ಕೊರೋನಾ ರೋಗಿಯ ದೇಹವನ್ನುಇಬ್ಬರು ವ್ಯಕ್ತಿಗಳು ನದಿಗೆ ಎಸೆಯುವ ವಿಡಿಯೋ ವೈರಲ್

Sunday, May 30th, 2021
Prem Nath Misra

ಸಿದ್ಧಾರ್ಥ್ ನಗರ : ಸೇತುವೆಯೊಂದರಿಂದ ನದಿಗೆ ಕೊರೋನಾ ವೈರಸ್ ರೋಗಿಯ ದೇಹವನ್ನುಇಬ್ಬರು ವ್ಯಕ್ತಿಗಳು ಎಸೆಯುವ ವಿಡಿಯೋ ಈಗ ಬಾರಿ ವೈರಲ್ ಆಗಿದೆ. ಒಬ್ಬರು ಪಿಪಿಇ ಕಿಟ್ ಧರಿಸಿದ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಜೊತೆ ಸೇರಿ  ಉತ್ತರಪ್ರದೇಶದ ಬಲರಾಂಪುರ್ ಜಿಲ್ಲೆಯ ರಾಪ್ತಿ ನದಿಗೆ ಮೇ 30 ಭಾನುವಾರ ಮೃತ ದೇಹ ಎಸೆಯುವುದನ್ನು ಕಾರಿನಲ್ಲಿ ಹೋಗುತ್ತಿದ್ದವರು ಚಿತ್ರೀಕರಿಸಿದ್ದರು. ವಿಡಿಯೋ ತುಣುಕುಗಳು ವೈರಲ್ ಆಗುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿ ವಿವರ ಸಂಗ್ರಹಿಸಿ ಕೇಸು ದಾಖಲಿಸಿದ್ದಾರೆ. ಉತ್ತರಪ್ರದೇಶದ ಸಿದ್ಧಾರ್ಥ್ ನಗರ ಜಿಲ್ಲೆಯ ಸೊಹರತ್‌ ನಿವಾಸಿ ಪ್ರೇಮ್ […]

ದೇಶಾದ್ಯಂತ 2ನೇ ಅಲೆಯಲ್ಲಿ ಕೊರೋನಾ ಸೋಂಕಿಗೆ 270 ಮಂದಿ ವೈದ್ಯರು ಸಾವು

Tuesday, May 18th, 2021
KK Agarwal

ನವದೆಹಲಿ : ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದ 2ನೇ ಅಲೆ ವೇಳೆ ದೇಶಾದ್ಯಂತ ಸುಮಾರು 270 ಮಂದಿ ವೈದ್ಯರು ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ವರದಿ ಮಾಡಿದೆ. ದೇಶಾದ್ಯಂತ 2ನೇ ಅಲೆಯಲ್ಲಿ ಕೊರೋನಾ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ ವೈದ್ಯರ ಕುರಿತ ಅಂಕಿ ಅಂಶಗಳನ್ನು  ಏಮ್ಸ್ ನೀಡಿದೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ಖ್ಯಾತ ಹೃದ್ರೋಗತಜ್ಞರಾಗಿದ್ದ ಡಾ. ಕೆಕೆ ಅಗರ್‌ವಾಲ್ ಸೇರಿದಂತೆ ದೇಶದಲ್ಲಿ 2ನೇ ಅಲೆ ಸಂದರ್ಭದಲ್ಲಿ 270 ಮಂದಿ […]

ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ಎರಡನೇ ಅಲೆ ಪ್ರಾರಂಭದ ಸೂಚನೆ

Tuesday, March 16th, 2021
Maharastra

ನವದೆಹಲಿ:  ಮಹಾಮಾರಿ ಕೊರೋನಾ ವೈರಸ್ ಎರಡನೇ ಅಲೆ ಮಹಾರಾಷ್ಟ್ರದಲ್ಲಿ ಮತ್ತೆ ಪ್ರಾರಂಭ ವಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಸಿದೆ. ದೇಶದಲ್ಲಿ ಇಂದು ಸತತ 6ನೇ ದಿನವೂ 20,000ಕ್ಕೂ ಹೆಚ್ಚು ಕರೋನಾ ವೈರಸ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಕಟ್ಟುನಿಟ್ಟಾದ ನಿಯಂತ್ರಣ ತಂತ್ರಗಳತ್ತ ಗಮನಹರಿಸುವಂತೆ ಕೇಂದ್ರ ಸರ್ಕಾರ ಅತಿ ಹೆಚ್ಚು ಕೊರೋನಾ ಪೀಡಿತ ಮಹಾರಾಷ್ಟ್ರಕ್ಕೆ ಸೂಚಿಸಿದೆ. ದೇಶದಲ್ಲಿ ಮಂಗಳವಾರ 24,492 ಹೊಸ ಕೋವಿಡ್ -19 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 1.14 ಕೋಟಿಗೆ ತಲುಪಿದೆ ಎಂದು ಕೇಂದ್ರ ಆರೋಗ್ಯ […]

