ತಮಿಳುನಾಡು ಸರಕಾರಕ್ಕೆ ಹೆದರಿ ಮೇಕೆದಾಟು ಯೋಜನೆಯನ್ನು ವಿಳಂಬ ಮಾಡುವ ಅಗತ್ಯ ಇಲ್ಲ : ಡಿ.ಕೆ.ಶಿವಕುಮಾರ್

Monday, July 5th, 2021
DK Shivakumar

ಮಂಗಳೂರು : ದ.ಕ ಜಿಲ್ಲೆಗೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪತ್ರಕರ್ತರೊಂದಿಗೆ ಮಾಡನಾಡಿ ತಮಿಳುನಾಡು ಸರಕಾರಕ್ಕೆ ಹೆದರಿ   ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಮೇಕೆದಾಟು ಯೋಜನೆಯನ್ನು ವಿಳಂಬ ಮಾಡುವ ಅಗತ್ಯ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಮೇಕೆದಾಟು ಯೋಜನೆಯನ್ನು ರಾಜ್ಯ ಸರಕಾರ ಕೈಗೆತ್ತಿಕೊಂಡು ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು. ಈ ಬಗ್ಗೆ ಯಡಿಯೂರಪ್ಪ ತಕ್ಷಣ ಕ್ರಮ ಕೈಗೊಳ್ಳ ಬೇಕು. ತಮಿಳುನಾಡು ಸರಕಾರದ ಮುಂದೆ ಭಿಕ್ಷೆ ಬೇಡ ಬೇಕಾಗಿಲ್ಲ ಎಂದು ಹೇಳಿದರು. ಸುಪ್ರೀಂ ಕೋರ್ಟ್ ನೀಡಿರುವ […]

ಹುಬ್ಬಳ್ಳಿ: ಕೇಂದ್ರ ಸರ್ಕಾರ ಜೂನ್ 30 ರವರೆಗೆ ಲಾಕ್ ಡೌನ್ ಘೋಷಣೆ ಮಾಡಲು ಹೇಳಿಲ್ಲಾ! ಶೆಟ್ಟರ್

Saturday, May 29th, 2021
Jagadish Shetter

ಹುಬ್ಬಳ್ಳಿ: ಜಲ ಜೀವನ ಯೋಜನೆಯಡಿಯಲ್ಲಿ ಧಾರವಾಡ ಜಿಲ್ಲೆಯ 388 ಗ್ರಾಮಗಳಿಗೆ ಮುಂದಿನ ಮೂರು ವರ್ಷಗಳಲ್ಲಿ, ಕುಡಿಯುವ ನೀರು ಒದಗಿಸಲಾಗುತ್ತದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು. ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊನ್ನೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ, ಜಿಲ್ಲೆಗೆ 1032 ಕೋಟಿಯಲ್ಲಿ ಜಲ ಜೀವನ ಯೋಜನೆ ರೂಪಿಸಲಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರ 403 ಕೋಟಿ ನೀಡಿದರೇ, 602 ಕೋಟಿ ರಾಜ್ಯ ಸರ್ಕಾರ ನೀಡಿದೆ, 423 ಕೋಟಿ ನಬಾರ್ಡ್ ರಿಂದ ಸಾಲ ತೆಗೆದುಕೊಳ್ಳಲಾಗುತ್ತಿದೆ ಎಂದರು. […]

ಆಯವ್ಯಯ ಅನುಮೋದನೆಗಾಗಿ ನಡೆದ ಸಭೆ : ಮೂಲಭೂತ ಸೌಲಭ್ಯಕ್ಕಾಗಿ ಜನರ ಆಗ್ರಹ

Tuesday, December 31st, 2019
nagara-sabhe

ಮಡಿಕೇರಿ : ನಗರಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಸಾರ್ವಜನಿಕರು ಹಾಗೂ ವಿವಿಧ ಸಂಘ, ಸಂಸ್ಥೆಗಳ ಪ್ರಮುಖರು ನಗರಸಭಾ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಗರಸಭೆಯ 2020-21ನೇ ಸಾಲಿನ ಆಯವ್ಯಯ ಅನುಮೋದನೆಗಾಗಿ ನಡೆದ ಸಭೆಯಲ್ಲಿ ಎದುರಾಯಿತು. ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಗರಸಭಾ ಆಯುಕ್ತ ಎಂ.ಎಲ್.ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಮುಖವಾಗಿ ನಗರದ ರಸ್ತೆ, ಚರಂಡಿ ಅವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಕಸ ವಿಲೇವಾರಿ, ಟ್ರಾಫಿಕ್ ಸಮಸ್ಯೆಗಳ ಬಗ್ಗೆ ನಗರದ […]

