ಧರ್ಮಸ್ಥಳ ಲಕ್ಷದೀಪೋತ್ಸವ : ಉಜಿರೆಯಿಂದ ಧರ್ಮಸ್ಥಳಕ್ಕೆ ಭಕ್ತರು ಹಾಗೂ ಅಭಿಮಾನಿಗಳ ಪಾದಯಾತ್ರೆ

Wednesday, November 27th, 2024
Padayatre

ಉಜಿರೆ: ಸತ್ಯ, ಧರ್ಮ, ನ್ಯಾಯ ಮತ್ತು ನೀತಿಯ ಮಾರ್ಗದಲ್ಲಿ ನಡೆದು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಹೃದಯ ವೈಶಾಲ್ಯದಿಂದ ಕಾಯಕದ ಮೂಲಕ ತಾನು ಸಂತೋಷದಿಂದ ನಿತ್ಯವೂ, ನಿರಂತರವೂ ಶ್ರೀ ಮಂಜುನಾಥ ಸ್ವಾಮಿಯ ಸೇವೆ ಮಾಡುತ್ತಿರುವುದಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.ಅವರು ಮಂಗಳವಾರ ಲಕ್ಷದೀಪೋತ್ಸವ ಸಂದರ್ಭದಲ್ಲಿ ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಶ್ರದ್ಧಾ ಭಕ್ತಿಯಿಂದ ಬಂದ 25 ಸಾವಿರಕ್ಕೂ ಮಿಕ್ಕಿದ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು. ತಮಗೆ ಸುಖ-ದುಃಖ ಮತ್ತು ಪಾಪ – ಪುಣ್ಯದ ಭಯ ಹಾಗೂ ಚಿಂತೆ ಇಲ್ಲ. […]

ಹೆಣ್ಣು ಮಕ್ಕಳಿಗೆ ರಕ್ಷಣೆ‌ ಒದಗಿಸುವಂತೆ “ದಕ್ಷಿಣದಿಂದ ಉತ್ತರಕ್ಕೆ” ಪಾದಯಾತ್ರೆ

Wednesday, November 6th, 2024
Foot-March

ಮಂಗಳೂರು : ಹೆಣ್ಣು ಮಕ್ಕಳಿಗೆ ರಕ್ಷಣೆ‌ ನೀಡಬೇಕು: ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಮಂಗಳೂರು ಟು ದಿಲ್ಲಿ ಪ್ರಧಾನಿ ಕಚೇರಿಗೆ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಪ್ರವೀಣ್ ಮಂಗಳೂರು, ಮೂಸಾ ಶರೀಫ್ ರವರ ನಾಯಕತ್ವದಲ್ಲಿ ಭೇಟಿ ಬಚಾವೋ ಎಂಬ ಧ್ಯೇಯವಾಕ್ಯದಡಿಯಲ್ಲಿ “ದಕ್ಷಿಣದಿಂದ ಉತ್ತರಕ್ಕೆ” – (ಮಂಗಳೂರಿನಿಂದ ದೆಹಲಿ) ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಇಡೀ ವಿಶ್ವಕ್ಕೆ ಸಂಸ್ಕೃತಿ ಮತ್ತು ಸಂಸ್ಕಾರಗಳ ಪಾಠ ಹೇಳಿಕೊಟ್ಟ ನಮ್ಮ ಭವ್ಯ ಭಾರತದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ. ಒಂದು ಹೆಣ್ಣು ಓದಿನ ವಿಚಾರವಾಗಿಯೋ, ಅಥವಾ […]

