Blog Archive

ಧರ್ಮಸ್ಥಳದಲ್ಲಿ ಮಂಜೂಷಾ ವಸ್ತು ಸಂಗ್ರಹಾಲಯ ಲೋಕಾರ್ಪಣೆ, ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವ

Thursday, October 25th, 2018
Manjusha Museum

ಉಜಿರೆ: ಕೇಂದ್ರ ಸರ್ಕಾರದ ನೂರು ಕೋಟಿ ರೂ. ಅನುದಾನದೊಂದಿಗೆ ಬಿ.ಸಿ.ರೋಡ್-ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿಗೊಳಿಸಲಾಗು ವುದು. 2019 ರ ಫೆಬ್ರವರಿಯಲ್ಲಿ ಧರ್ಮಸ್ಥಳದಲ್ಲಿ ನಡೆಯಲಿರುವ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಧರ್ಮಸ್ಥಳವನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 23.5 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಪ್ರಕಟಿಸಿದರು. ಧರ್ಮಸ್ಥಳದಲ್ಲಿ ಬುಧವಾರ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಆಚರಣೆ ಸಂದರ್ಭ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ […]

ಧರ್ಮಸ್ಥಳದಲ್ಲಿ “ಮಂಜೂಷಾ” ವಸ್ತು ಸಂಗ್ರಹಾಲಯ ಬುಧವಾರ ಲೋಕಾರ್ಪಣೆ

Tuesday, October 23rd, 2018
Manjusha Museum

ಧರ್ಮಸ್ಥಳ : ವಿವಿಧ ವಿನ್ಯಾಸದ ಆಭರಣಗಳು, ಪೂಜಾ ಪರಿಕರಗಳು, ಕಲ್ಲಿನ ಹಾಗೂ ಲೋಹದ ಕಲಾಕೃತಿಗಳು, ವಿಂಟೇಜ್ ಕಾರುಗಳು, ಚಿತ್ತಾಕರ್ಷಕ ವರ್ಣಚಿತ್ರಗಳು, ಗೃಹ ಬಳಕೆಯ ವಸ್ತುಗಳು, ವೈವಿಧ್ಯಮಯ ಕ್ಯಾಮರಾಗಳು, ರೈಲ್ವೆ ಎಂಜಿನ್, ವಿಮಾನ, ಮರದ ರಥಗಳು, ಪೆನ್ನುಗಳು, ಕನ್ನಡಕಗಳು – ಹೀಗೆ ವೈವಿಧ್ಯಮಯ ಅಪೂರ್ವ ವಸ್ತುಗಳ ಭಂಡಾರ “ಮಂಜೂಷಾ” ವಸ್ತು ಸಂಗ್ರಹಾಲಯ. ಅಪಾರ ಜ್ಞಾನದ ಆಕರ, ಮಾಹಿತಿಯ ಕಣಜವಾಗಿದ್ದು ಎಲ್ಲರ ಕಣ್ಮನ ಸೆಳೆಯುತ್ತಿದೆ. ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ, ವಿಜ್ಞಾನ, ಸಂಗೀತ, ಯಕ್ಷಗಾನ, ಭೂತಾರಾಧನೆ – ಹೀಗೆ ಬದುಕಿನ […]

