ತಣ್ಣೀರುಬಾವಿ ಮೊಹಿಯುದ್ದೀನ್ ಜುಮಾ ಮಸೀದಿ ಆಡಳಿತ ಕಮಿಟಿ ಮುಂದುವರಿಸಲು ಸಭೆಯಲ್ಲಿ ಒಮ್ಮತ

Tuesday, September 29th, 2020
chokkabettu

ಮಂಗಳೂರು  : ತಣ್ಣೀರುಬಾವಿ ಮೊಹಿಯುದ್ದೀನ್ ಜುಮಾ ಮಸೀದಿ 8ನೇ ಬ್ಲಾಕ್ ಚೊಕ್ಕಬೆಟ್ಟು, ಇದರ ಆಡಳಿತ ಕಮಿಟಿಯ ಮಹಾಸಭೆಯು ದಿನಾಂಕ 25.09.2020 ಶುಕ್ರವಾರ ಜುಮಾ ನಮಾಝ್ ಬಳಿಕ ಜಮಾಹತ್ ಅಧ್ಯಕ್ಷರಾದ ಜನಾಬ್ ಅಮೀರ್ ಹುಸೇನ್ ರವರ ಘನ ಅಧ್ಯಕ್ಷತೆಯಲ್ಲಿ ಹಾಗೂ ಖತೀಬರಾದ ಯು.ಕೆ.ಅಬ್ದುಲ್ ಅಝೀಝ್ ದಾರಿಮಿಯವರ ಫಾತಿಹಾ, ದುಃಅ ದೊಂದಿಗೆ ಸಭೆಯನ್ನು ಪ್ರಾರಂಭಿಸಲಾಯಿತು. ಈಗಿರುವಂತಹ ಕಮಿಟಿಯನ್ನು ಮುಂದಿನ 31.03.2022ರ ತನಕ ಮುಂದುವರಿಸಲು ಸಭೆಯಲ್ಲಿ ಒಮ್ಮತದಿಂದ ಅಂಗೀಕರಿಸಲಾಯಿತು.

ಮಂಗಳೂರು ಏರ್‌ ಇಂಡಿಯಾ ವಿಮಾನ ದುರಂತಕ್ಕೆ ಹತ್ತು ವರ್ಷ, ನಾಳೆ ತಣ್ಣೀರುಬಾವಿ ಸ್ಮಾರಕದಲ್ಲಿ ಸಂಸ್ಮರಣೆ ಕಾರ್ಯಕ್ರಮ

Thursday, May 21st, 2020
Air-Crash

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2010ರ ಮೇ 22ರ ಮುಂಜಾನೆ ಏರ್‌ ಇಂಡಿಯಾ ವಿಮಾನ ರನ್‌ವೇಯಿಂದ ಜಾರಿ ಕೆಳಕ್ಕೆ ಬಿದ್ದು ಸಂಭವಿಸಿದ ಮಹಾ ದುರಂತಕ್ಕೆ ಶುಕ್ರವಾರಕ್ಕೆ 10 ವರ್ಷ ಪೂರ್ಣವಾಗುತ್ತದೆ. ದೇಶದ ನಾಗರಿಕ ವಿಮಾನಯಾನ ರಂಗದಲ್ಲಿಯೇ ಇದೊಂದು ಮರೆಯಲಾಗದ ದುರಂತ. ದುರಂತದಲ್ಲಿ ಪೈಲಟ್‌, ಸಿಬಂದಿ ಸೇರಿ 158 ಮಂದಿ ಮೃತಪಟ್ಟಿದ್ದರು. ಆ ವಿಮಾನದಲ್ಲಿ ಒಟ್ಟು 135 ಮಂದಿ ವಯ ಸ್ಕರು, 19 ಮಕ್ಕಳು ಹಾಗೂ 4 ಶಿಶುಗಳು, 6 ಮಂದಿ ವಿಮಾನ ಸಿಬಂದಿ ಸೇರಿ ಒಟ್ಟು […]

