Blog Archive

ಮಂಗಳೂರು ಉತ್ತರ ಶಾಸಕರಿಗೆ ಕೋವಿಡ್ ಸೋಂಕು ದೃಢ

Thursday, July 2nd, 2020
covid19

ಮಂಗಳೂರು : ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಡಾ. ಭರತ್ ಶೆಟ್ಟಿ ಅವರಿಗೂ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕೋವಿಡ್ ಸೋಂಕು ದೃಢ ಪಟ್ಟ ವಿಚಾರವನ್ನು ಹಂಚಿಕೊಂಡಿದ್ದು, ಸಾರ್ವಜನಿಕರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ , ಮಾಸ್ಕ್ , ಹಾಗೂ ಕೈಗಳನ್ನು ತೊಳೆಯುವಂತೆ ಮನವಿ ಮಾಡಿಕೊಂಡಿದ್ದಾರೆ. ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು ಶಾಸಕರು ಸ್ವಯಂ ಪ್ರೇರಿತವಾಗಿ ತಪಾಸಣೆ ನಡೆಸಿದ ವೇಳೆ ದೃಢಪಟ್ಟಿದೆ. ಶಾಸಕರು ನಗರದಲ್ಲಿ ಹಲವಾರು […]

ಸೋಮವಾರ ದಕ್ಷಿಣ ಕನ್ನಡದಲ್ಲಿ ಕೋವಿಡ್ ಸೋಂಕಿಗೆ ಉಳ್ಳಾಲದ 60 ವರ್ಷದ ವೃದ್ಧೆ ಬಲಿ

Monday, June 29th, 2020
covid-death

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಕೋವಿಡ್ ಸೋಂಕಿಗೆ  ಉಳ್ಳಾಲದ 60 ವರ್ಷದ ವೃದ್ಧೆ ಬಲಿಯಾಗಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿಕಿತ್ಸೆ ವೃದ್ಧೆ ಸೋಮವಾರ  ಮುಂಜಾನೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. ಈ ಮೂಲಕ ಕೊರೋನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೇರಿದೆ. ಉಳ್ಳಾಲ ನಿವಾಸಿಯಾದ ಇವರು ಕೆಲವು ದಿನಗಳ ಹಿಂದೆ ಸೋಂಕಿಗೆ ತುತ್ತಾಗಿದ್ದು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ದಕ್ಷಿಣ ಕನ್ನಡ […]

ಕೋವಿಡ್ ಸೋಂಕಿತರ ಸಂಖ್ಯೆ ಜೂನ್ 15 : ದಕ್ಷಿಣ ಕನ್ನಡ ಜಿಲ್ಲೆ- 23, ಉಡುಪಿ ಜಿಲ್ಲೆ-2, ಕರ್ನಾಟಕ -213

Friday, June 19th, 2020
Corona Test

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು 149 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ 23 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ದ.ಕ. ಜಿಲ್ಲೆಯಲ್ಲಿ 6 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಪತ್ತೆಯಾದ 2 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇಂದು 23 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 291 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 12,915 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿದ್ದು, […]

ಕೋವಿಡ್ ಸೋಂಕಿತರ ಸಂಖ್ಯೆ ಜೂನ್ 15 : ದಕ್ಷಿಣ ಕನ್ನಡ ಜಿಲ್ಲೆ- 23, ಉಡುಪಿ ಜಿಲ್ಲೆ-2, ಕರ್ನಾಟಕ -213

Monday, June 15th, 2020
Corona Test

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು 149 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ 23 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ದ.ಕ. ಜಿಲ್ಲೆಯಲ್ಲಿ 6 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಪತ್ತೆಯಾದ 2 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇಂದು 23 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 291 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 12,915 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿದ್ದು, ಅದರಲ್ಲಿ 11,835 ಮಂದಿಗೆ […]