“ಬಿಜೆಪಿಗರು ಕೋಟ, ಬೊಮ್ಮಾಯಿ, ಸುಧಾಕರ್ ಮನೆಗೆ ಪಾದಯಾತ್ರೆ ಮಾಡಲಿ!“ಐವನ್ ಡಿಸೋಜ ಗುಡುಗು

Saturday, August 3rd, 2024
Ivan-D-Souza

ಮಂಗಳೂರು: ಬಿಜೆಪಿ ಆತ್ಮವಂಚನೆ ಮಾಡಿಕೊಳ್ತಾ ಇದೆ. ವಾಲ್ಮೀಕಿ ಇಲಾಖೆಯಲ್ಲಿ ಹಗರಣ ಆಗಿದೆ ಕ್ರಮ ಕೈಗೊಂಡಿದ್ದೇವೆ. ಅದನ್ನೇ ರಾಜಕೀಯಕ್ಕೆ ಬಳಸಿಕೊಂಡು ಪಾದಯಾತ್ರೆ ಮಾಡುವುದಾದರೆ ನಿಮ್ಮ ಸರಕಾರ ಇದ್ದಾಗ ಇಲಾಖೆಯ ಹಣ ನುಂಗಿ ನೀರು ಕುಡಿದಿರುವ ಕೋಟ ಶ್ರೀನಿವಾಸ್ ಪೂಜಾರಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸುಧಾಕರ್ ಮನೆಗೆ ಮಾಡಿ ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಪತ್ರಿಕಾಗೋಷ್ಟಿಯಲ್ಲಿ ಗುಡುಗಿದ್ದಾರೆ. ನಗರದ ಕಾಂಗ್ರೆಸ್ ಭವನದಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತಾಡಿದ ಅವರು, ಸುಧಾಕರ್ ಕೊರೋನ ಹೆಸರಲ್ಲಿ ನೂರಾರು ಕೋಟಿ ರೂಪಾಯಿ […]

ಸಮೃದ್ಧ ಮಂಗಳೂರು ಅಭಿವೃದ್ಧಿ ಆಗ್ರಹಿಸಿ, ಸಿಪಿಐ(ಎಂ) ಪಾದಯಾತ್ರೆ ಉದ್ಘಾಟನೆ

Thursday, December 7th, 2017
jds Padayatre

ಮಂಗಳೂರು: ಮಂಗಳೂರು ನಗರದ ಸಮಗ್ರ ಅಭಿವೃದ್ಧಿ ಪ್ರಶ್ನೆಯಲ್ಲಿ ದಶಕಗಳಿಂದಲೂ ಮಂಗಳೂರು ನಗರಪಾಲಿಕೆಗೆ ಸಿಪಿಐ(ಎಂ) ಪಕ್ಷವು ಪ್ರತಿಭಟನೆ, ಆಗ್ರಹ, ಪ್ರಸ್ತಾವಿಕೆಗಳನ್ನು ಕಾಲಕಾಲಕ್ಕೆ ಸಲ್ಲಿಸುತ್ತಾ ಬಂದಿದೆ. ಪಾಲಿಕೆ ಆಡಳಿತ ನಡೆಸುತ್ತಿರುವ ಪಕ್ಷಗಳು ಇವುಗಳನ್ನು ಕಡೆಗಣಿಸಿ, ಜನತೆಯ ಹಿತವನ್ನು ಅಲಕ್ಷಿಸಿದೆ. ಈ ನಿಟ್ಟಿನಲ್ಲಿ ಇಂದು ನಗರಪಾಲಿಕೆಯ ವೈಫಲ್ಯವನ್ನು ಮನವರಿಕೆ ಮಾಡಿ ಪರ್ಯಾಯಗಳನ್ನು ಮುಂದಿಡುವ ಸಿಪಿಐ(ಎಂ) ಪಕ್ಷದ ಆಗ್ರಹಗಳಿಗೆ ಜನತೆ ಬೆಂಬಲ ನೀಡಬೇಕಾಗಿದೆ ಎಂಬುದಾಗಿ ಸಿಪಿಐ(ಎಂ) ಪಕ್ಷದ ರಾಜ್ಯ ಕಾರ‍್ಯದರ್ಶಿ ಮಂಡಳಿ ಸದಸ್ಯರಾದ ಜೆ. ಬಾಲಕೃಷ್ಣ ಶೆಟ್ಟಿ ಹೇಳಿದರು. ಮಂಗಳೂರು ಮಹಾನಗರ ಪಾಲಿಕೆ […]

