Blog Archive

ಅಗಲಿದ ಮಿತ್ರನಿಗೆ ಪತ್ರಕರ್ತರಿಂದ ಶ್ರದ್ಧಾಂಜಲಿ

Wednesday, July 24th, 2019
nagesh

ಮಂಗಳೂರು: ಡೆಂಗ್ಯೂ ಜ್ವರದಿಂದ ಭಾನುವಾರ ತಡರಾತ್ರಿ ಸಾವನ್ನಪ್ಪಿದ ಖಾಸಗಿ ಸುದ್ದಿವಾಹಿನಿಯ ವಿಡಿಯೋ ಜರ್ನಲಿಸ್ಟ್ ನಾಗೇಶ್ ಪಡು ಅವರಿಗೆ ನಗರದ ಪ್ರೆಸ್‍ಕ್ಲಬ್‍ನಲ್ಲಿ ಮಂಗಳವಾರ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‍ಕ್ಲಬ್ ಮತ್ತು ಪತ್ರಿಕಾಭವನ ಟ್ರಸ್ಟ್ ವತಿಯಿಂದ ನಡೆದ ಸಭೆಯಲ್ಲಿ ಅಗಲಿದ ಗೆಳೆಯನಿಗೆ ಪತ್ರಕರ್ತರು ನುಡಿನಮನ ಸಲ್ಲಿಸಿದರು. ಮೌನಪ್ರಾರ್ಥನೆ ಸಲ್ಲಿಸಿ ಅಗಲಿದ ಆತ್ಮಕ್ಕೆ ಸದ್ಗತಿ ಕೋರಿದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ, ಸದಾ ನಗುಮುಖದೊಂದಿಗೆ […]

ಪತ್ರಕರ್ತರ ಕ್ರೀಡಾಕೂಟ 2018

Monday, December 17th, 2018
press-3

ಮಂಗಳೂರು: ಕ್ರೀಡೆ ದೈಹಿಕ ಹಾಗೂ ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ಸಾಧ್ಯ. ಒತ್ತಡದಿಂದ ಕಾರ್ಯನಿರ್ವಹಿಸುವ ಮಾಧ್ಯಮ ಕ್ಷೇತ್ರದ ಪ್ರತಿನಿಧಿಗಳು ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ವೃತ್ತಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ದಕ್ಷಿಣ ಕನ್ನಡ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ಬಿ.ಆರ್.ರವಿಕಾಂತೇ ಗೌಡ ಅಭಿಪ್ರಾಯ ಪಟ್ಟರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ಇದರ ವತಿಯಿಂದ ಭಾನುವಾರ ನಗರದ ಪುಟ್ಭಾಲ್ ಮೈದಾನದಲ್ಲಿ ನಡೆದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು […]

ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಕೊಲ್ಲಲು ಸುಪಾರಿ, ರವಿ ಬೆಳಗೆರೆ ಬಂಧನ

Friday, December 8th, 2017
Ravibelagare

ಬೆಂಗಳೂರು : ಹಾಯ್ ಬೆಂಗಳೂರು ಪತ್ರಿಕೆಯ ಪ್ರಧಾನ ಸಂಪಾದಕ ರವಿ ಬೆಳೆಗೆರೆಯನ್ನು ಸಿಸಿಬಿ ಪೊಲೀಸರು ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ಪದ್ಮನಾಭನಗರದ ಕಚೇರಿಯಲ್ಲಿ ಬಂಧಿಸಿದ್ದಾರೆ. ಸಿಸಿಬಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಪತ್ರಕರ್ತರೊಬ್ಬರನ್ನು ಕೊಲ್ಲಲುಶಾರ್ಪ್ ಶೂಟರ್ಸ್ ಗೆ ಸುಪಾರಿ ಕೊಟ್ಟಿದ್ದ ಆರೋಪದ ಮೇಲೆ ರವಿಬೆಳಗೆರೆಯನ್ನು ಬಂಧಿಸಲಾಗಿದೆ. ಶಾರ್ಪ್ ಶೂಟರ್ ಶಶಿಧರ್ ಮುಂಡೇವಾಡಗಿ ಹಾಗೂ ಸಹಚರರು ವಿಚಾರಣೆ ವೇಳೆ ಈ ವಿಷಯ ಬಾಯ್ಬಿಟ್ಟಿದ್ದಾನೆ. ಹಾಯ್ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಅವರನ್ನು ಕೊಲ್ಲಲು ರವಿ ಬೆಳಗೆರೆ ಸುಪಾರಿ ಕೊಟ್ಟಿದ್ದರು […]

