Blog Archive

ಮಂಗಳೂರು ಪಾಲಿಕೆಯ ಮೀಸಲಾತಿ ಅಧಿಸೂಚನೆ ರದ್ದುಗೊಳಿಸಿದ ಹೈಕೋರ್ಟ್‌

Tuesday, January 15th, 2019
mcc election

ಮಂಗಳೂರು  : ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್‌ವಾರು ಮೀಸಲಾತಿ ನಿಗದಿಗೊಳಿಸಿ ರಾಜ್ಯ ಸರಕಾರ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಗೊಳಿಸಿ ಹೈಕೋರ್ಟ್‌ ಆದೇಶ ಹೊರಡಿಸಿರುವುದರ ಪರಿಣಾಮ, ಇದೀಗ ಪಾಲಿಕೆಯ ಚುನಾವಣೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ. ರಾಜ್ಯ ಸರಕಾರ ಈ ಹಿಂದೆ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್‌ ಜನವರಿ 28ರೊಳಗೆ ಮೀಸಲಾತಿ ಮರು ನಿಗದಿಗೊಳಿಸುವಂತೆ ಸರಕಾರಕ್ಕೆ ಸೋಮವಾರ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಸರಕಾರವು ಮುಂದಿನ ಎರಡು ವಾರಗಳೊಳಗೆ ಈ ವಾರ್ಡ್‌ವಾರು ಮೀಸಲಾತಿ ವಿಚಾರದಲ್ಲಿ ಒಂದು ಮಹತ್ವದ ತೀರ್ಮಾನಕ್ಕೆ ಬರಬೇಕಾಗಿದೆ. […]

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್​​ ಸದಸ್ಯರಿಗೆ ಸಿದ್ದರಾಮಯ್ಯ ಅಭಿನಂದನೆ..!

Tuesday, September 4th, 2018
siddaramaih

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಿ ಪಕ್ಷದ ಜಯಭೇರಿಗೆ ಕಾರಣರಾದ ಮತದಾರರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದು, ಪಕ್ಷದ ಅಭ್ಯರ್ಥಿಗಳ ಪರವಾಗಿ ಶ್ರಮಿಸಿದ ಮುಖಂಡರು, ಕಾರ್ಯಕರ್ತರಿಗೆ ಸಿದ್ದರಾಮಯ್ಯ ಧನ್ಯವಾದ ಹೇಳಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗಳಿಸಿದೆ. ಇದಕ್ಕೆ ಜನತೆ ಪಕ್ಷದ ಮೇಲಿಟ್ಟಿರುವ ವಿಶ್ವಾಸವೇ ಕಾರಣ. ಜನತೆಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವಲ್ಲಿ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ ಮಹತ್ತರವಾಗಿದೆ. ಆ […]

ಉಳ್ಳಾಲ, ಪುತ್ತೂರು, ಬಂಟ್ವಾಳ ನಗರಸಭೆ ಚುನಾವಣೆ

Friday, August 31st, 2018
election

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ನಗರಸಭೆ, ಪುತ್ತೂರು ನಗರಸಭೆ ಹಾಗೂ ಬಂಟ್ವಾಳ ಪುರಸಭೆಗೆ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ಮುಂಜಾನೆಯಿಂದಲೇ ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನದಲ್ಲಿ ಭಾಗಿಯಾಗಿದ್ದಾರೆ. ಉಳ್ಳಾಲ ನಗರಸಭೆಯ 31 ವಾರ್ಡುಗಳಿಗೆ 102 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇಲ್ಲಿ 44132 ಮತದಾರರಿದ್ದು, 43 ಮತಗಟ್ಟೆಗಳಲ್ಲಿ 43 ಇವಿಎಂ ವ್ಯವಸ್ಥೆ ಮಾಡಲಾಗಿದೆ. 172 ಮತಗಟ್ಟೆ ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಂಟ್ವಾಳ ಪುರಸಭೆಯ 27 ವಾರ್ಡ್ಗಳಿಗೆ 71 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇಲ್ಲಿ 34102 ಮತದಾರರಿದ್ದು, 32 ಮತಗಟ್ಟೆಗಳಲ್ಲಿ […]

