Blog Archive

ಮಂಗಳೂರಲ್ಲಿ ಅಮಿತ್ ಶಾ ರೋಡ್ ಶೋ

Tuesday, May 8th, 2018
amit-shah

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಭಾಷಣದ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ‌ ಅಧ್ಯಕ್ಷ ಅಮಿತ್ ಶಾ ಬಿಜೆಪಿ ಪಾಳಯಕ್ಕೆ ಬಲ ತುಂಬಲಿದ್ದಾರೆ. ಮಂಗಳೂರು ನಗರ ದಕ್ಷಿಣ ಮತ್ತು‌ ಉತ್ತರ ಕ್ಷೇತ್ರಗಲ್ಲಿ ಬೃಹತ್‌ ರೋಡ್ ಶೋ ಮಾಡಲಿರುವ ಅಮಿತ್ ಶಾ ಕೊನೇ ಕೆಲವೇ ದಿನಗಳಲ್ಲಿ ಪ್ರಚಾರ ಕಾರ್ಯಕ್ಕೆ ಫಿನಿಶಿಂಗ್ ಟಚ್ ನೀಡಲಿದ್ದಾರೆ. ಅವರ ರೋಡ್ ಶೋ ಕಾರ್ಯಕ್ರಮದ ವಿವರಗಳು ಹೀಗಿವೆ. 1. ಮಧ್ಯಾಹ್ನ 12.45 ವಿಮಾನ ನಿಲ್ದಾಣಕ್ಕೆ ಆಗಮನ 2. ಊಟ ವಿಶ್ರಾಂತಿ 2.15ರ ವರೆಗೆ. 3. ಮಧ್ಯಾಹ್ನ […]

ರಾಜ್ಯಸಭೆ ಸ್ಥಾನಕ್ಕಾಗಿ ಪ್ರಕಾಶ್ ರೈ ಹಿಂದೂ ಸಮಾಜಕ್ಕೆ ಅವಮಾನ ಮಾಡುತ್ತಿದ್ದಾರೆ

Thursday, May 3rd, 2018
bhartiya-party

ಮಂಗಳೂರು: ಕಾಂಗ್ರೆಸ್‌ನವರು ರಾಜ್ಯಸಭೆ ಸ್ಥಾನವನ್ನು ಕೊಡಬಹುದು ಎಂಬ ಆಸೆಯಿಂದ ನಟ ಪ್ರಕಾಶ್ ರೈ ಅವರು ಹಿಂದೂ ಸಮಾಜಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಮಂಗಳೂರಿನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವಾರು ದಿನಗಳಿಂದ ತಾನೊಬ್ಬ ವಿಚಾರವಾದಿ ಎಂದು ಫೋಸ್ ನೀಡುವುದಕ್ಕಾಗಿ ತಾನೊಬ್ಬ ಜಾತ್ಯಾತೀತವಾದಿ ಎಂದು ಪ್ರಚಾರ ನಡೆಸಲು ಹಿಂದೂ ಧರ್ಮವನ್ನು ಪ್ರಕಾಶ್‌ ರೈ ಅವಮಾನಿಸುತ್ತಿದ್ದಾರೆ. ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಹೇಳಿದರು. ಸ್ಮಾರ್ಟ್ ಸಿಟಿ ಯೋಜನೆಗೆ ಮಂಗಳೂರು ಆಯ್ಕೆಯಾದ್ರೂ […]