ನ.5 ರಂದು ಪತ್ರಕರ್ತ ಮನೋಹರ್ ಪ್ರಸಾದ್‌ರಿಗೆ ರಂಗಚಾವಡಿ ಪ್ರಶಸ್ತಿ ಪ್ರದಾನ

Monday, October 30th, 2017
mohan prasad

ಮಂಗಳೂರು: ರಂಗಚಾವಡಿ ಮಂಗಳೂರು, ಸಾಹಿತ್ಯಿಕ-ಸಾಂಸ್ಕೃತಿಕ ಸಂಘಟನೆಯ ರಂಗ ಚಾವಡಿ ಪ್ರಶಸ್ತಿ ಪ್ರದಾನ ಸಮಾರಂಭವು ನವಂಬರ್ 5ರಂದು ಭಾನುವಾರ ಸಂಜೆ 3.30 ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ಜರಗಲಿದೆ. ಈ ಬಾರಿಯ ರಂಗಚಾವಡಿ ಪ್ರಶಸ್ತಿಯನ್ನು ಉದಯವಾಣಿಯ ಮಂಗಳೂರು ಸುದ್ದಿ ವಿಭಾಗದ ಮುಖ್ಯಸ್ಥರಾದ ಮನೋಹರ್ ಪ್ರಸಾದ್ ಪಡೆಯಲಿದ್ದಾರೆ. ಪತ್ರಿಕೋದ್ಯಮದಲ್ಲಿ 35 ವರ್ಷಕ್ಕೂ ಮಿಕ್ಕಿ ಸೇವೆಗೈದಿರುವ ಮನೋಹರ್ ಪ್ರಸಾದ್‌ರನ್ನು ಈ ಬಾರಿ ರಂಗಚಾವಡಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಪತ್ರಕರ್ತ ಜಗನ್ನಾಥ್ ಶೆಟ್ಟಿ ಬಾಳ ಬರೆದಿರುವ ತುಳು ಸಿನಿಮಾವಲೋಕನ ಕೃತಿ ಲೋಕಾರ್ಪಣೆಗೊಳ್ಳಲಿದೆ. ಸಮಾರಂಭದ ಉದ್ಘಾಟನೆಯನ್ನು ಕರ್ನಾಟಕ ಕಾರ್ಯನಿರತ […]

ಲೇಖಕ ಮತ್ತು ಪರಿಸರ ಹೋರಾಟಗಾರ ಪತ್ರಕರ್ತ ಜಯಂತ್ ಪಡುಬಿದ್ರಿ ನಿಧನ

Saturday, October 21st, 2017
jayanth padubidri

ಮಂಗಳೂರು:  ಪತ್ರಕರ್ತ ಜಯಂತ್ ಪಡುಬಿದ್ರಿ (58)  ಸಮಕಾಲಿನ ನಿಖರ ಹಾಗೂ ಸೃಜನಶೀಲ ಲೇಖಕ ಮತ್ತು ಪರಿಸರ ಹೋರಾಟಗಾರ ಅಲ್ಪಕಾಲದ ಅಸೌಖ್ಯದಿಂದ ಪಡುಬಿದ್ರಿಯಲ್ಲಿ ನಿಧನ ಹೊಂದಿದರು. ಇವರು ಮೂಡಬಿದ್ರಿ ಏಂಜಲ್‌ಹಾರ್ಡ್‌ ಯೋಜನೆಯನ್ನು ತಮ್ಮ ಲೇಖನಿಯಿಂದಲೆ ಒದ್ದೋಡಿಸಿ ಖ್ಯಾತರಾಗಿದ್ದರು. ಉದಯವಾಣಿ, ಜನವಾಹಿನಿ, ಲಂಕೇಶ್, ಜಯಕಿರಣ ಸಹಿತ ಹಲವು ಪತ್ರಿಕೆಗಳಲ್ಲಿ ವರದಿಗಾರರಾಗಿ, ಅಂಕಣಕಾರರಾಗಿ ಸೇವೆ ಸಲ್ಲಿಸಿದ್ದರು. ತಮ್ಮ ತೀಕ್ಷ್ಣ ಬರವಣಿಗೆಯಿಂದ ಅಪಾರ ಓದುಗರನ್ನು ಹೊಂದಿದ್ದರು. ಅವಿವಾಹಿತರಾಗಿದ್ದ ಅವರು, ಪಡುಬಿದ್ರಿ ಹಾಗೂ ಅವಿಭಜಿತ ದ.ಕ. ಜಿಲ್ಲೆಯ ಹಲವು ಸಮಸ್ಯೆಗಳನ್ನು ತಮ್ಮ ಲೇಖನಿಯಿಂದ ತೆರೆದಿಟ್ಟು ಸಮಸ್ಯೆಗಳ […]