ಬಂಟ್ವಾಳ ಪುರಸಭೆ ಹಾಗೂ ಪುತ್ತೂರು, ಉಳ್ಳಾಲ ನಗರಸಭೆಗೆ ಆ. 29ರಂದು ಚುನಾವಣೆ

Saturday, August 4th, 2018
ullal town panchayath

ಮಹಾನಗರ : ಜಿಲ್ಲೆಯ ಬಂಟ್ವಾಳ ಪುರಸಭೆ ಹಾಗೂ ಪುತ್ತೂರು, ಉಳ್ಳಾಲ ನಗರಸಭೆಗೆ ಆ. 29ರಂದು ಚುನಾವಣೆ ನಡೆಯಲಿದ್ದು, ಈಗಾಗಲೇ ಪಾಲಿಕೆಯ ವಾರ್ಡ್‌ ವಾರು ಮೀಸಲಾತಿ ಪ್ರಕಟವಾಗಿದ್ದು,ಇದಕ್ಕೆ ಆಕ್ಷೇಪಗಳು ದಾಖಲಾಗಿದ್ದು, ಒಂದೆರಡು ದಿನದಲ್ಲಿ ಅಂತಿಮ ಮೀಸಲಾತಿ ಪಟ್ಟಿ ಪ್ರಕಟಗೊಳ್ಳುವ ನಿರೀಕ್ಷೆಯಿದೆ. ಈಗಾಗಲೇ ಬಿಡುಗಡೆಯಾದ ಕರಡು ಮೀಸಲಾತಿಗೆ ಸುಮಾರು 100ಕ್ಕೂ ಅಧಿಕ ಆಕ್ಷೇಪಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಲಾಗಿದೆ. ಇದನ್ನು ಪರಾಮರ್ಶಿಸಿ ನಗರಾಭಿವೃದ್ಧಿ ಇಲಾಖೆಯು ಅಂತಿಮ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಿದ್ದು, ಇದರಂತೆ ಈಗಾಗಲೇ ಮೀಸಲಾದ 5ರಿಂದ 6 ಸ್ಥಾನಗಳಲ್ಲಿ ಬದಲಾವಣೆಯಾಗುವ ಸಂಭವವಿದೆ. ಅಂತಿಮ ಮೀಸಲಾತಿ […]

ರಾಜರಾಜೇಶ್ವರಿ ನಗರ ಚುನಾವಣೆ, ಕಾಂಗ್ರೆಸ್ ನ ಮುನಿರತ್ನ 40 ಸಾವಿರ ಮತಗಳ ಅಂತರದಿಂದ ಗೆಲುವು

Thursday, May 31st, 2018
muniratna

ಬೆಂಗಳೂರು: ರಾಜರಾಜೇಶ್ವರಿ ನಗರದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಮುನಿರತ್ನ 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದಾರೆ. ಬಿಜೆಪಿಯ ತುಳಸಿ ಮುನಿರಾಜು ಎರಡನೇ ಸ್ಥಾನ ಪಡೆದರೆ, ಜೆಡಿಎಸ್‍ನ ರಾಮಚಂದ್ರ ಮೂರನೇ ಸ್ಥಾನ ಪಡೆದಿದ್ದಾರೆ. ಮುನಿರತ್ನ – 97,440 ತುಳಸಿ ಮುನಿರಾಜು – 56,278 ರಾಮಚಂದ್ರ -45,345 ಅಂತರ – 41,162

