Blog Archive

ಕಾಂಗ್ರೆಸ್ ಮುಖಂಡ ಪೂಜಾರಿ ಕಾಲಿಗೆ ಬಿದ್ದು, ಕಣಕ್ಕೆ ಇಳಿದ ನಳಿನ್ ಕುಮಾರ್ ಕಟೀಲ್

Sunday, March 24th, 2019
nalin poojary

ಮಂಗಳೂರು:  ಬಿಜೆಪಿ ಲೋಕಸಭಾ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಹಿರಿಯ ಕಾಂಗ್ರೆಸ್ ‌ಮುಖಂಡ ಜನಾರ್ದನ ಪೂಜಾರಿ ಕಾಲಿಗೆ ಬಿದ್ದು ಅವರ ಆಶೀರ್ವಾದ  ಪಡೆದು ಭಾನುವಾರ ಚುನಾವಣಾ ಪ್ರಚಾರಕ್ಕಿಳಿದರು. ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ದೇವರ ದರ್ಶನ ಪಡೆದ ನಳಿನ್, ಗೋಕರ್ಣನಾಥ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಪೂಜಾರಿ ಆಶೀರ್ವಾದ ಪಡೆದ ನಳಿನ್, ಬಳಿಕ ಪೂಜಾರಿ ಅವರ ಜೊತೆ ‌ಕೆಲಹೊತ್ತು ಗೌಪ್ಯ ಮಾತುಕತೆ ನಡೆಸಿದ್ದಾರೆ. ನಳಿನ್ ‌ಕುಮಾರ್ ಗೆ ಆಶೀರ್ವಾದ ಮಾಡಿದ ಬಳಿಕ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ, ನಳಿನ್ ಕುಮಾರ್ […]

ಮಂಗಳೂರು-ಬೆಂಗಳೂರು ನೂತನ ರೈಲು ಸಂಚಾರಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ

Thursday, February 21st, 2019
Rail

ಮಂಗಳೂರು : ಮಂಗಳೂರು-ಬೆಂಗಳೂರು ನೂತನ ರೈಲು ಸಂಚಾರಕ್ಕೆ  ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಇಂದು ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು. ಈ ಹೊಸ ರೈಲು ನಿಗದಿತ ವೇಳಾಪಟ್ಟಿಯಂತೆ ಸಂಚರಿಸಲಿದೆ. ಸದ್ಯಕ್ಕೆ ವಾರದಲ್ಲಿ ಮೂರು ದಿನ ಮಾತ್ರ ಸಂಚರಿಸುವ ರೈಲು ಮಾರ್ಚ್‌ನ ಆನಂತರ ಪ್ರತೀ ದಿನ ರಾತ್ರಿ ವೇಳೆ ಸಂಚರಿಸಲಿದೆ ಎಂದು ಹೇಳಲಾಗಿದೆ. ಮಂಗಳೂರಿನಿಂದ ಸೋಮವಾರ, ಬುಧವಾರ, ಶುಕ್ರವಾರ ರಾತ್ರಿ 7 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 5 ಗಂಟೆಗೆ ಯಶವಂತಪುರ ತಲುಪಲಿದೆ. ಭಾನುವಾರ, ಮಂಗಳವಾರ, […]

