‘ದೇವಿ ನಗರ’ ಎಂಬ ಹೆಸರಿನ ನಾಮಫಲಕ ತೆರವು, ಪ್ರತಿಭಟನೆ ನಡೆಸಿದ ಹಿಂದೂ ಕಾರ್ಯಕರ್ತರಿಗೆ ದುಬೈನಿಂದ ಬೆದರಿಕೆ

Thursday, January 18th, 2024
'ದೇವಿ ನಗರ' ಎಂಬ ಹೆಸರಿನ ನಾಮಫಲಕ ತೆರವು, ಪ್ರತಿಭಟನೆ ನಡೆಸಿದ ಹಿಂದೂ ಕಾರ್ಯಕರ್ತರಿಗೆ ದುಬೈನಿಂದ ಬೆದರಿಕೆ

ಕಾರವಾರ : ಭಟ್ಕಳದ ಜಾಲಿ ಪಟ್ಟಣದಲ್ಲಿ ‘ದೇವಿ ನಗರ’ ಎಂಬ ಹೆಸರಿನಲ್ಲಿ ಹಾಕಲಾಗಿದ್ದ ನಾಮಫಲಕ ತೆರವುಗೊಳಿಸಿದ್ದಕ್ಕೆ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ನಾಮಫಲಕ ತೆರವು ಗೊಳಿಸಲು ಮದರಸಾದ ಗುರುಗಳು ಒತ್ತಡ ಹಾಕಿ ತೆರವುಗೊಳಿಸಿದ್ದರು ಎಂದು ಆರೋಪಿಸಲಾಗಿದೆ. ಹಿಂದೂಗಳು ಪ್ರತಿಭಟನೆ ನಡೆಸಿದ್ದಕ್ಕೆ ದುಬೈನಿಂದ ಕಾರ್ಯಕರ್ತರಿಗೆ ವಿಡಿಯೋ ಕಾಲ್ ಮಾಡಿ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ. ಪ್ರತಿಭಟನೆಯಲ್ಲಿ ಭಾಗಿಯಾದ ಹರೀಶ, ದೇಯಾ ಹಾಗೂ ಮಹೇಶ ಎಂಬವರಿಗೆ ದುಬೈನಿಂದ ವಿಡಿಯೋ ಮೂಲಕ ಮುಕ್ತಾರ್ ಮಹ್ಮದ್ ಕೊಟ್ಟಿಕೋಡಿ ಎಂಬಾತ ಮನೆಗೆ ನುಗ್ಗಿ ಹೊಡೆಯುತ್ತೇನೆ ಎಂದು […]

ಸೋಮೇಶ್ವರ ಸಮುದ್ರ ತೀರದಲ್ಲಿ ಪ್ಲಾಸ್ಟಿಕ್ ಎಸೆದ ಯುವತಿಯರಿಗೆ ದಂಡ ಹಾಕಿದ ಪುರಸಭೆ

Sunday, November 21st, 2021
ಸೋಮೇಶ್ವರ ಸಮುದ್ರ ತೀರದಲ್ಲಿ ಪ್ಲಾಸ್ಟಿಕ್ ಎಸೆದ ಯುವತಿಯರಿಗೆ ದಂಡ ಹಾಕಿದ ಪುರಸಭೆ