ಬಹುಗ್ರಾಮ ಕುಡಿಯುವ ನೀರು ಒದಗಿಸಬೇಕೆನ್ನುವುದು ನನ್ನ ಕನಸಾಗಿತ್ತು : ಮಾಜಿ ಸಚಿವ ಬಿ.ರಮಾನಾಥ ರೈ

Wednesday, November 6th, 2019
Ramanath-Rai

ಬಂಟ್ವಾಳ : ತಾಲೂಕಿನ ಜನತೆಗೆ ಶುದ್ಧಕುಡಿಯುವ ನೀರನ್ನು ಒದಗಿಸುವ 5 ಯೋಜನೆಗಳನ್ನು ತಾಲೂಕಿಗೆ ಮಂಜೂರು ಮಾಡಿ ಮೂರು ಯೋಜನೆಗಳನ್ನು ಅನುಷ್ಠಾನಗೊಳಿಸಿದ ತೃಪ್ತಿ ನನ್ನಲ್ಲಿದೆ, ಇಡೀ ತಾಲೂಕಿಗೆ ಬಹುಗ್ರಾಮ ಕುಡಿಯುವ ನೀರು ಒದಗಿಸಬೇಕೆನ್ನುವುದು ನನ್ನ ಕನಸಾಗಿತ್ತು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು. ಅವರು ಪೆರಾಜೆ ಬಹುಗ್ರಾಮ ಕುಡಿಯುವ ನೀರಿನ ಘಟಕ ಕ್ಕೆ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ರೈ ಅವರ ಜೊತೆ ಭೇಟಿ ನೀಡಿದ ಬಳಿಕ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು. ತಾಲೂಕಿನ ಕುಡಿಯುವ ನೀರಿನ […]

ಬೆಂಗಳೂರಿನ ಭಕ್ತಾದಿಗಳಿಂದ ಧರ್ಮಸ್ಥಳಕ್ಕೆ ಕುಡಿಯುವ ನೀರು ಸರಬರಾಜು

Wednesday, May 22nd, 2019
water

ಧರ್ಮಸ್ಥಳ : ನೀರಿನ ಕೊರತೆಯನ್ನು ಗಮನಿಸಿದ ಬೆಂಗಳೂರಿನ ಬಸವನಗುಡಿ ಸುಂಕೇನಹಳ್ಳಿಯ ಭಕ್ತಾದಿಗಳು ಸೋಮವಾರರಾತ್ರಿ 6,780 ಲೀಟರ್‌ಕುಡಿಯುವ ನೀರನ್ನುಕೊಡುಗೆಯಾಗಿ ನೀಡಿದರು. 339 ಕ್ಯಾನ್‌ಗಳಲ್ಲಿ ತಲಾ 20 ಲೀಟರ್‌ನಂತೆಒಟ್ಟು  6,780 ಲೀ ನೀರನ್ನುಅವರುತಮ್ಮ ವಾಹನಗಳಲ್ಲಿ ಸೋಮವಾರರಾತ್ರಿತಂದುಕೊಟ್ಟರು. ಅನ್ನಪೂರ್ಣಛತ್ರದಲ್ಲಿ ಅಕ್ಕಿ ಬೇಯಿಸಲು ಹಾಗೂ ಭಕ್ತಾದಿಗಳಿಗೆ ಕುಡಿಯಲು ಈ ನೀರನ್ನು ಬಳಸಲಾಗಿದೆ ಎಂದುಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ. ಡಿ. ಹರ್ಷೇಂದ್ರಕುಮಾರ್ ಉಪಸ್ಥಿತರಿದ್ದರು.