ಶಬರಿಮಲೆ ನಿಯಂತ್ರಣಕ್ಕೆ 10 ಸಾವಿರ ಪೊಲೀಸರು

Wednesday, November 21st, 2018
Nalinkumar

ಮಂಗಳೂರು : ಪಿಣರಾಯಿ ವಿಜಯನ್ ಸರ್ಕಾರವು ಶಬರಿಮಲೆಯನ್ನು ನಿಯಂತ್ರಿಸಲು 10 ಸಾವಿರ ಪೊಲೀಸರನ್ನು ನಿಯೋಜಿಸಿದೆ. ಮಲೆಯಲ್ಲಿ ಭಕ್ತರು ಆರು ಗಂಟೆ ಮಾತ್ರ ಇರಬೇಕೆಂದು ನಿರ್ಬಂಧ ವಿಧಿಸಲಾಗಿದೆ. ಘೋಷಣೆ ಕೂಗಿದರೆ ಬಂಧಿಸುತ್ತಾರೆ.  ಗುಂಪುಗೂಡಿದರೂ ಸೆರೆ ಹಿಡಿಯುತ್ತಾರೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಆರೋಪ ಮಾಡಿದರು. ಕೇರಳದ ಎಡಪಕ್ಷಗಳ ಸರ್ಕಾರ ಶಬರಿಮಲೆಯನ್ನು ಮತ್ತೊಂದು ಜಲಿಯನ್ ವಾಲಾಬಾಗ್ ಮಾಡಲು ಹೊರಟಿದೆ ಎಂದು  ಅವರು ಹೇಳಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಣರಾಯಿ ವಿಜಯನ್  ಸರ್ಕಾರವು ಶಬರಿಮಲೆಯನ್ನು ಹಿಂದೂಗಳ ಧಾರ್ಮಿಕ ಹಕ್ಕನ್ನು ಮೊಟಕುಗೊಳಿಸಲಾಗುತ್ತಿದೆ ಎಂದು ಅವರು […]

ಶಬರಿಮಲೆ ಕ್ಷೇತ್ರಕ್ಕೆ ಮಹಿಳೆಯರ ಪ್ರವೇಶ ಖಂಡಿಸಿ ಮಂಗಳೂರಿನಲ್ಲಿ ಶಬರಿಮಲೆ ಸಂರಕ್ಷಣಾ ಪಾದಯಾತ್ರೆ

Tuesday, October 16th, 2018
vadvyas-kamath

ಮಂಗಳೂರು: ಕೇರಳದ ತಿರುವನಂತಪುರದಲ್ಲಿ ಶಬರಿಮಲೆ ಕ್ಷೇತ್ರಕ್ಕೆ ಮಹಿಳೆಯರ ಪ್ರವೇಶ ಹಾಗೂ ಅಲ್ಲಿನ ಪಿಣರಾಯಿ ಸರಕಾರದ ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ಮಂಗಳೂರಿನಲ್ಲಿ ಶಬರಿಮಲೆ ಸಂರಕ್ಷಣಾ ಪಾದಯಾತ್ರೆ ನಡೆಯಿತು. ಕೇರಳ ರಾಜ್ಯ ಬಿಜೆಪಿ ಸಹಪ್ರಭಾರಿಯೂ, ದಕ್ಷಿಣ ಕನ್ನಡ ಲೋಕಸಭಾ ಸದಸ್ಯರೂ ಆದ ನಳಿನ್ ಕುಮಾರ್ ಕಟೀಲ್, ಶಾಸಕರುಗಳಾದ ಡಿ ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್, ಎಸ್ ಅಂಗಾರ, ಉಮಾನಾಥ ಕೋಟ್ಯಾನ್, ಸಂಜೀವ್ ಮಠಂದೂರು ಡಾ|ಭರತ್ ಶೆಟ್ಟಿ, ಹರೀಶ್ ಪೂಂಜಾ ಹಾಗೂ ಮತ್ತಿತ್ತರರು ಪಾದಯಾತ್ರೆಯಲ್ಲಿ ಭಾಗವಹಿಸಿದರು.

ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಆಳ್ವಾಸ್ ಪ್ರಗತಿ ವರದಾನವಾಗಿದೆ : ಸಂಸದ ನಳಿನ್

Friday, July 6th, 2018
Alvas pragathi

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್‍ನಲ್ಲಿ ಎರಡು ದಿನಗಳು ನಡೆಯುವ 10ನೇ ಆವೃತ್ತಿಯ ಅಳ್ವಾಸ್ ಪ್ರಗತಿ- ಬೃಹತ್ ಉದ್ಯೋಗ ಮೇಳಕ್ಕೆ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು. ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಆಳ್ವಾಸ್ ಪ್ರಗತಿಗೆ ಚಾಲನೆ ನೀಡಿ ಮಾತನಾಡಿ, ತಮ್ಮ ಅರ್ಹತೆಗೆ ಅನುಗುಣವಾಗಿ ಉದ್ಯೋಗ ಪಡೆಯಲು ನಾಡಿನ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಆಳ್ವಾಸ್ ಪ್ರಗತಿ ವರದಾನವಾಗಿದೆ. ಪಾರದರ್ಶಕವಾಗಿ ನಡೆಯುವ ಉದ್ಯೋಗಮೇಳದಿಂದಾಗಿ ಯುವಜನರು ಉದ್ಯೋಗ ಪಡೆಯಲು ಬೇಕಾದ ಆತ್ಮವಿಶ್ವಾಸವನ್ನು […]

ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿದ್ದ ತಡೆಗೋಡೆ ಕುಸಿತ.. ದೊಡ್ಡಿಕಟ್ಟ ಪ್ರದೇಶದಲ್ಲಿ ಅವಾಂತರ ಸೃಷ್ಟಿ!

