ನ್ಯಾಯಬೆಲೆ ಅಂಗಡಿಯಲ್ಲಿ ಹುಳು ತುಂಬಿದ ಅನ್ನಭಾಗ್ಯದ ಅಕ್ಕಿ ಮೂಟೆಗಳು ಪತ್ತೆ..!

Thursday, July 26th, 2018
rice-bag

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನಲ್ಲಿರುವ ಕುಂಬ್ರದ ನ್ಯಾಯಬೆಲೆ ಅಂಗಡಿಯಲ್ಲಿ ಕೊಳೆತು ಹೋದ ಅನ್ನಭಾಗ್ಯದ ಅಕ್ಕಿ ಮೂಟೆಗಳು ಪತ್ತೆಯಾಗಿವೆ. ನ್ಯಾಯಬೆಲೆ ಅಂಗಡಿಯಲ್ಲಿ ಹುಳು ತುಂಬಿದ ಕೊಳೆತ ಅಕ್ಕಿ ಮೂಟೆಗಳು ಪತ್ತೆಯಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯ ಕುಂಬ್ರ ವ್ಯವಸಾಯ ಸೇವಾ ಸಹಕಾರಿ ಸಂಘದ ಈ ನ್ಯಾಯಬೆಲೆ ಅಂಗಡಿಯಲ್ಲಿ ಹುಳು ತುಂಬಿದ ಅನ್ನಭಾಗ್ಯದ ಅಕ್ಕಿ ಮೂಟೆಗಳು ಪತ್ತೆಯಾಗಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯರು ಅಂಗಡಿ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಆಹಾರ ಇಲಾಖಾ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ […]

ಉಪ್ಪು ಹಾಕಿದಾಗ ಆಹಾರದ ಬಣ್ಣ ಬದಲಾವಣೆ: ಗ್ರಾಹಕರಲ್ಲಿ ಆತಂಕ

Wednesday, November 30th, 2016
Salt

ಸುಳ್ಯ: ಉಪ್ಪು ಹಾಕಿದಾಗ ಆಹಾರದ ಬಣ್ಣ ಬದಲಾಗುತ್ತಿರುವ ಪ್ರಸಂಗ ಗ್ರಾಹಕರಲ್ಲಿ ಆತಂಕ ಮತ್ತು ಗೊಂದಲ ಸೃಷ್ಠಿಸಿದ ಘಟನೆ ಸುಳ್ಯದಲ್ಲಿ ನಡೆದಿದೆ. ಅನ್ನಭಾಗ್ಯ ಯೋಜನೆಯಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಲಾದ ಉಪ್ಪಿನ ಪ್ಯಾಕೇಟ್‍ನಲ್ಲಿ ಬರುವ ಉಪ್ಪನ್ನು ಬಳಸಿದಾಗ ಆಹಾರದ ಬಣ್ಣ ಬದಲಾಗಿದೆ. ದ್ವಿಗುಣ ಬಲವರ್ಧಿತ ಕಬ್ಬಿಣಾಂಶಯುಕ್ತ ಅಯೋಡಿನ್‍ಯುಕ್ತ ಉಪ್ಪನ್ನು ಬಳಸಿದಾಗ ಆಹಾರ ವಸ್ತುಗಳ ಬಣ್ಣ ಕೆಲವೇ ಕ್ಷಣದಲ್ಲಿ ನೀಲಿ ಬಣ್ಣಕ್ಕೆ ತಿರುಗುತ್ತಿದೆ. ಸುಳ್ಯ ಸಹಕಾರಿ ವ್ಯವಸಾಯಿಕ ಬ್ಯಾಂಕಿನ ಅಜ್ಜಾವರ ಶಾಖೆಯ ನ್ಯಾಯಬೆಲೆ ಅಂಗಡಿಯಿಂದ ಉಪ್ಪಿನ ಪೊಟ್ಟಣ ಖರೀದಿಸಿದ್ದ ಗೋಪಾಲ […]