ಮಂಗಳೂರು :  ಬೀಚ್ ಗೆ ಪ್ರವಾಸಕ್ಕೆ ಬಂದ  ಯುವತಿಯರಿಬ್ಬರು  ಸೋಮೇಶ್ವರ ಸಮುದ್ರ ತೀರದಲ್ಲಿ ಪ್ಲಾಸ್ಟಿಕ್ ಎಸೆದಕ್ಕೆ ರೂ. 500 ದಂಡ ವಿಧಿಸಿದ ಘಟನೆ ಭಾನುವಾರ ನಡೆದಿದೆ. ಪ್ರವಾಸಿಗರು  ಸಮುದ್ರ ತೀರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಹಾಕುವುದರಿಂದ ಸೋಮೇಶ್ವರ ಪುರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ವಿವಿದ ಸಂಘ ಸಂಸ್ಥೆಗಳ ನೇತ್ರತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿ 1 ಟನ್ ನಷ್ಟು ಪ್ಲಾಸ್ಟಿಕ್ ಸಂಗ್ರಹಿಸಿದ್ದು, ಅಲ್ಲದೆ ಸ್ಥಳದಲ್ಲಿ ಪ್ಲಾಸ್ಟಿಕ್ ಹಾಕದಂತೆ ಎಚ್ಚರಿಸಿ ನಾಮಫಲಕವನ್ನು ಹಾಕಿದೆ. ಭಾನುವಾರ ಕಾರ್ಯಾಚರಣೆ ನಡೆಸಿದ ಪುರಸಭೆ […]

ಕೇರಳದಲ್ಲಿ ಕನ್ನಡ ಸಂಪೂರ್ಣ ನಿರ್ನಾಮ, ಮಂಜೇಶ್ವರದ ಗ್ರಾಮಗಳ ಕನ್ನಡದ ಹೆಸರುಗಳ ಮಲಯಾಳೀಕರಣ

Saturday, June 26th, 2021
Kerala-Kannada

ಮಂಜೇಶ್ವರ : ಕೇರಳದಲ್ಲಿ ಕನ್ನಡವನ್ನು ಸಂಪೂರ್ಣ ನಿರ್ನಾಮ ಮಾಡ ಹೊರಟಿರುವ ಪಿಣರಾಯಿ ಸರಕಾರ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಹಾಗೂ ಅಲ್ಲಿನ ಕೆಲವು ಗ್ರಾಮಗಳ ಕನ್ನಡದ ಹೆಸರುಗಳನ್ನು ಮಲಯಾಳಂ ಭಾಷೆಗೆ ಬದಲಾಯಿಸಿ ನಾಮಫಲಕಗಳನ್ನು ಅಳವಡಿಸುತ್ತಿದೆ. ಕೇರಳ ಸರ್ಕಾರದ ಈ ನಡೆಯನ್ನು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಖಂಡಿಸಿದೆ. `ಮಧೂರು-ಮಧುರಮ್, ಮಲ್ಲ-ಮಲ್ಲಮ್, ಕಾರಡ್ಕ-ಕಡಗಮ್, ಬೇದಡ್ಕ-ಬೆಡಗಮ್, ಪಿಲಿಕುಂಜೆ-ಪಿಲಿಕುನ್ನು, ಆನೆಬಾಗಿಲು-ಆನೆವಾಗಿಲ್, ಮಂಜೇಶ್ವರ-ಮಂಜೇಶ್ವರಮ್, ಹೊಸದುರ್ಗ-ಪುದಿಯಕೋಟ, ಕುಂಬಳೆ-ಕುಂಬ್ಳಾ, ಸಸಿಹಿತ್ಲು-ಶೈವಲಪ್, ನೆಲ್ಲಿಕುಂಜ-ನೆಲ್ಲಿಕುನ್ನಿ’ ಇವುಗಳ ಮೂಲ ಹೆಸರನ್ನೆ  ಬದಲಾಯಿಸಿ ಕನ್ನಡದ ಕುರುಹು ಕೂಡ ಇರಬಾರದು ಎನ್ನುವುದು ಪಿಣರಾಯಿ ಸರಕಾರದ ನಡೆಯಾಗಿದೆ ಎಂದು […]