Friday, June 22nd, 2018
mangaluru

ಮಂಗಳೂರು: ಇಲ್ಲಿನ ಹೊರವಲಯದಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿದ್ದ ತಡೆಗೋಡೆ ಕುಸಿದ ಪರಿಣಾಮ ಬಜ್ಪೆ ಬಳಿಯ ದೊಡ್ಡಿಕಟ್ಟ ಪ್ರದೇಶಕ್ಕೆ ನೀರು ನುಗ್ಗಿ ದೊಡ್ಡಿಕಟ್ಟ ಪ್ರದೇಶ ಸೃಷ್ಠಿಯಾಗಿದೆ. ಅಂಬ್ಲಮೊಗರು ಮದಕ ಜಂಕ್ಷನ್ ಬಳಿ ಗುಡ್ಡ ಕುಸಿತ ಇಂದು ಶುಕ್ರವಾರ ಬೆಳ್ಳಂಬೆಳಿಗ್ಗೆ ಈ ಘಟನೆ ನಡೆದಿದೆ. ಮಂಗಳೂರು ಹೊರವಲಯದ ಎಸ್ಇ ಝಡ್ ವಲಯಕ್ಕೆ ನೀರು ಹರಿಯುವ ನಾಲೆಗೆ ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ ಇಂದು ಮುಂಜಾನೆ ತೆಡೆಗೋಡೆ ಕುಸಿದಿದ್ದು, ನದಿ ನೀರು ಜನವಸತಿ ಪ್ರದೇಶಕ್ಕೆ ನುಗ್ಗಿದೆ. ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ […]

ಏರ್ಪೋರ್ಟ್ ಆವರಣ ಗೋಡೆ ಬಿರುಕು ಸ್ಥಳಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ

Thursday, June 7th, 2018
Nalin Kumar Kateel

ಮಂಗಳೂರು : ಮಳೆಯಿಂದಾಗಿ ಹಾನಿಗೊಳಗಾದ ಏರ್ ಪೋರ್ಟ್ ಸುತ್ತಮುತ್ತಲಿನ ಕೊಳಂಬೆ ಉನಿಲೆ ಪ್ರದೇಶಗಳಿಗೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಇವರು ಮಂಗಳೂರು ಉತ್ತರ ಶಾಸಕರಾದ ಭರತ್ ಶೆಟ್ಟಿ ಇವರೊಂದಿಗೆ ಗುರುವಾರ ಬೆಳಿಗ್ಗೆ ಭೇಟಿ ನೀಡಿದರು. ಏರ್ಪೋರ್ಟ್ ನಿರ್ದೇಶಕರು, ಸಂಬಂಧಪಟ್ಟ ಎಂಜಿನೀಯರ್ಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾಮಸ್ಥರಿಗೆ ಯಾವುದೇ ತೊಂದರೆಯಾಗದಂತೆ ಪರಿಹಾರ ಕಾಮಗಾರಿಗಳನ್ನು ಶೀಘ್ರಗತಿಯಲ್ಲಿ ನಡೆಸಲು ಮಾನ್ಯ ಸಂಸದರು ನಿರ್ದೇಶನ ನೀಡಿದರು.

