ಆತ್ಮನಿರ್ಭರ ಕೇಂದ್ರ ಬಜೆಟ್ – ಜಿಲ್ಲಾ ಬಿಜೆಪಿ

Saturday, February 12th, 2022
nirmala-seetharaman

ಮಂಗಳೂರು  : ಗೌರವಾನ್ವಿತ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರು ಮಂಡಿಸಿದ ಬಜೆಟ್ ಸ್ವಾತಂತ್ರ್ಯೋತ್ತರದ 100 ವರ್ಷಗಳ ಭಾರತ ಎಂಬ ದೂರದೃಷ್ಟಿ ಸಾಧಿಸುವ ಗುರಿಯನ್ನು ಬಜೆಟ್ ಹೊಂದಿದೆ: ಈ ಬಜೆಟ್ ಮುಂದಿನ 25 ವರ್ಷಗಳಲ್ಲಿ ಭಾರತದ ಸಮಗ್ರ ಪ್ರಗತಿಯ ನೀಲನಕ್ಷೆಯನ್ನು ಹಾಕಲು ಪ್ರಯತ್ನಿಸುತ್ತದೆ. ಭಾರತವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತದೆ. ಕಳೆದ 2ವರ್ಷಗಳಲ್ಲಿ ಸವಾಲುಗಳನ್ನು ಎದುರಿಸಿ ಆರೋಗ್ಯ ಮೂಲಸೌಕರ್ಯಗಳ ಸುಧಾರಣೆ ಭಾರತವು ಪ್ರಬಲ ಸ್ಥಾನದಲ್ಲಿದೆ. ಆರ್ಥಿಕತೆಯ ಚೇತರಿಕೆಯು ಭಾರತದ ಬಲವಾದ ಸ್ಥಿತಿಸ್ಥಾಪಕತ್ವವನ್ನು ಪ್ರತಿಬಿಂಬಿಸುತ್ತದೆ. ಪ್ರಸಕ್ತ […]

ಮಂಗಳೂರು ಬಿಜೆಪಿ ಕಚೇರಿಯಲ್ಲಿ 75ನೇ ಸ್ವಾತಂತ್ರ್ಯೋತ್ಸವ

Sunday, August 15th, 2021
BJP-office

ಮಂಗಳೂರು  : ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಲುವಾಗಿ ಧ್ವಜಾರೋಹಣ ಮಾಡುವ ಮೂಲಕ ಸರಳವಾಗಿ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯ ವಕ್ತಾರರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಈ ದೇಶದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಜನರು ಹುತಾತ್ಮರಾಗಿದ್ದಾರೆ. ಅವರ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಮೂಲಕ ಅವರ ವಿಚಾರಗಳನ್ನು ಜೀವಂತವಾಗಿಡಬೇಕು ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಮಾತನಾಡಿ, ಭಾರತದ ಅಗಾಧ ಸಂಪತ್ತಿನ ಮೇಲಿನ ವ್ಯಾಮೋಹದಿಂದ ವಿದೇಶಿ ಆಕ್ರಮಣಕಾರರು ಭಾರತದ […]

ಲವ್‌ ಜಿಹಾದ್, ಮತಾಂತರವನ್ನು ಇನ್ನೂ ಪ್ರಶ್ನಿಸುತ್ತೇವೆ : ಸುದರ್ಶನ್ ಮೂಡುಬಿದಿರೆ

Saturday, August 14th, 2021
sudarshan

ಮಂಗಳೂರು : ಯು ಟಿ ಖಾದರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ ಎನ್‌ಐಎ ತನಿಖೆಯ ಕುರಿತು ಮಾಜಿ ಸಚಿವ ಯು.ಟಿ.ಖಾದರ್ ಅವರೇ ಗೊಂದಲಮಯ ಹೇಳಿಕೆ ನೀಡಿದ್ದಾರೆ. ಅದನ್ನು ಪಕ್ಷ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಉಳ್ಳಾಲದ ಮನೆಯೊಂದರಲ್ಲಿ ನಡೆದ ಲವ್ ಜಿಹಾದ್ ಮತ್ತು ಉಗ್ರರ ಜೊತೆಗಿನ ಸಂಬಂಧದ ವಿಚಾರವನ್ನು ಖಂಡಿಸಿ ವಿಎಚ್‌ಪಿ ಪ್ರತಿಭಟನೆ ನಡೆಸಿರುವುದು ಶ್ಲಾಘನೀಯ. ಆ ಮನೆಯಲ್ಲಿ ನಡೆದ ಮತಾಂತರದ ವಿಚಾರವನ್ನು ಕೇಳಲು […]