ಕಾಸರಗೋಡು ಜಿಲ್ಲೆಯಲ್ಲಿ 18 ಮಂದಿಗೆ ಕೊರೋನಾ ವೈರಸ್ : ವೈದ್ಯಾಧಿಕಾರಿ

Thursday, May 28th, 2020
kerala-corona

ಕಾಸರಗೋಡು :  ಮಹಾರಾಷ್ಟ್ರದಿಂದ ಆಗಮಿಸಿದ 13 ಮಂದಿ ಸಹಿತ ಜಿಲ್ಲೆಯಲ್ಲಿ ಗುರುವಾರ  18 ಮಂದಿಗೆ ಕೊರೋನಾ ವೈರಸ್ ತಗುಲಿರುವುದು  ಖಚಿತವಾಗಿದೆ. ಒಬ್ಬ ಮಹಿಳೆ ಮತ್ತು 17 ಮಂದಿ ಪುರುಷರು ರೋಗಬಾಧಿತರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ. ಮಹಾರಾಷ್ಟ್ರವಲ್ಲದೆ ಕುವೈತ್‌ನಿಂದ ಆಗಮಿಸಿದ ಇಬ್ಬರು, ಖತಾರ್‌ನಿಂದ ಬಂದ ಒಬ್ಬರು, ಷಾರ್ಜಾ ದಿಂದ ಆಗಮಿಸಿದ ಒಬ್ಬರು, ತಮಿಳುನಾಡಿನಿಂದ ಬಂದ ಒಬ್ಬರಲ್ಲಿ ಸೋಂಕು ಖಚಿತವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕು ಖಚಿತಗೊಂಡವರ ಸಂಖ್ಯೆ 67ಕ್ಕೇರಿದೆ. ಮೇ 20ರಂದು ತಮಿಳುನಾಡಿನಿಂದ ಆಗಮಿಸಿದ್ದ 23 […]

ದಾವಣಗೆರೆಯಲ್ಲಿ ಕೊರೋನಾ ವೈರಸ್ ಗೆ ಮೊದಲ ಬಲಿ, ಮನೆ ಮಂದಿಗೆಲ್ಲ ಹರಡಿದ ಸೋಂಕು

Friday, May 1st, 2020
Davanagere

ದಾವಣಗೆರೆ:  ದಾವಣಗೆರೆಯಲ್ಲಿ ಮಾರಕ ಕೊರೋನಾ ವೈರಸ್ ಗೆ ಮೊದಲ ಬಲಿಯಾಗಿದ್ದು, 69 ವರ್ಷದ ವೃದ್ಧರೊಬ್ಬರು ಶುಕ್ರವಾರ ಮೃತಪಟ್ಟಿದ್ದಾರೆ. ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ (ರೋಗಿ ಸಂಖ್ಯೆ 556) ಇಂದು ರಾತ್ರಿ ಸಾವನ್ನಪ್ಪಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಕೊರೊನಾಗೆ ಮೃತಪಟ್ಟವರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ಜಾಲಿನಗರದ ನಿವಾಸಿಯಾಗಿದ್ದ ವ್ಯಕ್ತಿ ಮೂರು ದಿನಗಳ ಹಿಂದೆ ಉಸಿರಾಟದ ಸಮಸ್ಯೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಈ ವ್ಯಕ್ತಿಗೆ ಕೊರೋನಾ ಹೇಗೆ ಬಂದಿದೆ ಎನ್ನುವುದು ತಿಳಿದಿಲ್ಲ. ವೃದ್ಧನ ಟ್ರಾವೆಲ್ ಹಿಸ್ಟರಿಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಈ […]

