Blog Archive

ರಾಯಚೂರಿನಲ್ಲಿ ಫಾರ್ಮಾ ಪಾರ್ಕ್‌ ಸ್ಥಾಪನೆಗೆ ಕೇಂದ್ರ ಉದ್ದೇಶ : ಡಿ ವಿ ಸದಾನಂದ ಗೌಡ

Saturday, May 30th, 2020
sadananda-gowda

ನವದೆಹಲಿ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸ್ವಾವಲಂಬಿ ಭಾರತ ಪರಿಕಲ್ಪನೆಯೊಂದಿಗೆ ನಮ್ಮ ಇಲಾಖೆಯು ಹೆಜ್ಜೆಹಾಕುತ್ತಿದೆ. ಮುಂಬರುವ ದಿನಗಳಲ್ಲಿ ಔಷಧ, ರಸಗೊಬ್ಬರ ಹಾಗೂ ರಾಸಾಯನಿಕ ವಲಯದಲ್ಲಿ ದೇಶವನ್ನು ಸಂಪೂರ್ಣ ಸ್ವಾವಲಂಬಿ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ಹೇಳಿದ್ದಾರೆ. ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ಒಂದು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆಯೊಂದನ್ನು ನೀಡಿರುವ ಅವರು ಔಷಧ ಮುಂತಾದ […]

ನೆರೆ ಪರಿಹಾರಕ್ಕೆ ಹೆಚ್ಚುವರಿ 5400 ಕೋಟಿ ರೂ.‌ : ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಭರವಸೆ

Monday, March 9th, 2020
sadananda-gowda

ಬೆಂಗಳೂರು : ಕರ್ನಾಟಕಕ್ಕೆ ನೆರೆ ಪರಿಹಾರಕ್ಕೆ ಹೆಚ್ಚುವರಿ 5400 ಕೋಟಿ ರೂ.‌ ನೀಡಬಹುದು ಎಂದು ಹಣಕಾಸು‌ ಆಯೋಗ ಅಭಿಪ್ರಾಯ ಪಟ್ಟಿದೆ. ಈ ಅಂಶವನ್ನು ಸಿಎಂ ನನ್ನ ಗಮನಕ್ಕೆ ತಂದಿದ್ದಾರೆ. ಸಚಿವೆ ನಿರ್ಮಲಾ‌ ಸೀತಾರಾಮನ್‌ ಜತೆ ಚರ್ಚಿಸಿ ಹಣ‌ ಬಿಡುಗಡೆ ಮಾಡುವಂತೆ ಮನವಿ ಮಾಡುವೆ ಎಂದು‌ ಕೇಂದ್ರ ಸಚಿವ ಡಿವಿ ಸದಾನಂದಗೌಡ ತಿಳಿಸಿದರು. ವಿವಿ ಟವರ್ ನಲ್ಲಿ ಸೋಮವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು. ಮಾ.15 ರಂದು ನಂದಿನಿ‌ ಲೇಔಟ್ನ ಎಸ್ . ಜಿ ಇಂಟರ್ ನ್ಯಾಷನಲ್‌ ಪಬ್ಲಿಕ್ ಶಾಲೆಯಲ್ಲಿ […]

ಧರ್ಮಸ್ಥಳದಲ್ಲಿ ಧರ್ಮಶ್ರೀ ನೂತನ ವಿಸ್ತೃತ ಕಟ್ಟಡ ಉದ್ಘಾಟನೆ

Saturday, January 25th, 2020
dharmasri

ಉಜಿರೆ: ಸ್ವಾತಂತ್ರ್ಯ ಆಂದೋಲನದ ರೀತಿಯಲ್ಲಿ ಸ್ವಚ್ಛತಾ ಅಭಿಯಾನ ಆಂದೋಲನವಾಗಿ ಸ್ವಚ್ಛ ಭಾರತದ ಕನಸು ನನಸಾಗಬೇಕು. ಸೈನಿಕರು ದೇಶದ ರಕ್ಷಣೆ ಮಾಡಿದಂತೆ ನಾವು ಸಮಾಜದ ರಕ್ಷಣೆ ಮಾಡೋಣ ಎಂದು ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು. ಧರ್ಮಸ್ಥಳದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಆಡಳಿತ ಕಚೇರಿ ಧರ್ಮಶ್ರೀಯ ನೂತನ ವಿಸ್ತೃತ ಕಟ್ಟಡವನ್ನು ಶುಕ್ರವಾರ ಅವರು ಉದ್ಘಾಟಿಸಿ ಮಾತನಾಡಿದರು. ಕೇವಲ ರಸ್ತೆ, ಆಸ್ಪತ್ರೆ, ಶಾಲೆ ಅಭಿವೃದ್ಧಿ ಆದರೆ ಅದು ಪ್ರಗತಿಯ ದ್ಯೋತಕವಲ್ಲ. ಪ್ರತಿಯೊಬ್ಬ ವ್ಯಕ್ತಿಯೂ […]