ನಳಿನ್ ಕುಮಾರ್ ಕಟೀಲ್ ನನಗೆ ಸಿಗಬೇಕಿದ್ದ ಟಿಕೆಟ್ ತಪ್ಪಿಸಿದ್ದಾರೆ: ಪಾಲೇಮಾರ್ ಆರೋಪ

Saturday, April 21st, 2018
palimar

ಮಂಗಳೂರು: ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ಅವರು ಟಿಕೆಟ್ ಕೈತಪ್ಪಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ರಾಜ್ಯಾಧ್ಯಕ್ಷರೇ ಟಿಕೆಟ್ ಭರವಸೆ ನೀಡಿದ್ದರು. ಎರಡು ದಿನಗಳ ಹಿಂದೆ ಯಡಿಯೂರಪ್ಪ ಕಚೇರಿಯಿಂದಲೇ ಗುರುತಿನ ಚೀಟಿಯನ್ನು ಕೇಳಿದ್ದರು. ಟಿಕೆಟ್ ಭರವಸೆಯ ಹಿನ್ನೆಲೆಯಲ್ಲಿ ಎ. 23 ರಂದು ನಾಮಪತ್ರ ಸಲ್ಲಿಕೆ ಮಾಡಲು ನಿರ್ಧರಿಸಿದ್ದೆ ಆದರೆ ಅಭ್ಯರ್ಥಿಗಳ ಘೋಷಣೆ ಆಗುವಾಗ ನನ್ನ ಹೆಸರಿಲ್ಲ ಎಂದರು. ಸಂಸದ ನಳಿನ್ ಕುಮಾರ್ ಕಟೀಲ್ ನನಗೆ ಸಿಗಬೇಕಿದ್ದ ಟಿಕೆಟ್ ತಪ್ಪಿಸಿದ್ದಾರೆ. ನಳಿನ್ […]

ಮಂಗಳೂರಲ್ಲಿ ಹಳ್ಳಿ ಸೊಗಡಿನ ಸುಗ್ಗಿ-ಹುಗ್ಗಿಯ ರಂಗು

Monday, March 12th, 2018
suggi-habba

ಮಂಗಳೂರು: ಜನಪದ ಸೊಗಡನ್ನು ಪರಿಚಯಿಸುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸುಗ್ಗಿ-ಹುಗ್ಗಿ ಕಾರ್ಯಕ್ರಮ ಮಾರ್ಚ್ 15ರಂದು ಮಂಗಳೂರಿನ ಸಿಸಿ ಚಾವಡಿ ತುಳು ಭವನ ಉರ್ವಸ್ಟೋರ್ ನಲ್ಲಿ ಹಮ್ಮಿಕೊಂಡಿದೆ. ಕಾರ್ಯಕ್ರಮದಲ್ಲಿ ಬಯಲಾಟ, ಜನಪದ ನೃತ್ಯ, ಹಗಲು ವೇಷ ಸೇರಿದಂತೆ ಅನೇಕ ಬಗೆಯ ಜನಪದ ಕಲಾಪ್ರಕಾರವನ್ನು ಪರಿಚಯಿಸಲಾಗುತ್ತದೆ. ಕಣ್ಣಿಗೆ ಹಬ್ಬ ತರುವ ಹತ್ತು ಹಲವಾರು ವಿಶೇಷ ನೋಟಗಳಿಗೆ ಸುಗ್ಗಿ ಹಬ್ಬ ಕಾರಣವಾಗುತ್ತಿದೆ. ಬೆಳಗ್ಗೆ 10ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ. ಮಂಗಳೂರು ಶಾಸಕ ಜೆ.ಆರ್. ಲೋಬೋ ಅಧ್ಯಕ್ಷತೆವಹಿಸಲಿದ್ದು, ಸಚಿವ ಬಿ.ರಮಾನಾಥ ರೈ […]

ನಾವು ನಿಜವಾದ ರಾಮ ಭಕ್ತರು: ರಮಾನಾಥ ರೈ

Wednesday, March 7th, 2018
ramanath-rai

ಮಂಗಳೂರು: ಸುರಕ್ಷಾ ಯಾತ್ರೆಯಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆಗೆ ಮಂಗಳೂರಿನಲ್ಲಿ ಸಚಿವ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯವರು ಜನ ದಡ್ಡರೆಂದು ತಿಳಿದಿದ್ದಾರೆ. ಆದ್ರೆ ಈ ರಾಜ್ಯದ ಸಾಮರಸ್ಯ ಶಕ್ತಿಯೇ ಜನರು. ಬಿಜೆಪಿಯವರು ಕಾಂಗ್ರೆಸ್ ಮುಕ್ತ ಅನ್ನುತ್ತಾರೆ. ನಾವು ಈ ರಾಜ್ಯದಲ್ಲಿ ಹಸಿವು ಮುಕ್ತ, ಋಣಮುಕ್ತ ಕಾರ್ಯಕ್ರಮ ಮಾಡಿದ್ದೇವೆ ಎಂದು ಸಚಿವರು ಹೇಳಿದರು. ಜಿಲ್ಲೆಯ ಯಾರಿಂದ ಸಾಮರಸ್ಯಕ್ಕೆ ತೊಡಕು ಎಂಬುದಕ್ಕೆ‌ ಅಂಗೈ ಹುಣ್ಣಿಗೆ‌ ಕನ್ನಡಿ ಬೇಕಿಲ್ಲ. ಜನಸುರಕ್ಷಾ ಯಾತ್ರೆ ಮಾಡಲು ಯಾವ ನೈತಿಕತೆ ಇದೆ. ಮಾನ-ಮರ್ಯಾದೆ […]

