ಕುದ್ರೋಳಿ ಕಸಾಯಿಖಾನೆಯಲ್ಲಿ ಅಕ್ರಮವಾಗಿ ಜಾನುವಾರುಗಳ ವಧೆ, ದಾಳಿ ನಡೆಸಿ ಜಾನುವಾರು ವಶ

Wednesday, July 21st, 2021
Kudroli Shelter

ಮಂಗಳೂರು: ಬಜರಂಗದಳದ ಕಾರ್ಯಕರ್ತರು ನೀಡಿದ ಖಚಿತ ಮಾಹಿತಿಯ ಮೇರೆಗೆ ಇಂದು ಬೆಳಗ್ಗೆ ಮಂಗಳೂರು ಮಹಾನಗರ ಪಾಲಿಕೆ, ಎನಿಮಲ್ ವೆಲ್ಫೇರ್ ಬೋರ್ಡ್ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಮಹಾನಗರ ಪಾಲಿಕೆಯ ಅಧೀನದಲ್ಲಿರುವ ಕುದ್ರೋಳಿ ಕಸಾಯಿಖಾನೆಗೆ ದಾಳಿ ನಡೆಸಿ ಜಾನುವಾರುಗಳನ್ನು ವಶಪಡಿಸಿದ್ದಾರೆ. ಕುದ್ರೋಳಿ ಕಸಾಯಿಖಾನೆಯಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ವಧೆ ಮಾಡಿದ ಹಿನ್ನಲೆಯಲ್ಲಿ ಗುತ್ತಿಗೆದಾರರ ಗುತ್ತಿಗೆಯನ್ನು ರದ್ದುಪಡಿಸಿ ಕಸಾಯಿಖಾನೆಯು ಮುಚ್ಚಿದ್ದರೂ ಕೂಡ ಬೇರೊಂದು ಕಟ್ಟಡದಲ್ಲಿ ಅಕ್ರಮವಾಗಿ ದನ ಕರುಗಳನ್ನು ವಧೆ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು […]

ಕೋಟೆಕಾರಿನಿಂದ ಬಾಕ್ರಬೈಲುಗೆ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಲಾರಿ ವಶ

Wednesday, January 13th, 2021
cows

ಕೊಣಾಜೆ : ಕೋಟೆಕಾರಿನಿಂದ ಬಾಕ್ರಬೈಲುಗೆ ಜಾನುವಾರನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಮಂಗಳವಾರ ಸಂಜೆ  ಮುಡಿಪು ಸಮೀಪ‌ ನಡೆದಿದೆ. ಕೋಟೆಕಾರಿನಿಂದ ಬಾಕ್ರಬೈಲುಗೆ ಜಾನುವಾರನ್ನು ಲಾರಿಯಲ್ಲಿ ಕೊಂಡೊಯ್ಯುತ್ತಿದ್ದ ವೇಳೆ ಕೊಣಾಜೆ ಪೊಲೀಸರು ಆಗಮಿಸಿ ಲಾರಿ ವಶಪಡಿಸಿಕೊಂಡಿದ್ದಾರೆ‌. ಈ ಬಗ್ಗೆ ಕೊಣಾಜೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಬಂಟ್ವಾಳ : ಟಿಪ್ಪು ನಗರದಲ್ಲಿ ಎರಡು ದನದ ತಲೆ, ಎರಡು ಕಿಂಟ್ವಾಲ್ ಮಾಂಸ, ಜಾನುವಾರು ಕಡಿಯುವ ಸಲಕರಣೆ ವಶ

Tuesday, May 19th, 2020
Cow-shulter

ಬಂಟ್ವಾಳ :  ಅಕ್ರಮ ಕಸಾಯಿಖಾನೆಗೆ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ಮಂಗಳವಾರ ನಡೆದಿದೆ. ಲೊರೆಟ್ಟೋ ನಿವಾಸಿಗಳಾದ ಉಮ್ಮರ್ ಫಾರೂಕ್, ಆದಂ ಮತ್ತು ಆಸ್ಬಕ್ ಬಂಧಿತ ಆರೋಪಿಗಳು. ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಲೊರೆಟ್ಟೋ ಟಿಪ್ಪು ನಗರದಲ್ಲಿ ಶಂಶುದ್ದೀನ್ ಎಂಬಾತನ ಮನೆಯ ಬಳಿಯ ಅಕ್ರಮ ಕಟ್ಟಡದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಹತ್ಯೆ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮುಂಜಾನೆ ಬಂಟ್ವಾಳ ನಗರ ಠಾಣಾ ಎಸ್.ಐ.ಅವಿನಾಶ್ ನೇತೃತ್ವದಲ್ಲಿ ಬಂಟ್ವಾಳ ಪೊಲೀಸರ ತಂಡ […]

