Blog Archive

ಹುಬ್ಬಳ್ಳಿ: ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ :  ಸಿದ್ದರಾಮಯ್ಯ 

Friday, May 28th, 2021
siddaramaiah

ಹುಬ್ಬಳ್ಳಿ: ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು. ಕೋವಿಡ್ ಸೋಂಕು ನಿರ್ವಹಣೆಗೆ ಸರ್ಕಾರ ಸರಿಯಾಗಿ ಸಿದ್ಧತೆಯನ್ನು ಮಾಡಿಕೊಂಡಿಲ್ಲ. ರಾಜ್ಯದಲ್ಲಿ ಆಕ್ಸಿಜನ್ ಬೆಡ್, ಐಸಿಯು ಬೆಡ್‍ಗಳು ಸಿಗದೆ ಸೋಂಕಿತರು ಪರದಾಡುವಂತಾಗಿದೆ. ಇದರಿಂದ ಸಾವುನೋವುಗಳು ಹೆಚ್ಚಾಗಿವೆ. ಇನ್ನೂ ಹೆಚ್ಚುತ್ತಲೇ ಇವೆ. ಯಾವ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕೋ ಆ ವ್ಯವಸ್ಥೆಯನ್ನೇ ಸರಿಯಾಗಿ ಮಾಡಿಲ್ಲ ಎಂದು ಸರ್ಕಾರವನ್ನು ದೂರಿದರು. ಚಾಮರಾಜನಗರದ ಸಾವಿನ ಅಂಕಿ ಸಂಖ್ಯೆಯಲ್ಲಿ ಮೊದಲು ಸುಳ್ಳು ಹೇಳಿದ್ದಾರೆ. ಸಂಬಂಧಪಟ್ಟ ಸಚಿವರು ಏಕೆ ಸುಳ್ಳು ಹೇಳಿದರು […]

ಮಂಗಳೂರಿನ ಕದ್ರಿ ಅಗ್ನಿಶಾಮಕದಳದ ಸಿಬ್ಬಂದಿ ಕೊರೊನಾ ಸೋಂಕಿಗೆ ಬಲಿ

Monday, May 24th, 2021
naveen Andra

ಮಂಗಳೂರು : ಮಂಗಳೂರಿನ ಕದ್ರಿ ಅಗ್ನಿಶಾಮಕದಳದಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಸಿಬ್ಬಂದಿಯೊಬ್ಬರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ನವೀನ್ ಚಂದ್ರ  (54) ಕೋವಿಡ್ ಸೋಂಕಿನಿಂದ ಮೃತಪಟ್ಟವರು. ನವೀನ್ ಅವರಿಗೆ ಮೇ. 9 ರಂದು ಕೋವಿಡ್ ಸೋಂಕು ದೃಢವಾಗಿತ್ತು.ಅದೇ ದಿನ ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾದ ಅವರು ಮೇ.23 ( ಭಾನುವಾರ) ಸೋಂಕಿಗೆ ಬಲಿಯಾಗಿದ್ದಾರೆ. 1997 ರಲ್ಲಿ ಸೇವೆ ಶುರು ಮಾಡಿದ್ದ ನವೀನ್, ಕದ್ರಿಯ ಅಗ್ನಿಶಾಮಕದಳದಲ್ಲಿ ಸಿಬ್ಬಂದಿಯಾಗಿದ್ದರು. ನವೀನ್ ಅವರು ಸಾಂಸ್ಕೃತಿಕ, ಸಾಮಾಜಿಕ ಮತ್ತು ಸಂಗೀತದಂತಹ ಕಾರ್ಯಕ್ರಮಗಳಲ್ಲೂ ಸದಾ ಮುಂಚೂಣಿಯಲ್ಲಿರುತ್ತಿದ್ದರು. ಸುರ್ ಸಂಗಮ್ ಆರ್ಕೆಸ್ಟ್ರಾ ತಂಡದಲ್ಲಿ […]

ಸೋಂಕಿನಿಂದ ಸಾವನ್ನಪ್ಪಿದವರ ಅಸ್ಥಿಯನ್ನ 15 ದಿನಗಳೊಳಗೆ ಪಡೆದುಕೊಳ್ಳದಿದ್ದರೆ ಸರ್ಕಾರದಿಂದಲೇ ವಿಸರ್ಜನೆ