ಮೇಯರ್ ಕವಿತಾ ಸನಿಲ್, ಪಾಲಿಕೆ ಅಧಿಕಾರಿಗಳು ಹಾಗೂ ಟ್ರಾಫಿಕ್ ಪೊಲೀಸ್ ರಿಂದ ಪುಟ್ ಪಾತ್ ನಲ್ಲಿ ಪಾದಯಾತ್ರೆ

Thursday, July 27th, 2017
padayatre

ಮಂಗಳೂರು: ಮಹಾನಗರಪಾಲಿಕೆ ಅಧಿಕಾರಿಗಳು ಹಾಗೂ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಮೇಯರ್ ನೇತೃತ್ವದಲ್ಲಿ  ಪಿವಿಎಸ್‌ ಸರ್ಕಲ್ ನಿಂದ ಸ್ಟೇಟ್ ಬ್ಯಾಂಕ್‌ವರೆಗೆ ಬುಧವಾರ ಸಂಚಾರ ಸುಧಾರಣೆ ಪಾದಯಾತ್ರೆ ನಡೆಸಿದರು. ಈ ಪಾದಯಾತ್ರೆ ಸಂದರ್ಭದಲ್ಲಿ ರಸ್ತೆಯಲ್ಲಿ ಕಂಡು ಬಂದ ಅನಧಿಕೃತ ಪಾರ್ಕಿಂಗ್, ರಸ್ತೆ-ಫುಟ್ ಪಾತ್ ಒತ್ತುವರಿ ತೆರವು ಹಾಗೂ ಸಂಚಾರಕ್ಕೆ ಅಡ್ಡಿಯಾಗಿರುವ ಗೂಡಂಗಡಿಗಳನ್ನು ತೆರವುಗೊಳಿಸಿ  ಎಚ್ಚರಿಕೆ ನೀಡಲಾಯಿತು. ಕಾರ್ಪೊರೇಟರ್‌ ಎ.ಸಿ. ವಿನಯ ರಾಜ್‌ ನಗರದ ಮಿಲಾಗ್ರಿಸ್‌ನ ಆಟೋ ನಿಲ್ದಾಣದಲ್ಲಿ ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಅವರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಕಮಾನು ನಿರ್ಮಿಸಲು  ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ […]

ಧರ್ಮಸ್ಥಳದ ಎಲ್ಲಾ ವ್ಯವಹಾರಗಳು ಕಾನೂನು ಬದ್ಧವಾಗಿವೆ

Monday, December 7th, 2015
Laksha Deepotsava

ಧರ್ಮಸ್ಥಳ : ಲಕ್ಷದೀಪೋತ್ಸವದ ಪ್ರಾರಂಭದ ದಿನವಾದ ಭಾನುವಾರ ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಬಂದ ಭಕ್ತಾದಿಗಳನ್ನು ಉದ್ದೇಶಿಸಿ ಅಮೃತವರ್ಷಿಣಿ ಸಭಾ ಭವನದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಧರ್ಮಸ್ಥಳದ ಎಲ್ಲಾ ವ್ಯವಹಾರಗಳು ಕಾನೂನು ರೀತಿಯಲ್ಲಿ ಕ್ರಮ ಬದ್ಧವಾಗಿವೆ. ಶ್ರೀ ಮಂಜುನಾಥ ಸ್ವಾಮಿ, ಧರ್ಮದೇವತೆಗಳು ಹಾಗೂ ಅಣ್ಣಪ್ಪ ಸ್ವಾಮಿಯ ಅನುಗ್ರಹದಿಂದ ಕ್ಷೇತ್ರದ ಎಲ್ಲಾ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತಿವೆ. ಯಾವುದನ್ನೂ ನಾನು ಮಾಡುವುದಲ್ಲ. ದೇವರು ನನ್ನಿಂದ ಮಾಡಿಸುತ್ತಾರೆ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಲಕ್ಷದೀಪೋತ್ಸವದ ಪ್ರಾರಂಭದ ದಿನವಾದ […]