ಶ್ರೀರಾಮುಲು ವಿರುದ್ಧ ಪ್ರಚಾರ ಮಾಡ್ತಿಲ್ಲ… ಸುದೀಪ್ ಸ್ಟಷ್ಟನೆ

Saturday, May 5th, 2018
sriramulu

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಚಿತ್ರನಟ-ನಟಿಯರು ಪ್ರಚಾರ ಕಾರ್ಯದಲ್ಲಿ ಭಾಗವಹಿಸೋದ್ರಲ್ಲಿ ಸಖತ್ ಬ್ಯುಸಿಯಾಗಿರ್ತಾರೆ. ಸುದೀಪ್, ಯಶ್ ಸೇರಿದಂತೆ ಅನೇಕರು ಈಗಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಬದಾಮಿಯ ಪ್ರಚಾರದ ಬಗ್ಗೆ ಒಂದಷ್ಟು ಗೊಂದಲಗಳು ಹರಿದಾಡುತ್ತಿದ್ದವು. ಬದಾಮಿಯಲ್ಲಿ ಸುದೀಪ್ ಸಿಎಂ ಸಿದ್ಧರಾಮಯ್ಯ ಪರ ಪ್ರಚಾರಕ್ಕೆ ಬರ್ತಾರೆ ಎನ್ನುವ ಮಾತು ಕೇಳಿ ಬರುತ್ತಿತ್ತು. ಇದಕ್ಕೆ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ಶ್ರೀರಾಮುಲು ಬೆಂಬಲಿಗರು ಮತ್ತು ವಾಲ್ಮೀಕಿ ಜನಾಂಗದವರು ಸಿಎಂ ಪರ ಸುದೀಪ್ ಪ್ರಚಾರವನ್ನು ವಿರೋಧಿಸಿದ್ದರು. ಇದಕ್ಕೆ ಸುದೀಪ್ ಪ್ರತಿಕ್ರಿಯೆ ನೀಡಿದ್ದು ತಾನು ಶ್ರೀರಾಮುಲು […]

ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ಕಾನೂನು ಬಿಜೆಪಿ ಅವರನ್ನೇ ಕಾಡುತ್ತಿದೆ – ಐವನ್ ಡಿಸೋಜಾ

Tuesday, April 24th, 2018
ivan-desouza

ಮಂಗಳೂರು: ‘ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು, ಮೋದಿ ಸರ್ಕಾರದ ಕಠಿಣ ಕ್ರಮ. ಸಿದ್ದು ಸರ್ಕಾರಕ್ಕೆ ಈಗಲೂ ನಿದ್ದೆ’ ಎಂದು ಬಿಜೆಪಿಯವರು ಇಂದಿನ ಪತ್ರಿಕೆಗಳಲ್ಲಿ ಜಾಹಿರಾತು ನೀಡಿದ್ದಾರೆ. ಆದರೆ ಈ ಕಾನೂನು ಬಿಜೆಪಿಗೇ ಮುಖ್ಯವಾಗಿ ಅನ್ವಯಿಸುತ್ತದೆ. ದೇಶದಲ್ಲಿ ಅತಿ ಹೆಚ್ಚು ಅತ್ಯಾಚಾರ ಪ್ರಕರಣಗಳಲ್ಲಿ ಬಿಜೆಪಿಯವರೇ ಭಾಗಿಯಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ವ್ಯಂಗ್ಯವಾಡಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ನಡೆದ ಅತ್ಯಾಚಾರಕ್ಕೆ ಗಲ್ಲು ಶಿಕ್ಷೆ ನೀಡಲು ಕೇಂದ್ರ […]

ಹಿಂದೂ ಜನಜಾಗೃತಿ ಸಮಿತಿ ಮತ್ತು ಸನಾತನ ಸಂಸ್ಥೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ !

Monday, April 23rd, 2018
HJS

ಮಂಗಳೂರು  : ಹಿಂದೂ ಜನಜಾಗೃತಿ ಸಮಿತಿ ಇದು ಸಮಾಜ ಸಹಾಯ, ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಗಾಗಿ ಕಾರ್ಯ ಮಾಡುವ ರಾಜಕೀಯೇತರ ಸ್ವಯಂಸೇವಾ ಸಂಘಟನೆಯಾಗಿದೆ. ಸಮಿತಿಯು ಕಳೆದ ೧೬ ವರ್ಷಗಳಿಂದ ಧರ್ಮಶಿಕ್ಷಣ, ಧರ್ಮಜಾಗೃತಿ ಮತ್ತು ಧರ್ಮರಕ್ಷಣೆಯ ಉಪಕ್ರಮಗಳ ಮಾಧ್ಯಮದಿಂದ ರಾಷ್ಟ್ರವ್ಯಾಪಿ ಹಿಂದೂ ಸಂಘಟನೆಯ ಕಾರ್ಯ ಮಾಡುತ್ತಿದೆ. ಹಿಂದೂಗಳ ಸಾಮಾಜಿಕ, ರಾಷ್ಟ್ರೀಯ ಮತ್ತು ಧಾರ್ಮಿಕ ಸಮಸ್ಯೆಗಳ ಪರಿಹಾರಕ್ಕಾಗಿ ‘ಹಿಂದೂ ರಾಷ್ಟ್ರ ಸ್ಥಾಪನೆ ಮಾಡುವುದು’, ಇದೊಂದೇ ಧ್ಯೇಯವನ್ನಿಟ್ಟುಕೊಂಡು ಸಮಿತಿಯು ಸಮಸ್ತ ಹಿಂದೂಗಳನ್ನು ಜಾಗೃತ ಮತ್ತು ಸಂಘಟಿತಗೊಳಿಸುವ ಕಾರ್ಯ ಮಾಡುತ್ತಿದೆ. ಕೆಲವು ದಿನಪತ್ರಿಕೆಗಳಲ್ಲಿ ಸನಾತನ […]