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ರವಿಶಂಕರ ಮಿಜಾರ್

Wednesday, June 3rd, 2020
Ravishankara-Mijar

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಜಿಲ್ಲಾ ವಕ್ತಾರ ರವಿಶಂಕರ ಮೀಜಾರ್ ಅವರನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಿ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರದ ಸಚಿವಾಲಯ ಜೂನ್ 3, ಬುಧವಾರ ಸಂಜೆ ಆದೇಶ ಹೊರಡಿಸಿದೆ. ಬಿಜೆಪಿಯಲ್ಲಿ ಸುಮಾರು ಮೂವತ್ತು ವರ್ಷಗಳಿಂದ ಸಕ್ರೀಯ ಕಾರ್ಯಕರ್ತರಾಗಿ ದುಡಿಯುತ್ತಿರುವ ರವಿಶಂಕರ ಮಿಜಾರ್. ಪ್ರಸ್ತುತ ಜಿಲ್ಲಾ ಸ್ಪೋಕ್ಸ್ ಪರ್ಸನ್ ಆಗಿದ್ದಾರೆ. ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಟ್ರಸ್ಟಿಯಾಗಿದ್ದಾರೆ, ವಿದ್ಯಾರ್ಥಿಯಾಗಿದ್ದಾಗಲೇ ಅಲೋಶಿಯಸ್ ಕಾಲೇಜಿನಲ್ಲಿ ವಿದ್ಯಾರ್ಥಿ ನಾಯಕನಾಗಿದ್ದರು. ಮಂಗಳೂರಿನ ಕುಂಠಿತಗೊಂಡಿರುವ ಕೆಲಸಗಳಿಗೆ ವೇಗ ಕೊಡುವುದರ ಜೊತೆಗೆ […]

ಕಾಸರಗೋಡು ಜಿಲ್ಲಾ ಬಿಜೆಪಿ ಸಮಿತಿ ಪುನರ್ ರಚನೆ: ಶ್ರೀಕಾಂತ್ ಜಿಲ್ಲಾಧ್ಯಕ್ಷ

Tuesday, January 19th, 2016
Kasaragod BJP

ಕಾಸರಗೋಡು: ಬಿಜೆಪಿ ಜಿಲ್ಲಾ ಸಮಿತಿಯನ್ನು ಪುನರ್ ರಚಿಸಲಾಗಿದ್ದು,ಕಾಸರಗೋಡು ಜಿಲ್ಲಾಧ್ಯಕ್ಷರಾಗಿ ಜಿಲ್ಲಾ ಪಂಚಾಯತ್ ಸದಸ್ಯ,ಯುವ ನಾಯಕ ನ್ಯಾಯವಾದಿ ಶ್ರೀಕಾಂತ್ ರನ್ನು ನೇಮಿಸಲಾಗಿದೆ. ರಾಜ್ಯ ಸಮಿತಿ ಸದಸ್ಯರಾಗಿದ್ದ ನಗರಸಭಾ ಕೌನ್ಸಿಲರ್ ಪಿ.ರಮೇಶ್ ಹಾಗೂ ಆರ್‌ಎಸ್‌ಎಸ್ ಕಣ್ಣೂರು ವಿಭಾಗ ಕಾರ್ಯಕಾರಿ ಸಮಿತಿ ಸದಸ್ಯ ಎ.ವೇಲಾಯುಧನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ನಿಯುಕ್ತರಾಗಿದ್ದಾರೆ. ಈ ವೇಳೆ ಬಿಜೆಪಿ ರಾಜ್ಯ ಸಮಿತಿಯನ್ನೂ ಪುನರ್ ಸಂಘಟಿಸಲಾಗಿದ್ದು, ನಾಲ್ವರು ಪ್ರಧಾನ ಕಾರ್ಯದರ್ಶಿಗಳು, ಒಂಭತ್ತು ಉಪಾಧ್ಯಕ್ಷರುಗಳು ಮತ್ತು 42 ಮಂದಿ ಪದಾಧಿಕಾರಿಗಳನ್ನು ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ ಘೋಷಿಸಿದ್ದಾರೆ. ಕೆ.ಸುರೇಂದ್ರನ್,ಎಎನ್ ರಾಧಾಕೃಷ್ಣನ್,ಎಂ.ಟಿ.ರಮೇಶ್,ಶೋಭಾ […]

