ಸೋಮೇಶ್ವರ ತೀರದಲ್ಲಿ ಹಸುರು ಮತ್ತು ನೀಲಿ ಬಣ್ಣಕ್ಕೆ ತಿರುಗಿದ ಸಮುದ್ರದ ಅಲೆಗಳ ಬಣ್ಣ

Tuesday, November 24th, 2020
Ullal Beach

ಉಳ್ಳಾಲ : ಸೋಮೇಶ್ವರ ಸಮುದ್ರ ತೀರದಲ್ಲಿ ಅಲೆಗಳ ಬಣ್ಣ ನೀಲಿಯಾಗಿ  ಗೋಚರಿಸಿದ್ದು , ಸೋಮವಾರ ತಡರಾತ್ರಿವರೆಗೂ ಕುತೂಹಲಿಗರು ಸಮುದ್ರ ತಟದಲ್ಲಿ ನಿಂತು ಅಲೆಗಳ  ಬಣ್ಣದ ಆಟವನ್ನು ವೀಕ್ಷಣೆ ನಡೆಸಿದರು. ಅರಬ್ಬಿ ಸಮುದ್ರದ ಮಲ್ಪೆಯ ಪಡುಕೆರೆ,ಕಾರವಾರ ಉದ್ದಕ್ಕೂ ನೀಲಿ ಬೆಳಕು ಕಾಣಿಸಿಕೊಳ್ಳುತ್ತಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ಧಿ ಹರಡುತ್ತಿದ್ದಂತೆ , ಸೋಮೇಶ್ವರ ಸಮುದ್ರ ತೀರದಲ್ಲಿ ಸೋಮವಾರ ರಾತ್ರಿ ಜನ ಜಮಾಯಿಸಿ ನೀಲಿ ಬೆಳಕು ದಡಕ್ಕೆ ಅಪ್ಪಳಿಸುವುದನ್ನು ಕಂಡರು. ಅರಬ್ಬಿ ಸಮುದ್ರದಲ್ಲಿ ಮೂರು ದಿನಗಳಿಂದ ವಿಚಿತ್ರ ವಿದ್ಯಮಾನ ಜರಗುತ್ತಿದ್ದು, ಹಗಲು ಹೊತ್ತು ಪಾಚಿ ಬಣ್ಣದ ಹಸುರು […]

ಶ್ರೀಮಂತ ವಿಚ್ಚೇದನ ಪಡೆದ ಮಹಿಳೆಯರನ್ನು ಮದುವೆ ಯಾಗುವುದಾಗಿ ನಂಬಿಸಿ ದೈಹಿಕ‌ ಸಂಪರ್ಕ ಬೆಳೆಸಿ, ಲಕ್ಷ ಹೊಡೆಯುತ್ತಿದ್ದ

Tuesday, July 21st, 2020
jaganath

ಬೆಂಗಳೂರು :   ಶ್ರೀಮಂತ ವಿಚ್ಚೇದನ ಪಡೆದ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ವೈವಾಹಿಕ ಜಾಲತಾಣವಾದ ಮ್ಯಾಟ್ರಿಮೋನಿ ಮೂಲಕ  ಮದುವೆ ಮಾಡಿಕೊಳ್ಳುವುದಾಗಿ  ನಂಬಿಸಿ  ವಂಚಿಸುತ್ತಿದ್ದ ಖತರ್ನಾಕ್ ವಂಚಕನನ್ನು ಬನಶಂಕರಿ ಪೊಲೀಸರು ಹಾಸನದಲ್ಲಿ ಬಂಧಿಸಿದ್ದಾರೆ. ಮಹೇಶ್ ಆಲಿಯಾಸ್ ಜಗನ್ನಾಥ್ ಬಂಧಿತ ಆರೋಪಿ. ಮೂಲತಃ ಬಿಜಾಪುರದವನಾಗಿದ್ದು ಹಾಸನದಲ್ಲಿ ಮನೆ ಮಾಡಿಕೊಂಡಿದ್ದ. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. 29 ವರ್ಷದ ಜಗನ್ನಾಥ್, ಆನ್‌ ಲೈನ್ ಮೂಲಕ ಮಹಿಳೆಯರನ್ನು ಸಂಪರ್ಕಿಸಿ  ಮದುವೆಯಾಗುವುದಾಗಿ ಹೇಳಿ ಮಹಿಳೆಯರಿಂದ ಲಕ್ಷ ಲಕ್ಷ ವಂಚಿಸಿ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿ ಸಿಮ್ […]

‘ಸತ್ಯವನ್ನು ಉತ್ಪಾದಿಸುತ್ತಿರುವ ಮಾಧ್ಯಮಗಳು ಸ್ವವಿಮರ್ಶೆ ಮಾಡಿಕೊಳ್ಳಬೇಕು’