ಕಾಂಗ್ರೆಸ್ ತನ್ನ ಅಂತ್ಯ ಕಾಲದಲ್ಲಿ ಟಿಪ್ಪು ಜಯಂತಿಯಂತಹ ಕಾರ್ಯಕ್ರಮಗಳನ್ನು ಮಾಡುತ್ತಿದೆ: ಡಿ.ವಿ.ಸದಾನಂದ ಗೌಡ

Saturday, November 10th, 2018
sadananda-gowda

ಮಂಗಳೂರು: ಕಾಂಗ್ರೆಸ್ ತನ್ನ ಅಂತ್ಯ ಕಾಲದಲ್ಲಿ ಟಿಪ್ಪು ಜಯಂತಿಯಂತಹ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು ಟಿಪ್ಪು ಜಯಂತಿ ಆಚರಣೆ ಮಾಡುವುದರ ಬದಲು ಟಿಪ್ಪುವನ್ನು ಮರೆಯುವ ಕೆಲಸ ಆಗಬೇಕಿತ್ತು. ಸಾಕಷ್ಟು ವಿರೋಧದ ನಡುವೆ ಕಾಂಗ್ರೆಸ್ ಪಕ್ಷ ಈ ಕಾರ್ಯಕ್ರಮ ನಡೆಸಲು ಮುಂದಾಗಿದೆ. ಮುಂಬರುವ ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷ ಇತಿಹಾಸದ ಪುಟ ಸೇರಲಿದೆ ಎಂದು ಹೇಳಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಪಕ್ಷ ಸಂಘಟನೆಗೆ ವರಿಷ್ಠರು ನಿರ್ಧರಿಸಿದ್ದಾರೆ. […]

ಮಾಧ್ಯಮ ಸಣ್ಣ ಸಣ್ಣ ವಿಚಾರವನ್ನು ದೊಡ್ಡದು ಮಾಡುತ್ತೆ: ಡಿ.ವಿ. ಸದಾನಂದ ಗೌಡ

Tuesday, October 2nd, 2018
sadanand-gouda

ಬೆಂಗಳೂರು: ಮಹಾತ್ಮ ಗಾಂಧಿ ಜಯಂತಿಯ ದಿನವಾದ ಇಂದು ನಗರದ ಸ್ವಚ್ಛ ಭಾರತ ಅಭಿಯಾನದಲ್ಲಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಸೇರಿದಂತೆ ಗಣ್ಯರು ಪೊರಕೆ ಹಿಡಿದು ಕಸ ಗುಡಿಸಿದರು. ಮಹಾತ್ಮ ಗಾಂಧಿ ಜಯಂತಿ‌ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರಿಂದ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮ ನಡೆಸಲಾಯಿತು. ಕಮಲ ನಗರದಲ್ಲಿ ರಸ್ತೆಯಲ್ಲಿ ಕಸ ಗುಡಿಸಿ ಸ್ವಚ್ಛತಾ ಆಂದೋಲನ ಮಾಡಿದರು. ಮಾಜಿ ಶಾಸಕ ನೆಲ ನರೇಂದ್ರ ಬಾಬು ಸೇರಿದಂತೆ ಗಣ್ಯರು ಸಾಥ್ ನೀಡಿದರು. ನಂತರ ಗಣ್ಯರು ಮಾತ್ರ ಮಾಸ್ಕ್ […]

ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರ ಎಲ್ಲವೂ ಬಿಜೆಪಿ ತೆಕ್ಕೆಗೆ: ಡಿ.ವಿ.ಸದಾನಂದ ಗೌಡ