ಪತ್ರಕರ್ತರ ಮೇಲೆ ಹಲ್ಲೆ ನಡೆದರೆ ನಿರ್ದಾಕ್ಷಿಣ್ಯ ಕ್ರಮ: ಜಿಲ್ಲಾಧಿಕಾರಿ

Saturday, August 5th, 2017
DC jagadeesha

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ರಕರ್ತರಿಗೆ ಕರ್ತವ್ಯ ನಿರ್ವಹಣೆಯಲ್ಲಿ ಬೆದರಿಕೆ, ಹಲ್ಲೆಯಂತಹ  ಪ್ರಕರಣಗಳು ನಡೆದರೆ ಅಂತಹವರ ವಿರುದ್ಧ ಕಾನೂನು ಪ್ರಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು  ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಹೇಳಿದರು. ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ  ಪತ್ರಕರ್ತರ ಮೇಲಿನ ಹಲ್ಲೆಗಳ ಮೇಲ್ವಿಚಾರಣೆ ಮತ್ತು ಪರಿಶೀಲನೆಗೆ ರಚಿಸಿರುವ ಜಿಲ್ಲಾಮಟ್ಟದ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪತ್ರಕರ್ತರ ವಿರುದ್ಧ  ಯಾವುದೇ ದೂರುಗಳಿದ್ದರೂ ಸಮಿತಿಗೆ ಸಲ್ಲಿಸಬಹುದು. ಅದು ಬಿಟ್ಟು ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ಸೂಕ್ತ ಕ್ರಮ ನಡೆಯಲಿದೆ. ಪತ್ರಕರ್ತರ ಕರ್ತವ್ಯಕ್ಕೆ […]

ಪತ್ರಕರ್ತರು ಮನುಷ್ಯ ಪಂಥಿಯನಾಗಿರಬೇಕು : ವಿ.ಗ. ನಾಯಕ್

Tuesday, April 7th, 2015
Pago15

ಮಂಗಳೂರು : ಕಳೆದ (2015 ನೇ) ಸಾಲಿನ ಪ.ಗೋ. (ಪದ್ಯಾಣ ಗೋಪಾಲಕೃಷ್ಣ ಸಂಸ್ಮರಣಾ ಗ್ರಾಮೀಣ ವರದಿಗಾರಿಕೆಗಾಗಿ ) ಪ್ರಶಸ್ತಿಯನ್ನು ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸಮಾರಂಭದಲ್ಲಿ ವಿಜಯಕರ್ನಾಟಕ ದ ಉಡುಪಿ ವರದಿಗಾರ ಬಾಲಕೃಷ್ಣ ಶಿಬಾರ್ಲ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ನೀಡಿ ಮಾತನಾಡಿದ ಕನ್ನಡದ ಹಿರಿಯ ಸಾಹಿತಿ, ವಿ.ಗ. ನಾಯಕ್, ಪತ್ರಕರ್ತರು ಎಲ್ಲವೂ ಸುಧಾರಣೆಯಾಗಬೇಕು ಎನ್ನುವ ಕಾಳಜಿ ಇರುವವರು. ಸಾಹಿತಿಗಳಂತೆ ಪತ್ರಕರ್ತರು ಧಿಮಾಕು ಹೊಂದಿದವರಲ್ಲ. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮೂಲಕ ಯಾವುದೇ ತತ್ವ ಸಿದ್ಧಾಂತಗಳಿಗೆ […]

ಹಿರಿಯ ಪತ್ರಕರ್ತ ಎಂ.ವಿ ಕಾಮತ್ ನಿಧನ

Thursday, October 9th, 2014
mv Kamath

ಉಡುಪಿ : ನಾಲ್ಕು ದಶಕಗಳ ಸುದೀರ್ಘ‌ ಕಾಲ ಭಾರತೀಯ ಪತ್ರಿಕಾರಂಗಕ್ಕೆ ಅನುಪಮ ಸೇವೆ ಸಲ್ಲಿಸಿರುವ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಮಾಧವ ವಿಟ್ಟಲ ಕಾಮತ್‌ (ಎಂ. ವಿ. ಕಾಮತ್‌‌) ಅವರು ಗುರುವಾರ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕೆಲವು ದಿನಗಳ ಹಿಂದೆ ವಾರ್ಧಕ್ಯದ ಕೆಲವು ತೊಂದರೆಗಳಿಂದಾಗಿ ಕಾಮತ್‌ ಅವರನ್ನು ಮಣಿಪಾಲದ ಆಸ್ಪತ್ರೆಗೆ ಸೇರಿಸಲಾಗಿತ್ತು. ಮೂಲತಃ ಉಡುಪಿಯವರಾದ ಎಂ. ವಿ. ಕಾಮತ್‌ ಅವರ ಅಂತ್ಯಕ್ರಿಯೆಯು ಗುರುವಾರ ನಡೆಯಲಿದೆ ಎಂದು ಅವರ ಸೋದರ ಸಂಬಂಧಿ ಜಯರಾಮ ಕಾಮತ್‌ ತಿಳಿಸಿದ್ದಾರೆ. ಟೈಮ್ಸ್‌ ಆಫ್ […]