ಮುದ್ರಾಡಿಯಲ್ಲಿ ತುಳು ಲಿಪಿ ನಾಮಫಲಕ ಅನಾವರಣಗೊಳಿಸಿದ ಮದಗ ಫ್ರೆಂಡ್ಸ್ ಮುದ್ರಾಡಿ

Thursday, January 28th, 2021
madaga

ಕಾರ್ಕಳ  : ಮುದ್ರಾಡಿಯ ಸಾಮಾಜಿಕ ಸೇವಾ ಸಂಘಟನೆಯಾದ ಮದಗ ಫ್ರೆಂಡ್ಸ್ ಮುದ್ರಾಡಿ ವತಿಯಿಂದ ತುಳು ಲಿಪಿಯಲ್ಲಿ ಊರಿನ ಹೆಸರಿನ ನಾಮಫಲಕವನ್ನು ಮುದ್ರಾಡಿಯ ಮದಗ ಎಂಬಲ್ಲಿ ಅನಾವರಣಗೊಳಿಸಿಲಾಯಿತು. ತುಳುಲಿಪಿ ನಾಮಫಲಕವನ್ನು ಉದ್ಘಾಟಿಸಿದ ತುಲು ರಂಗಭೂಮಿ ಕಲಾವಿದರು ಮತ್ತು ತುಳುನಾಡ ಬಂಗಾರ್ ಗರೋಡಿಲು ಸಾಕ್ಷಚಿತ್ರದ ನಿರ್ದೇಶಕರಾದ ಶ್ರೀ ಸುರೇಂದ್ರ ಮೋಹನ್ ಮಾತನಾಡಿ ಇವತ್ತು ಇಡೀ ಮುದ್ರಾಡಿ ಗ್ರಾಮಕ್ಕೆ ಖುಷಿಯ ವಿಚಾರ. ಅದರಲ್ಲೂ ಮುದ್ರಾಡಿಯಲ್ಲಿ ತುಳುಲಿಪಿ ನಾಮಫಲಕ ಉದ್ಘಾಟನೆ ಮಾಡುವ ಸಂಧರ್ಭ ಬಂದಿದ್ದು ಹೆಮ್ಮೆಎನಿಸುತ್ತದೆ. ತುಳುಲಿಪಿ ಉಳಿಸಿ ಬೆಳೆಸುವ ಮದಗ ಫ್ರೆಂಡ್ಸ್ […]

ವಿನಾಯಕನ ದೇವಾಲಯದ ಬಾಗಿಲಿಗೆ ಮಂಗಳೂರು “ಬೀಡಿ ಕಂಪೆನಿಯೊಂದರ ಬೋರ್ಡ್‌”

Wednesday, July 22nd, 2020
beedi

ಬೇಲೂರು : ಸ್ಥಳೀಯ ಪುರಸಭೆ ಅಂಗಳದಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ದೇವಸ್ಥಾನದ ಬಾಗಿಲಿಗೆ ಬೀಡಿಯೊಂದರ ನಾಮಫಲಕ ಅಳವಡಿಸಿದ್ದಕ್ಕೆ ಭಕ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ದೇವಾಲಯಕ್ಕೆ ದೇಣಿಗೆ ಕೊಟ್ಟಿರುವ ದಾನಿಗಳ ಹೆಸರು ಹಾಕಿಸುತ್ತಾರೆ. ಆದರೆ ಸಾರ್ವಜನಿಕವಾಗಿ ಮತ್ತು ಸಾಮಾಜಿಕವಾಗಿ ಕೆಲವೊಂದು ಸ್ಥಳಗಳಲ್ಲಿ ನಿಷೇಧಿಸಲ್ಪಟ್ಟಿರುವ ಬೀಡಿಯೊಂದರ ಹೆಸರಿನ ನಾಮಫಲಕವನ್ನು ದೇವಾಲಯಕ್ಕೆ ಹಾಕಿರುವುದು ಸರಿಯಲ್ಲ ಎಂಬುದು ಭಕ್ತರ ವಾದವಾಗಿದೆ. ಈ ಬಗ್ಗೆ ದೇವಸ್ಥಾನಕ್ಕೆ ಈ ರೀತಿ ಫಲಕ ಹಾಕಿರುವುದು ಸರಿಯಲ್ಲ ಎಂದು ಭಕ್ತರು ಆಡುವ ಮಾತು. ಈ ಬಗ್ಗೆ ದೇವಾಲಯದ […]