Friday, June 8th, 2018
sadananda-gowda

ಪುತ್ತೂರು: ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರ ಎಲ್ಲವೂ ಬಿಜೆಪಿ ತೆಕ್ಕೆಗೆ ಎಂದು ಡಿ.ವಿ.ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪುತ್ತೂರಿನಲ್ಲಿ ಮಾತನಾಡಿದ ಸದಾನಂದ ಗೌಡ ಅವರು ಶಿಕ್ಷಕರು ,ಪದವೀಧರರು ಹಿಂದಿನಿಂದಲೂ ಬಿಜೆಪಿ ಬೆಂಬಲಿಸಿದವರು.ವಿಧಾನಸಭೆಯಲ್ಲಿ ಶಾಸಕರಿಲ್ಲದ ಕಾಲದಲ್ಲೂ ವಿಧಾನಪರಿಷತ್ ಗೆ ಶಾಸಕರನ್ನು ಕಳುಹಿಸಿದ ಇತಿಹಾಸ ಬಿಜೆಪಿಯದ್ದು.ಇತ್ತೀಚಿನ ದಿನಗಳಲ್ಲಿ ಬಿಜೆಪಿ‌ ಬಗ್ಗೆ ಒಲವು ಹೆಚ್ಚಾಗಿದೆ ಎಂದಿದ್ದಾರೆ. ರಾಜ್ಯದ ಎಲ್ಲಾ ಸ್ಥಾನಗಳನ್ನೂ ನೂರಕ್ಕೆ ನೂರು ಬಿಜೆಪಿ ಪಡೆಯಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪುತ್ತೂರಿನ ಜನಪ್ರಿಯ ಶಾಸಕಿ ಶಕುವಕ್ಕ

Friday, May 11th, 2018
shakuntala-shetty

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಎರಡನೇ ದೊಡ್ಡನಗರ ಪುತ್ತೂರು ಹೇಳಿ ಕೇಳಿ ಬಿಜೆಪಿ ಭದ್ರಕೋಟೆ.1994ರಿಂದ 2008ರ ವರೆಗೆ ಇಲ್ಲಿ ಬಿಜೆಪಿಯದ್ದೇ ರಾಜ್ಯಭಾರ.ಅದಕ್ಕೂ ಮೊದಲು ಇಲ್ಲಿ ಪರಿವಾರದ ಶಾಸಕರೇ ಆಯ್ಕೆ ಆಗಿದ್ದರು. ಕಳೆದ ಬಾರಿ ಬಿಜಪಿಯಿಂದ ವಲಸೆ ಬಂದ ಶಕುಂತಳಾ ಶೆಟ್ಟಿ ಕಾಂಗ್ರೆಸ್ ಪಕ್ಷಕ್ಕೆ ಪುತ್ತೂರನ್ನು ಗೆದ್ದು ಕೊಟ್ಟರು. ಒಂದು ಬಾರಿ ಬಿಜೆಪಿಯಿಂದಲೂ ಆಯ್ಕೆ ಆಗಿದ್ದ ಶಕುವಕ್ಕ ಇಂದು ಪುತ್ತೂರಿನ ಜನಪ್ರಿಯ ಶಾಸಕಿ. ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ, ಶಿವರಾಮ ಕಾರಂತರ ಕಾರ್ಯಕ್ಷೇತ್ರ ಬಾಲವನ , ಬಿರುಮಲೆ […]

ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರ ಲೋಕಾರ್ಪಣೆ

Monday, March 26th, 2018
PutturuGopura1

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಿರ್ಮಾಣಗೊಂಡಿರುವ ರಾಜಗೋಪುರ ಸಮರ್ಪಣೆ ಕಾರ್ಯಕ್ರಮ ಮಾ.25ರಂದು ಜರಗಿತು. ಬೆಳಿಗ್ಗೆ ಗಣಪತಿ ಹವನ, ಸಹಸ್ರ ಕಲಶಾಭಿಷೇಕ ನಂತರ ರಾಜಗೋಪುರ ಸಮರ್ಪಣೆ, ಉದ್ಘಾಟನೆ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ಸಂಪುಟ ನರಸಿಂಹಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ರಾಜ್ಯ ಸಂಸದೀಯ ಕಾರ್ಯದರ್ಶಿಯಾಗಿರುವ ಶಾಸಕಿ ಶಕುಂತಳಾ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ. […]