ಧರ್ಮಸ್ಥಳ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ದಶಲಕ್ಷಣ ಪರ್ವ ಆಚರಣೆ

Thursday, October 4th, 2018
darmastala

ಧರ್ಮಸ್ಥಳ: ದಶ ಲಕ್ಷಣ ಪರ್ವ ಆಚರಣೆಯ ಸಂದರ್ಭ ಪೂಜಾ ಕಾರ್ಯಕ್ರಮವು ಧರ್ಮಸ್ಥಳ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ನಡೆಯಿತು. ಇದೇ ಸಂದರ್ಭ ದಶದರ್ಮಗಳ ಆಚರಣೆ ಮತ್ತುಅದರ ಮಹತ್ವದಕುರಿತಾಗಿ ಮತ್ತು ಧಾರ್ಮಿಕ ಉಪನ್ಯಾಸವನ್ನು ಶ್ರೀಮತಿ ಹೇಮಾವತಿ ಹೆಗ್ಗಡೆಯವರು ವಿವರವಾಗಿ ಉಪಕಥೆಗಳ ಮೂಲಕ ಸವಿವರವಾಗಿತಿಳಿಸಿದರು.ದಶಧರ್ಮಗಳಾದ ಉತ್ತಮಕ್ಷಮ, ಉತ್ತಮ ಮಾರ್ದವ, ಉತ್ತಮ ಆರ್ಜವ, ಉತ್ತಮ ಶೌಚ, ಉತ್ತಮ ಸತ್ಯ, ಉತ್ತಮ ಸಂಯಮ, ಉತ್ತಮತಪ, ಉತ್ತಮತ್ಯಾಗ, ಉತ್ತಮ ಆಕಿಂಚನ್ಯ, ಉತ್ತಮ ಬ್ರಹ್ಮಚರ್ಯ ಧರ್ಮUಳ ಪೂಜೆಗಳನ್ನು ಮಾಡುವುದು ಮಾತ್ರವಲ್ಲ, ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು […]

ನಾಯಕತ್ವ ಗುಣದೊಂದಿಗೆ ಆದರ್ಶ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು: ಡಿ. ವೀರೇಂದ್ರ ಹೆಗ್ಗಡೆ

Monday, October 1st, 2018
veerendra-hegade

ಉಜಿರೆ: ಮನಸ್ಸಿನ ನಿಯಂತ್ರಣದೊಂದಿಗೆ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ನಾಯಕತ್ವ ಗುಣದೊಂದಿಗೆ ಆದರ್ಶ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಶನಿವಾರ ಧರ್ಮಸ್ಥಳದಲ್ಲಿ ಭಜನಾ ಕಮ್ಮಟದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಭಜನೆಯಲ್ಲಿ ಸಾಹಿತ್ಯವಿದೆ. ಸಾಹಿತ್ಯದಲ್ಲಿ ಸಾರ್ಥಕ ಬದುಕಿಗೆ ಬೇಕಾದ ಸಂದೇಶವಿದೆ. ಹಾಡುಗಳ ಅರ್ಥವನ್ನು ತಿಳಿದು ಹಾಡಬೇಕು. ನಿಜ ಜೀವನದಲ್ಲಿಯೂ ಅದನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಯಾವುದೇ ಸಮಸ್ಯೆ ಬಂದಾಗ ಅದನ್ನು ಆತ್ಮವಿಶ್ವಾಸದಿಂದ ಎದುರಿಸುವ ಶಕ್ತಿ-ತಾಳ್ಮೆಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು. […]

ಧರ್ಮಸ್ಥಳದಲ್ಲಿ 20 ನೇ ವರ್ಷದ ಭಜನಾ ಕಾರ್ಯಕ್ರಮ: ಮುಖ್ಯ ಅತಿಥಿಯಾಗಿ ಪುನೀತ್ ರಾಜ್‍ಕುಮಾರ್

Monday, October 1st, 2018
punith

ಮಂಗಳೂರು: ಧರ್ಮಸ್ಥಳದಲ್ಲಿ ನಡೆದ 20 ನೇ ವರ್ಷದ ಭಜನಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ನಟ ಪುನೀತ್ ರಾಜ್‍ಕುಮಾರ್ ಭಜನಾ ಪದ ಹಾಡುವ ಮೂಲಕ ಗಮನಸೆಳೆದರು. ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಏಳು ದಿನಗಳ ಕಾಲ ನಡೆದ ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ಕಾರ್ಯಕ್ರಮಕ್ಕೂ ಮೊದಲು ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸುಮಾರು 300 ಭಜನಾ ತಂಡಗಳು ಹಾಗೂ 3000 ಕ್ಕೂ ಅಧಿಕ ಭಜನಾ ಪಟುಗಳಿಂದ ಶೋಭಾಯಾತ್ರೆ ನಡೆಯಿತು. ನಂತರ ಅಮೃತವರ್ಷಿಣಿ […]

