Blog Archive

ವಾರ್ ರೂಮ್ ನಲ್ಲಿ ಫುಡ್ ಕಿಟ್ ಇಲ್ಲ, ಫೋನಲ್ಲಿ ಆರ್ಡರ್ ಮಾಡಿದರೆ ಊಟ ಮಾತ್ರ

Wednesday, April 1st, 2020
Foodkit

ಮಂಗಳೂರು : ಕೇವಲ ದಿನಸಿ ಅಂಗಡಿಗಳು ತೆರೆದರೆ, ಖರೀದಿಗೆ ಬರುವವರಲ್ಲಿ ದುಡ್ಡು ಎಲ್ಲಿಂದ ಬರುತ್ತದೆ. ಮಧ್ಯಮ ವರ್ಗದ ಇತರ ವ್ಯಾಪಾರಿಗಳು, ಸಣ್ಣ ಉದ್ಯಮದ ಮಾಲೀಕರು ದುಡ್ಡು ಎಲ್ಲಿಂದ ತರಬೇಕು. ದಿನಸಿ ವ್ಯಾಪಾರಿಗಳು ಭರ್ಜರಿ ಹಣ ಮಾಡುತ್ತಾರೆ. ಅತ್ತ ನಳಿನ್ ಕುಮಾರ್ ಕಟೀಲ್ ರವರ ವಾರ್ ರೂಮ್ ನಲ್ಲಿ ಒಂದು ತಿಂಗಳ ಆಹಾರ ಪೊಟ್ಟಣ ಘೋಷಿಸಿದ ದಿನವೇ ಖಾಲಿಯಾಗಿದೆ. ಅಲ್ಲಿನ ಸಿಬ್ಬಂದಿಗಳಲ್ಲಿ ಕೇಳಿದರೆ ಆಹಾರ ಪೊಟ್ಟಣ ಇಲ್ಲ.ನೀವು ಊಟ ಬೇಕಾದರೆ ಫೋನಲ್ಲಿ ಆರ್ಡರ್ ಮಾಡಿ ನಾವು ಮಧ್ಯಾಹ್ನ ಮತ್ತು ರಾತ್ರಿ ಮನೆಗೆ […]

ಕೊರೋನಾ ಹೋರಾಟಕ್ಕೆ ನಳಿನ್ ಕುಮಾರ್ ಕಟೀಲ್ ಸಂಸದರ ನಿಧಿಯಿಂದ ರೂ. ಒಂದು ಕೋಟಿ ನೆರವು

Wednesday, March 25th, 2020
Nalin Kateel

ಮಂಗಳೂರು : ಜಗತ್ತಿಗೆ ಬಂದಿರುವ ಮಹಾಮಾರಿ ಕೊರೋನಾ ರೋಗದ ವಿರುದ್ಧದ ಹೋರಾಟಕ್ಕೆ ಇಡೀ ರಾಜ್ಯವು ಸಜ್ಜಾಗಿದೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಮಾರಕ ರೋಗದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಕೈಗೊಳ್ಳುವ ಕಾರ್ಯಗಳಿಗೆ ನಿಯಮಾನುಸಾರ ವಿನಿಯೋಗಿಸಲು ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ಇವರ ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಲ್ಲಿ ರೂ. 1.00 ಕೋಟಿ (ರೂಪಾಯಿ ಒಂದು ಕೋಟಿ ಮಾತ್ರ) ಯನ್ನು […]