ಅನೈತಿಕ ಪೊಲೀಸ್‌ಗಿರಿ ವಿರುದ್ಧ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಪಾದಯಾತ್ರೆ

Tuesday, September 29th, 2015
Youth Congress padayatre

ಮಂಗಳೂರು : ನಗರದ ಲಾಲ್ ಭಾಗ್ ನಲ್ಲಿರುವ ಗಾಂಧಿ ಪ್ರತಿಮೆ ಬಳಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಅನೈತಿಕ ಪೊಲೀಸ್‌ಗಿರಿ ವಿರುದ್ಧ ಆಯೋಜಿಸಿರುವ ಬೃಹತ್ ಪಾದಯಾತ್ರೆಯನ್ನು ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಚಾಲನೆ ನೀಡಿದರು. ಕೋಮು ಪ್ರಚೋದನೆ ಮತ್ತು ಕೋಮುವಾದವನ್ನು ಬುಡಸಹಿತ ಕಿತ್ತು ಹಾಕಲು ಸಂಕಲ್ಪ ಮಾಡುವಂತೆ ಯುವಕರಿಗೆ ಕರೆ ನೀಡಿದರು. ಜಿಲ್ಲೆ ಶಾಂತಿ ಹಾಗು ಸೌಹಾರ್ಧತೆಯ ನೆಲೆಯಲ್ಲಿ ಹಿಂದೂ ಮುಸ್ಲೀಮರನ್ನು ಒಗ್ಗೂಡುವಂತೆ ಮಾಡಿದೆ. ಅದನ್ನು […]

ನಳಿನ್ ಕುಮಾರ್ ಹಾಗು ಮೋದಿ ಜಯಗಳಿಸಿದ್ದಕ್ಕೆ ಕಟೀಲಿಗೆ ಪಾದಯಾತ್ರೆ ಹೊರಟ ಯುವಕ

Saturday, May 31st, 2014
Padayatre

ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಳಿನ್ ಕುಮಾರ್ ಕಟೀಲ್ ಹಾಗೂ ಪ್ರಧಾನಿ ಮೋದಿ ಜಯಗಳಿಸಿದರೆ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಪಾದಯಾತ್ರೆ ನಡೆಸುವುದಾಗಿ ಹರಕೆ ಹೊತ್ತಿದ್ದ ಪಕ್ಷದ ಸಕ್ರಿಯ ಯುವ ಕಾರ್ಯಕರ್ತ ಅವಿಷಿತ್ ರೈ ಶುಕ್ರವಾರ ಸಂಜೆ ತಮ್ಮ ಹರಕೆಯನ್ನು ಪೂರೈಸಲು ಕೊಡಿಯಾಲ್ ಬೈಲ್ ನಲ್ಲಿರುವ ಬಿಜೆಪಿ ಕಚೇರಿಯಿಂದ ಪಾದಯಾತ್ರೆ ಆರಂಭಿಸಿದರು. ನಗರದ ಅವಿಷಿತ್ ರೈ ಬಿಜೆಪಿ ಪಕ್ಷ ಹಾಗೂ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದು ಕಟೀಲ್ ಹಾಗು ಮೋದಿ ಜಯಗಳಿಸಿದಲ್ಲಿ ಪಾದಯಾತ್ರೆ ಹೊರಡುವುದಾಗಿ […]

