Blog Archive

ವಂಶ, ಜಾತಿ, ಅವಸರ, ಕಾಂಗ್ರೆಸ್ ಜೀವಾಳ

Wednesday, February 19th, 2014
Narendra-Modi

ಮಂಗಳೂರು/ ದಾವಣಗೆರೆ: ವಂಶವಾದ, ಜಾತಿವಾದ, ಸಂಪ್ರದಾಯವಾದ, ಅವಸರವಾದ. ಈ ನಾಲ್ಕೂ ಅಂಶಗಳು ಕಾಂಗ್ರೆಸ್‌ನಲ್ಲಿ ಮೇಳೈಸಿವೆ. ಇದುವೇ ದೇಶದ ಅಭಿವೃದ್ಧಿಗೆ ತೊಡಕಾಗಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಮಂಗಳವಾರ ದಾವಣಗೆರೆಯ ಹೈಸ್ಕೂಲ್ ಮೈದಾನದ ಹಾಗೂ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಆಯೋಜಿಸಿದ್ದ ‘ಭಾರತ ಗೆಲ್ಲಿಸಿ’ ಪ್ರತ್ಯೇಕ ಸಮಾವೇಶದಲ್ಲಿ ಕಾಂಗ್ರೆಸ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ವಿಶೇಷವೆಂದರೆ ಇದೇ ಮೊದಲ ಬಾರಿಗೆ ಯಡಿಯೂರಪ್ಪ ಅವರನ್ನು ಗುಣಗಾನ ಮಾಡಿದ್ದು. […]

ಮೋದಿ ಸಮಾವೇಶಕ್ಕೆ ಜನ ಜಾತ್ರೆ

Tuesday, February 18th, 2014
Modi

ಮಂಗಳೂರು: ಕೇಂದ್ರ ಮೈದಾನದಲ್ಲಿ ಫೆ.18ರಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ಮಾತುಕೇಳಲು ಒಂದುವರೆ ಲಕ್ಷಕ್ಕೂ ಮಿಕ್ಕಿ ಜನ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಹೇಳಿದೆ. ದಕ್ಷಿಣ ಕನ್ನಡ 1,676 ಬೂತ್ ಮತ್ತು ಉಡುಪಿಯ 1 ಸಾವಿರ ಬೂತ್‌ಳಿಂದಲೂ ಜನ ಸ್ವಯಂ ಪ್ರೇರಿತರಾಗಿ ವಾಹನ ವ್ಯವಸ್ಥೆಯೊಂದಿಗೆ ಆಗಮಿಸಲಿದ್ದಾರೆ. ಇದಕ್ಕೆ  ಜಿಲ್ಲಾಡಳಿತ ನೆರವಿನೊಂದಿಗೆ ಸರ್ವ ಸಿದ್ಧತೆ ನಡೆಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಪ್ರತಾಪ್‌ಸಿಂಹ ನಾಯಕ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸಮಾವೇಶ ವೀಕ್ಷಿಸಲು ನಗರದಲ್ಲಿ 4 ಎಲ್‌ಇಡಿ ಅಳವಡಿಸಲಾಗಿದೆ. ಕೇಂದ್ರ ಮೈದಾನದ ಹೊರಗಡೆ […]

ಬಿಜೆಪಿ ಯುವಮೋರ್ಚಾ ಮಂಗಳೂರು ದಕ್ಷಿಣ ಸಮಿತಿಯಿಂದ ಕಾಲ್ನಡಿಗೆ ಜಾಥಾ

Saturday, November 16th, 2013
Yuva Morcha

ಮಂಗಳೂರು: ಬಿಜೆಪಿ ಯುವಮೋರ್ಚಾ ಮಂಗಳೂರು ದಕ್ಷಿಣ ಸಮಿತಿ ವತಿಯಿಂದ ನಗರದ ನೆಹರೂ ಮೈದಾನದಿಂದ ಕೊಡಿಯಾಲ್‌ಬೈಲ್‌ನಲ್ಲಿರುವ ಬಿಜೆಪಿ ಕಚೇರಿವರೆಗೆ, ಬೆಂಗಳೂರಿನಲ್ಲಿ ನ. 17 ರಂದು ನಡೆಯಲಿರುವ ‘ಭಾರತ ಗೆಲ್ಲಿಸಿ’ ಶಕ್ತಿಶಾಲಿ ಭಾರತಕ್ಕಾಗಿ ಬೃಹತ್‌ ಸಮಾವೇಶದ ಹಿನ್ನೆಲೆಯಲ್ಲಿ ಕಾಲ್ನಡಿಗೆ ಜಾಥಾ ನ15, ಶುಕ್ರವಾರ ನಡೆಯಿತು. ಜಾಥಾವನ್ನು ಉದ್ದೇಶಿಸಿ ಮಾತನಾಡಿದ ಸಂಸದ ನಳಿನ್‌ಕುಮಾರ್‌ ಕಟೀಲು ಮಕ್ಕಳಿಂದ ಹಿಡಿದು ಮುದುಕರ ವರೆಗೆ ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂದು ಉತ್ಸುಕರಾಗಿದ್ದಾರೆ. ಮೋದಿ ಅಲೆ ಸರ್ವ ಭಾರತೀರ ಹೃದಯದಲ್ಲಿ ಮೋದಿ ಮಿಳಿತಗೊಂಡಿದ್ದಾರೆ ಎಂದು ಹೇಳಿದರು. ಗುಜರಾತ್‌ನಲ್ಲಿ ಮೋದಿ […]