ಲೋಕಕಲ್ಯಾಣಕ್ಕಾಗಿ ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿಗೆ ಮಹಾಮಜ್ಜನ ನಡೆಸಲಾಗುವುದು: ಡಾ. ಡಿ. ವೀರೇಂದ್ರ ಹೆಗ್ಗಡೆ

Wednesday, September 12th, 2018
veerendra-hegade

ಬೆಳ್ತಂಗಡಿ: ಲೋಕಕಲ್ಯಾಣಾರ್ಥವಾಗಿ 2019ರ ಫೆಬ್ರುವರಿಯಲ್ಲಿ ಧರ್ಮಸ್ಥಳದಲ್ಲಿರುವ ಭಗವಾನ್ ಬಾಹುಬಲಿಗೆ ಮಹಾಮಜ್ಜನ ನಡೆಸಲಾಗುವುದು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಧರ್ಮಸ್ಥಳದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, 1982ರಲ್ಲಿ ಪ್ರತಿಷ್ಠಾಪನೆಗೊಂಡ 48 ಅಡಿ ಎತ್ತರದ ಬಾಹುಬಲಿಗೆ ಮೊದಲ ಮಸ್ತಕಾಭಿಷೇಕ ನಡೆಸಲಾಗಿತ್ತು. ಬಳಿಕ 1994, 2007ರಲ್ಲಿ ಮಸ್ತಕಾಭಿಷೇಕ ಕೈಗೊಳ್ಳಲಾಗಿತ್ತು. ಇದೀಗ 2019ರಲ್ಲಿ 4ನೇ ಬಾರಿಗೆ ಮಹಾಭಿಷೇಕವನ್ನು ವರ್ಧಮಾನ ಸಾಗರಜೀ ಮಹಾರಾಜ್, ಪುಷ್ಪದಂತ ಸಾಗರ್‍ಜೀ ಮಹಾರಾಜ್ ಮತ್ತು ಹದಿನೈದು ಮಂದಿ ದಿಗಂಬರ ಮುನಿಗಳ ನೇತೃತ್ವದಲ್ಲಿ ನೆರವೇರಿಸಲಾಗುವುದು. ಜೀನೇ ಔರ್ […]

ಬಾಲಕಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ..!

Wednesday, September 5th, 2018
suicide

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕಬ್ಲಾಜೆಯಲ್ಲಿ ಬಾಲಕಿಯೊಬ್ಬಳು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಬಾಲಕಿಗೆ 16 ವರ್ಷವಾಗಿತ್ತು ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯ ಯಾವುದೋ ಕಾರಣದಿಂದ ಮನನೊಂದು ಸೀಮೆಎಣ್ಣೆ ಮೈಗೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ ಎನ್ನಲಾಗಿದೆ. ತೀವ್ರ ಸುಟ್ಟ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಮೃತರ ತಾಯಿ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧರ್ಮಸ್ಥಳ ಕನ್ಯಾಡಿಯಲ್ಲಿ ರಾಷ್ಟ್ರೀಯ ಧರ್ಮಸಂಸದ್​ ವೈಭವದ ಶೋಭಯಾತ್ರೆ

