Blog Archive

ಜಿಲ್ಲಾಧಿಕಾರಿ ನೇತೃತ್ವದಲ್ಲಿ ವ್ಯಾಪಕ ಕಾರ್ಯಾಚರಣೆ 100 ಲೋಡ್ ಹೊಯ್ಗೆ ವಶ

Thursday, August 25th, 2016
Sand

ಕಾಸರಗೋಡು: ಜಿಲ್ಲಾಧಿಕಾರಿ ಕೆ. ಜೀವನ್ ಬಾಬುರ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಕಂದಾಯ ಅಧಿಕಾರಿಗಳ ತಂಡ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ಬೃಹತ್ ಪ್ರಮಾಣದ ಮರಳು ವಶಪಡಿಸಲಾಗಿದೆ. ಮಂಜೇಶ್ವರ ಕೊಡ್ಲಮೊಗರಿನಲ್ಲಿ ನಡೆಸಿದ ದಾಳಿ ಮತ್ತು ತಪಾಸಣೆಯಲ್ಲಿ 100 ಲೋಡ್ ಮರಳುಗಳನ್ನು ಬುಧವಾರ ಮುಂಜಾನೆ ನಡೆಸಿದ ದಿಢೀರ್ ಕಾರ್ಯಾಚರಣೆಯಲ್ಲಿ ವಶಪಡಿಸಲಾಗಿದೆ. ಮಂಜೇಶ್ವರದ ಹೊರತಾಗಿ ಕಾಸರಗೋಡು, ಹೊಸದುರ್ಗ ಮತ್ತು ತೃಕರಿಪುರ ಎಂಬೆಡೆಗಳಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಮಂಜೇಶ್ವರದಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ಡೆಪ್ಯುಟಿ ಕಲೆಕ್ಟರ್ ಎನ್. ದೇವಿರಾಜ್, ಗ್ರಾಮಾಧಿಕಾರಿ ಮುಹಮ್ಮದ್ ಕುಂಞಿ, […]

ಜಿಲ್ಲಾಧಿಕಾರಿಯಾಗಿ ಆತ್ಮಸಾಕ್ಷಿಗನುಗುಣವಾಗಿ ಕೆಲಸ ಮಾಡುವ ಪ್ರಯತ್ನ ಮಾಡಿದ್ದೇನೆ: ಎ.ಬಿ. ಇಬ್ರಾಹಿಂ

Monday, August 1st, 2016
K-G-Jagadeesh

ಮಂಗಳೂರು: ಆಡಳಿತದ ಲಾಭ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂಬ ಆಶಯದೊಂದಿಗೆ ಜಿಲ್ಲಾಧಿಕಾರಿಯಾಗಿ ಆತ್ಮಸಾಕ್ಷಿಗನುಗುಣವಾಗಿ ಕೆಲಸ ಮಾಡುವ ಪ್ರಯತ್ನ ಮಾಡಿದ್ದೇನೆ ಎಂದು ನಿರ್ಗಮನ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಹೇಳಿದರು. ದ.ಕ. ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಈಗ ಕರ್ನಾಟಕ ಸರಕಾರದ ಸಾರಿಗೆ ಆಯುಕ್ತರಾಗಿ ಭಡ್ತಿ ಪಡೆದು ವರ್ಗಾವಣೆಗೊಂಡಿರುವ ಎ.ಬಿ. ಇಬ್ರಾಹಿಂ ಅವರು ಶನಿವಾರ ಜಿ.ಪಂ.ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಅಧಿಕಾರ ಹಸ್ತಾಂತರಿಸಿದ ಬಳಿಕ ದ.ಕ. ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾದ ಬೀಳ್ಕೊಡುಗೆ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು. ಆಡಳಿತದ ಅನುಷ್ಠಾನದ ಸಂದರ್ಭಗಳಲ್ಲಿ ಕೆಲವು […]

ನರಿಕೊಂಬು ಪ್ರದೇಶಕ್ಕೆ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ನಿಕ್ ಬೇಟಿ