ಮಂಗಳೂರಲ್ಲಿ ಮತ್ತೆ ಗ್ಯಾಂಗ್‌ ವಾರ್‌… ತಮ್ಮನ ಮೇಲಿನ ಸೇಡಿಗೆ ಅಣ್ಣನ ಹತ್ಯೆ

Monday, January 22nd, 2018
murdered

ಮಂಗಳೂರು: ನಗರದಲ್ಲಿ ಮತ್ತೆ ಗ್ಯಾಂಗ್ ವಾರ್‌ ನಡೆದಿದೆ. ಗ್ಯಾಂಗ್‌ ವಾರ್‌‌ನಲ್ಲಿ ಯುವಕನೋರ್ವನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ನಗರದ ಹೊರವಲಯದ ತಣ್ಣೀರುಬಾವಿ ಸಮೀಪ ಗ್ಯಾಂಗ್ ವಾರ್ ನಡೆದಿದ್ದು, ಮೆಂಡನ್ ಗ್ಯಾಂಗ್‌ನ ರೌಡಿ ಶೀಟರ್ ಭರತೇಶ್ ಮೇಲಿನ ದ್ವೇಷಕ್ಕೆ ಭರತೇಶ್‌ನ ಅಣ್ಣ ಶಿವರಾಜ್‌ನನ್ನು ಕೊಲೆ ಗೈಯಲಾಗಿದೆ. ಹಾಗೆಯೇ ಸ್ಥಳೀಯ ವ್ಯಕ್ತಿಗಳ ಜೊತೆಗಿನ ದ್ವೇಷವು ಹತ್ಯೆಗೆ ಕಾರಣವೆಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ […]

ಮೊಗವೀರ ಸಂಯುಕ್ತ ಸಭಾದ ಆಶ್ರಯದಲ್ಲಿ ಸಾಮೂಹಿಕ ಸಮುದ್ರ ಪೂಜೆ

Friday, August 19th, 2016
samudra-pooje

ಪಣಂಬೂರು: ಏಳುಪಟ್ಣ ಮೊಗವೀರ ಸಂಯುಕ್ತ ಸಭಾದ ಆಶ್ರಯದಲ್ಲಿ ಸಾಮೂಹಿಕ ಸಮುದ್ರ ಪೂಜೆ ಗುರುವಾರ ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ಜರಗಿತು. ಕದ್ರಿ ಸುವರ್ಣ ಕದಳೀ ಮಠದ ರಾಜಯೋಗಿ ನಿರ್ಮಲನಾಥಜೀ ಮಹಾರಾಜರು ಸಮುದ್ರದ ಮಡಿಲಿಗೆ ಹಾಲು, ಸೀಯಾಳ, ಫ‌ಲಪುಷ್ಪಗಳನ್ನು ಅರ್ಪಿಸಿ ಮತ್ಸ್ಯಸಂಪತ್ತು ವೃದ್ಧಿಗೆ ಹಾಗೂ ಮೀನುಗಾರಿಕೆ ಸಂದರ್ಭ ಯಾವುದೇ ವಿಘ್ನಗಳು ಎದುರಾಗದಿರಲಿ ಎಂದು ಪ್ರಾರ್ಥಿಸಿದರು. ಬೃಹತ್‌ ಶೋಭಾಯಾತ್ರೆ ಆರಂಭದಲ್ಲಿ ಬೊಕ್ಕಪಟ್ಣ ಜಂಕ್ಷನ್‌ನಿಂದ ತಣ್ಣೀರುಬಾವಿ ತನಕ ಬೃಹತ್‌ ಶೋಭಾಯಾತ್ರೆ ನಡೆಯಿತು. ಹಾಲು, ಸೀಯಾಳ, ಫ‌ಲಪುಷ್ಪಗಳೊಂದಿಗೆ ಹೊರಟ ಯಾತ್ರೆಯು ಬೊಕ್ಕಪಟ್ಣ ಬ್ರಹ್ಮ ಬೊಬ್ಬರ್ಯ […]

ತಣ್ಣೀರುಬಾವಿ ತೂಗು ಸೇತುವೆಗೆ ರೂ. 6.00 ಕೋಟಿ ಬಿಡುಗಡೆ.- ಜೆ. ಆರ್. ಲೋಬೊ.