Saturday, May 22nd, 2021
R Ashoka

ಬೆಂಗಳೂರು : ಕೋವಿಡ್ ಸೋಂಕಿನಿಂದ ಪ್ರಾಣ ಕಳೆದುಕೊಂಡವರ ಅಂತಿಮ ಕ್ರಿಯೆಯ ನಂತರದಲ್ಲಿ ಸಾವಿರಾರು ಜನರ ಅಸ್ಥಿಗಳು ಹಿಂಪಡೆಯದೆ ಚಿತಾಗಾರದಲ್ಲಿ ಹಾಗೇ ಉಳಿದುಕೊಂಡಿವೆ. ಇಂಥಹ ಚಿತಾಭಸ್ಮವನ್ನ 15 ದಿನಗಳ ನಂತರ ಸರ್ಕಾರವೇ ಗೌರವಪೂರ್ವಕವಾಗಿ ವಿಸರ್ಜನೆ ಮಾಡಲಿದೆ ಎಂದು ಕಂದಾಯ ಸಚಿವ ಆರ್ ಅಶೋಕ ತಿಳಿಸಿದ್ದಾರೆ. ಈ ಕುರಿತಂತೆ ಮಾಹಿತಿ ನೀಡಿದ ಸಚಿವ ಆರ್ ಅಶೋಕ,”ನಾನಾ ಕಾರಣಗಳಿಂದ ಸೋಂಕಿನಿಂದ ಸಾವನ್ನಪ್ಪಿದವರ ಚಿತಾಭಸ್ಮವನ್ನ ಅವರ ಕುಟುಂಬಸ್ಥರು ಇಂದಿಗೂ ಚಿತಾಗಾರದಿಂದ ತೆಗದುಕೊಂಡು ಹೋಗಿಲ್ಲ. ಈಗಾಗಲೇ ಸಾವಿರಕ್ಕೂ ಅಧಿಕ ಅಸ್ಥಿಗಳು ಚಿತಾಗಾರಗಳಲ್ಲಿ ಉಳಿದುಕೊಂಡಿವೆ. ಸಾಮಾನ್ಯವಾಗಿ […]

ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ರಿಗೆ ಕೋವಿಡ್​ ಸೋಂಕು ದೃಢ

Thursday, November 19th, 2020
DV Sadananda Gowda

ಮಂಗಳೂರು  : ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರಿಗೆ ಕೋವಿಡ್ ಸೋಂಕು ದೃಢವಾಗಿದೆ. ಈ ಕುರಿತು ಅಧಿಕೃತವಾಗಿ ಟ್ವಿಟರ್ನಲ್ಲಿ ತಿಳಿಸಿರುವ ಸಚಿವರು, ಕೊರೋನಾ ಸೋಂಕಿನ ಪ್ರಾಥಮಿಕ ಲಕ್ಷಣಗಳ ಹಿನ್ನಲೆ ಪರೀಕ್ಷೆಗೆ ಒಳಗಾಗಿದ್ದೆ. ಈ ವೇಳೆ ಸೋಂಕು ದೃಢಪಟ್ಟಿದೆ. ಈ ಹಿನ್ನಲೆ ಪ್ರತ್ಯೇಕ ವಾಸಕ್ಕೆ ಒಳಗಾಗಿತ್ತಿದ್ದೇನೆ. ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಒಳಗಾದವರು ಮುಂಜಾಗ್ರತೆ ವಹಿಸುವುದರೊಂದಿಗೆ ಪರೀಕ್ಷೆಗೆ ಒಳಪಡಿ ಎಂದು ಮನವಿ ಮಾಡಿದ್ದಾರೆ. ಇನ್ನು ಸಚಿವರು ಕೊರೋನಾ ಸೋಂಕಿಗೆ ಒಳಗಾಗಿದ್ದ ಸುದ್ದಿ ತಿಳಿಯುತ್ತಿದ್ದಂತೆ […]

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪಗೆ ಕೋವಿಡ್ ಸೋಂಕು ದೃಢ

Tuesday, September 1st, 2020
eswarappa

ಶಿವಮೊಗ್ಗ : ಬಿಜೆಪಿ ಮುಖಂಡ  ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಕೋವಿಡ್ ಸೋಂಕು ದೃಢಪಟ್ಟಿರುವುದಾಗಿ ತಮ್ಮ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ. ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರೂ ಸಚಿವರ ಮನೆಯ ಸದಸ್ಯರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸಚಿವರು ಸೇರಿದಂತೆ ಕುಟುಂಬದ ಸದಸ್ಯರೆಲ್ಲರೂ ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಪರೀಕ್ಷಾ ವರದಿಯಲ್ಲಿ ಸಚಿವರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು ಈ ಹಿಂದೆ ನಡೆಸಿದ ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬಂದಿದ್ದು ಈ ಬಾರಿ ಪಾಸಿಟಿವ್ ಬಂದಿದೆ ಎನ್ನಲಾಗಿದೆ. ಸಚಿವರು ವೈದ್ಯರ ಸಲಹೆಯಂತೆ ಆಸ್ಪತ್ರೆಗೆ […]

