ಕೂಳೂರು ನಾಗನಕಲ್ಲುಗಳಿಗೆ ಹಾನಿ, ಪುನರ್ ಪ್ರತಿಷ್ಠಾಪನೆ ಮಾಡಿದ ಕುಟುಂಬಸ್ಥರು

Sunday, December 26th, 2021
Kulooru Naganakatte

ಮಂಗಳೂರು : ಇತ್ತೀಚಿಗೆ ಕೂಳೂರುವಿನಲ್ಲಿ ನಾಗನಕಲ್ಲುಗಳಿಗೆ ದುಷ್ಕರ್ಮಿಗಳು ಹಾನಿ ಮಾಡಿದ ಘಟನೆ ನಡೆದಿತ್ತು. ಇದರ ವಿರುದ್ಧ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ಕೂಡ ನಡೆದಿತ್ತು. ಭಾನುವಾರ ಅದೇ ಸ್ಥಳದಲ್ಲಿ ನಾಗನ ಕಲ್ಲಿನ ಪುನರ್ ಪ್ರತಿಷ್ಠಾಪನೆ, ಆಶ್ಲೇಷ ಬಲಿ, ವಟು ಆರಾಧನೆ, ನವಕ ಪ್ರಧಾನ ಹೋಮ ಮತ್ತು ತಂಬಿಲ ಸೇವೆಯ ಕಾರ್ಯಕ್ರಮಗಳು ವೈದಿಕ ಮುಖೇನ ಧಾರ್ಮಿಕ ವಿಧಿವಿಧಾನಗಳ ಮೂಲಕ ನಡೆಯಿತು. ಈ ಕಾರ್ಯಕ್ರಮಕ್ಕೆ ಶಾಸಕರಾದ ಡಾ.ವೈ.ಭರತ್ ಶೆಟ್ಟಿ ಆಗಮಿಸಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಕೋಡಿಕಲ್ ಮತ್ತು ಕೂಳೂರಿನಲ್ಲಿ ನಾಗಬನಗಳನ್ನು ಧ್ವಂಸಗೈದ ಎಂಟು ಮಂದಿ ಬಂಧನ

Saturday, November 27th, 2021
Nagabana Accuced

ಮಂಗಳೂರು : ನಗರದ ಕೋಡಿಕಲ್ ಮತ್ತು ಕೂಳೂರಿನಲ್ಲಿ ನಾಗಬನಗಳನ್ನು ಧ್ವಂಸಗೈದ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಎಂಟು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾವೂರಿನ ಸಫ್ವಾನ್, ಸುಹೈಬ್, ಪ್ರವೀಣ್ ಅನಿಲ್ ಮೊಂತೇರೊ, ನಿಖಿಲೇಶ್, ಜಯಕುಮಾರ್, ಪ್ರತೀಕ್, ಮಂಜುನಾಥ್ ಮತ್ತು ನೌಶಾದ್ ಬಂಧಿತ ಆರೋಪಿಗಳು. ಆರೋಪಿಗಳನ್ನು ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು. ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವುದು ಗಮನಕ್ಕೆ ಬಂದಿದೆ. ಅವರ ಪತ್ತೆಗೂ ಕಾರ್ಯಾಚರಣೆ ಮುಂದುವರಿದಿದೆ ಎಂದು  ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದರು. ಈ ಪ್ರಕರಣದ […]

ಈಶ್ವರಮಂಗಲ : ಪೋಟೋಗ್ರಾಫರ್‌ ಒಬ್ಬರನ್ನು ಹತ್ಯೆಗೈದು ಅರಣ್ಯ ಇಲಾಖೆಗೆ ಸೇರಿದ ಜಮೀನಿನಲ್ಲಿ ಹೂತು ಹಾಕಿದ ಮಾವ