ಅಂಗವೈಕಲ್ಯತೆ ದೇಹಕ್ಕೆ ಮನಸ್ಸಿಗಲ್ಲ… ಸ್ವಚ್ಛ ಭಾರತಕ್ಕೆ ಕೊಡುಗೆ ನೀಡುತ್ತಿರುವ ವಿಶೇಷಚೇತನ ಜಗನ್‌

Saturday, March 3rd, 2018
swaccha-bharat

ಮಂಗಳೂರು: ರಾಮಕೃಷ್ಣ ಮಿಷನ್ ಜಿಲ್ಲೆಯಲ್ಲಿ ಹಮ್ಮಿಕೊಳ್ಳುತ್ತಿರುವ ಸ್ವಚ್ಛ ಭಾರತ್ ಕಾರ್ಯಕ್ರಮ ಈಗಾಗಲೇ ಸಾವಿರಾರು ಮನಸ್ಸುಗಳನ್ನು ಜಾಗೃತಗೊಳಿಸಿವೆ. ಜಾತಿ, ಧರ್ಮ ಮರೆತು ಶಿಕ್ಷಕರು, ವಿದ್ಯಾರ್ಥಿಗಳು, ಗೃಹಿಣಿಯರು, ಐಟಿ ಸಿಬಂದಿ, ರಿಕ್ಷಾ ಚಾಲಕರು, ಜನಸಾಮಾನ್ಯರು, ಅಷ್ಟೇ ಏಕೆ ಜಪಾನಿನ ಉದ್ಯಮಿಯೊಬ್ಬರು ಕೂಡಾ ಈ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ಭಾರತೀಯರಿಗೆ ಸ್ವಚ್ಛತೆಯ ಪಾಠ ಹೇಳಿದ್ದಾರೆ. ಇತ್ತೀಚೆಗೆ ಯುವಕನೊಬ್ಬ ಕಸಗಳನ್ನು ಎಲ್ಲೆಂದರಲ್ಲಿ ಬಿಸಾಕುವ ಕಚೇರಿಗೇ ಕಸಗಳನ್ನು ಸುರಿಯುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆಯ ಸುರಿಮಳೆಗೆ ಪಾತ್ರರಾಗಿದ್ದರು. ಹೀಗೆ ಮಠದ ಸ್ವಚ್ಛತಾ ಅಭಿಯಾನ ದೇಶವ್ಯಾಪಿ […]

ಮಹದಾಯಿ: ಬಂದ್‍ಗೆ ಕರೆ ಕೊಟ್ಟಿರುವುದು ಏಕೆಂದು ಗೊತ್ತಿಲ್ಲ?

Monday, December 25th, 2017
sadananda

ಪುತ್ತೂರು: ‘ಮಹದಾಯಿ ವಿಚಾರದಲ್ಲಿ ಸಿದ್ಧರಿಲ್ಲದವರನ್ನು ಇಂದು ಸಿದ್ಧಗೊಳಿಸುವ ಕೆಲಸ ಆಗಿದೆ. ಇದು ದೊಡ್ಡ ಪರಿವರ್ತನೆ. ಮನೋಹರ್ ಪರಿಕ್ಕರ್ ಅವರ ಸೂತ್ರವನ್ನು ಮಹಾದಾಯಿ ಹೋರಾಟಗಾರರು ಕೂಡ ಒಪ್ಪಿದ್ದಾರೆ. ಹೀಗಿದ್ದರೂ ಇದೇ 27ರಂದು ಬಂದ್‍ಗೆ ಕರೆ ಕೊಟ್ಟಿರುವುದು ಏಕೆಂದು ಗೊತ್ತಿಲ್ಲ’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು. ‘ಮಹಾದಾಯಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿಲ್ಲ. ಸಂಧಾನ ಮಾತುಕತೆ ನಡೆಸಿ ಎಂದು ಸಚಿವರಾದ ಎಂ.ಬಿ. ಪಾಟೀಲ್, ಎಚ್.ಕೆ. ಪಾಟೀಲ್ ಅವರಂಥವರೇ ಹಿಂದೆ ಹೇಳಿದ್ದರು. ಈಗ ಬಿ.ಎಸ್. ಯಡಿಯೂರಪ್ಪ ಅದೇ ಕೆಲಸ […]