Saturday, December 2nd, 2017
Dr-Nithyanand-Shetty

ಮೂಡುಬಿದಿರೆ: ಆಳ್ವಾಸ್ ನುಡಿಸಿರಿ 2017 ರ ಎರಡನೇ ದಿನದ ವಿಶೇಷ ವಿಚಾರ ಗೋಷ್ಠಿಯು ಶನಿವಾರ ಕಾಲೇಜಿನ ರತ್ನಾಕರ ವರ್ಣಿ ವೇದಿಕೆಯಲ್ಲಿ ಜರುಗಿತು. “ಮಾಧ್ಯಮ-ಸ್ವವಿಮರ್ಶೆಯ ನೆಲೆ” ವಿಚಾರದಡಿ ಮಾಧ್ಯಮದ ಮೂರು ಪ್ರಧಾನ ಆಯಾಮಗಳಾದ ಸಾಮಾಜಿಕ ಜಾಲತಾಣ, ಪತ್ರಿಕಾ ರಂಗ ಹಾಗು ದೃಶ್ಯ ಮಾಧ್ಯಮಗಳ ಕುರಿತು ಚರ್ಚೆ ನಡೆಯಿತು. ದೃಶ್ಯ ಮಾಧ್ಯಮಗಳ ಬಗ್ಗೆ ತುಮಕೂರು ವಿವಿಯ ಪ್ರಾಧ್ಯಾಪಕ ಡಾ. ನಿತ್ಯಾನಂದ ಶೆಟ್ಟಿ ಪ್ರಚಲಿತ ಉದಾಹರಣೆಗಳನ್ನು ನೀಡಿ “ಮಾಧ್ಯಮಗಳಿಗೆ ಸ್ವವಿಮರ್ಶೆಯ” ಅವಶ್ಯಕತೆಯ ಕುರಿತು ಮಾತನಾಡಿದರು. “ದೃಶ್ಯ ಮಾಧ್ಯಮ ಉಳಿದ ಮಾಧ್ಯಮಗಳಿಗಿಂತ ದೊಡ್ಡ ವ್ಯಾಪ್ತಿ […]

ಜಾಲತಾಣಗಳಲ್ಲಿ ಅಪಪ್ರಚಾರಕ್ಕೆ ಪಟ್ಲ ಟ್ರಸ್ಟ್‌ ವಿರೋಧ

Wednesday, November 29th, 2017
Pattlaguttu-Sathish-shetty

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಶ್ರೀ ಕ್ಷೇತ್ರ ಕಟೀಲಿನ, ಕಟೀಲು ಮೇಳ ಹಾಗೂ ಅಸ್ರಣ್ಣರುಗಳ ಬಗ್ಗೆ, ಮೇಳದ ಯಜಮಾನರ ಬಗ್ಗೆ, ಯಕ್ಷ ಬೋಧಿನಿ ಟ್ರಸ್ಟ್‌ ಬಗ್ಗೆ ಅಪಚಾರ ಎಸಗುವುದನ್ನು ಪಟ್ಲ ಟ್ರಸ್ಟ್‌ ತೀವ್ರವಾಗಿ ವಿರೋಧಿಸುತ್ತದೆ ಎಂದು ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲಗುತ್ತು ಸತೀಶ್‌ ಶೆಟ್ಟಿ ತಿಳಿಸಿದ್ದಾರೆ. ಕಟೀಲಿನ ಯಕ್ಷಗಾನ ಮೇಳದ ಕಲಾವಿದರ ವರ್ಗಾವಣೆ ವಿಚಾರದಲ್ಲಿ ಕಳೆದ ಹತ್ತಾರು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಅನಪೇಕ್ಷಿತ ಹೇಳಿಕೆಗಳು “ಅಭಿಮಾನಿಗಳು’ ಎನ್ನುವ ಹೆಸರಿನಲ್ಲಿ ಪ್ರಸಾರವಾಗುತ್ತಿವೆ. ಶ್ರೀ ಕ್ಷೇತ್ರ ಮತ್ತು ಮೇಳಕ್ಕಿಂತ ನಾವು ಯಾರೂ ದೊಡ್ಡವರಲ್ಲ. […]

ಹಿಂದೂ ಕಾರ್ಯಕರ್ತನ ಪ್ರಕರಣ, ಅ.28ರಂದು ಬಂದ್ ಗೆ ಕರೆ

Friday, October 27th, 2017
Belthangadi

ಮಂಗಳೂರು: ಮುಸ್ಲಿಮರ ಪವಿತ್ರ ಕ್ಷೇತ್ರವಾದ ಮೆಕ್ಕಾ ಮಸೀದಿಯ ಅವಹೇಳನ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಸಂಬಂಧಪಟ್ಟಂತೆ ಆರೋಪಿಯನ್ನು ಪೋಲಿಸರಿಗೆ ಒಪ್ಪಿಸಿದರೂ ಪೋಲೀಸರು ಅಮಾಯಕ ಹಿಂದೂ ಕಾರ್ಯಕರ್ತರನ್ನು ಪ್ರಕರಣದಲ್ಲಿ ಸಿಲುಕಿಸಲು ಹುನ್ನಾರ ನಡೆಸಿದ್ದಾರೆ ಎಂದ ಬೆಳ್ತಂಗಡಿ ಹಿಂದೂ ಸಂಘಟನೆಗಳು ಆರೋಪಿಸಿವೆ. ಪೊಲೀಸ್ ಅಧಿಕಾರಿಗಳ ಈ ಹುನ್ನಾರವನ್ನು ವಿರೋಧಿಸಿ ಅಕ್ಟೋಬರ್ 28 ಶನಿವಾರದಂದು ಬೆಳ್ತಂಗಡಿಯ ಕಡಬ ಬಂದ್ ಗೆ ಕರೆ ನೀಡಲು ಹಿಂದೂಪರ ಸಂಘಟನೆಗಳು ನಿರ್ಧರಿಸಿವೆ. ಕಡಬದಲ್ಲಿ ಗುರುವಾರ ಸಂಜೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ತುರ್ತು ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿವೆ. ವಾಟ್ಸಾಪ್ […]