Friday, May 20th, 2016
Ganesh Karnik

ಬಂಟ್ವಾಳ: ಮಂಗಳವಾರ ಸುರಿದ ಬಿರುಗಾಳಿ ಮಳೆಗೆ ಹಾನಿಯಾದ ತಾಲೂಕಿನ ನರಿಕೊಂಬು ಪ್ರದೇಶಕ್ಕೆ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ನಿಕ್ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು ಸರಕಾರ ಹಾನಿಯಾದ ಮನೆಗಳಿಗೆ ಮತ್ತು ಕೃಷಿಗೆ ನೀಡಬೇಕಾದ ಪರಿಹಾರ ಧನವನ್ನು ಶೀಘ್ರವೇ ನೀಡಬೇಕು ಎಂದು ಸರಕಾರವನ್ನು ಒತ್ತಾಯಿಸುತ್ತೇನೆ. ಮತ್ತು ಸರಕಾರ ಹಾನಿಯಾದ ಮನೆ ಮತ್ತು ಕೃಷಿಗೆ ನೀಡುವ ಪರಹಾರ ಧನ ಸಾಕಾಗುವುದಿಲ್ಲ ಹಾಗಾಗಿ ಹಾನಿಯಾದ ಅಂಶವನ್ನು ಲೆಕ್ಕಹಿಡಿದುಕೊಂಡು ಸರಿಯಾದ ಪ್ರಮಾಣದಲ್ಲಿ ಪರಿಹಾರ ನೀಡಬೇಕು ಎಂದು ಸರಕಾರವನ್ನು […]

ಬಂಟ್ವಾಳ ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ

Thursday, January 14th, 2016
Bantwal DC

ಬಂಟ್ವಾಳ: ಪಾಣೆಮಂಗಳೂರು ಸೇತುವೆ ಸೇರಿದಂತೆ ನಿಷೇಧಿತ ಪ್ರದೇಶಗಳಲ್ಲಿ ಇನ್ನೂ ಕೂಡ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ಮಟ್ಟ ಹಾಕಲು ನಿರ್ಲಕ್ಷ್ಯ ತೋರಿದ ತಹಶೀಲ್ದಾರರನ್ನು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ತರಾಟೆಗೆ ತೆಗೆದುಕೊಂಡ ಘಟನೆ ಬಂಟ್ವಾಳ ತಾಲೂಕು ಕಛೇರಿಯಲ್ಲಿ ಗುರುವಾರ ನಡೆಯಿತು. ಬಂಟ್ವಾಳ ತಾಲೂಕಿನಲ್ಲಿ ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ಸಾಧಿಸಲಾದ ಪ್ರಗತಿ ಪರಿಶೀಲನೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸುವ ಕುರಿತಾಗಿ ಬಂಟ್ವಾಳ ತಾಲೂಕು ಕಛೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಜಿ.ಪಂ.ಮಾಜಿ ಸದಸ್ಯ ತುಂಗಪ್ಪ ಬಂಗೇರ ನೇತೃತ್ವದ ನಿಯೋಗವೊಂದು […]

ಬಂಟ್ವಾಳ ಘಟನೆ : ಜಿಲ್ಲೆಯಾದ್ಯಂತ ಭಾನುವಾರ ರಾತ್ರಿ 10-00 ಘಂಟೆಯ ವರೆಗೆ 144 ರಂತೆ ನಿಷೇದಾಜ್ಞೆ

Friday, November 13th, 2015
AB Ibrahim

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ದಿನಾಂಕ 12-11-2015 ರಂದು ನಡೆದ ಅಹಿತಕರ ಘಟನೆ ನಂತರ ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಜಿಲ್ಲೆಯಾದ್ಯಂತ ಶಾಂತಿಯುತ ವಾತಾವರಣ ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ದಿನಾಂಕ 12-11-2015 ರ ರಾತ್ರಿ 10-00 ಘಂಟೆಯಿಂದ ದಿನಾಂಕ 15-11-2015 ರ ರಾತ್ರಿ 10-00 ಘಂಟೆಯ ತನಕ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ 1973 ರ ಸೆಕ್ಷನ್ 144 ರಂತೆ ನಿಷೇದಾಜ್ಞೆ ಆದೇಶ ಹೊರಡಿಸಲಾಗಿದೆ. ಇದರಂತೆ ಸದ್ರಿ […]