ಮಂಗಳೂರಿನಲ್ಲಿ ವೃದ್ಧರಿಬ್ಬರಿಗೆ ವಿಚಿತ್ರ ಲಕ್ಷಣಗಳಿರುವ ಕೋವಿಡ್ ಸೋಂಕು

Monday, June 15th, 2020
corona positive

ಮಂಗಳೂರು: ವಿಚಿತ್ರ ಲಕ್ಷಣದ ಕೋವಿಡ್ ದಕ್ಷಿಣ ಕನ್ನಡ ದಲ್ಲಿ ಕಾಣಿಸಿಕೊಂಡಿದೆ ಉಸಿರಾಟ ಸಮಸ್ಯೆ, ಜ್ವರ ಹೀಗೆ ಯಾವುದೇ ಸೋಂಕು ಲಕ್ಷಣ ಇಲ್ಲದೇ ಇದ್ದರೂ ರಾಜ್ಯದಲ್ಲಿ ಬಹಳಷ್ಟು ಮಂದಿಗೆ ಕೋವಿಡ್ -19 ಸೋಂಕು ಕಾಣಿಸಿಕೋಳ್ಳುತ್ತಿದೆ. ಮಂಗಳೂರಿನ ಈ ಇಬ್ಬರು ಕೋವಿಡ್ 19 ಸೋಂಕಿತರನ್ನು ಆರು ಬಾರಿ ಟೆಸ್ಟ್ ಮಾಡಿಸಿದಾಗಲೂ ಆರು ಬಾರಿಯೂ ಕೋವಿಡ್-19 ಪಾಸಿಟಿವ್ ಕಂಡು ಬಂದಿದೆ. ಕೋವಿಡ್-19 ಸೋಂಕಿತರ ಬಿಡುಗಡೆಯ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿರುವ ಈ ಸಮಯದಲ್ಲಿ ಈ ಇಬ್ಬರು ವೃದ್ದರ ಕೋವಿಡ್ ಪ್ರಕರಣ ವೈದ್ಯರಿಗೆ ಸವಾಲಿಗೆ […]

ಭೂಗತ ಪಾತಕಿ ದಾವೂದ್‌ ಹಾಗೂ ಆತನ ಪತ್ನಿಗೂ ಕೋವಿಡ್ ಸೋಂಕು

Saturday, June 6th, 2020
Dawood-Ibrahim

ಹೊಸದಿಲ್ಲಿ: ಭಾರತದ ಮೋಸ್ಟ್‌ ವಾಂಟೆಡ್‌ ಭೂಗತ ಪಾತಕಿ 1993ರ ಮುಂಬಯಿ ಸ್ಫೋಟದ ರೂವಾರಿ,  ದಾವೂದ್‌ ಇಬ್ರಾಹಿಂ ಮತ್ತು ಆತನ ಪತ್ನಿ ಜುಬಿನಾ ಜೈರಿನ್‌ರನ್ನೂ ಕೋವಿಡ್ ಸೋಂಕು ತಗುಲಿದೆ  ಎಂದು ಗುಪ್ತಚರ ಮೂಲ  ಮತ್ತು ಮಾಧ್ಯಮಗಳು ವರದಿ ಮಾಡಿವೆ. ದಾವೂದ್‌ ತನ್ನಲ್ಲಿಲ್ಲ ಎಂದು ಹೇಳುತ್ತಲೇ ಬಂದಿದ್ದ ಪಾಕಿಸ್ಥಾನವು ಈಗ ಕೋವಿಡ್ ಪೀಡಿತ ಪಾತಕಿ ಮತ್ತು ಆತನ ಪತ್ನಿಗೆ ಕದ್ದುಮುಚ್ಚಿ ಚಿಕಿತ್ಸೆ ನೀಡುತ್ತಿದೆ. ಕರಾಚಿಯ ಮಿಲಿಟರಿ ಆಸ್ಪತ್ರೆಯಲ್ಲಿ ಆತ ಇದ್ದಾನೆ ಎಂಬ ಮಾಹಿತಿ ಹೊರಬಿದ್ದಿದೆ. ಐಷಾರಾಮಿ ಭದ್ರ ಕೋಟೆಯೊಳಗಿರುವ ದಾವೂದ್‌ ದಂಪತಿಗೆ ಸೋಂಕು […]

ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ 9 ಮಂದಿಯಲ್ಲಿ ಕೋವಿಡ್ ಸೋಂಕು, 3876 ಮಂದಿಗೆ ಕೊರಂಟೈನ್

Tuesday, June 2nd, 2020
kerala Corona

ಕಾಸರಗೋಡು : ಮಂಗಳವಾರ ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ 9 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ, ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ. ಈ ಮದ್ಯೆ  ಏಳು ಮಂದಿ ಗುಣಮುಖರಾಗಿ,  3876 ಮಂದಿಯನ್ನು ಕೊರಂಟೈನ್ ಗೆ ಒಳಪಡಿಸಲಾಗಿದೆ, 655 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ ಎಂದು ತಿಳಿಸಿದ್ದಾರೆ. ಮಹಾರಾಷ್ಟ್ರದಿಂದ ಬಂದ ಪುತ್ತಿಗೆ ಗ್ರಾಮಪಂಚಾಯತ್ ನ 62 ಹರೆಯದ, ಪಡನ್ನದ 60 ವರ್ಷದ, ಕುಂಬ್ಡಾಜೆಯ 41 ವರ್ಷದ ನಿವಾಸಿ, ಕುಂಬಳೆಯ 32 ವರ್ಷದ ವ್ಯಕ್ತಿಗಳಲ್ಲಿ ಸೋಂಕು ಪತ್ತೆಯಾಗಿದೆ. ಕುವೈತ್ ನಿಂದ ಆಗಮಿಸಿದ್ದ ಕುಂಬಳೆಯ 43 […]