Monday, September 3rd, 2018
darmastala

ಮಂಗಳೂರು: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಕನ್ಯಾಡಿಯಲ್ಲಿ ರಾಷ್ಟ್ರೀಯ ಧರ್ಮಸಂಸದ್ ಪ್ರಯುಕ್ತ ವೈಭವದ ಶೋಭಯಾತ್ರೆ ನಡೆಯಿತು. ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಸ್ವಾಮೀಜಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ ದಶಮಾನೋತ್ಸವ ಪ್ರಯುಕ್ತ ಈ ರಾಷ್ಟ್ರೀಯ ಧರ್ಮಸಂಸದ್ ನಡೆಯುತ್ತಿದೆ. ಇದರಂಗವಾಗಿ ಉಜಿರೆಯಿಂದ ಕನ್ಯಾಡಿಯವರೆಗೆ ಶೋಭಯಾತ್ರೆ ನಡೆಯಿತು. ಧರ್ಮಸಂಸದ್ಗೆ ಸಾಧುಸಂತರು, ಯತಿವರ್ಯರು , ಮಹಾಮಂಡಲೇಶ್ವರರು, ಧರ್ಮ ಪೀಠಾಧೀಶ್ವರರು ಸೇರಿದಂತೆ ಸಾವಿರಾರು ಮಂದಿ ಶೋಭಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇಂದು ಬೆಳಗ್ಗೆ ಧರ್ಮಸಂಸದ್ ಉದ್ಘಾಟನೆಗೊಳ್ಳಲಿದ್ದು , ರಾತ್ರಿಯವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಮಳೆ ಹಾನಿಯೂ ಸಾಕಷ್ಟು ಆಗಿದೆ..ಇದಕ್ಕೆ ಸೂಕ್ತ ಪರಿಹಾರ ಕೈಗೊಳುತ್ತೆವೆ: ಕುಮಾರಸ್ವಾಮಿ

Tuesday, August 14th, 2018
kumarswamy-2

ಮಂಗಳೂರು: ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. 15 ವರ್ಷದ ಬಳಿಕ ಮಳೆ ವಾಡಿಕೆಗಿಂತ ಹೆಚ್ಚಾಗಿದ್ದು, ಮಳೆ ಹಾನಿಯೂ ಸಾಕಷ್ಟು ಆಗಿದೆ. ಈಗಾಗಲೇ ಪರಿಹಾರವನ್ನೂ ನೀಡಿದ್ದೇವೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದರು. ಶ್ರಾವಣದ ಮೊದಲ ಸೋಮವಾರದಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಅವರು ಮಾಧ್ಯಮದವರ ಜತೆ ಮಾತನಾಡಿ, ಜಿಲ್ಲಾವಾರು ಮಳೆ ಹಾನಿ ಸಭೆ ನಡೆಸಲು ನೀತಿ ಸಂಹಿತೆ ಸಮಸ್ಯೆ ಇದೆ. ಹಾಗಾಗಿ ಜಿಲ್ಲೆಯ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಸೂಕ್ತ ಪರಿಹಾರ ನೀಡುವ ಭರವಸೆ ನೀಡುತ್ತೇನೆ ಎಂದರು. 75%ಕ್ಕಿಂತ ಅಧಿಕ ಹಾನಿಯಾದ ಮನೆಗಳನ್ನು […]

ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಕುಮಾರಸ್ವಾಮಿ ಕುಟುಂಬ..!

Tuesday, August 14th, 2018
kumarswamy

ಮಂಗಳೂರು: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಒಂದು ದಿನದ ಮುಂಚೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಧರ್ಮಸ್ಥಳ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದ್ದರು. ಇಂದು ಕುಟುಂಬ ಸಮೇತರಾಗಿ ಧರ್ಮಸ್ಥಳ ಮಂಜುನಾಥೇಶ್ವರ ಕ್ಷೇತ್ರದಲ್ಲಿ ದರ್ಶನ ಪಡೆದರು. ಹಾಸನದಿಂದ ರಸ್ತೆ ‌ಮಾರ್ಗವಾಗಿ ಧರ್ಮಸ್ಥಳಕ್ಕೆ ಬಂದ ಸಿಎಂ ಕುಮಾರಸ್ವಾಮಿ, ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮುಖ್ಯಮಂತ್ರಿಯವರ ಕುಟುಂಬ ಆಗಮನದ ವೇಳೆ ದೇವಾಲಯದ ವತಿಯಿಂದ ಸ್ವಾಗತಿಸಲಾಯಿತು. ಮಾಜಿ ಪ್ರಧಾನಿ ದೇವೆಗೌಡ, ತಾಯಿ ಚೆನ್ನಮ್ಮ ಹಾಗೂ ಪತ್ನಿ ಅನಿತಾ ಕುಮಾರಸ್ವಾಮಿಯವರೊಂದಿಗೆ ದೇವರ ದರ್ಶನ ಪಡೆದು […]