ಜನಸ್ಪಂದನೆಯ ರೈಲ್ವೇ ಬಜೆಟ್ – ಜಿಲ್ಲಾ ಬಿಜೆಪಿ ಸ್ವಾಗತ

Tuesday, July 8th, 2014
Railway budget

ಮಂಗಳೂರು : ದೇಶದ ರೈಲ್ವೇ ಪ್ರಗತಿಗೆ ಪೂರಕವಾಗಿ ಪ್ರಯಾಣಿಕರ ಸೌಲಭ್ಯ- ಸುರಕ್ಷತೆಗಳಿಗೆ ವಿಶೇಷ ಒತ್ತು ನೀಡಿ, ಕರ್ನಾಟಕದ ಜನತೆಯ ಹಿತವನ್ನೂ ಕಾಪಾಡುವುದರ ಜೊತೆಗೆ, ಜಿಲ್ಲೆಯ ಜನತೆಯ ರೈಲ್ವೇ ಬೇಡಿಕೆಗಳಿಗೆ ಸ್ಪಂದನೆಯನ್ನು ನೀಡಿರುವ ಕೇಂದ್ರ ರೈಲ್ವೇ ಬಜೆಟ ನ್ನು ಬಿಜೆಪಿ ದ.ಕ ಜಿಲ್ಲಾ ಸಮಿತಿ ಸಂಭ್ರಮದಿಂದ ಸ್ವಾಗತಿಸಿದೆ. ಭಾರತೀಯ ರೈಲನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ಪೂರಕವಾಗಿ ಮುಂಬೈ ಅಹಮದಬಾದ್ಗೆ ದೇಶದ ಪ್ರಪ್ರಥಮ ಬುಲೆಟ್ ಟ್ರೈನನ್ನು ಘೋಷಿಸುವುದರ ಜತೆಗೆ, ಕರ್ನಾಟಕವೂ ಸೇರಿದಂತೆ ದೇಶದಲ್ಲಿ 9 ಹೈಸ್ಪೀಡ್ ರೈಲು ಮತ್ತು 4 ಸೆಮಿ […]

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರ ಚುನಾವಣೆಯ ಪ್ರಕ್ರಿಯೆಗಳ ಗೊಂದಲಗಳನ್ನು ಸರಿಪಡಿಸಲು ಜಿಲ್ಲಾಧಿಕಾರಿಗೆ ಮನವಿ

Wednesday, April 30th, 2014
bjp memorandum

ಮಂಗಳೂರು : ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರ ಚುನಾವಣೆಯ ಪ್ರಕ್ರಿಯೆಗಳ ಗೊಂದಲಗಳನ್ನು ಕೂಡಲೇ ಸರಿಪಡಿಸಿ ಸೂಕ್ತ ಕ್ರಮ ಕೈಗೊಳ್ಳುಬೇಕೆಂದು ಜಿಲ್ಲಾ ಬಿಜೆಪಿ ವತಿಯಿಂದ ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಹಿಂದಿನ ಸಹಕಾರಿ ಸಂಸ್ಥೆಗಳಿಗೆ ಚುನಾವಣೆ ನಡೆಯುವ ಸಂದರ್ಭದಲ್ಲಿ ಮಹಾಸಭೆಯ ನೋಟೀಸಿನ ಜೊತೆಯಲ್ಲಿಯೆ ಸ್ಪರ್ಧಿಸುವ ಅಭ್ಯರ್ಥಿಗಳ ಅರ್ಜಿ ಯ ನಮೂನೆಯನ್ನು ಕೂಡಾ ಕಳುಹಿಸಲಾಗುತ್ತಿತ್ತು. ಇದೀಗ ದಿನಾಂಕ 25.5.2014 ರಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ ಚುನಾವಣೆಯು ನಡೆಯಲಿದ್ದು, ಸಂಘದ ಪ್ರತಿನಿಧಿ ನಿಯೋಜಿಸುವ ಅರ್ಜಿ […]