ಮಂಗಳೂರಿನಲ್ಲಿ ಕುಡಿಯುವ ನೀರಿನ ಕೃತಕ ಅಭಾವ-ಆರೋಪ

Wednesday, March 22nd, 2017
Tumbe Dam

ಮಂಗಳೂರು : ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ದಿನನಿತ್ಯ ಸರಬರಾಜನ್ನು ಮಂಗಳೂರು ಮಹಾನಗರ ಪಾಲಿಕೆ ಕಡಿತಗೊಳಿಸಿದೆ. ಮೂವತ್ತಾರು ಗಂಟೆಗೊಮ್ಮೆ ನೀರು ಬಿಡಲಾಗುವುದೆಂದು ಘೋಷಣೆ ಮಾಡಿದೆ. ವಾಸ್ತವದಲ್ಲಿ ಜನತೆಗೆ ನೀರು ದೊರಕುತ್ತಿರುವುದು ಮೂರು ದಿನಕ್ಕೊಮ್ಮೆ ಮಾತ್ರ. ತುಂಬೆ ವೆಂಟೆಡ್ ಡ್ಯಾಮ್’ನಲ್ಲಿ ನೀರು ಶೇಖರಣೆ ಉತ್ತಮವಾಗಿದ್ದರೂ ಮಹಾ ನಗರ ಪಾಲಿಕೆ ಜನತೆಯಲ್ಲಿ ನೀರಿನ ಅಭಾವದ ಭೀತಿಯನ್ನು ಸೃಷ್ಟಿಸಿ ಜನರನ್ನು ಕುಡಿಯುವ ನೀರಿನಿಂದ ವಂಚಿಸಿ ಸಂಕಷ್ಟಕ್ಕೀಡು ಮಾಡುತ್ತಿದೆ. ಇದರಿಂದ ನಗೆರದ ಜನ ಆತಂಕಕ್ಕೀಡಾಗಿದ್ದಾರೆ. ನಗರ ಪಾಲಿಕೆಯ ಈ ನೀರು ನೀತಿಯ ಹಿಂದೆ […]

ಸರ್ಕಾರದ ಇಚ್ಛಾಶಕ್ತಿ ಕೊರತೆ, ಉಪ್ಪು ನೀರು ಸೇವನೆಯಿಂದ ಮುಕ್ತರಾಗದ ಕಾಸರಗೋಡಿನ ಜನತೆ

Monday, February 29th, 2016
Salt water

ಕಾಸರಗೋಡು: ನಗರ ಹಾಗೂ ಆಸುಪಸಿನ ಐದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಬಾವಿಕೆರೆ ಶಾಶ್ವತ ಅಣೆಕಟ್ಟು ಯೋಜನೆ ಮತ್ತೆ ಅತಂತ್ರ ಸ್ಥಿತಿಯತ್ತ ಸಾಗಿದೆ. ಗುತ್ತಿಗೆದಾರರು ಅಣೆಕಟ್ಟು ಕಾಮಗಾರಿಯನ್ನು ಅರ್ಧದಲ್ಲಿ ಕೈಬಿಟ್ಟು ತೆರಳಿರುವುದರಿಂದ ಈ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಕಾಮಗಾರಿಯ ರೀ ಟೆಂಡರ್ ನಡೆಸಿ ಯೋಜನೆ ಪೂರ್ತಿಗೊಳಿಸುವಂತೆ ನೀರಾವರಿ ಖಾತೆ ಸಚಿವ ಪಿ.ಜೆ ಜೋಸೆಫ್ ನೀಡಿರುವ ಭರವಸೆ ಒಂದಷ್ಟು ಭರವಸೆಯನ್ನು ಹುಟ್ಟಿಸಿದ್ದರೂ, ಈ ವರ್ಷವೂ ಕಾಮಗಾರಿ ಪೂರ್ತಿಗೊಳ್ಳುವುದು ಅನಿಶ್ಚಿತಾವಸ್ಥೆಯಲ್ಲಿದೆ. ಯೋಜನೆ ಜಾರಿಗೊಳ್ಳಲಿರುವ […]

ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಅರಿವು ಕಾರ‍್ಯಕ್ರಮ

Tuesday, March 24th, 2015
Water seminar

ಬಂಟ್ವಾಳ: ದ.ಕ.ಜಿಲ್ಲಾ ಪಂ. ಮಂಗಳೂರು, ತಾ.ಪಂ.ಬಂಟ್ವಾಳ ಇವರ ಸಹಯೋಗದೊಂದಿಗೆ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಅರಿವು ಮೂಡಿಸುವ ಸಪ್ತಾಹ ಕಾರ‍್ಯಕ್ರಮ ತಾ.ಪಂ.ನ ಎಸ್.ಜಿ.ಆರ್.ಎಸ್.ವೈ ಸಭಾಂಗಣದಲ್ಲಿ ನಡೆಯಿತು. ಕಾರ‍್ಯಕ್ರಮವನ್ನು ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸರಕಾರದ ಯಾವುದೇ ಯೋಜನೆಗಳು ಕಾರ್ಯಗತಗೊಳ್ಳಲು ಸಾರ್ವಜನಿಕರ ಸಹಕಾರ ಅತೀ ಅಗತ್ಯ, ಅ ನಿಟ್ಟಿನಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾರ‍್ಯಕ್ರಮ ಯಶಸ್ವಿಗೊಳ್ಳಲು ಸಾರ್ವಜನಿಕರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಒಮ್ಮತದ ಕೆಲಸ ಆಗಬೇಕಾಗಿದೆ ಎಂದರು. ವೇದಿಕೆಯಲ್ಲಿ ಸ್ಥಾಯಿ […]

ಕುಡಿಯುವ ನೀರು ಪೂರೈಕೆ 962 ಕಾಮಗಾರಿಗಳಿಗೆ ರೂ.51.79 ಕೋಟಿ ವೆಚ್ಚ- ತುಳಸಿ ಮದ್ದಿನೇನಿ

Wednesday, May 7th, 2014
Maddineni

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಒಟ್ಟು 962 ಕಾಮಗಾರಿಗಳನ್ನು ಕೈಗೊಂಡು ರೂ.51.79 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆಯೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ತುಳಸಿ ಮದ್ದಿನೇನಿ ಅವರು ತಿಳಿಸಿದ್ದಾರೆ. ಅವರು ಇಂದು ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯಸರ್ಕಾರದ ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಹಾಗೂ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಶ್ರೀ ಭರತ್ ಲಾಲ್ ಮೀನಾ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲೆಯ ಬರ ಪರಿಸ್ಥಿತಿ,ಕುಡಿಯುವ ನೀರು, […]

ಕುಡಿಯುವ ನೀರಿಗಾಗಿ ದ.ಕ. ಜಿಲ್ಲಾಧಿಕಾರಿಗಳನ್ನು ಬೇಟಿ ಮಾಡಿದ ಕಾರ್ಪೊರೇಟರ್‌ಗಳು

Saturday, April 21st, 2012
Congress Corporaters

ಮಂಗಳೂರು : ನಗರದ ಜನರ ಕುಡಿಯುವ ನೀರಿನ ಬವಣೆಯನ್ನು ನೀಗಿಸಲು ಕ್ರಮ ಕೈಗೊಳ್ಳಬೇಕು ಎಂದು ಮಂಗಳೂರು ಮಹಾ ನಗರ ಪಾಲಿಕೆಯ ಕಾರ್ಪೊರೇಟರ್‌ಗಳ ನಿಯೋಗ ದ.ಕ. ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದೆ. ತುಂಬೆ ವೆಂಟೆಡ್‌ ಡ್ಯಾಮ್‌ನಿಂದ ಮೇಲ್ಗಡೆ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳಿಗೆ ಕಟ್ಟಿರುವ ಎಲ್ಲ ಅಣೆಕಟ್ಟುಗಳನ್ನು ಡಿಸೆಂಬರ್‌ ಬಳಿಕ ಮಳೆ ಬರುವ ತನಕ ಜಿಲ್ಲಾಧಿಕಾರಿಯವರು ಸ್ವಾಧೀನಕ್ಕೆ ತಗೆದುಕೊಂಡು ನೀರು ಹಂಚಿಕೆಯ ಬಗ್ಗೆ ಮಹಾನಗರ ಪಾಲಿಕೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿತು. ಮಾಜಿ ಮೇಯರ್‌ಗಳಾದ ಎಂ. ಶಶಿಧರ […]