಮದ್‌ಅಶ್ರಫ್ (24) ಎಂಬವರು ಮಾರ್ಚ್ 21ರಂದು ದುಬೈಯಿಂದ ಮಂಗಳೂರಿಗೆ 12:30 ಗಂಟೆಗೆ ತಲುಪಿ ಮಂಗಳೂರು ಸ್ಟೇಟ್ ಬ್ಯಾಂಕ್ ಬಳಿಯ ಕಾಯಿನ್ ಬಾಕ್ಸ್‌ನಿಂದ ತನ್ನ ಮನೆಗೆ ದೂರವಾಣಿ ಕರೆ ಮಾಡಿ ತಾನು ದುಬೈಯಿಂದ ಬಂದಿದ್ದಾಗಿ ಮತ್ತು ಬೆಂಗಳೂರಿನಲ್ಲಿರುವ ಮುನೀಫ್ ಎಂಬವರ ಮನೆಗೆ ಹೋಗುವುದಾಗಿ ತಿಳಿಸಿದ್ದಾರೆ. […]

ಬಿಎಂಎಸ್ ಕಾರ್ಯಕರ್ತ ಜ್ಯೋತಿಷ್ ಕೊಲೆಯತ್ನ, ಪ್ರಮುಖ ಆರೋಪಿ ಸೈನುಲ್‌ ಅಬೀದ್‌ ನ ಬಂಧನ

Monday, March 18th, 2013
KS Sainul Abid

ಕಾಸರಗೋಡು : ಬಿಎಂಎಸ್ ಕಾರ್ಯಕರ್ತ ಅಣಂಗೂರು ಜೆಪಿ ಕಾಲನಿಯ ಜ್ಯೋತಿಷ್(26) ರ ಕೊಲೆಗೆ ಯತ್ನಿಸಿದ ಪ್ರಕರಣದ ಪ್ರಮುಖ ಆರೋಪಿ ತಾಯಲಂಗಾಡಿಯ ಸಿ.ಎ.ಪಿ.ಹೌಸ್‌ನ ಅಬಿ ಯಾನೆ ಕೆ.ಎಸ್‌.ಸೈನುಲ್‌ ಅಬೀದ್‌(22) ನನ್ನು ಬಜ್ಪೆ ವಿಮಾನ ನಿಲ್ದಾಣದಲ್ಲಿ ಕಾಸರಗೋಡು ಡಿವೈಎಸ್ಪಿ ಮೋಹನ್ ಕುಮಾರ್ ನೇತೃತ್ವದ ಪೊಲೀಸ್ ತಂಡವು ಶನಿವಾರ ಬಂಧಿಸಿದ್ದಾರೆ. ೨೦೧೩  ಫೆಬ್ರವರಿ 5,  ರ ರಾತ್ರಿ ತನ್ನ ವಿವಾಹ ಆಮಂತ್ರಣ ಪತ್ರಿಕೆಯನ್ನು ಹಂಚಿ ವಾಪಸ್ಸಾಗುತ್ತಿದ್ದ ಜ್ಯೋತಿಷ್ ಅವರನ್ನು ಆರು ಮಂದಿಯ ತಂಡ  ಅಡ್ಡಗಟ್ಟಿ ವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ […]

ಮಲಯಾಳಿ ಕಡ್ಡಾಯ ನೀತಿಯಿಂದ ಕನ್ನಡಿಗರನ್ನು ಹೊರತುಪಡಿಸುವುದಾಗಿ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಭರವಸೆ

Saturday, March 16th, 2013
Umman Chandi

ಕಾಸರಗೋಡು : ಕೇರಳದಲ್ಲಿ ಸರಕಾರಿ ನೌಕರಿ ಹೊಂದಬೇಕಾದರೆ ಮಲಯಾಳವನ್ನು ಕಡ್ಡಾಯವಾಗಿ ಕಲಿತಿರಬೇಕು ಎಂಬ ಆದೇಶದಿಂದ ಕನ್ನಡಿಗರನ್ನು  ಹೊರತುಪಡಿಸಬೇಕೆಂದು ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿಯವರನ್ನು ಭೇಟಿಯಾದ ಮಂಜೇಶ್ವರ ಶಾಸಕರು ತಿಳಿಸಿದ್ದಾರೆ. ಕೇರಳದಲ್ಲಿ ಇನ್ನು ಮುಂದೆ  ಸರಕಾರಿ ನೌಕರಿ ಹೊಂದಬೇಕಾದರೆ ಮಲಯಾಳವನ್ನು ಕಡ್ಡಾಯವಾಗಿ ಕಲಿತಿರಬೇಕು ಎನ್ನುವ ಸರ್ಕಾರದ ಶಿಫಾರಸ್ಸನು ಕೇರಳದ ಲೋಕಸೇವಾ ಆಯೋಗ ಅಂಗೀಕರಿಸಿದ್ದು ಈ ಆದೇಶ ಕಾಸರಗೋಡಿನಲ್ಲಿರುವ ಅಲ್ಪಸಂಖ್ಯಾತ ಕನ್ನಡಿಗರನ್ನು ಸರಕಾರಿ ನೌಕರಿಯಿಂದ ವಂಚಿತರನ್ನಾಗಿ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಈ ನಿಯಮದಿಂದ ಕನ್ನಡಿಗರನ್ನು ಹೊರತುಪಡಿಸಬೇಕೆಂದು ಕೇಳಿಕೊಳ್ಳಲಾಗಿದ್ದು  ಈ ನಿಯಮದಿಂದ […]