ಪ್ರತಿಪಕ್ಷಗಳ ಆರೋಪ ನಿರಾಧಾರ -ಆರೋಗ್ಯ ಸಚಿವ ಬಿ.ಶ್ರೀರಾಮುಲು

Monday, July 20th, 2020
sriramulu

ಬೆಂಗಳೂರು: ಮಾರಕ ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಚಿಕಿತ್ಸೆಗಾಗಿ ಅಗತ್ಯವಿರುವ ಆರೋಗ್ಯ ಸಂಬಂಧಿತ ಉಪಕರಣಗಳ ಖರೀದಿಯಲ್ಲಿ ರಾಜ್ಯ ಸರ್ಕಾರ ಅವ್ಯವಹಾರ ನಡೆಸಿದೆ ಎನ್ನುವ ಪ್ರತಿಪಕ್ಷಗಳ ಆರೋಪ ನಿರಾಧಾರವಾಗಿದ್ದು, ಇಂತಹ ಯಾವುದೇ ಪ್ರಕರಣಗಳು ನಡೆದಿರುವುದಿಲ್ಲ, ಅವ್ಯವಹಾರ ಸಾಭೀತದಾದಲ್ಲಿ ತಕ್ಷಣವೇ ರಾಜಿನಾಮೆ ನೀಡಲು ಸಿದ್ಧ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಸ್ಪಷ್ಟಪಡಿಸಿದ್ದಾರೆ. ಪ್ರತಿಪಕ್ಷಗಳ ಆರೋಪ ಕುರಿತು ಇಂದು ವಿಕಾಸಸೌಧದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರತಿಪಕ್ಷಗಳು ಕಳೆದ ಮಾರ್ಚ್‍ನಲ್ಲಿ ಇದ್ದ ರಾಜ್ಯದ ಪರಿಸ್ಥಿತಿಯನ್ನು […]

ದಕ್ಷಿಣ ಕನ್ನಡ ಜಿಲ್ಲೆಯ ಯುವ ಕಾಂಗ್ರೆಸ್ ಅಧ್ಯಕ್ಷ ರಿಗೆ ಕೋವಿಡ್ ಸೋಂಕು ದೃಢ

Friday, July 17th, 2020
MithunRai

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರಿಗೆ ಕೋವಿಡ್ 19 ಸೋಂಕು ತಾಗಿರುವುದು ದೃಢವಾಗಿದೆ. ಈ ವಿಚಾರವನ್ನು ಸ್ವತಃ ಮಿಥುನ್ ರೈ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನನಗೆ ಕೋವಿಡ್-19 ಸೋಂಕು ತಾಗಿರುವುದು ದೃಢ ವಾಗಿದೆ. ಸದ್ಯ ನಾನೀಗ ಬೆಂಗಳೂರಿನಲ್ಲಿ ಕ್ವಾರೆಂಟೈನ್ ಆಗಿದ್ದೇನೆ. ನನ್ನ ಜೊತೆ ಕಳೆದ ಕೆಲ ದಿನಗಳಿಂದ ಹತ್ತಿರದ ಸಂಪರ್ಕದಲ್ಲಿದ್ದವರು ಕೋವಿಡ್ -19 ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮಿಥುನ್ ರೈ ಮನವಿ ಮಾಡಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ […]

ಕೋವಿಡ್ ಸೋಂಕಿಗೆ ಬೆಳ್ತಂಗಡಿ ತಾಲೂಕಿನಲ್ಲಿ ಮೊದಲ ಬಲಿ, ಜುಲೈ 14 ರಿಂದ ಮಧ್ಯಾಹ್ನ ಸ್ವಯಂಪ್ರೇರಿತ ಬಂದ್