ಸುಳ್ಯ ಕಾಲ್ನಡಿಗೆಯ ಪ್ರತಿಭಟನ ತಂಡ ಇಂದು ಮಂಗಳೂರಿಗೆ : ಸೌಜನ್ಯಾ ಕೊಲೆಯ ನೆನೆಪು

Friday, November 22nd, 2013
sullia

ಸುಳ್ಯ : ಸೌಜನ್ಯಾ ಕೊಲೆಯ ನಂತರ ಎಚ್ಚೆತ್ತ ಗುಲ್ಬರ್ಗ ಧರ್ಮಪೀಠದ ಸ್ವಾಮಿ ಕಬೀರಾನಂದ ಹಾಗೂ ಜನಜಾಗ್ರತಿ ಹೊರಟಗಳಲ್ಲಿ ಪಳಗಿದ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ ದ ಸ್ಥಳೀಯ ಕಾರ್ಯದರ್ಶಿ ಕೆ.ವಸಂತ್ ಆಚಾರಿ ಇವರ ಜಂಟಿ ನೇತ್ರತ್ವದಲ್ಲಿ ಕಾರ್ಯಕರ್ತರ ಒಂದು ತಂಡವು ಸುಳ್ಯದಿಂದ ಮಂಗಳೂರು ವರೆಗೆ ಗುರುವಾರ (ನ.21) ಪಾದಯಾತ್ರೆ ಬೆಳೆಸಿದೆ. ಈ ಜಾಥ ಶುಕ್ರವಾರ ಸಂಜೆಯ ಹೊತ್ತಿಗೆ ಮಂಗಳೂರು ತಲುಪಿ ಒಂದು ಪ್ರತಿಭಟನೆಯ ಸಭೆಯನ್ನು ನಡೆಸುವ ಸಾಧ್ಯತೆ ಇದೆ. ಕಾಲ್ನಡಿಗೆಯ ಪ್ರಾರಂಭದಲ್ಲಿ ಜನ ಸಮೂಹವನ್ನು ಉದ್ದೇಶಿಸಿ ಮಾತನಾಡಿದ ಕಬೀರಾನಂದರು, […]

ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಇ.ಎಸ್.ಐ. ಆಸ್ಪತ್ರೆಯ ಎದುರು ಉಪವಾಸ ಸತ್ಯಾಗ್ರಹ

Saturday, August 17th, 2013
upavasa-sathyagraha

ಮಂಗಳೂರು : ಕಾರ್ಮಿಕರ ಮತ್ತು ನಾಗರಿಕರ ವಿವಿಧ ಬೇಡಿಕೆಗಳ ಬಗ್ಗೆ ಮತ್ತು ಕದ್ರಿ ಶಿವಭಾಗನ ಇ.ಎಸ್.ಐ.  ಆಸ್ಪತ್ರೆಯನ್ನು ಸಂಪೂರ್ಣ ಕೇಂದ್ರ ಸರಕಾರ ವಹಿಸಿಕೊಳ್ಳಬೇಕು ಮತ್ತು ದ.ಕ. ಜಿಲ್ಲೆಯ ವ್ಯಾಪ್ತಿಯ ಅಸುರಕ್ಷಿತ ಸ್ಥಳದ ಕಾರ್ಮಿಕರರಿಗೆ ಇ.ಎಸ್.ಐ.ಸಿ ಸೌಲಭ್ಯಗಳನ್ನು ವಿಸ್ತರಿಸಬೇಕು ಎಂದು ಸುದತ್ತ್ ಜೈನ್  ಶಿರ್ತಡಿಯವರು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಘೋಷ್ಠಿಯಲ್ಲಿ ತಿಳಿಸಿದರು. ಆಗಸ್ಟ್19 ರಂದು  ಜಿಲ್ಲಾಧಿಕಾರಿ ಕಛೇರಿಯಿಂದ ಬೆಳಿಗ್ಗೆ 10ಕ್ಕೆ ಪಾದಯಾತ್ರೆಯ ಮೂಲಕ  ಕದ್ರಿ ಇ.ಎಸ್.ಐ. ಆಸ್ಪತ್ರೆಯ ಎದುರು ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ನಡೆಸಲಾಗುವುದು ಎಂದು  ತಿಳಿಸಿದರು. ಸಮಾನ […]