Friday, April 17th, 2015
Hanging Bridge

ಮಂಗಳೂರು : ಕರ್ನಾಟಕ ರಾಜ್ಯ ಸರಕಾರದ ಲೋಕೋಪಯೋಗಿ ಇಲಾಖೆಯಿಂದ ರೂ. 6.00 ಕೋಟಿ ಅನುದಾನ ತಣ್ಣಿರುಬಾವಿ-ಸುಲ್ತಾನ್ ಬತ್ತೇರಿ ತೂಗು ಸೇತುವೆ ಕಾಮಗಾರಿಗೆ ಬಿಡುಗಡೆ ಮಾಡಲಾಗಿದೆ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ.ಆರ್. ಲೋಬೊ ರವರು ಮಾಧ್ಯಮದ ಜೊತೆ ಮಾತನಾಡುತ್ತಾ ಹೇಳಿದರು. ಹಲವು ವರುಷಗಳಿಂದ ಅನುದಾನ ಅನಿಶ್ಚಿತತೆಯಲ್ಲಿ ಕಾಮಗಾರಿಯು ನೆನೆಗುದಿಗೆ ಬಿದ್ದಿದ್ದು, ಇದಕ್ಕೆ ಮರುಜೀವ ಕೊಡುವುದು ನನ್ನ ಯೋಜನೆಯಾಗಿತ್ತು. 410 ಮೀ. ಉದ್ದ, 10 ಅಡಿ ಅಗಲದ ಸುಮಾರು ರೂ. 12.00 ಕೋಟಿ ವೆಚ್ಚದ ತಣ್ಣೀರುಬಾವಿ […]

ಪ್ರಿಯಕರನ ಜೊತೆಗೂಡಿ ಪತ್ನಿಯಿಂದ ಗಂಡನ ಕೊಲೆ

Friday, June 28th, 2013
Scrape Merchant Murder

ಪಣಂಬೂರು : ಕುದ್ರೋಳಿಯ ಗುಜರಿ ವ್ಯಾಪಾರಿ ಅಬ್ದುಲ್‌ ರಶೀದ್‌ ನಿಗೂಢ ಸಾವು ಪ್ರಕರಣ ಕೊಲೆ ಪ್ರಕರಣವಾಗಿ ತಿರುವು ಪಡೆದಿದ್ದು  ಪೊಲೀಸರು ಪತ್ನಿ ಸಹಿತ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ರಶೀದ್‌ ಪತ್ನಿ ನಸೀಮಾ (36),ಆಕೆಯ ಪ್ರಿಯಕರ ಮಹಮ್ಮದ್‌ ಇಮ್ರಾನ್‌(32) ಹಾಗೂ ನಸೀಮಾಳ ತಂಗಿಯ ಗಂಡ ಸಲೀಂ (38) ಬಂಧಿತರು. ಆರೋಪಿಗಳಾದ ಅಬ್ದುಲ್ಲಾ ಯಾನೆ ಕಾಲಿಯಾ ಮತ್ತು ಮುಕ್ರಿ ಸಿದ್ದಿಕ್‌ ಪರಾರಿಯಾಗಿದ್ದಾರೆ. ಜೂನ್‌ 21ರಂದು ತಣ್ಣೀರುಬಾವಿ ಬಳಿ ಅಬ್ದುಲ್‌ ರಶೀದ್‌ ಅವರ ಮೃತ ದೇಹ ಪತ್ತೆಯಾಗಿತ್ತು. ಸೆಂಟ್ರಲ್‌ ಮಾರ್ಕೆಟ್‌ ಬಳಿ […]