Sunday, July 12th, 2020
Corona death

ಬೆಳ್ತಂಗಡಿ : ಕೋವಿಡ್ ಸೋಂಕಿಗೆ ಬೆಳ್ತಂಗಡಿ ತಾಲೂಕಿನಲ್ಲಿ ಮೊದಲ ಬಲಿ ಆಗಿದ್ದು ಕುವೆಟ್ಟು ಗ್ರಾಮದ ಪಿಲಿಚಾಮುಂಡಿಕಲ್ಲು ನಿವಾಸಿ ಸುಮಾರು 60ವರ್ಷ ಪ್ರಾಯದ ವೃದ್ಧ ರವಿವಾರ ಮುಂಜಾನೆ ತಮ್ಮ ಸ್ವಗೃಹದಲ್ಲಿ ಸಾವನ್ನಪ್ಪಿದ್ದಾರೆ. ಅನಾರೋಗ್ಯದ ಕಾರಣದಿಂದ ಎರಡು ದಿನದ ಹಿಂದೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು. ಅದರ ವರದಿ ಕೈ ಸೇರಿದ್ದು ಸೋಂಕು ದೃಢ ಪಟ್ಟಿತ್ತು. ಮೃತ ದೇಹ ಮನೆಯಲಿದ್ದು ಸ್ಥಳಕ್ಕೆ ಪೊಲೀಸ್, ತಹಶೀಲ್ದಾರ್, ವೈದ್ಯರು ಭೇಟಿ ನೀಡಿ ಮುಂಜಾಗ್ರತಾ ಕ್ರಮ ಕೈಗೊಂಡಿಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಆ ಪ್ರದೇಶಕ್ಕೆ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಬುಧವಾರ ಮೂವರು ಬಲಿ

Wednesday, July 8th, 2020
covid-death

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಬುಧವಾರ  ಬೆಳಿಗ್ಗೆ ಮೂವರು ಸಾವನ್ನಪ್ಪಿದ್ದು. ಜಿಲ್ಲೆಯಲ್ಲಿ ಕೋವಿಡ್  ಸಾವಿನ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಉಳ್ಳಾಲ ಅಜಾದ್ ನಗರದ 56 ವರ್ಷದ ಮಹಿಳೆ, ಪುತ್ತೂರು ಮೂಲದ 32 ವರ್ಷದ ಮಹಿಳೆ, ಭಟ್ಕಳ ಮೂಲದ 60 ವರ್ಷದ ವ್ಯಕ್ತಿ ಕೋವಿಡ್ ವೈರಸ್ ಗೆ ಅಸುನೀಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ವಿವಿಧ ಖಾಯಿಲೆಗಳಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಅಜಾದ್ ನಗರದ 56 ವರ್ಷದ ಪ್ರಥಮ ಸೋಂಕಿತ ಮಹಿಳೆ ಜೂನ್ 19 […]

ಉಳ್ಳಾಲದಲ್ಲಿ ಒಂದೇ ದಿನ 28 ಮಂದಿಯಲ್ಲಿ ಕೋವಿಡ್ ಸೋಂಕು, ಸ್ವಯಂ ಪ್ರೇರಿತವಾಗಿ ಬಂದ್

Thursday, July 2nd, 2020
Ullala Corona

ಉಳ್ಳಾಲ :  ಉಳ್ಳಾಲ ಪರಿಸರದಲ್ಲಿ ಗುರುವಾರ ಒಂದೇ ದಿನ ಒಟ್ಟು 28 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಇದರಿಂದಾಗಿ ಉಳ್ಳಾಲದಾದ್ಯಂತ  ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗಿದೆ. ಗುರುವಾರ ಪತ್ತೆಯಾದ ಪ್ರಕರಣಗಳಲ್ಲಿ ಮುಕ್ಕಚ್ಚೇರಿಯ 29ರ ಮಹಿಳೆ, 39 ವರ್ಷದ ಗಂಡಸು, ಆಝಾದನಗರ ಉಳ್ಳಾಲದ 44 ಹಾಗೂ 55ರ ಗಂಡಸು, 36, 50, 30ರ ಮಹಿಳೆಯರು, 13 ಹಾಗೂ 8ರ ಬಾಲಕರು, 12 ವರ್ಷದ ಬಾಲಕಿ, 2 ವರ್ಷದ ಹರೆಯದ ಮಗು, ಉಳ್ಳಾಲ ಪಟೇಲ ಕಂಪೌಂಡಿನ 51ರ ಹರೆಯದ ಗಂಡಸು, ಹರೇಕಳ ಪಂಚಾಯತ್ […]