ಬಿಜೆಪಿ ಸಂಸದೀಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಡ್ವಾಣಿ

Monday, June 10th, 2013
lk advani

ನವದೆಹಲಿ: ಗೋವಾ ರಾಜಧಾನಿ ಪಣಜಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಣಿ ಸಭೆಗೆ ಗೈರು ಆಗಿದ್ದ ಆಡ್ವಾಣಿ,  ಸೋಮವಾರ ಬಿಜೆಪಿ ಸಂಸದೀಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಸಂಸದೀಯ ಮಂಡಳಿ ಅಧ್ಯಕ್ಷ ಸ್ಥಾನ ಸೇರಿದಂತೆ ಪಕ್ಷದ ಎಲ್ಲ ಸ್ಥಾನಗಳಿಗೂ ರಾಜೀನಾಮೆ ನೀಡಿದ್ದು, ರಾಜಿನಾಮೆ ಪತ್ರವನ್ನು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ತನ್ನ ಆಪ್ತರಲ್ಲಿ ರವಾನಿಸಿದ್ದಾರೆ. ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ 2014ರ ಚುನಾವಣಾ ಪ್ರಚಾರ ಸಮಿತಿಯ ಸಾರಥ್ಯ ವಹಿಸಿದ್ದರಿಂದ ತೀವ್ರ ಅಸಮಾಧಾನಗೊಂಡಿದ್ದ ಬಿಜೆಪಿ ಹಿರಿಯ ನಾಯಕ […]

ದೇಶ ಯಾರ ಕೈಯಲ್ಲಿ ಸುರಕ್ಷಿತ ನಿರ್ಧರಿಸಿ : ನರೇಂದ್ರ ಮೋದಿ

Friday, May 3rd, 2013
Narendra Modi

ಮಂಗಳೂರು : ಮಂಗಳೂರು ಸಹಿತ ಕರ್ನಾಟಕದಲ್ಲಿ ಕಳೆದ ಐದು ವರ್ಷಗಳ ಬಿಜೆಪಿ ಆಡಳಿತಾವಧಿಯಲ್ಲಿ ಸುಖಶಾಂತಿ, ನೆಮ್ಮದಿ ನೆಲೆಸಿದೆ. ಹಿಂದೆ ಮಂಗಳೂರಿನಿಂದ ಕೋಮು ಗಲಭೆ, ಕರ್ಫ್ಯೂ ಸುದ್ದಿಗಳೆ ಕೇಳಿಬರುತ್ತಿದ್ದು ಇಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಶಾಂತಿ ನೆಲೆಸಿಲ್ಲವೆ?, ಗಲಭೆ ನಿಂತು ಸಹೋದರ ಭಾವನೆಯನ್ನು ಸೃಷ್ಟಿ ಮಾಡಿಲ್ಲವೆ, ಬಿಜೆಪಿ ಆಡಳಿತಕ್ಕೆ ಬಂದರೆ ಸುಖ ಶಾಂತಿ ಸಾಧ್ಯ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದರು. ಅವರು ನಗರದ ನೆಹರು ಮೈದಾನದಲ್ಲಿ ಗುರುವಾರ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ಚುನಾವಣೆ ಪ್ರಚಾರ […]

ರಾಜ್ಯ ವಿಧಾನಸಭಾ ಚುನಾವಣೆ ಮೇ 2 ರಂದು ಜಿಲ್ಲೆಗೆ ಭೇಟಿ ನೀಡಲಿರುವ ನರೇಂದ್ರ ಮೋದಿ

Monday, April 29th, 2013
Nalin Kumar Kateel

ಮಂಗಳೂರು : ಮೇ 2 ರಂದು ಬಿಜೆಪಿಯ ಹಿರಿಯ ನಾಯಕ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮಂಗಳೂರಿಗೆ ಭೇಟಿ ನೀಡಲಿರುವುದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಅವರು ಇಂದು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಈ ವಿಷಯವನ್ನು ತಿಳಿಸುತ್ತಾ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ, ಚುನಾವಣಾ ಪ್ರಚಾರದ  ಹಿನ್ನಲೆಯಲ್ಲಿ  ಆಗಮಿಸಲಿರುವುದಾಗಿ ತಿಳಿಸಿದರು. ತಾಕತ್ತಿದ್ದರೆ ಮೋದಿಯನ್ನು ರಾಜ್ಯಕ್ಕೆ ಕರೆತನ್ನಿ ಎಂದು ಕೆಲವರು ಈ ಹಿಂದೆ ಸವಾಲನ್ನು ಹಾಕಿದ್ದು ಇದಕ್ಕೆ ಉತ್ತರವಾಗಿ ಅವರು ಮೇ 2 ರಂದು ಮಂಗಳೂರಿಗೆ […]