ಕರ್ನಾಟಕ ಅಭಿವೃದ್ಧಿ ಕಡೆ ನಡೆಯಲು ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಿ: ನಟಿ ರಚಿತಾ ರಾಮ್

Saturday, April 21st, 2018
rachitha-ram

ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ಕಾಣಿಸಿಕೊಂಡು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ಪರ ಪ್ರಚಾರ ನಡೆಸಿದ್ದಾರೆ. ರಾಜ್ಯದಲ್ಲಿ ರೈತರ ಪರ ಹೋರಾಟ ನಡೆಸುವ ನಾಯಕರ ಅಗತ್ಯವಿದ್ದು, ಕುಮಾರ ಸ್ವಾಮಿಯವರು ಒಳ್ಳೆಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಕರ್ನಾಟಕ ಭವಿಷ್ಯಕ್ಕಾಗಿ ಕುಮಾರ ಸ್ವಾಮಿ ಅವರು ಮುಖ್ಯಮಂತ್ರಿ ಆಗುವುದು ಬಹಳ ಮುಖ್ಯವಾಗಿದ್ದು, ಜೆಡಿಎಸ್ ಪಕ್ಷಕ್ಕೆ ಮತ ನೀಡಿ ಎಂದು ವಿಡಿಯೋದಲ್ಲಿ ಕೇಳಿಕೊಂಡಿದ್ದಾರೆ. ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದಂತೆ ಹಲವು ಸ್ಯಾಡಲ್‍ವುಡ್ ನಟ ನಟಿಯರು ತಮ್ಮ ನೆಚ್ಚಿನ ರಾಜಕೀಯ ನಾಯಕರ ಪರ […]

ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಶಾಸಕ ಸ್ಥಾನಕ್ಕೆ ನನ್ನ ಸ್ಪರ್ಧೆ: ಹುಚ್ಚ ವೆಂಕಟ್‌‌‌

Wednesday, April 11th, 2018
huccha-venkat

ಮಂಗಳೂರು: ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಶಾಸಕ ಸ್ಥಾನಕ್ಕೆ ನಾನು ಸ್ಪರ್ಧಿಸಲಿದ್ದು, ಮುಂದೊಂದು ದಿನ ಪ್ರಧಾನಮಂತ್ರಿ ಕೂಡ ಆಗುತ್ತೇನೆ ಎಂದು ನಟ ಹುಚ್ಚ ವೆಂಕಟ್ ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹುಚ್ಚ ವೆಂಕಟ್, ನಾನು ಚುನಾವಣೆಗೆ ನಿಂತರೆ ಡ್ರಿಂಕ್ಸ್, ಸೀರೆ, ಹಣ ಕೊಡಲ್ಲ. ಚುನಾವಣೆಯಲ್ಲಿ ಮತ ನೀಡಿ ಎಂದು ಮನೆ ಮನೆಗೆ ತೆರಳಿ ಪ್ರಚಾರ ಮಾಡಲ್ಲ. ನಾನು ಯಾರ ಮುಂದೆಯು ಕೈಯನ್ನು ಮುಗಿಯಲ್ಲ. ನಾನ್ಯಾಕೆ ಬೇರೆ ರಾಜಕೀಯ ವ್ಯಕ್ತಿಗಳ ತರಹ ಕೈ ಮುಗಿಯಲಿ ಎಂದಿದ್ದಾರೆ. ದುಡ್ಡು ಕೊಟ್ಟು […]