ನಾಡಿನ ಪ್ರಗತಿಗೆ ಕರಾವಳಿಗರ ಕೊಡುಗೆ ಅಪಾರ : ನಳಿನ್ ಕುಮಾರ್ ಕಟೀಲ್

Friday, February 21st, 2020
nalin

ಮಂಗಳೂರು : ಕರಾವಳಿಗರು ನಾಡಿನ ಪ್ರಗತಿಗೆ ವಿಶಿಷ್ಟ ಕೊಡುಗೆ ನೀಡಿ ಜಗದ್ವಿಖ್ಯಾತರಾಗಿದ್ದಾರೆ ಎಂದು ಲೋಕಸಭಾಸದಸ್ಯರು ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು. ಕಲಬುರಗಿಯ ದಕ್ಷಿಣ ಕನ್ನಡ ಸಂಘ (ರಿ) ಮತ್ತು ಹೋಟೆಲ್ ಮಾಲಿಕರ ಸಂಘದ, ವತಿಯಿಂದ ಫೆ. 19 ರಂದು ನಗರದ ಆಮಂತ್ರಣ ಹೋಟೆಲಿನ ’ಅನ್ನಪೂರ್ಣ ಸಭಾಂಗಣದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ಕರಾವಳಿಯ ದೈವ ದೇಗುಲಗಳ ಅಭಿವೃದ್ಧಿ ಸಹಿತ ಧಾರ್ಮಿಕ ಕ್ಷೇತ್ರ, ಶಿಕ್ಷಣಕ್ಷೇತ್ರ, ಕೈಗಾರಿಕಾ ಕ್ಷೇತ್ರಗಳಿಗೆ ಪರವೂರಿನಲ್ಲಿ ದುಡಿಯುವ ಕೈಗಳ ಅಪಾರ […]

ಮಹಾತ್ಮ ವಿರುದ್ಧ ಹೆಗಡೆ ನಿಂದನೆ : ದೆಹಲಿಯಲ್ಲಿ ಅನಂತಕುಮಾರ್ ಭೇಟಿ ಮಾಡಿದ ನಳಿನ್​ ಕುಮಾರ್​​ ಕಟೀಲ್

Tuesday, February 4th, 2020
nalin

ನವದೆಹಲಿ : ಗಾಂಧೀಜಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಸಂಸದ ಅನಂತ್ಕುಮಾರ್ ಹೆಗಡೆ ನಿವಾಸಕ್ಕೆ ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿದ್ದರು. ಗಾಂಧೀಜಿ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಹಿನ್ನೆಲೆ, ಬಿಜೆಪಿ ಹೈ ಕಮಾಂಡ್ ಹೆಗಡೆಯನ್ನು ತರಾಟೆಗೆ ತೆಗೆದುಕೊಂಡಿದೆ. ಈ ಹಿನ್ನೆಲೆ ಲೋಧಿ ಎಸ್ಟೇಟ್ನಲ್ಲಿರುವ ಅನಂತ ಕುಮಾರ್ ನಿವಾಸಕ್ಕೆ ತೆರಳಿ ಕಟೀಲ್ ಚರ್ಚೆ ನಡೆಸಿದ್ದಾರೆ. ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಗಾಂಧೀಜಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ‌ ವಿಷಯ ಚರ್ಚಿಸಿದ್ದೇನೆ. ಈಗಾಗಲೇ […]

ಮುಂದಿನ ಮೂರು ವರ್ಷ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಅವಿರೋಧ ಆಯ್ಕೆ

Thursday, January 16th, 2020
nalin

ಬೆಂಗಳೂರು : ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಸರ್ವಾನುಮತದಿಂದ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ನಳಿನ್ ಕುಮಾರ್ ಕಟೀಲ್ ಅವರು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಸಹ ಚುನಾವಣಾಧಿಕಾರಿಯಾದ ರಾಜ್ಯ ಅಧ್ಯಕ್ಷರ ಆಯ್ಕೆ ಚುನಾವಣಾ ವೀಕ್ಷಕ ಸಿ.ಟಿ.ರವಿ ಘೋಷಿಸಿದರು. ನೂತನ ಅಧ್ಯಕ್ಷರ ಅಧಿಕಾರಾವಧಿ 2023ರ ಜನವರಿ 16ಕ್ಕೆ ಮುಕ್ತಾಯವಾಗಲಿದೆ. ಬಳಿಕ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಅಧ್ಯಕ್ಷನಾಗಿ ಆಯ್ಕೆಯಾದಾಗ ಕೆಲ ಸವಾಲುಗಳಿದ್ದವು. ರಾಜ್ಯಾದ್ಯಂತ ಪ್ರವಾಸ ಮಾಡಿ ಎಲ್ಲ […]