Wednesday, November 24th, 2021
Jagadish Shetty

ಸುಳ್ಯ  : ಪೋಟೋಗ್ರಾಫರ್‌ ಒಬ್ಬರನ್ನು ಹತ್ಯೆಗೈದು ಅರಣ್ಯ ಇಲಾಖೆಗೆ ಸೇರಿದ ಜಮೀನಿನಲ್ಲಿ ಹೂತು ಹಾಕಿರುವ ಘಟನೆ, ನಾಪತ್ತೆಯಾದ ಐದು ದಿನಗಳ ಬಳಿಕ  ಸುಳ್ಯ ತಾಲೂಕಿನ ಈಶ್ವರಮಂಗಲದಲ್ಲಿ  ನ.24 ರಂದು ಬೆಳಕಿಗೆ ಬಂದಿದೆ. ಕೊಲೆಯಾದವರನ್ನು  ಮಂಗಳೂರು ಹೊರವಲಯ ಕೂಳೂರು ಸಮೀಪದ ಶಿವನಗರ ನಿವಾಸಿ ದಿ. ಶಂಭು ಶೆಟ್ಟಿಯವರ ಪುತ್ರ , ಪ್ರಸ್ತುತ ಮೈಸೂರಿನ ಸುಬ್ರಹ್ಮಣ್ಯ ನಗರ ನಿವಾಸಿ ಯಾಗಿರುವ  ಜಗದೀಶ್ ಶೆಟ್ಟಿ (58ವ) ಎಂದು ಗುರುತಿಸಲಾಗಿದೆ. ಜಗದೀಶ್ ಶೆಟ್ಟಿ ತನ್ನ ಕೃಷಿ ಜಮೀನು ನೋಡಲು ಮೈಸೂರಿನಿಂದ ಪುತ್ತೂರಿಗೆ ಆಗಮಿಸಿ  […]

ಕೂಳೂರು ಬಳಿ ನಾಗನ ಕಟ್ಟೆಯನ್ನು ಒಡೆದ ಕಿಡಿಗೇಡಿಗಳು

Saturday, October 23rd, 2021
Kulooru Nangana Katte

ಮಂಗಳೂರು: ಬಂಟ್ವಾಳ ಮುಂಡಾಡಿಯಲ್ಲಿ ವಿಶ್ವ ಹಿಂದೂ ಪರಿಷತ್ ಕಟ್ಟೆ ಒಡೆದ ಮಾದರಿಯಲ್ಲೇ  ಕೂಳೂರು ವಿ ಆರ್ ಎಲ್ ಬಳಿಯ ನಾಗನ ಕಟ್ಟೆಯನ್ನು ಯಾರೋ ಕಿಡಿಗೇಡಿಗಳು ಒಡೆದು ಹಾನಿ ಮಾಡಿರುವುದು ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಪಣಂಬೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಅನೇಕ ಸಮಯದಿಂದ ಇಂತಹ ದುಷ್ಕೃತ್ಯ ದಕ್ಷಿಣ ಕನ್ನಡದಲ್ಲಿ ನಡೆಯುತ್ತಿದ್ದು ಈ ಕೃತ್ಯದ ಹಿಂದಿನ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಬಂಧಿಸಲು ಹಿಂದೂ ಸಂಘಟನೆಗಳು ಆಗ್ರಹಿಸಿವೆ.

ಕೂಳೂರು ಮೇಲ್ಸೇತುವೆಯಿಂದ ಹಾರಿದ ವ್ಯಕ್ತಿ ನಾಪತ್ತೆ

Tuesday, November 3rd, 2020
Kuluru River

ಮಂಗಳೂರು : ಪ್ರತ್ಯಕ್ಷದರ್ಶಿಯೊಬ್ಬರು  ಕೂಳೂರು ಮೇಲ್ಸೇತುವೆಯಿಂದ ಮಂಗಳವಾರ ಬೆಳಗ್ಗೆ ವ್ಯಕ್ತಿಯೋರ್ವ ನದಿಗೆ ಹಾರಿರುವ  ಬಗ್ಗೆ  ಪೊಲೀಸರಿಗೆ ದೂರು  ನೀಡಿದ ಹಿನ್ನಲೆಯಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ. ಇಂದು ಬೆಳಗ್ಗೆ 10:30ರ ಸುಮಾರಿಗೆ ವ್ಯಕ್ತಿಯೊಬ್ಬರು ಮೇಲ್ಸೇತುವೆಯಲ್ಲಿ ಸ್ವಲ್ಪ ನಡೆದು ಬಳಿಕ ನದಿಗೆ ಹಾರಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ‌‌ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕಾಗಮಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಪಣಂಬೂರು ಹಾಗೂ ಕಾವೂರು ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಜತೆಗೆ ಅಗ್ನಿಶಾಮಕ ದಳವೂ ಸ್ಥಳದಲ್ಲಿ ಕಾರ್ಯಾಚರಣೆ […]

ಖಾಸಗಿ ಬಸ್ಸೊಂದು ಹರಿದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಸಾವು..!