ಜಾತಿ/ಆದಾಯ ಪ್ರಮಾಣಪತ್ರ: ತ್ವರಿತಗತಿಯಲ್ಲಿ ನೀಡಲು ಡಿಸಿ ಸೂಚನೆ

Thursday, July 9th, 2015
DC

ಮಂಗಳೂರು : ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿಗೊಳಿಸಿ, ಪ್ರಮಾಣಪತ್ರಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ತಹಶೀಲ್ದಾರ್‌ಗಳಿಗೆ ಸೂಚಿಸಿದ್ದಾರೆ. ಅವರು ಬುಧವಾರ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಶಾಲಾ-ಕಾಲೇಜು ಆರಂಭವಾಗಿರುವುದರಿಂದ ಶೈಕ್ಷಣಿಕ ಉದ್ದೇಶಗಳಿಗಾಗಿ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳಿಗಾಗಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ. ನಾಡಕಚೇರಿಗಳ ಮುಂದೆ ಸಾರ್ವಜನಿಕರು ಜಮಾಯಿಸುತ್ತಿದ್ದು, ಪ್ರತೀನಿತ್ಯವೂ ಜನಜಂಗುಳಿಯಿಂದ ಕೂಡಿರುತ್ತವೆ. ಜನಸಾಮಾನ್ಯರೂ ಕೂಡಾ ಇದಕ್ಕಾಗಿ ತಮ್ಮ ಕೆಲಸ ಕಾರ್ಯ […]

ಮಲೆಕುಡಿಯರ ಕಾಲನಿಗಳಿಗೆ ಸರ್ವ ಸೌಕರ್ಯ: ಜಿಲ್ಲಾಧಿಕಾರಿ ಸೂಚನೆ

Friday, June 26th, 2015
Malekudiya

ಮಂಗಳೂರು : ಮಲೆಕುಡಿಯ ಜನಾಂಗದ ಅಭಿವೃದ್ಧಿಗೆ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಕಾಲನಿಗಳನ್ನು ಗುರುತಿಸಿ ಅಲ್ಲಿ ಸಕಲ ರೀತಿಯ ಮೂಲಸೌಕರ್ಯ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸೂಚಿಸಿದ್ದಾರೆ. ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ಮಲೆಕುಡಿಯ ಜನಾಂಗದವರ ವಿಶೇಷ ಅಭಿವೃದ್ಧಿ ಯೋಜನೆಯಡಿ ಮೂಲಭೂತ ಸೌಕರ್ಯ ಒದಗಿಸಲು ಜಿಲ್ಲಾಮಟ್ಟದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉತ್ತಮ ರೀತಿಯ ಮೂಲಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ 4 ಹಾಗೂ ಉಳಿದ ತಾಲೂಕುಗಳಲ್ಲಿ ತಲಾ ಒಂದೊಂದು ಮಲೆಕುಡಿಯ ಜನಾಂಗದವರು […]

ಮಂಗಳೂರು ತಾ: ಗ್ರಾಮ ಪಂಚಾಯತ್‌ಗಳ ಅಧ್ಯಕ್ಷ/ಉಪಾಧ್ಯಕ್ಷ ಮೀಸಲಾತಿ ಪಟ್ಟಿ

Monday, June 8th, 2015
GP Reservation

ಮಂಗಳೂರು : ಮಂಗಳೂರು ತಾಲೂಕು ವ್ಯಾಪ್ತಿಯ ಗ್ರಾಮ ಪಂಚಯತುಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ಸೋಮವಾರ ನಡೆಸಲಾಯಿತು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಉಪಸ್ಥಿತಿಯಲ್ಲಿ ಮೀಸಲಾತಿಗಳನ್ನು ಗ್ರಾಮ ಪಂಚಾಯತ್ ಸದಸ್ಯರ ಸಮಕ್ಷಮದಲ್ಲಿ ನಿಗದಿಪಡಿಸಲಾಯಿತು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಮಿಸಲಾತಿ ನಿಗದಿ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಮಂಗಳೂರು ಉಪವಿಭಾಗಾಧಿಕಾರಿ ಡಾ.ಅಶೋಕ್ ಉಪಸ್ಥಿತರಿದ್ದರು. ಮೀಸಲಾತಿ ವಿವರ ಇಂತಿವೆ; ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಅಡ್ಯಾರ್ ಪರಿಶಿಷ್ಟ ಜಾತಿ ಸಾಮಾನ್ಯ (ಮ) ಐಕಳ ಸಾಮಾನ್ಯ ಪರಿಶಿಷ್ಟ ಜಾತಿ (ಮ) […]