ಸಿದ್ದರಾಮಯ್ಯ ತಾಕತ್ತಿದ್ದರೆ ಬೇರೆ ಸಮುದಾಯದ ಧಾರ್ಮಿಕ ಕೇಂದ್ರಗಳಿಗೆ ಕೈಹಾಕಲಿ

Wednesday, March 7th, 2018
ananth-kumar

ಮಂಗಳೂರು: ಜನಸುರಕ್ಷಾ ಯಾತ್ರೆ ಬೆಂಗಳೂರು ತಲುಪುವಾಗ ಸಿಎಂ ಕುರ್ಚಿ ಖಾಲಿಯಾಗಬೇಕು. ನಾವು ಯಡಿಯೂರಪ್ಪ ಅವರಿಗೆ ಸಿಎಂ ಪಟ್ಟ ಕಟ್ಟುತ್ತೇವೆ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಹೇಳಿದ್ದಾರೆ. ಸುರತ್ಕಲ್‌ನ ಕುಳಾಯಿಯಲ್ಲಿ ಬಿಜೆಪಿಯ ಜನಸುರಕ್ಷಾ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯ ಜನಸುರಕ್ಷಾ ಯಾತ್ರೆ ಎಂಬ ಸುನಾಮಿಗೆ ಸಿಎಂ ಸಿದ್ದರಾಮಯ್ಯ ಹೊರಟು ಹೋಗಬೇಕು. ಇಲ್ಲದಿದ್ದರೆ ಈ ಸುನಾಮಿಯೇ ನಿಮ್ಮನ್ನು ಎಳೆದು ತರುತ್ತದೆ ಎಂದರು ಎಚ್ಚರಿಸಿದ್ದಾರೆ. ಸಿಎಂ ಸಿದ್ಧರಾಮಯ್ಯರನ್ನು ಕೆಳಗಿಳಿಸಲು ಬಿಜೆಪಿಯೇ ಬೇಕೆಂದಿಲ್ಲ. ಅವರ ಪಕ್ಷದವರೇ ಸಾಕು. ಖರ್ಗೆ, […]

ಯೋಗಕ್ಕಿದೆ ಇಂದು ವಿಶ್ವವ್ಯಾಪಿ ಗೌರವ: ನಳಿನ್ ಕುಮಾರ್‍ ಕಟೀಲ್

Monday, February 26th, 2018
nalin-kumar

ಮಂಗಳೂರು: ಯೋಗಕ್ಕೆ ಇಂದು ಭಾರತವಲ್ಲದೇ ವಿಶ್ವದ ಬೇರೆ ಬೇರೆ ದೇಶಗಳಲ್ಲೂ ವಿಶೇಷ ಗೌರವ ಲಭಿಸಿದೆ ಎಂದು ಸಂಸದ ನಳಿನ್ ಕುಮಾರ್‍ ಕಟೀಲ್‍ ಹೇಳಿದರು. ಮಂಗಳೂರಿನಲ್ಲಿ ಕೆ.ನಾರಾಯಣ ಶೆಟ್ಟಿ ಸಂಸ್ಮರಣಾ ಸಮಿತಿ ಮತ್ತು ಪತಂಜಲಿ ಯೋಗಶಿಕ್ಷಣ ಪ್ರತಿಷ್ಠಾನ (ರಿ) ಅಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಮುಕ್ತ ಯೋಗಾಸನ ಸ್ಫರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದೇಶದಲ್ಲೂ ಅತೀ ಹೆಚ್ಚು ಜನರು ತಮ್ಮ ದೈನಂದಿನ ಚಟುವಟಿಕೆಯಾಗಿ ಪ್ರತಿನಿತ್ಯ ಯೋಗಾಭ್ಯಾಸವನ್ನು ಮಾಡುತ್ತಿರುವುದು ವಿಶೇಷ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ಪರಂಪರೆಯನ್ನು […]