ಕೊರೋನಾ ಹಾವಳಿ – ಜನನಿಬಿಡ ಪ್ರದೇಶಗಳಲ್ಲಿ ಇದೀಗ ಜಾನುವಾರು, ನವಿಲುಗಳು

Thursday, April 2nd, 2020
mumbai

(ವರದಿ : ಈಶ್ವರ ಎಂ. ಐಲ್ ) ಮುಂಬಯಿ : ಕೊರೋನಾದಿಂದಾಗಿ ಲಾಕ್ ಡೌನ್ ಘೋಷಣೆಯಾಗಿದ್ದರೂ ಮುಂಬಯಿ ಪರಿಸರದಲ್ಲಿ ಹೊರಗೆ ಹೋಗುತ್ತಿರುವ ಡಾಕ್ಟರ್ ಗಳು, ನರ್ಶ್ ಗಳು, ಪೋಲೀಸರು ಮಾತ್ರವಲ್ಲದ ಅಗತ್ಯ ಸಾಮಾನುಗಳನ್ನು ಪೂರೈಸುವ ಜನರು ಹಾಗೂ ಕೆಲವು ಸರಕಾರಿ ನೌಕರರುಗಳು ಮಾತ್ರ ಕಾಣಬಹುದು. ಆದರೆ ಮನೆಯಲ್ಲಿನ ದೈನಂದಿನ ಉಪಯೋಗಿಸುವ ಸಾಮಾಗ್ರಿಗಳು ಈಗಾಗಲೇ ಮುಗಿದಿದ್ದು ಕೆಲವರು ಮಾರು ಕಟ್ಟೆಗೆ ಹೋಗಲೇ ಬೆಕಾಗಿದ್ದು ಮುಂಬಯಿಯ ಕೆಲವು ತರಕಾರಿ ಮಾರುಕಟ್ಟೆಗಳು ಕೆಲವೊಮ್ಮೆ ತೆರೆದಿಟ್ಟಲ್ಲಿ ಜನರು ಅಂತರವನ್ನು ಲೆಕ್ಕಿಸದೆ ಒಂದೆಡೆ ಸೇರಿ […]

ಕೊಣಾಜೆ : ಕದ್ದ ಜಾನುವಾರುಗಳ ಸಾಗಾಟ : ಮೂವರು ಆರೋಪಿಗಳ ಬಂಧನ

Tuesday, December 17th, 2019
Konaje

ಕೊಣಾಜೆ : ದನಗಳ್ಳರು 1 ಲಕ್ಷದ 4 ಸಾವಿರ ಮೌಲ್ಯದ ಜಾನುವಾರುಗಳನ್ನು ಕದ್ದು ಮಾರುತಿ ಓಮ್ನಿ ಕಾರಿನಲ್ಲಿ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಕೊಣಾಜೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಹಾಗೆಯೇ ಕದ್ದ ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಮೂಡುಬಿದ್ರೆಯ ಗಂಟಲಕಟ್ಟೆ ನಿವಾಸಿ ಶಾಫಿ ಯಾನೆ ಕಲಂದರ್‌ ಶಾಫಿ (28), ದಬ್ಬೇಲಿ ಲಚ್ಚಿಲ್‌ ಮನೆ ನಿವಾಸಿ ಸಾಧಿಕ್‌ ಯಾನೆ ಮೊಹಮ್ಮದ್ ಸಾಧಿಕ್ (30), ಬಂಟ್ವಾಳ ನರಿಂಗಾನ ಗ್ರಾಮ ನಿವಾಸಿ ಆಸಿಫ್‌ ಯಾನೆ ಮೊಹಮ್ಮದ್‌ ಕಲಂದರ್‌ (24) ಅನ್ನು ಪೊಲೀಸರು ಬಂಧಿಸಿದ್ದಾರೆ. […]