ಬಂದರು ಹಾಗೂ ಒಳನಾಡು ಜಲಸಾರಿಗೆ,ಮೀನುಗಾರಿಕೆ ಇಲಾಖೆಗೆ ರೂ.325.15 ಲಕ್ಷ ಹೆಚ್ಚುವರಿ ಅನುದಾನ

Wednesday, March 30th, 2011
ಶ್ರೀ ಕೃಷ್ಣ ಜೆ.ಪಾಲೇಮಾರ್

ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿ ಹಾಗೂ ತಾಲ್ಲೂಕಿನಲ್ಲಿ ಮೀನುಗಾರಿಕೆಗೆ ಸಂಬಂಧಿಸಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಕರ್ನಾಟಕ ಸರ್ಕಾರದ 2010-11 ನೇ ಸಾಲಿನಲ್ಲಿ ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಗೆ 8 ಕಾಮಗಾರಿಗಳ ಅನುಷ್ಠಾನಕ್ಕಾಗಿ ರೂ.123.45 ಲಕ್ಷ ಹಾಗೂ ಮೀನುಗಾರಿಕಾ ಇಲಾಖೆಗೆ 14 ಕಾಮಗಾರಿಗಳಿಗೆ ರೂ.201.70ಲಕ್ಷ,ಹೆಚ್ಚುವರಿ ಅನುದಾನ ಒದಗಿಸಿದೆಯೆಂದು ರಾಜ್ಯದ ಜೀವಿಶಾಸ್ತ್ರ,ಪರಿಸರ,ಬಂದರು,ವಿಜ್ಞಾನ ಮತ್ತು ತಂತ್ರಜ್ಞಾನ, ಮೀನುಗಾರಿಕೆ ಹಾಗೂ ಜಲಸಾರಿಗೆ  ಸಚಿವರಾದ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೃಷ್ಣ ಜೆ.ಪಾಲೇಮಾರ್  ತಿಳಿಸಿರುತ್ತಾರೆ. ಮಂಗಳೂರು ತಣ್ಣೀರುಬಾವಿ ಬೆಂಗ್ರೆ […]

ತಣ್ಣೀರುಬಾವಿ ಪ್ರದೇಶದ ನಿವಾಸಿಗಳಿಗೆ ಶಾಶ್ವತ ಮನೆ ನಂಬ್ರ ನೀಡಲು ಪ್ರತಿಭಟನೆ

Monday, November 29th, 2010
ಶಾಶ್ವತ ಮನೆ ನಂಬ್ರ ನೀಡಲು ಪ್ರತಿಭಟನೆ

ಮಂಗಳೂರು: ತಣ್ಣೀರುಬಾವಿ ಪ್ರದೇಶದ ನಿವಾಸಿಗಳಿಗೆ ಶಾಶ್ವತ ಮನೆ ನಂಬ್ರ ನೀಡಲು ಒತ್ತಾಯಿಸಿ ಮ.ನ.ಪಾ ಚಲೋ ಮತ್ತು ಪ್ರತಿಭಟನಾ ಮೆರವಣಿಗೆಯು ಇಂದು ಬೆಳಿಗ್ಗೆ ಬೆಸೆಂಟ್ ಜಂಕ್ಷನ್ ನಿಂದ ಹೊರಟು ಮ.ನ.ಪಾ ಕಚೇರಿಯ ವರೆಗೆ ನಡೆಯಿತು. ಬಳಿಕ ಪ್ರತಿಭಟನಾಕಾರರು ಮ.ನ.ಪಾ ಕಚೇರಿಯ ಎದುರು ಪ್ರತಿಭಟನಾ ಪ್ರದರ್ಶನದ ನಡೆಸಿದರು. ಪ್ರತಿಭಟನೆಯನ್ನುದ್ದೇಶಿಸಿ ಲಿಂಗಪ್ಪ ನಂತೂರು, ಕಾರ್ಯದರ್ಶಿ, ದಲಿತ ಹಕ್ಕುಗಳ ಹೋರಾಟ ಸಮಿತಿ, ಮಂಗಳೂರು, ಇವರು ಮಾತನಾಡಿ ಮಂಗಳೂರು ಮಹಾನಗರ ಪಾಲಿಕೆಯ ಸುಂದರ ಕಡಲ ಕಿನಾರೆಯ ಪ್ರದೇಶವಾದ  ತಣ್ಣೀರುಬಾವಿಯು ಗುರುಪುರ ನದಿ ಮತ್ತು ಅರಬ್ಬಿ […]