ನಳಿನ್ ಕುಮಾರ್ ಕಟೀಲ್ ಗೆ ದ.ಕ.ಜಿಲ್ಲಾ ಬಿಜೆಪಿ ವತಿಯಿಂದ ಅದ್ದೂರಿ ಸ್ವಾಗತ

Friday, December 13th, 2019
nalin kumar

ಮಂಗಳೂರು : ಉಪ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದ ಬಳಿಕ ಶುಕ್ರವಾರ ಮಂಗಳೂರಿಗೆ ಆಗಮಿಸಿದ  ನಳಿನ್ ಕುಮಾರ್ ಕಟೀಲ್ ಅವರನ್ನು ದ.ಕ.ಜಿಲ್ಲಾ ಬಿಜೆಪಿ ವತಿಯಿಂದ ಸ್ವಾಗತಿಸಿ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಅಭಿನಂದಿಸಲಾಯಿತು. ಬಳಿಕ ಮಾತನಾಡಿದ ಅವರು ಪಕ್ಷದ ರಾಜ್ಯಾಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಕೂಡಲೇ ಬೆಂಗಳೂರು ಮೇಯರ್ ಆಯ್ಕೆ, ನಗರ ಸ್ಥಳೀಯಾಡಳಿತ ಚುನಾವಣೆ ಮತ್ತು ಉಪಚುನಾವಣೆಗಳು ಎದುರಾದವು. ಎಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿದೆ ನಳಿನ್  ಹೇಳಿದರು. ದ.ಕ ಜಿಲ್ಲೆಯಲ್ಲಿ ಗ್ರಾಪಂ ಚುನಾವಣೆಯಲ್ಲಿ ಈ ಬಾರಿ ಶೇ.90ರಷ್ಟು ಪಂಚಾಯತ್‌ಗಳಲ್ಲಿ ಗೆಲುವು ಸಾಧಿಸುವ ಗುರಿಯನ್ನಿಟ್ಟು ಕೆಲಸ ಮಾಡಬೇಕಿದೆ. ಆ […]

ಮಂಗಳೂರು ರೈಲ್ವೆ ವಿಭಾಗ ಮಂಜೂರು ಬಗ್ಗೆ ನಳಿನ್ ಕುಮಾರ್ ಕಟೀಲ್ ಮನವಿ

Thursday, December 12th, 2019
nalin-apeal

ಮಂಗಳೂರು  : ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಸಂಸದ ಶ್ರೀ.ನಳಿನ್ ಕುಮಾರ್ ಕಟೀಲ್ ಇವರು ಇಂದು ಮಾನ್ಯ ಕೇಂದ್ರ ರೈಲ್ವೇ ಸಚಿವರಾದ ಶ್ರೀ.ಪಿಯೂಶ್ ಗೋಯಲ್ ಹಾಗೂ ಮಾನ್ಯ ಕೇಂದ್ರ ರೈಲ್ವೇ ರಾಜ್ಯ ಸಚಿವರಾದ ಶ್ರೀ.ಸುರೇಶ್ ಅಂಗಡಿಯವರನ್ನು ನವದೆಹಲಿಯಲ್ಲಿ ಭೇಟಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈಲ್ವೇ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು. ಪ್ರಮುಖ ಬೇಡಿಕೆಗಳು: 1. ಮಂಗಳೂರು ರೈಲ್ವೆ ವಿಭಾಗ ಮಂಜೂರು ಬಗ್ಗೆ. 2. ಮಂಗಳೂರು ಕೇಂದ್ರ ರೈಲು ನಿಲ್ದಾಣದಲ್ಲಿ 3 […]

ಗೆಲುವು ನಮ್ಮದೇ : ಹದಿನೇಳು ಮಂದಿ ಅನರ್ಹ ಶಾಸಕರಿಗೆ ನ್ಯಾಯ ಕೊಡುತ್ತೇವೆ : ನಳಿನ್‌ ಕುಮಾರ್ ಕಟೀಲ್