ಬೈಂದೂರು : ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ನಾಲ್ವರ ಬಂಧನ

Friday, November 15th, 2019
Bybdoor

ಬೈಂದೂರು : ಬೈಂದೂರು ಸಮೀಪದ ನಾಗೂರು ಬಳಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಜಾನುವಾರು ತುಂಬಿದ್ದ ಕಂಟೈನರ್ ಒಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗುಜರಾತಿನಿಂದ ಮಂಗಳೂರಿಗೆ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ಪೊಲೀಸರು ರಕ್ಷಿಸಿದ್ದು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಗುಜರಾತ್ ನಿಂದ ಮಂಗಳೂರಿಗೆ ಬರುತ್ತಿದ್ದ ಕಂಟೈನರ್ ನಲ್ಲಿ ಒಟ್ಟು 32 ಕೋಣಗಳಿದ್ದು, ಅದರಲ್ಲಿ ಒಂದು ಮೃತಪಟ್ಟಿದೆ. ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು ಮಲ್ಲಿಕ್, ಸಮೀರ್, ಸಾಧಿಕ್, ಮಲ್ಲಿಕ್ ಸಾಹಿದ್ ಬಂಧಿತ ಆರೋಪಿಗಳು. ಗುಜರಾತಿನಿಂದ ಮಂಗಳೂರಿಗೆ ಕಂಟೆನರ್ […]

ನೆಲ್ಯಾಡಿ : ಅಕ್ರಮ 22 ಜಾನುವಾರು ಸಾಗಾಟ; ಓರ್ವ ಆರೋಪಿ ಬಂಧನ

Saturday, October 19th, 2019
Akrama-jaanuvaru

ನೆಲ್ಯಾಡಿ : ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನವನ್ನು ಬೆನ್ನಟ್ಟಿದ ನೆಲ್ಯಾಡಿ ಪೊಲೀಸರು ನೆಲ್ಯಾಡಿಯ ಕೋಲ್ಪೆ ಎಂಬಲ್ಲಿ ಲಾರಿಯನ್ನು ತಡೆದು 22 ಜಾನುವಾರುಗಳನ್ನು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ ಘಟನೆ ಶನಿವಾರ ಮುಂಜಾನೆ ನಡೆದಿದೆ. ತುಮಕೂರು ನಿವಾಸಿ ನವಾಝ್ ಬಂಧಿತ ಆರೋಪಿ. ನೆಲ್ಯಾಡಿಯ ಹೊಸಮಜಲು ಎಂಬಲ್ಲಿ ಪೊಲೀಸ್ ವಾಹನವನ್ನು ಕಂಡು ಪರಾರಿಯಾಗಲು ಯತ್ನಿಸಿದ ಲಾರಿಯನ್ನು ಬೆನ್ನಟಿದ ಪೊಲೀಸರು ಕೋಲ್ಪೆಯಲ್ಲಿ ವಾಹನವನ್ನು ಅಡ್ಡಗಟ್ಟಿ ತಪಾಸಣೆ ನಡೆಸಿದಾಗ 22 ಜಾನುವಾರುಗಳನ್ನು ಅಮಾನುಷವಾಗಿ ಸಾಗಿಸುತ್ತಿದ್ದುದು ಪತ್ತೆಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ […]

ವಿಟ್ಲ : ಅಕ್ರಮ ಜಾನುವಾರು ಸಾಗಾಟ; ಪರಾರಿಯಾಗಿದ್ದ ಇಬ್ಬರು ಆರೋಪಿಗಳು ಬಂಧನ

Thursday, October 17th, 2019
vitla

ಮಂಗಳೂರು : ಅಕ್ರಮ ದನ ಸಾಗಾಟ ಮಾಡುತ್ತಿದ್ದ ವಾಹನ ತಡೆದು ಪರಿಶೀಲಿಸುತ್ತಿದ್ದ ವೇಳೆ ವಾಹನದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರು ಗ್ರಾಮದ ಮುಹಮ್ಮದ್ ಇಕ್ಬಾಲ್ (36), ಬೋಳಂತೂರು ಗ್ರಾಮದ ಉನೈಜ್ (25) ಬಂಧಿತರು. ಅಕ್ಬೋಬರ್‌ 14 ರಂದು ವಿಟ್ಲ ಪಡ್ನೂರು ಗ್ರಾಮದ ಚನಿಲ ಎಂಬಲ್ಲಿ ಕೋಡಪದವು ಕಡೆಯಿಂದ ಬರುತ್ತಿದ್ದ ಲಾರಿಯನ್ನು ಪೊಲೀಸರು ತಡೆದು ನಿಲ್ಲಿಸಿದ್ದರು. ಪೊಲೀಸರು ವಾಹನ ನಿಲ್ಲಿಸಲು ಸೂಚಿಸಿದ ತಕ್ಷಣ ಇಬ್ಬರೂ ಪರಾರಿಯಾಗಿದ್ದರು. ಅನಂತರ ವಾಹನದಲ್ಲಿ […]