ಉಡುಪಿ ಜಿಲ್ಲೆಯಲ್ಲಿ ಸೋಮವಾರ 73 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆ

Monday, June 1st, 2020
udupi-corona

ಉಡುಪಿ : ಸೋಮವಾರ  ಉಡುಪಿ ಜಿಲ್ಲೆಯಲ್ಲಿ 73 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಪೈಕಿ ಹೆಚ್ಚಿನವರು ಮಹಾರಾಷ್ಟ್ರದಿಂದ ಮರಳಿದವರಾಗಿದ್ದಾರೆ. ಸುಮಾರು 37 ಸೋಂಕಿತರ ಮೂಲ ಪತ್ತೆಯಾಗಿಲ್ಲ, ಕೆಲವು ಪ್ರಕರಣಗಳ ಮೂಲ ಪತ್ತೆ ಹಚ್ಚುವ ಕಾರ್ಯ ಮುಂದುವರೆದಿದೆ. ಆರೋಗ್ಯ ಇಲಾಖೆ ಅವರ ಸೋಂಕಿನ ಮೂಲ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದೆ. ಇನ್ನು 33 ಮಂದಿ ಮಹಾರಾಷ್ಟ್ರದಿಂದ ಆಗಮಿಸಿದವರಲ್ಲಿ ಪಾಸಿಟಿವ್ ಕಂಡುಬಂದಿದೆ. ಮೂವರು ದುಬೈನಿಂದ ಬಂದವರಾಗಿದ್ದಾರೆ

ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ ಮೂವರಿಗೆ ಕೋವಿಡ್ ಸೋಂಕು ದೃಢ

Saturday, May 30th, 2020
kasaragod-covid

ಕಾಸರಗೋಡು : ಜಿಲ್ಲೆಯಲ್ಲಿ ಶನಿವಾರ ಲಭ್ಯವಾದ ವರದಿಯಲ್ಲಿ ಮೂವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಆ ಮೂಲಕ ಸದ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 73 ಕ್ಕೆ ಏರಿಕೆಯಾಗಿದೆ. ಮೇ 19ರಂದು ಕುವೈತ್ ನಿಂದ ಆಗಮಿಸಿದ್ದ ಪಿಲಿಕೋಡ್ ನಿವಾಸಿಯಾಗಿರುವ 33 ವರ್ಷದ ವ್ಯಕ್ತಿಗೆ, ಮೇ 17ರಂದು ದುಬಾಯಿಯಿಂದ ಆಗಮಿಸಿದ್ದ ಮಧೂರು ನಿವಾಸಿಯಾಗಿರುವ 68 ವರ್ಷದ ವ್ಯಕ್ತಿ ಹಾಗೂ ಮೇ 21ರಂದು ಮಹಾರಾಷ್ಟ್ರ ದಿಂದ ಬಂದಿದ್ದ 29 ವರ್ಷದ ಚೆಮ್ನಾಡ್ ನಿವಾಸಿಗೆ ರೋಗ ತಗಲಿದೆ. ಜಿಲ್ಲೆಯಲ್ಲಿ ಒಟ್ಟು 3595 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ […]

ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 4 ಮಂದಿಗೆ ಕೋವಿಡ್ ಸೋಂಕು ದೃಢ

Friday, May 29th, 2020
kasaragod covid

ಕಾಸರಗೋಡು : ಜಿಲ್ಲೆಯಲ್ಲಿ ಶುಕ್ರವಾರ ಸಂಜೆಯ ವೇಳೆಗೆ 4 ಮಂದಿಗೆ ಕೋವಿಡ್ ಸೋಂಕು ದೃಢ ಗೊಂಡಿದೆ. 485 ಮಂದಿ ನೂತನವಾಗಿ ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ. ಮಹಾರಾಷ್ಟ್ರ ದಿಂದ ಆಗಮಿಸಿದ್ದ ಪೈವಳಿಕೆ ನಿವಾಸಿ 42 ವರ್ಷದ ವ್ಯಕ್ತಿ, ಬದಿಯಡ್ಕ ನಿವಾಸಿ 63 ವರ್ಷದ ವ್ಯಕ್ತಿ, ಮಂಗಲ್ಪಾಡಿ ನಿವಾಸಿ 31 ವರ್ಷದ ವ್ಯಕ್ತಿ, ದುಬೈಯಿಂದ ಆಗಮಿಸಿದ 58 ವರ್ಷದ ಉದುಮಾ ನಿವಾಸಿ ಸೋಂಕು ಬಾಧಿತರು. ಪೈವಳಿಕೆ ನಿವಾಸಿ 28 ವರ್ಷದ ವ್ಯಕ್ತಿ ಶುಕ್ರವಾರ ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ. ಇವರು […]