Sunday, December 8th, 2019
Nalin-hubbli

ಮಂಗಳೂರು :  ಹದಿನೇಳು ಮಂದಿ ಅನರ್ಹ ಶಾಸಕರು ರಾಜೀನಾಮೆ ಕೊಟ್ಟಿದ್ದರಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅವರಿಗೂ ನ್ಯಾಯ ಕೊಡುತ್ತೇವೆ. ಕಲ್ಯಾಣ ಕರ್ನಾಟಕ ಭಾಗದ ಶಾಸಕರಲ್ಲಿ ಯಾರಲ್ಲಿಯೂ ಅಸಮಾಧಾನವಿಲ್ಲ ಎಂದು ನಳಿನ್‌ ಕುಮಾರ್ ಕಟೀಲ್ ಇಂದು  ಹುಬ್ಬಳ್ಳಿಯಲ್ಲಿ ತಿಳಿಸಿದರು. ಉಪಚುನಾವಣೆಗೆ ಪ್ರಚಾರಕ್ಕೆ ಹೋದಲೆಲ್ಲ ನಮ್ಮ ಪಕ್ಷಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಜನರಲ್ಲಿಯೂ ಬಿಜೆಪಿ ಅಲೆಯಿದ್ದು, 15 ಸ್ಥಾನಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ‘ಬಿಜೆಪಿ ಸರಕಾರ ಸ್ಥಿರವಾಗಿದ್ದು, ಉಪಚುನಾವಣೆ ಫಲಿತಾಂಶದ ಬಳಿಕವೂ ಸರಕಾರ ಸ್ಥಿರವಾಗಿಯೇ […]

ಸಂಸದ ನಳಿನ್ ಕುಮಾರ್ ಕಟೀಲ್ ರವರ ನವೀಕೃತ ನೂತನ ಕಚೇರಿ ಉದ್ಘಾಟನೆ

Saturday, November 30th, 2019
nalin

ಮಂಗಳೂರು : ಸಂಸದ ನಳಿನ್ ಕುಮಾರ್ ಕಟೀಲ್ ರವರ ನವೀಕೃತ ನೂತನ ಕಚೇರಿ ಯು ಡಿ ಸಿ ಕಟ್ಟಡ ಡಾ 2 ದಾನೆ ಮಹಡಿಯ ಉದ್ಘಾಟನೆಯನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ರವರು ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಈ ನವೀಕೃತ ಕಚೇರಿ ಕಾರ್ಯಕರ್ತರಿಗೆ ಆಲಯವಾಗಿದೆ. ಅವರ ನೋವಿಗೆ ಸ್ಪಂದನೆ ನೀಡುವ ಕೇಂದ್ರವಾಗಿದೆ. ಕಾರ್ಯಕರ್ತರ ಸಮಸ್ಯೆಗೆ ಸ್ಪಂದಿಸುವ ಜತೆಗೆ ಸಾಮಾನ್ಯ ಜನರ ಕಣ್ಣೀರು ಒರೆಸುವ ಸಾಂತ್ವನ ಕೇಂದ್ರವಾಗಲಿ. ಜಿಲ್ಲೆಯ ಅಭಿವೃದ್ಧಿಗೆ ಪ್ರೇರಕ ಶಕ್ತಿಯಾಗಲಿ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ […]

ಮಂಗಳೂರು : ಜನವರಿ ಮೊದಲ ವಾರದಲ್ಲಿಯೇ ಪಂಪ್ ವೆಲ್ ಮೇಲ್ಸೇತುವೆ ಉದ್ಘಾಟನೆಗೊಳ್ಳಲಿದೆ; ನಳಿನ್ ಕುಮಾರ್ ಕಟೀಲ್

Saturday, November 16th, 2019
Nalin-Kumar

ಮಂಗಳೂರು : ಡಿಸೆಂಬರ್ ಅಂತ್ಯಕ್ಕೆ ಪಂಪ್ ವೆಲ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡು ಜನವರಿ ಮೊದಲ ವಾರದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಪಂಪ್ ವೆಲ್ ಮೇಲ್ಸೇತುವೆ ಕಾಮಗಾರಿ ವೀಕ್ಷಣೆಗೆ ಶನಿವಾರದಂದು ಭೇಟಿ ನೀಡಿದ ಅವರು, ಪಂಪ್ ವೆಲ್ ಕಾಮಗಾರಿ ಈಗಾಗಲೇ ಪೂರ್ಣಗೊಳ್ಳಬೇಕಿತ್ತು. ಆದರೆ ಕೆಲವೊಂದು ಆಡಳಿತಾತ್ಮಕ, ಕಾನೂನಾತ್ಮಕ ತೊಂದರೆಗಳಿಂದ ಕಾಮಗಾರಿ ವಿಳಂಬವಾಯಿತು. ಜನವರಿ ಮೊದಲ ವಾರದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇದೇ ವೇಳೆ ಶಾಸಕ ಡಿ. ವೇದವ್ಯಾಸ ಕಾಮತ್, ಮನಪಾ ಆಯುಕ್ತ ಶಾನಾಡಿ […]