ಬರೋಬ್ಬರಿ 18 ವರ್ಷಗಳ ನಂತರ ತುಂಬಿದ ಕೆರೆ

Wednesday, June 27th, 2018
river

ಮೈಸೂರು: ಒಣಗಿ ಬರಡಾಗಿದ್ದ ಕೆರೆಯನ್ನು ಸಾರ್ವಜನಿಕರ ಉಪಯೋಗಕ್ಕೆ ಬಳಸಿಕೊಳ್ಳಬೇಕೆಂದು ಗ್ರಾಮಸ್ಥರು ತೀರ್ಮಾನ ಕೈಗೊಂಡಿದ್ದರು. ಆದರೆ ಅವರ ತೀರ್ಮಾನವನ್ನೇ ತಲೆಕೆಳಗಾಗುವಂತೆ ಬತ್ತಿದ್ದ ಕೆರೆಯ ಒಡಲು ತುಂಬುವಷ್ಟು ನೀರು ಬಂದಿದೆ. ಹೌದು, ನಂಜನಗೂಡು ತಾಲೂಕಿನ ಹುರ ಗ್ರಾಮದ ಮುಂಭಾಗದಲ್ಲಿರುವ ಕೆರೆ ಕಳೆದ 18 ವರ್ಷಗಳಿಂದ ತುಂಬಿರಲಿಲ್ಲ. ಆದರೆ ಮೂರು ವರ್ಷಗಳಿಂದ ನೀರು ಬತ್ತಿದ್ದ ಪರಿಣಾಮ ಈ ಕೆರೆಯ ಮೇಲೆ ಭೂ ಮಾಫಿಯಾದವರ ಕಣ್ಣು ಒಂದು ಕಡೆಯಾದರೆ, ಮತ್ತೊದೆಡೆ ಸಾರ್ವಜನಿಕರ ಒಳಿತಿಗಾಗಿ ಬಳಸಿಕೊಳ್ಳಬೇಕು ಎಂದು ಗ್ರಾಮಸ್ಥರು ತೀರ್ಮಾನಿಸಿದ್ದರು. ಆದರೆ ಇವರಿಬ್ಬರ ಲೆಕ್ಕಾಚಾರವನ್ನು […]

ಜಾನುವಾರು ವಿಶೇಷ ತಾಂತ್ರಿಕ ಕಾರ್ಯಾಗಾರ

Thursday, December 19th, 2013
Cattle

ಮಂಗಳೂರು : ಕಾರ್ಯಾಗಾರದಲ್ಲಿ ಹೊರಹೊಮ್ಮುವ ವಿಚಾರ,ಸಲಹೆಗಳು ರೈತ ಬಾಂಧವರಿಗೆ ತಲುಪಿಸುವಲ್ಲಿ ಜಿಲ್ಲೆಯ ಪಶುವೈದ್ಯರು ಶ್ರಮಿಸಬೇಕೆಂದು ಶ್ರೀಮತಿ ತುಳಸಿ ಮದ್ದಿನೇನಿ, ಭಾ.ಆ.ಸೇ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ದ.ಕ. ಜಿ.ಪಂ. ಹಾಗೂ ಪ್ರಭಾರ. ಜಿಲ್ಲಾಧಿಕಾರಿಗಳು ದಕ್ಷಿಣಕನ್ನಡ ಜಿಲ್ಲೆ ಇವರು ಪಶುವೈದ್ಯರಿಗೆ ಸೂಚಿಸಿದರು. ಅವರು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ದ.ಕ.ಜಿಲ್ಲಾ ಪಂಚಾಯತ್, ಮಂಗಳೂರು, ಕರ್ನಾಟಕ ರಾಜ್ಯ ಸರ್ಕಾರಿ ಪಶು ವೈದ್ಯರ ಸಂಘ (ರಿ), ಜಿಲ್ಲಾ ಶಾಖೆ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ. ಮಂಗಳೂರು ಹಾಗೂ ಯುನೈಟೆಡ್ […]