ಮಳೆ ಬಾಧಿತ ಪ್ರದೇಶಗಳಿಗೆ ಭೇಟಿ ಕೊಟ್ಟ ಸಂಸದ ನಳಿನ್ ಕುಮಾರ್ ಕಟೀಲ್

Wednesday, May 30th, 2018
nalin-kumar

ಮಂಗಳೂರು: ಕರಾವಳಿಯಲ್ಲಿ ಇಂದು ವರುಣ ಬಿಡುವು ಪಡೆದಿದ್ದಾನೆ. ನಿನ್ನೆ ಸುರಿದ ಭಾರೀ ಮಳೆಗೆ ತತ್ತರಿಸಿದ್ದ ಮಂಗಳೂರಿನ ಜನ ಇಂದು ನಿರಾಳರಾಗಿದ್ದಾರೆ. ಮಂಗಳೂರಿನಲ್ಲಿ ಸೃಷ್ಠಿ ಅಗಿದ್ದ ಪ್ರವಾಹದ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದೆ. ಜಿಲ್ಲಾಡಳಿತದ ವತಿಯಿಂದ ಒಟ್ಟು ಮಳೆ ಹಾನಿಯ ಬಗ್ಗೆ ಇನ್ನಷ್ಟೇ ಅಂದಾಜು ಮಾಡಬೇಕಾಗಿದೆ. ಈ ನಡುವೆ ನೆರೆಪೀಡಿತ ಪ್ರದೇಶಗಳಿಗೆ ‌ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಇಂದು ಭೇಟಿ ನೀಡಿದರು. ನಗರದ ಬಿಜೈ, ಆನೆಗುಂಡಿ, ನಂದಿಗುಡ್ಡೆ ಮತ್ತಿತರ […]

8 ಕ್ಷೇತ್ರಗಳಲ್ಲೂ ಬಿಜೆಪಿಗೆ ಗೆಲುವು: ಮೋನಪ್ಪ ಭಂಡಾರಿ

Thursday, May 10th, 2018
nalin-kumar

ಮಂಗಳೂರು: ದ.ಕ. ಜಿಲ್ಲೆಯ 8 ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ದ.ಕ. ಜಿಲ್ಲಾ ಚುನಾವಣಾ ಉಸ್ತುವಾರಿ, ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಹೇಳಿದರು. ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೆ ಪಕ್ಷದ ಕಾರ್ಯಕರ್ತರು 2-3 ಸುತ್ತಿನ ಮನೆ ಮನೆ ಭೇಟಿ ನೀಡಿದ್ದಾರೆ. ಎಲ್ಲರೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಇದನ್ನು ಕಂಡು ಜಿಲ್ಲಾ ಉಸ್ತುವಾರಿ ಸಚಿವರಿಗೆ ನಡುಕ ಶುರುವಾಗಿದೆ. ಹಾಗಾಗಿ ಅವರೀಗ ಹಿಂದುತ್ವದ ಪರ ಮಾತನಾಡುತ್ತಿದ್ದಾರೆ. ಜಿಲ್ಲೆಯ […]

ಪೂಜಾರಿ ಅವರನ್ನು ಕಾಂಗ್ರೆಸ್ ಮತ್ತೆ ಅವಮಾನಿಸಿದೆ: ಹರಿಕೃಷ್ಣ ಬಂಟ್ವಾಳ್

Wednesday, May 9th, 2018
harikrishna-bantwal

ಮಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ ಅವರ ಕುರಿತು ಸುಳ್ಳು ಸುದ್ದಿ ಹರಡಿಸಿ ಕಾಂಗ್ರೆಸ್ ಮತ್ತೊಮ್ಮೆ ಅವರನ್ನು ಅವಮಾನಿಸಿದೆ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಕಿಡಿಕಾರಿದ್ದಾರೆ. ಮಂಗಳೂರಿನಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆ ಸಂದರ್ಭದಲ್ಲಿ ಜನಾರ್ದನ ಪೂಜಾರಿ ಕುರಿತು ಸುಳ್ಳು ಸುದ್ದಿ ಹರಡಿಸುವುದು ಕಾಂಗ್ರೆಸಿಗರ ಷಡ್ಯಂತ್ರ ಎಂದು ಆರೋಪಿಸಿದ್ದಾರೆ. ಕನ್ನಡ ದಿನ ಪತ್ರಿಕೆ ಉದಯವಾಣಿ ಹೆಸರಿನಲ್ಲಿ ಸುಳ್ಳು ಸುದ್ದಿಯೊಂದನ್ನು ಪೂಜಾರಿ ಅವರ ಕುರಿತು ಸೃಷ್ಠಿಸಲಾಗಿದ್ದು, ‘ಬಿಜೆಪಿಯನ್ನು ಸೋಲಿಸಲು ಕರೆ ಕೊಟ್ಟ ಪೂಜಾರಿ’ […]