ಇರಾ ಗ್ರಾಮದಲ್ಲಿ, ಗ್ರಾಮದ ಸಮಗ್ರ ಮಾಹಿತಿ ನೀಡುವ ರಾಜ್ಯದ ಮೊತ್ತ ಮೊದಲ ಜಾಲತಾಣ

Friday, July 29th, 2016
Ira-village

ಉಳ್ಳಾಲ: ಮಾದರಿ ಸ್ವತ್ಛ ಗ್ರಾಮ ಪುರಸ್ಕಾರ ಪಡೆದು ದೇಶದ ಗಮನ ಸೆಳೆದಿದ್ದ ಪುಟ್ಟ ಗ್ರಾಮ ಇರಾ ಇದೀಗ ರಾಜ್ಯದಲ್ಲೇ ಮತ್ತೂಂದು ವಿನೂತನ ಪ್ರಯೋಗಕ್ಕೆ ಸಾಕ್ಷಿಯಾಗಿದೆ. ಗ್ರಾಮದ ಸಮಗ್ರ ಮಾಹಿತಿ ನೀಡುವ ರಾಜ್ಯದ ಮೊತ್ತ ಮೊದಲ ಜಾಲತಾಣ ನಿರ್ಮಿಸುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ ಗ್ರಾಮ ಮತ್ತೆ ಸುದ್ದಿಯಲ್ಲಿದೆ. ಇರಾ ಗ್ರಾಮಕ್ಕೆ ಪ್ರತ್ಯೇಕವಾದ ಜಾಲತಾಣವೊಂದನ್ನು ರಚಿಸಲಾಗಿದ್ದು, ಮಂಗಳವಾರ ನಡೆದ ಗ್ರಾಮ ಸಭೆಯಲ್ಲಿ ಬಂಟ್ವಾಳ ತಾಲೂಕು ಪಂಚಾಯತ್‌ ಅಧ್ಯಕ್ಷ ಚಂದ್ರಹಾಸ ಕರ್ಕೇರ ಲೋಕಾರ್ಪಣೆ ಮಾಡಿದರು. ಇರಾ […]

ಶಾಲಾ ಪರಿಸರದಲ್ಲಿ ಮದ್ಯ ಮಾರಾಟ-ಓರ್ವನ ಸೆರೆ

Tuesday, February 9th, 2016
liquor chandrahasa 48

ಉಪ್ಪಳ: ಶಾಲಾ ಪರಿಸರದಲ್ಲಿ ವ್ಯಾಪಕ ಮದ್ಯ ಮಾರಾಟ ನಡೆಯುತ್ತಿರುವುದಾಗಿ ಲಭಿಸಿದ ದೂರಿನ ಮೇರೆಗೆ ಅಬಕಾರಿ ಪೋಲೀಸರು ಮಂಗಳವಾರ ನಡೆಸಿದ ಕಾರ್ಯಾಚರಣೆಯಲ್ಲಿ ಮಾರಾಟದ ಮೂಲ ಸೂತ್ರದಾರನಾದ ಓರ್ವನನ್ನು ಬಂಧಿಸುವಲಲ್ಲಿ ಯಶಸ್ವಿಯಾಗಿದ್ದಾರೆ. ಉಪ್ಪಳ ಪಚ್ಲಂಪಾರೆಯ ಚಂದ್ರಹಾಸ(48)ಬಂಧಿತ ಆರೋಪಿ.ಈತನಿಂದ 180 ಮಿಲ್ಲಿಯ 48 ಮದ್ಯ ಬಾಟಲಿಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ. ಉಪ್ಪಳ ಶಾಲಾ ಪರಿಸರದಲ್ಲಿ ಪ್ಲಾಸ್ಟಿಕ್ ಬಕೇಟ್ ನಲ್ಲಿ ತುಂಬಿಸಿ ಮದ್ಯ ಮಾರಾಟ ಮಾಡುತ್ತಿರುವ ಮಧ್ಯೆ ಆರೋಪಿಯನ್ನು ಚಾಣಾಕ್ಷತನದಿಂದ ಸೆರೆಹಿಡಿಯಲಾಗಿದೆ.ಶಾಲಾ ಪರಿಸರದಲ್ಲಿ ವ್ಯಾಪಕ ಮದ್ಯ ಮಾರಾಟ ನಡೆಸಲಾಗುತ್ತಿದೆಯೆಂಬ ಊರವರ ನಿರಂತರ ದೂರಿನ ಪರಿಣಾಮ […]