ಮಂಗಳೂರಿನಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಆಗಮಿಸುವ ನಮೋ ಪಕ್ಷ ಕಾರ್ಯಕರ್ತರಲ್ಲಿ ಹೊಸ ಹುರುಪು
Saturday, May 5th, 2018
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸಲಿದ್ದಾರೆ. ಮೇ 1ರಂದು ಉಡುಪಿಗೆ ಆಗಮಿಸಿದ್ದ ಮೋದಿ ಕಮಲ ಪಾಳಯದಲ್ಲಿ ಸಂಚಲನ ಉಂಟು ಮಾಡಿದ್ದರು. ಇದೀಗ ಮಂಗಳೂರಿನಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಆಗಮಿಸುವ ನಮೋ ಪಕ್ಷ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಲಿದ್ದಾರೆ. ಮಂಗಳೂರಿನ ಕೇಂದ್ರ(ನೆಹರೂ) ಮೈದಾನದಲ್ಲಿ ಸಂಜೆ ಆರು ಗಂಟೆಗೆ ಮೋದಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ಕರಾವಳಿಯಲ್ಲಿ ಇದು ಅವರ ಏಕೈಕ ಕಾರ್ಯಕ್ರಮವಾಗಲಿದೆ. ಪ್ರಧಾನಿ ನರೇಂದ್ರ ಮೋದಿಯ ಸ್ವಾಗತಕ್ಕೆ ಬಿಜೆಪಿ ವತಿಯಿಂದ ಭರ್ಜರಿ ತಯಾರಿಯನ್ನು ಮಾಡಲಾಗಿದೆ. ಈಗಾಗಲೇ […]