ದಕ್ಷಿಣ ಕನ್ನಡ ಜಿಲ್ಲೆಗೆ ಕೊರೋನಾ ವೈರಸ್ ಬಂದಿದ್ದು ದುಬೈನಿಂದ

Friday, May 1st, 2020
corona-entry

ಮಂಗಳೂರು  : ದಕ್ಷಿಣ ಕನ್ನಡ ಜಿಲ್ಲೆಗೆ  ಕೊರೋನಾ ವೈರಸ್ ಬಂದಿದ್ದು ವಿದೇಶದಿಂದ.  ಮಾರ್ಚ್ 22ರಂದು ಮೊದಲ ಕೋವಿಡ್ ಸೋಂಕು  ಜಿಲ್ಲೆಯಲ್ಲಿ  ಪತ್ತೆಯಾಗಿತ್ತು. ದುಬೈನಿಂದ ಆಗಮಿಸಿದ  ಯುವಕನೊಬ್ಬನಲ್ಲಿ ಕೋವಿಡ್‌-19  ವೈರಾಣು ಪತ್ತೆಯಾಗಿತ್ತು. ಮೇಲೆ ಎಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದರು ಒಂದಿಲ್ಲೊಂದು ಹೊಸ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಲ್ಲಿಯ ವರೆಗೆ ಒಟ್ಟು ಸೋಂಕಿತರ ಸಂಖ್ಯೆ 22ಕ್ಕೇರಿದ್ದು, ಆ ಪೈಕಿ ಓರ್ವ ಭಟ್ಕಳ, ಓರ್ವ ಉಡುಪಿ ಹಾಗೂ ನಾಲ್ವರು ಕೇರಳದವರಾಗಿದ್ದಾರೆ. ಉಳಿದ 16 ಮಂದಿ ದ.ಕ. ಜಿಲ್ಲೆಯವರು. ಒಟ್ಟು ಸೋಂಕಿತರ […]

ಮಂಗಳೂರು ಮಾರ್ಕೆಟ್ ನಲ್ಲಿ ಅಗತ್ಯ ವಸ್ತು ಖರೀದಿಗೆ ಮುಗಿಬಿದ್ದ ಜನತೆ

Tuesday, March 31st, 2020
Market

ಮಂಗಳೂರು: ಮಂಗಳವಾರ ಜನತೆ ಅಗತ್ಯ ವಸ್ತು ಖರೀದಿಗೆ ಕೊರೋನಾ ವೈರಸ್ ಹರಡುವಿಕೆಯ ನಿಯಮ ಪಾಲಿಸದೇ, ಅಂತರ ಕಾಯ್ದುಕೊಳ್ಳದೆ ಕೇಂದ್ರ ಮಾರುಕಟ್ಟೆಯಲ್ಲಿ ಮುಗಿಬಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ದಿನಗಳ ಸಂಪೂರ್ಣ ಬಂದ್ ನಂತರ ಮಂಗಳವಾರ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡಿದ್ದುದರ, ಪರಿಣಾಮ ಮಂಗಳವಾರ ಬೆಳ್ಳಂಬೆಳಗ್ಗೆ ಮನೆಯಿಂದ ಭಾರೀ ಸಂಖ್ಯೆಯಲ್ಲಿ ಜನರು ಹೊರಬರುತ್ತಿದ್ದಾರೆ. ದಿನಸಿ, ತರಕಾರಿ ಅಂಗಡಿಗಳ ಮುಂದೆ ಜನರು ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಕಂಡುಬಂದಿದೆ. ಮಂಗಳೂರಿನ ಕೇಂದ್ರ ಮಾರುಕಟ್ಟೆ, ಮಲ್ಲಿಕಟ್ಟೆ ಮಾರ್ಕೆಟ್ ನಲ್ಲಿ ಭಾರೀ […]

21 ದಿನಗಳ ಕಾಲ ಮನೆಯಲ್ಲೇ ಇರಿ, ಇಲ್ಲದಿದ್ದಲ್ಲಿ ಭಾರತ 21 ವರ್ಷಗಳ ಕಾಲ ಹಿಂದಕ್ಕೆ ಹೋಗುತ್ತದೆ : ಪ್ರಧಾನಿ