ಬೆಂಗ್ರೆ ಘರ್ಷಣೆ ಹಿಂದೆ ಶಾಸಕ ಜೆ.ಆರ್.ಲೋಬೋ: ನಳಿನ್ ಕುಮಾರ್ ಕಟೀಲ್

Friday, February 23rd, 2018
nalin-kumar

ಮಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸಲು ಕಾಂಗ್ರೆಸ್ ಷಡ್ಯಂತ್ರ ರೂಪಿಸಿದೆ. ಮಂಗಳೂರು ಹೊರವಲಯದ ಬೆಂಗ್ರೆಯಲ್ಲಿ ನಡೆದಿರುವ ಘಟನೆ ಇದಕ್ಕೆ ಸಾಕ್ಷಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ. ಗುರುವಾರ ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸಬಾ ಬೆಂಗ್ರೆಯಲ್ಲಿ ನಡೆದ ಘರ್ಷಣೆ, ಕಲ್ಲು ತೂರಾಟ ಪ್ರಕರಣದ ಹಿಂದೆ ಕಾಂಗ್ರೆಸಿನನ ವ್ಯವಸ್ಥಿತ ಷಡ್ಯಂತ್ರ ಇದೆ ಎಂದು ಕಿಡಿಕಾರಿದರು. ಜೆ.ಆರ್.ಲೋಬೋ ಸೋಲಿನ ಭಯದಿಂದ ಕಾಂಗ್ರೆಸ್ ಓಟ್ ಬ್ಯಾಂಕ್ ಗಾಗಿ ಕೋಮು ಗಲಭೆ ಸೃಷ್ಠಿಸಲು […]

ದೀಪಕ್‌ ರಾವ್‌ ಮನೆಗೆ ಅಮಿತ್‌ ಶಾ , ಬಿ.ಎಸ್. ಯಡಿಯೂರಪ್ಪ ಭೇಟಿ, ಸಾಂತ್ವನ

Wednesday, February 21st, 2018
deepak-rao

ಮಂಗಳೂರು: ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಮನೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಭೇಟಿ ನೀಡಿ ಸಾಂತ್ವನ ಹೇಳಿದರು. ಅಮಿತ್‌ ಶಾ ಅವರ ಭೇಟಿ ವೇಳೆ ಪಕ್ಷದ ಉತ್ತರ ಬ್ಲಾಕ್ ಸಮಿತಿ ಈಗಾಗಲೇ ಸಂಗ್ರಹಿಸಿದ್ದ 10 ಲಕ್ಷ ರೂ.ಗಳನ್ನು ಕುಟುಂಬಕ್ಕೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ಉತ್ತರ ಬ್ಲಾಕ್ ಅಧ್ಯಕ್ಷ ಭರತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಕರ್ನಾಟಕದಲ್ಲಿ ಬಿಜೆಪಿಗೆ 156 ಸ್ಥಾನಗಳ ಸ್ಪಷ್ಟ ಬಹುಮತ: ಜಾವಡೇಕರ್‌

Wednesday, January 24th, 2018
nalin-kumar

ಮಂಗಳೂರು: ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 156 ಸ್ಥಾನಗಳ ಸ್ಪಷ್ಟ ಬಹುಮತ ಪಡೆದು ಆಡಳಿತ ನಡೆಸಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಪ್ರಮುಖರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ನೂರು ದಿನಗಳಲ್ಲಿ ದೇಶದಲ್ಲೇ ಕಾಂಗ್ರೆಸ್ ಹೋಗಿ ಬಿಜೆಪಿ ಬರಲಿದೆ. ದೇಶದಲ್ಲಿ ನಡೆಯುವ ಚುನಾವಣೆ ಎರಡು ರಾಜಕೀಯ ಪಕ್ಷಗಳ ಮಧ್ಯೆ ಅಲ್ಲ. ಎರಡು ರಾಜಕೀಯ ಸಂಸ್ಕೃತಿಯ ಮಧ್ಯೆ ನಡೆಯುತ್ತಿರುವ ಸ್ಪರ್ಧೆ ಎಂದು ಹೇಳಿದರು. ಕಾಂಗ್ರೆಸ್ ಜಾತಿ […]