ಮಂಗಳೂರು – ಪಾದೂರು ತೈಲ ಕೊಳವೆ ಮಾರ್ಗಬಾಧಿತ ರೈತರಿಂದ ಜಿಲ್ಲಾಧಿಕಾರಿಗಳ ಭೇಟಿ

Thursday, April 9th, 2015
deviprasad shetty

ಮಂಗಳೂರು : ತೋಕೂರು – ಪಾದೂರು ಕಚ್ಚಾ ತೈಲ ಸಾಗಾಟಕ್ಕೆ ಭೂ ಸ್ವಾಧೀನವನ್ನು 1962ನೇ ಪೈಪ್ ಲೈನ್ ಕಾಯಿದೆ ಪ್ರಕಾರ ಮಾಡಿ ಕೊಟ್ಟಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವುದರಿಂದ 2013ರ ಭೂ ಸ್ವಾಧೀನ ಮತ್ತು 2014-15ರ ತಿದ್ದುಪಡಿ ಆಧ್ಯಾದೇಶ ಒಳಪಡಿಸಿ ಕಾಯದ್ದೆಯನ್ವಯ ಸಂಪೂರ್ಣ ಭೂ ಸ್ವಾಧೀನಗೊಳಿಸಿ ಪಾರದರ್ಶಕವಾಗಿ ಪರಿಹಾರ ನೀಡಬೇಕೆಂದು ತೋಕೂರು ಪಾದೂರು ಐಎಸ್ಪಿಆರ್ಎಲ್ ಪೈಪ್ಲೈನ್ ಬಾಧಿತರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಪೈಪ್ನಲೈನ್ ಬಗ್ಗೆ ಯೋಜನೆಯನ್ನು ತಯಾರಿಸುವಾಗ ರೈತರನ್ನು ಕತ್ತಲಲ್ಲಿ ಇಡಲಾಗಿದೆ. ಗಡಿಗುರುತು, ಪಂಚನಾಮೆ ಇತ್ಯಾದಿ […]

ಜಿಲ್ಲೆಯಲ್ಲಿ 240ಶಿಶು ಮರಣ-ಎ.ಬಿ.ಇಬ್ರಾಹಿಂ

Friday, March 27th, 2015
child death

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರೋಗ್ಯ ಸೌಲಭ್ಯಗಳ ಸುಧಾರಣೆಯಾಗಿದ್ದು,ಇದರ ಫಲ 2014-15 ನೇ ಸಾಲಿನಲ್ಲಿ (ಫೆಬ್ರವರಿ ಅಂತ್ಯದವರೆಗೆ) ವಿವಿಧ ಕಾರಣಗಳಿಂದ 240 ಶಿಶುಗಳು ಹಾಗೂ ಪ್ರಸವ ನಂತರ ವಿವಿಧ ಕಾರಣಗಳಿಗೆ ಇಬ್ಬರು ತಾಯಂದಿರು ಮರಣವನ್ನಪ್ಪಿದ್ದಾರೆ,ಈ ಪ್ರಮಾಣ ಇನ್ನು ಕಡಿಮೆಯಾಗಿ ಶೂನ್ಯಕ್ಕೆ ತರುವಲ್ಲಿ ಆರೋಗ್ಯ ಇಲಾಖೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ. ಅವರು ಬುಧವಾರದಂದು ತಮ್ಮ ಕಚೇರಿಯಲ್ಲಿ ನಡೆದ ಜಿಲ್ಲಾ ಆರೋಗ್ಯ ಅಭಿಯಾನ ಫೆಬ್ರವರಿ 2015 ರ ಮಾಸಿಕ ಸಭೆಯ ಅಧ್ಯಕ್ಷತೆ […]