ತಂಬಾಕು ನಿಯಂತ್ರಣ : ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ; ನಾಮಫಲಕ ಅಳವಡಿಕೆ ಕಡ್ಡಾಯ

Thursday, January 9th, 2020
thambaku

ಮಡಿಕೇರಿ : ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ ಅವರು ಜಿಲ್ಲೆಯ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ, ಸಂಸ್ಥೆಗಳಲ್ಲಿ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಹಾಗೂ ತಂಬಾಕು ನಿಯಂತ್ರಣ ಸಂಬಂಧಿಸಿದಂತೆ ಅಗತ್ಯ ಜಾಗೃತಿ ಮೂಡಿಸುವಂತೆ ಅವರು ಸೂಚಿಸಿದರು. ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಕಾರ್ಯಕ್ರಮದ ಅಧಿಕಾರಿ ಡಾ.ಎಂ.ಶೀವಕುಮಾರ್ ಅವರು ಮಾತನಾಡಿ ಕೋಟ್ಪಾ ಕಾಯ್ದೆ […]

ಕನ್ನಡದಲ್ಲಿ ನಾಮಫಲಕ ಪ್ರದರ್ಶನ ಕಡ್ಡಾಯ: ಪ್ರದೀಪಕಲ್ಕೂರ ಆಗ್ರಹ

Wednesday, October 23rd, 2019
Kannada

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೊಳಪಟ್ಟ ಎಲ್ಲಾ ವಾಣಿಜ್ಯ ಮಳಿಗೆ, ವಸತಿ ಸಂಕೀರ್ಣ ವಾಣಿಜ್ಯ ಸಂಕೀರ್ಣ, ಸಂಘ, ಸಂಸ್ಥೆ ಹೀಗೆ ಎಲ್ಲಾ ಸಂಸ್ಥೆಗಳಲ್ಲೂ ನಾಮ ಫಲಕಗಳನ್ನು ಕಡ್ಡಾಯವಾಗಿಕನ್ನಡ ಭಾಷೆಯಲ್ಲೇ ಪ್ರದರ್ಶಿಸುವಂತೆ ಆದೇಶ ಹೊರಡಿದುವಂತೆ ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಒತ್ತಾಯಿಸಿದೆ. ಈ ಕುರಿತು ಪರಿಷತ್ತಿನಜಿಲ್ಲಾಧ್ಯಕ್ಷಎಸ್. ಪ್ರದೀಪಕುಮಾರಕಲ್ಕೂರ ಮಂಗಳೂರು ಮಹಾನಗರ ಪಾಲಿಕೆಯಆಯುಕ್ತರಾಗಿರುವ ಶಾನಾಡಿಅಜಿತ್‌ಕುಮಾರ್ ಹೆಗ್ಡೆಯವರಿಗೆ ಮನವಿಯೊಂದನ್ನು ಸಲ್ಲಿಸಿದ್ದಾರೆ. ಈಗಾಗಲೇ ಬೆಂಗಳೂರು ಮಹಾನಗರ ಪಾಲಿಕೆಯು ನವೆಂಬರ್ 1 ರೊಳಗೆ ಕನ್ನಡದಲ್ಲೇ ನಾಮಫಲಕಗಳನ್ನು ಪ್ರದರ್ಶಿಸುವ ಕುರಿತುಆದೇಶ ನೀಡಿದ್ದುಇದು ರಾಜ್ಯದಾದ್ಯಂತಜಾರಿಗೆ ಬರುವಂತಾಗಲಿ, ರಾಜ್ಯದ ಪ್ರಮುಖ ನಗರಗಳಲ್ಲೊಂದಾದ […]