Wednesday, November 28th, 2018
accident

ಮಂಗಳೂರು: ಖಾಸಗಿ ಬಸ್ಸೊಂದು ಹರಿದ ಪರಿಣಾಮ ಪಾದಚಾರಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಕೂಳೂರಿನಲ್ಲಿ ನಡೆದಿದೆ. ಕೂಳೂರು ನಿವಾಸಿ ಭೋಜ (45) ಮೃತಪಟ್ಟವರು. ಮೃತರು ನಗರದಲ್ಲಿ ಹಲವಾರು ವರ್ಷಗಳಿಂದ ಇಲೆಕ್ಟ್ರಿಶಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಮಂಗಳವಾರ ಸಂಜೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಮಂಗಳೂರಿನಿಂದ ಸುರತ್ಕಲ್ ಮಾರ್ಗವಾಗಿ ತೆರಳುತ್ತಿದ್ದ ಖಾಸಗಿ ಬಸ್ ನಿಯಂತ್ರಣ ತಪ್ಪಿ ಕೂಳೂರಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಭೋಜರವರ ಮೇಲೆಯೇ ಹರಿದು ಹೋಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ […]

ಅಪಾಯಕಾರಿ ಹಂತದಲ್ಲಿ ಕೂಳೂರು ಸೇತುವೆ… ವಾಹನ ಸಂಚಾರಕ್ಕೆ ನಿಷೇಧ ಸಾಧ್ಯತೆ!

Wednesday, October 3rd, 2018
kuloor

ಮಂಗಳೂರು: ಮಂಗಳೂರಿನ ಕೂಳೂರಿನಲ್ಲಿ ಇರುವ ಸೇತುವೆಯೊಂದು ಅಪಾಯದ ಅಂಚಿನಲ್ಲಿದೆ ಎಂದು ರಾಷ್ಟ್ರೀಯ ಹೆದ್ದಾರಿಯ ಇಂಜಿನಿಯರ್ ವಿಭಾಗ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದು ತತ್ ಕ್ಷಣದಿಂದ ಸೇತುವೆಯಲ್ಲಿ ಸಂಚಾರ ನಿಷೇಧಿಸಲು ಸೂಚಿಸಿದೆ. ಕೇರಳದಿಂದ ಉತ್ತರ ಭಾರತಕ್ಕೆ ಸಂಪರ್ಕಿಸುವ ಮಂಗಳೂರಿನ ಕೂಳೂರು ಸೇತುವೆ ವಾಹನ ಸಂಚಾರಕ್ಕೆ ಯೋಗ್ಯವಲ್ಲ. ಅದರಲ್ಲಿ ಸಂಚಾರ ಮಾಡುವುದು ಅಪಾಯಕಾರಿಯಾದದ್ದು ಎಂಬ ವರದಿಯನ್ನು ಹೆದ್ದಾರಿ ಇಲಾಖೆಯ ಇಂಜಿನಿಯರ್ ವಿಭಾಗ ನೀಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಜಿಲ್ಲಾಡಳಿತ ಈ ಸೇತುವೆಯಲ್ಲಿ ಸಂಚಾರ ನಿಷೇಧ ಆದೇಶ ಮಾಡಲಿದೆ. ಸ್ವಾತಂತ್ರ್ಯ […]