ಪಡಿತರ ಸಾಮಗ್ರಿ ಪಡೆಯಲು ಪೋರ್ಟೆಬಿಲಿಟಿ ಸೌಲಭ್ಯ ಜಾರಿಯಾಗಲಿದೆ: ಯು.ಟಿ. ಖಾದರ್

Wednesday, August 24th, 2016
Khadar

ಮಂಗಳೂರು: ಪಡಿತರ ಸಾಮಗ್ರಿ ಪಡೆಯಲು ಪೋರ್ಟೆಬಿಲಿಟಿ ಸೌಲಭ್ಯ ಜಾರಿಯಾಗಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ಮಹಾ ನಗರಪಾಲಿಕೆ ಸರಹದ್ದಿನ ಕುಟುಂಬವೊಂದು ಈಗ ನಿರ್ಧಿಷ್ಟ ನ್ಯಾಯಬೆಲೆ ಅಂಗಡಿಗೆ ತೆರಳಿ ಪಡಿತರ ಸಾಮಗ್ರಿ ಪಡೆಯಬೇಕಾಗುತ್ತದೆ. ಆದರೆ ಮುಂದೆ ಅಂತಹ ಕುಟುಂಬಗಳು ಪಾಲಿಕೆ ವ್ಯಾಪ್ತಿಯ ಯಾವುದೇ ನ್ಯಾಯಬೆಲೆ ಅಂಗಡಿಯಿಂದ ಪಡಿತರ ಸಾಮಗ್ರಿ ಪಡೆಯಬಹುದಾಗಿದೆ. ನಗರಸಭೆ, ಪುರಸಭೆ ವ್ಯಾಪ್ತಿ ಮತ್ತು ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಕುಟುಂಬಗಳು ಅದೇ ಸರಹದ್ದಿನ ಯಾವುದೇ […]

ನ್ಯಾಯಬೆಲೆ ಅಂಗಡಿಗಳ ತಪಾಸಣೆಗೆ ಡಿಸಿ ಸೂಚನೆ

Wednesday, April 30th, 2014
Ibrahim

ಮಂಗಳೂರು : ಜಿಲ್ಲೆಯಲ್ಲಿರುವ ನ್ಯಾಯಬೆಲೆ ಅಂಗಡಿಗಳ ತಪಾಸಣೆಯನ್ನು ಆಹಾರ ಇಲಾಖೆಯು ಆಗಿಂದಾಗ್ಗೆ ನಿಗದಿತವಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸೂಚಿಸಿದ್ದಾರೆ. ಅವರು ಬುಧವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಆಹಾರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡುತ್ತಿದ್ದರು. ನ್ಯಾಯಬೆಲೆ ಅಂಗಡಿಗಳ ತಪಾಸಣೆ ಕುಂಠಿತಗೊಂಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ನ್ಯಾಯಬೆಲೆ ಅಂಗಡಿಗಳ ತೂಕದ ತಕ್ಕಡಿಗಳು ಸಮರ್ಪಕವಾಗಿ ಕಾರ್ಯವಾಗುತ್ತಿರುವುದನ್ನು ತೂಕ ಮತ್ತು ಅಳತೆ ಇಲಾಖೆಯು ನೀಡಿರುವ ಪ್ರಮಾಣಪತ್ರಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಜಿಲ್ಲೆಯಲ್ಲಿ 500 ನ್ಯಾಯಬೆಲೆ ಅಂಗಡಿಗಳು ಅಸ್ತಿತ್ವದಲ್ಲಿದೆ. ನೂತನ ನ್ಯಾಯಬೆಲೆ […]

ನಿಗದಿತ ವೇಳೆಯಲ್ಲಿ ನ್ಯಾಯಬೆಲೆ ಅಂಗಡಿಗಳು ತೆರೆದಿರಬೇಕು: ಜಿಲ್ಲಾಧಿಕಾರಿ ಸೂಚನೆ

Wednesday, December 15th, 2010
ಜಿಲ್ಲಾಧಿಕಾರಿ ಶ್ರೀ ಸುಬೋಧ್ ಯಾದವ್

ಮಂಗಳೂರು : ನ್ಯಾಯಬೆಲೆ ಅಂಗಡಿಗಳು ಬೆಳಗ್ಗೆ 8ರಿಂದ 12ಗಂಟೆಯವರೆಗೆ, ಸಂಜೆ 4ರಿಂದ 8 ಗಂಟೆಯವರೆಗೆ ತೆರೆದಿರಬೇಕು. ಅಂಗಡಿಗಳಲ್ಲಿರುವ ಪದಾರ್ಥಗಳು ಮತ್ತು ಬೆಲೆ ಬಗ್ಗೆ ಸವಿವರ ಬೋರ್ಡ್ ಹಾಕಿರಬೇಕು; ತೂಕದಲ್ಲಿ ವ್ಯತ್ಯಾಸವಿದೆ ಎಂಬ ಆರೋಪಗಳು ಬರಬಾರದು ಎಂದು ಜಿಲ್ಲಾಧಿಕಾರಿ ಶ್ರೀ ಸುಬೋಧ್ ಯಾದವ್ ಅವರು ಹೇಳಿದರು. ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಮನ್ವಯ ಸಮಿತಿ ಪ್ರಗತಿ ಪರಿಶೀಲನೆ ಸಭೆಯನ್ನು ದ್ದೇಶಿಸಿ ಮಾತನಾಡುತ್ತಿದ್ದರು. ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಸಾರ್ವಜನಿಕರಿಂದ ಯಾವುದೇ ದೂರುಗಳು ಬರಬಾರದು ಎಂದು ಹೇಳಿದ ಅವರು, ಎರಡು ತಿಂಗಳಿಗೊಮ್ಮೆ […]