Tuesday, March 24th, 2020
Modi

ನವದೆಹಲಿ:  ಕೊರೋನಾ ವೈರಸ್ ಭಾರತದಲ್ಲಿ ನಿಯಂತ್ರಣ ಮೀರುತ್ತಿದ್ದು ದೇಶದ ಜನತೆ 21 ದಿನಗಳ ಕಾಲ ಮನೆಯಲ್ಲೇ ಇರುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತನ್ನ ಭಾಷಣದಲ್ಲಿ ಹೇಳಿದ್ದಾರೆ. ವಿಶ್ವದ ಬಹುತೇಕ ರಾಷ್ಟ್ರಗಳು ಕೊರೋನಾ ವೈರಸ್ ನಿಂದ ಬಾಧಿತವಾಗಿದೆ. ಇದರಿಂದ ದೇಶವನ್ನು ರಕ್ಷಿಸಿಕೊಳ್ಳಬೇಕೆಂದರೆ ದೇಶದ ಜನತೆ ಇನ್ನು 21 ದಿನಗಳ ಕಾಲ ರಸ್ತೆಗೆ ಇಳಿಯಬೇಡಿ ನಿಮ್ಮಲ್ಲಿ ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದರು. ಕೊರೋನಾ ವೈರಸ್ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ಸೂಚನೆಯನ್ನು ನಾಗರಿಕರು ಗಂಭೀರವಾಗಿ ಪರಿಗಣಿಸುತ್ತಿಲ್ಲ […]

ಕೊರೋನಾ ವೈರಸ್ ಭೀತಿ : ಕಟ್ಟಡ ಕಾರ್ಮಿಕರಿಗೆ 1 ಸಾವಿರ ವೇತನ, 2 ತಿಂಗಳ ಪಡಿತರ ಮುಂಗಡ

Tuesday, March 24th, 2020
yedyurappa

ಬೆಂಗಳೂರು: ಕೊರೋನಾ ವೈರಸ್ ಭೀತಿಯಲ್ಲಿ ರಾಜ್ಯ ಸಂಪೂರ್ಣ ಲಾಕ್ ಡೌನ್ ಆಗಿರುವ ಹಿನ್ನಲೆಯಲ್ಲಿ ಕಟ್ಟಡ ಕಾರ್ಮಿಕರಿಗೆ 1 ಸಾವಿರ ವೇತನ, 2 ತಿಂಗಳ ಪಡಿತರ ಮುಂಗಡ ವಿತರಣೆ ಸಹಿತ ಕರ್ನಾಟಕ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಕರ್ನಾಟಕದಲ್ಲೂ ಮಾರಕ ಕೊರೋನಾ ವೈರಸ್ ಹಬ್ಬುತ್ತಿರುವ ಹಿನ್ನಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಜಾರಿ ಮಾಡಲಾಗಿದ್ದು, ಇದೇ ಕಾರಣಕ್ಕೆ ಸಾರ್ವಜನಿಕರಿಗೆ ತೊಂದರೆಯಾಗದ ನಿಟ್ಟಿನಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು, ಕಟ್ಟಡ ಕಾರ್ಮಿಕರಿಗೆ ತಿಂಗಳಿಗೆ 1000 […]

ಕೊರೋನಾ ವೈರಸ್ ಭೀತಿ : ಆದಿಚುಂಚನಗಿರಿ ಮಠ ಮುಂದಿನ ಎರಡು ವಾರ ಬಂದ್​ ಮಾಡಲು ನಿರ್ಧಾರ

Thursday, March 19th, 2020
tumakuru

ತುಮಕೂರು : ಮಾರಣಾಂತಿಕ ಕೊರೋನಾ ವೈರಸ್‌ ಹರಡುವ ಭೀತಿ ಎಲ್ಲೆಡೆ ಕಾಡುತ್ತಿದೆ. ಈಗಾಗಲೇ ಅನೇಕ ದೇವಾಲಯಗಳನ್ನು ಮುಚ್ಚಲಾಗಿದೆ. ಅದೇ ರೀತಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠವನ್ನು ಮುಂದಿನ ಎರಡು ವಾರ ಬಂದ್ ಮಾಡಲು ನಿರ್ಧಾರಿಸಲಾಗಿದೆ. ಶನಿವಾರ ಮತ್ತು ಭಾನುವಾರ ಕಾಲಭೈರವನ ದರ್ಶನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಇಲ್ಲಿ ಅನ್ನ ಸಂತರ್ಪಣೆ ಕೂಡ ನಡೆಯುತ್ತದೆ. ಆದರೆ, ಇತ್ತೀಚೆಗೆ ವಿಶ್ವದಾದ್ಯಂತ ಕೊರೋನಾ ವೈರಸ್ ಹಬ್ಬುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ 2 ವಾರಗಳ ಕಾಲ ಭಕ್ತರು ದೇವರ ದರ್ಶನಕ್ಕೆ ಆಗಮಿಸದಂತೆ ಆದಿಚುಂಚನಗಿರಿ […]