ಅಭಿವೃದ್ಧಿ ನೋಡಿ ಮತ ಚಲಾಯಿಸಿ: ಮೊಹಿಯುದ್ದೀನ್ ಬಾವಾ

Tuesday, May 8th, 2018
mohuiddin-bava

ಮಂಗಳೂರು: ಸುಳ್ಳನ್ನು ಸತ್ಯ ಎಂದು ಬಿಂಬಿಸುವುದು ಬಿಜೆಪಿ ಗರಗತವಾಗಿದೆ. ಆದುದರಿಂದ ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದೆ ಅಭಿವೃದ್ಧಿಯನ್ನು ಪರಿಗಣಿಸಿ ಮತ ಚಲಾಯಿಸಬೇಕು ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎ. ಮೊಹಿಯುದ್ದೀನ್ ಬಾವಾ ಹೇಳಿದ್ದಾರೆ. ಕೂಳೂರಿನ ಪೇಟೆಯಲ್ಲಿ,ಪಂಜಿಮೊಗರು ಸೇರಿದಂತೆ ವಿವಿಧೆಡೆ ಸೋಮವಾರ ಮಂಗಳೂರು ಉತ್ತರ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಮೊದಿನ್ ಬಾವಾ ಬಿರುಸಿನ ಮತಯಾಚನೆ ನಡೆಸಿದರು. ಮನೆ, ವ್ಯಾಪಾರ ಕೇಂದ್ರ, ಕಂಪನಿಗಳಿಗೆ ಭೇಟಿ ನೀಡಿ ಸರಕಾರ ಕೈಗೊಂಡ ಕಲ್ಯಾಣ ಕಾರ್ಯಕ್ರಮವನ್ನು ವಿವರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ […]

ಬಸ್ ಟೈಯರ್ ಸ್ಫೋಟ: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ

Monday, January 15th, 2018
surathakal

ಸುರತ್ಕಲ್: ಸುರತ್ಕಲ್ನಿಂದ ಮಂಗಳೂರಿಗೆ ತೆರಳುತ್ತಿದ್ದ 59 ನಂಬರಿನ ಖಾಸಗೀ ಬಸ್ ಟೈಯರ್ ಸ್ಫೋಟಗೊಂಡು ಸೇತುವೆಯಿಂದ ಜಾರಿ ನಿಂತ ಘಟನೆ ಕೂಳೂರು ಮೇಲ್ಸೇತುವೆ ಅಯ್ಯಪ್ಪ ಮಂದಿರದ ಬಳಿ ಸೋಮವಾರ ಬೆಳಿಗ್ಗೆ ನಡೆದಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಬಸ್ ನದಿಗೆ ಉರುಳುವುದು ತಪ್ಪಿದೆ. ಬೆಳಗ್ಗಿನ ಟ್ರಿಪ್ ಆಗಿದ್ದರಿಂದ ಬಸ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇದ್ದರು ಎನ್ನಲಾಗಿದೆ.

ಕೂಳೂರು: ಚತುಷ್ಪಥ ರಸ್ತೆ, ಕಸದ ಕೊಂಪೆ

Monday, October 9th, 2017
kuluru

ಮಂಗಳೂರು: ನಗರದ ತ್ಯಾಜ್ಯವನ್ನು ಕೂಳೂರು ಬಳಿಯ ಜಾಗದಲ್ಲಿ ತಂದು ಸುರಿಯಲಾಗುತ್ತಿದ್ದು, ಇದು ನಗರದ ಎರಡನೇ ಡಂಪಿಂಗ್‌ ಯಾರ್ಡ್‌ನಂತೆ ಕಂಡು ಬರುತ್ತಿದೆ. ಸಮೀಪದಲ್ಲೇ ಇರುವ ರಸ್ತೆಯಲ್ಲಿ ಸಾಗುವ ಜನರು ದುರ್ವಾಸನೆಯಿಂದ ಮೂಗು ಮುಚ್ಚಿ ನಡೆಯುವಂತಾಗಿದೆ. ಪಾದಚಾರಿ ಮಾರ್ಗ ಕಸದ ತೊಟ್ಟಿಯಾಗಿದ್ದು, ದಿನೇ ದಿನೇ ತ್ಯಾಜ್ಯವೂ ಹೆಚ್ಚುತ್ತಿದೆ. ರಾಷ್ಟ್ರೀಯ ಹೆದ್ದಾರಿ ಇದಾಗಿರುವುದರಿಂದ ಸ್ವತ್ಛತೆಗೆ ಧಕ್ಕೆ ತರುತ್ತಿದೆ. ಮಾತ್ರವಲ್ಲ, ತ್ಯಾಜ್ಯ ರಾಶಿಗೆ ನಾಯಿಗಳ ಹಿಂಡು ಬರುವುದರಿಂದ ದ್ವಿಚಕ್ರ ಸವಾರರಿಗೆ ಕಂಟಕವಾಗುತ್ತಿದೆ. ವಿವಿಧೆಡೆಯಿಂದ ರಾತ್ರಿ ವೇಳೆ ವಾಹನದಲ್ಲಿ ತಂದು ಹೆದ್ದಾರಿ ಬದಿಯೇ ನಿಲ್ಲಿಸಿ […]