ರೈಲ್ವೇ ಹಳಿ ಸಮೀಪ ಉರುಳಿ ಬಿದ್ದ ಶಾಲಾ ಬಸ್‌

Wednesday, March 6th, 2013
School bus rolls into railway track

ಕಾಸರಗೋಡು : ತಳಂಗರೆ ರೈಲ್ವೇ ಹಳಿ ಸಮೀಪ ನಿಲ್ಲಿಸಿದ್ದ ಶಾಲಾ ಬಸ್‌ ರೈಲು ಹಳಿ ಬದಿಗೆ ಮಂಗಳವಾರ ಮಧ್ಯಾಹ್ನ ಉರುಳಿ ಬಿದ್ದ ಪರಿಣಾಮ ಮಂಗಳೂರು ಕಡೆಗೆ ಪ್ರಯಾಣಿಸುವ ರೈಲು ಸಾರಿಗೆಗೆ ಅಡಚಣೆ ಉಂಟಾಯಿತು. ತಳಂಗರೆಯ ದಖೀರತ್‌ ಇಂಗ್ಲೀಷ್‌ ಮೀಡಿಯಂ ಶಾಲೆಯ ಬಸ್‌ ನ್ನು ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು ಹೋಗಲು ನಿಲ್ಲಿಸಲಾಗಿತ್ತು. ಆದರೆ ಬಸ್‌ ಚಕ್ರ ಇದ್ದಕ್ಕಿದ್ದಂತೆ ಚಲಿಸಿ ಬಸ್‌ ಕೆಳಗೆ ಉರುಳಿತು. ಮಾಹಿತಿ ಲಭಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಬಸ್‌ನ್ನು ತೆರವುಗೊಳಿಸಿ ರೈಲು ಸಂಚಾರಕ್ಕೆ ಸುಗಮಗೊಳಿಸಲಾಯಿತು.

ಸರಕಾರ, ಅಧಿಕಾರಿಗಳ ತಟಸ್ಥ ನೀತಿಯನ್ನು ವಿರೋಧಿಸಿ ಎಂಡೋಸಲ್ಫಾನ್ ಸಂತ್ರಸ್ಥರಿಂದ ಇಂದು ರಸ್ತೆ ತಡೆ

Tuesday, February 26th, 2013
Endosulfan victims Protest

ಕಾಸರಗೋಡು : ಎಂಡೋಸಲ್ಫಾನ್ ಸಂತ್ರಸ್ತ ಜನಪರ ಒಕ್ಕೂಟ ಹೊಸಬಸ್ಸು ನಿಲ್ದಾಣ ಪರಿಸರದ ಸಹಿವೃಕ್ಷದಡಿಯಲ್ಲಿ ಕಳೆದ ಎಂಟು ದಿನಗಳಿಂದ ಸತ್ಯಾಗ್ರಹ ನಡೆಸುತ್ತಿದ್ದಾರೆ. ಆದರೆ ಈವರೆಗೂ ಸರಕಾರ ಹಾಗೂ ಸರಕಾರದ ಯಾವೊಬ್ಬ ಅಧಿಕಾರಿಗಳು ಭೇಟಿ ನೀಡದೆ ತಟಸ್ಥ ವಾಗಿದ್ದು ಇದರಿಂದ ನೊಂದ  ಪ್ರತಿಭಟನಾ ಕಾರರು ಇಂದು ರಸ್ತೆ ತಡೆಯ ಮೂಲಕ ತೀವ್ರ ಸ್ವರೂಪದ ಹೋರಾಟಕ್ಕೆ ಮುಂದಾಗಿದ್ದಾರೆ. ಇಂದು ಬೆಳಗ್ಗೆ ನಗರದ ಹೊಸಬಸ್ಸು ನಿಲ್ದಾಣ ಪರಿಸರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂತ್ರಸ್ತ ವಲಯದ ಗೃಹಿಣಿಯರು ರಸ್ತೆ ತಡೆ ನಡೆಸಿದರು. ರಸ್ತೆ ತಡೆಯನ್ನು ಎಂಡೋಸಲ್ಫಾನ್ […]