ಪತ್ರಿಕೆಗಳು ಸಮಾಜದ ಕಣ್ಣು : ಹಿರಿಯ ಪತ್ರಕರ್ತ ಮಲಾರ್ ಜಯರಾಂ ರೈ

Tuesday, June 10th, 2014
Manjeshwara press club

ಮಂಜೇಶ್ವರ : ಪತ್ರಿಕೆಗಳು ಸಮಾಜದ ಕಣ್ಣು , ಪತ್ರಕರ್ತರು ಸಮಾಜದ ಏಳಿಗೆಗಾಗಿ ಪ್ರತಿಭದ್ದವಾಗಿ ದುಡಿಯಬೇಕು ಮತ್ತು ಪತ್ರಿಕೆಗಳು ಸಾಮಾಜಿಕ ಕಳಕಳಿಯನ್ನು ಹೊಂದಿರಬೇಕೆಂದು ಹಿರಿಯ ಪತ್ರಕರ್ತ ಮಲಾರ್ ಜಯರಾಂ ರೈ ನುಡಿದಿದ್ದಾರೆ. ಅವರು ಮಂಜೇಶ್ವರ ಪ್ರೆಸ್ ಕ್ಲಬ್ ನ ನೂತನ ಕಛೇರಿಯನ್ನು ಉದ್ಗಾಟಿಸಿ ಮಾತನಾಡುತ್ತಿದ್ದರು. ಸಮಾಜದಲ್ಲಿನ ಕುಂದು ಕೊರತೆಗಳನ್ನು ಎತ್ತಿ ತೋರಿಸುವಲ್ಲಿ ಪತ್ರಕರ್ತರು ಮಾಡುವ ಕೆಲಸ ಪ್ರಶಂಸನಾರ್ಹ, ಈ ನಿಟ್ಟಿನಲ್ಲಿ ಯುವ ಪತ್ರಕರ್ತರು ಪತ್ರಿಕಾ ರಂಗಕ್ಕೆ ಬರುವುದು ಬಹಳ ಸಂತೋಷದ ವಿಷಯ ಎಂದರು. ಸಭಾ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದ […]

ಕೋಲಾರದಲ್ಲಿ ಆನೆ ದಾಳಿಗೆ ಪತ್ರಕರ್ತ ಸಹಿತ ಒಟ್ಟು ನಾಲ್ವರು ಬಲಿ

Sunday, June 23rd, 2013
Elephant kills Jounalist

ಹೊಸಕೋಟೆ  : ಹೊಸಕೋಟೆ ತಾಲೂಕಿನ ಇಂಜನಹಳ್ಳಿ ಯಲ್ಲಿ ಕಾಡನ್ನು ಬಿಟ್ಟು ನಾಡಿಗೆ ನುಗ್ಗಿರುವ ಕಾಡಾನೆಗಳು ವರದಿಗೆಂದು ತೆರಳಿದ್ದ ಪತ್ರಕರ್ತರೊಬ್ಬರ ಮೇಲೆ ದಾಳಿ ಮಾಡಿ ಕೊಂದುಹಾಕಿದ ಘಟನೆ ಭಾನುವಾರ ನಡೆದಿದೆ. ಹತ್ತು ದೊಡ್ಡ ಆನೆಗಳು ಮತ್ತು ನಾಲ್ಕು ಮರಿ ಆನೆಗಳಿದ್ದ ಹಿಂಡು ಇಂಜನಹಳ್ಳಿಯಲ್ಲಿರುವ 25 ಎಕರೆ ನೀಲಗಿರಿ ತೋಪಿಗೆ ನುಗ್ಗಿದ್ದವು. ಅಕ್ಕಪಕ್ಕದಲ್ಲಿ ದೊಡ್ಡಮೆಣಸಿನಕಾಯಿ ಸೇರಿದಂತೆ ಹಲವಾರು ಬೆಳೆಗಳನ್ನು ಬೆಳೆಯುತ್ತಿದ್ದ ರೈತರು ಆನೆಗಳನ್ನು ಓಡಿಸಲು ಯತ್ನಿಸಿದ್ದಾರೆ. ಕಾಡಾನೆಗಳು ಎಬ್ಬಿಸುತ್ತಿರುವ ಹಾವಳಿಯ ವರದಿಗೆಂದು ತೆರಳಿದ್ದ ವಿಜಯವಾಣಿ ದಿನಪತ್ರಿಕೆಯ ವರದಿಗಾರ ಮಂಜುನಾಥ್ ಎಂಬುವವರನ್ನು […]