ಕಾಸರಗೋಡು : ಕುದ್ರೆಪ್ಪಾಡಿಯ ಗುಡ್ಡಪ್ರದೇಶದಲ್ಲಿ ಕಾರಿನೊಳಗೆ ಪತ್ತೆಯಾದ ಮೃತದೇಹಗಳು

Wednesday, January 30th, 2013
Koodlu Mysterious death

ಕಾಸರಗೋಡು : ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾಯಿಪ್ಪಾಡಿ-ಅನಂತಪುರ ರಸ್ತೆಯ ಕುದ್ರೆಪ್ಪಾಡಿಯ ಗುಡ್ಡಪ್ರದೇಶದಲ್ಲಿ ಆಲ್ಟೋ ಕಾರಿನೊಳಗೆ ಒಂದೇ ಕುಟುಂಬದ ನಾಲ್ವರ ಶವ ಮಂಗಳವಾರ ಬೆಳಗ್ಗೆ ಪತ್ತೆಯಾಗಿದೆ. ಮೃತರು ಕೂಡ್ಲು ಗೋಪಾಲಕೃಷ್ಣ ಹೈಸ್ಕೂಲ್‌ ಬಳಿಯ ನಿವಾಸಿ ಹಾಗೂ ಭೆಲ್‌ ನೌಕರ ಸೋನಿ ಕುಟ್ಟಿ (46), ಪತ್ನಿ ಕಾಸರಗೋಡು ಜನರಲ್‌ ಆಸ್ಪತ್ರೆಯ ದಾದಿ ತ್ರೇಸ್ಯಮ್ಮ (ಜೋಲಿ – 39) ಹಾಗೂ ಅವರ ಮಕ್ಕಳಾದ ಜೆರಿನ್‌ (12) ಮತ್ತು ಜ್ಯುವೆಲ್‌ (10). ಕುದ್ರೆ ಪ್ಪಾಡಿಯ ನಿರ್ಜನ ಗುಡ್ಡಪ್ರದೇಶದಲ್ಲಿ ನಿಂತಿದ್ದ ಆಲ್ಟೋ ಕಾರಿನ […]

ಕಾಸರಗೋಡು ರಸ್ತೆ ಅಪಘಾತ ನಾಲ್ವರು ಮೃತ್ಯು

Thursday, December 27th, 2012
auto bus collision Kasargod

ಕಾಸರಗೋಡು : ಕಾಸರಗೋಡು ಜಿಲ್ಲೆಯ ಪಲ್ಲಿಕೆರೆ ಪೂಚಕ್ಕಾಡ್ ಎಂಬಲ್ಲಿ ಬುಧವಾರ ಮಧ್ಯಾಹ್ನ ಆಟೋ ರಿಕ್ಷಾವೊಂದಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಆಟೋ ಚಾಲಕ ಅಜಾನೂರು ಕಡಪ್ಪುರ ನಿವಾಸಿ ರತೀಶ್ (25), ಮತ್ತು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಅಂಕಿತ್(13), ಸಚಿನ್ (5), ಅಭಿಷೇಕ್ (4) ಎನ್ನಲಾಗಿದೆ. ಮದುವೆ ಕಾರ್ಯಕ್ರಮವೊಂದನ್ನು ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾಕ್ಕೆ ಗುದ್ದಿದ ಪರಿಣಾಮ […]

ಕಾಸರಗೋಡು :ತುಳು ಶಾಸನ ಪತ್ತೆ

Tuesday, November 27th, 2012
Ancient Tulu inscription

ಉಡುಪಿ :ಕಾಸರಗೋಡಿನ ಪರಕ್ಕಿಲ ಎಂಬಲ್ಲಿ ತುಳು ಶಾಸನವೊಂದು ಪತ್ತೆಯಾಗಿದ್ದು, ಕಾಸರಗೋಡಿನಿಂದ ಮಧೂರು ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಮಧೂರು ದೇವಸ್ಥಾನಕ್ಕಿಂತ ಸುಮಾರು ಒಂದು ಕಿ.ಮೀ. ಮೊದಲು ಉಳಿಯತ್ತಡ್ಕದಿಂದ ಕವಲೊಡೆಯುವ ರಸ್ತೆಯಲ್ಲಿ ಸ್ವಲ್ಪ ಮುಂದೆ ಸಾಗಿದರೆ ಪರಕ್ಕಿಲ ಮಹಾಲಿಂಗೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನದ ಪಡುಗೋಪುರದಲ್ಲಿ ಶಾಸನವು ದೊರೆತ್ತಿದ್ದು ಶಾಸನದ ಎಡದಲ್ಲಿ ಅಂಕುಶದ ಚಿಹ್ನೆ ಇದೆ, ಮಧೂರು ಸಿದ್ಧಿವಿನಾಯಕನ ಹಸ್ತಶೋಭಿ ಒಂದು ಅಂಕುಶವೂ ಇದೆ. ಈ ಹಿನ್ನೆಲೆಯಲ್ಲಿ ಇದು ಎರಡು ದೇವಾಲಯಗಳಿಗೆ ಸಂಬಧಿಸಿರಬಹುದಾದ ಶಾಸನವಾಗಿರಬಹುದು. ಶಾಸನವು ಬಹಳಷ್ಟು ಸವೆದಿರುವುದರಿಂದ ಓದಲಾಗದ ಸ್ಥಿತಿಯಲ್ಲಿದೆ. […]