105 ದಿನಗಳ ಜೈಲುವಾಸ ಅಂತ್ಯ : ಪಿ.ಚಿದಂಬರಂ ಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು

Wednesday, December 4th, 2019
Chidambaram

ನವದೆಹಲಿ : ಐಎನ್ ಎಕ್ಸ್ ಮೀಡಿಯಾ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 105 ದಿನಗಳಿಂದ ಜೈಲು ಶಿಕ್ಷೆ ಅನುಭವಿಸಿದ್ದ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರಿಗೆ ಸುಪ್ರೀಂಕೋರ್ಟ್ ಬುಧವಾರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ನ್ಯಾ.ಭಾನುಮತಿ ನೇತೃತ್ವದ ತ್ರಿಸದಸ್ಯ ಪೀಠ ಚಿದಂಬರಂಗೆ ಷರತ್ತು ಬದ್ಧ ಜಾಮೀನು ನೀಡಿದೆ. ಸಾರ್ವಜನಿಕ ಹೇಳಿಕೆ, ಸಂದರ್ಶನ ನೀಡದಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಪಾಸ್ ಪೋರ್ಟ್ ಪೊಲೀಸರ ವಶಕ್ಕೆ ಒಪ್ಪಿಸಬೇಕು, ಇಬ್ಬರ ಶ್ಯೂರಿಟಿ ಹಾಗೂ 2 ಲಕ್ಷ […]

ಐಎನ್ ಎಕ್ಸ್ ಮೀಡಿಯಾ ಪ್ರಕರಣ : ಪಿ ಚಿದಂಬರಂಗೆ ಸುಪ್ರೀಂ ಕೋರ್ಟ್ ಜಾಮೀನು

Tuesday, October 22nd, 2019
P.-Chidambaram

ನವದೆಹಲಿ : ಐಎನ್ ಎಕ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐನಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಮಾಜಿ ಸಚಿವ ಪಿ ಚಿದಂಬರಂ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಲಾಗಿದೆ. ಸಿಬಿಐ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂಬರಂಗೆ ಜಾಮೀನು ಸಿಕ್ಕಿದ್ದರೂ ಅವರು ಜಾರಿ ನಿರ್ದೇಶನಾಲಯದ ವಶದಲ್ಲಿರುವ ಕಾರಣ ಅವರು ತಿಹಾರ್ ಜೈಲಿನಲ್ಲೇ ಮುಂದುವರಿಯಬೇಕಾಗಿದೆ. ಸಿಬಿಐ ತಮ್ಮ ಮೇಲೆ ದಾಖಲಿಸಿರುವ ಪ್ರಕರಣದಲ್ಲಿ ಜಾಮೀನು ನೀಡುವಂತೆ ಅವರು ಸುಪ್ರೀಂ ಮೆಟ್ಟಿಲೇರಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಇನ್ನೂ ಇಡಿ ವಶದಲ್ಲಿದ್ದು, ಅವರ ಬಂಧನದ ಅವಧಿ ಅಕ್ಟೋಬರ್ […]

ಪಿ ಚಿದಂಬರಂ ಬಂಧನಕ್ಕೆ ಅಡ್ಡಿಯಿಲ್ಲ : ಸುಪ್ರೀಂಕೋರ್ಟ್ ಆದೇಶ

Thursday, September 5th, 2019
P.-chidambaram

ನವದೆಹಲಿ : ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐ ಕಸ್ಟಡಿಯಲ್ಲಿರುವ ಕೇಂದ್ರದ ಮಾಜಿ ವಿತ್ತ ಸಚಿವ ಪಿ ಚಿದಂಬರಂಗೆ ಗುರುವಾರದಂದು ಸುಪ್ರೀಂಕೋರ್ಟಿನಿಂದ ಕಹಿ ಸುದ್ದಿ ಸಿಕ್ಕಿದೆ. ಬಂಧನದಿಂದ ರಕ್ಷಣೆ ಕೋರಿ ಚಿದಂಬರಂ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಸಿಬಿಐ ವಶದಲ್ಲಿರುವ ಪಿ.ಚಿದಂಬರಂ ಅವರ ವಿಚಾರಣೆಯನ್ನು ಸಿಬಿಐ ಮುಗಿಸಿದ್ದು, ಈಗಾಗಲೇ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಜಾರಿ ನಿರ್ದೇಶನಾಲಯವು ಸೆ.05ರ ತನಕ ಬಂಧಿಸದಂತೆ ಕೋರ್ಟ್ ಸೂಚಿಸಿದೆ. ಆದರೆ, ನಿರೀಕ್ಷಣಾ ಜಾಮೀನು ಕೋರಿ ಚಿದಂಬರಂ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು. ಹೈಕೋರ್ಟ್ […]

ಪಿ.ಚಿದಂಬರಂ ರವರನ್ನು ಸಿಬಿಐ ಕಸ್ಟಡಿಗೆ ಒಪ್ಪಿಸಿ : ಸುಪ್ರೀಂ ಕೋರ್ಟ್‌ ಆದೇಶ

Tuesday, September 3rd, 2019
chidambaram

ಹೊಸದಿಲ್ಲಿ : ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕೇಂದ್ರದ ಮಾಜಿ ಗೃಹಸಚಿವ ಪಿ.ಚಿದಂಬರಂ ಅವರನ್ನು ಸೆ.5ರವರೆಗೆ ಸಿಬಿಐ ಕಸ್ಟಡಿಗೆ ಒಪ್ಪಿಸಿ ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ. ಅಲ್ಲದೇ ಬಂಧನ ವಾರೆಂಟ್‌ ಕುರಿತಾದ ಅರ್ಜಿಯನ್ನು ಅದೇ ದಿನ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ. ಸುಪ್ರೀಂ ಕೋರ್ಟ್‌ ನ್ಯಾ| ಆರ್‌ ಭಾನುಮತಿ ಮತ್ತು ಎ.ಎಸ್‌. ಬೋಪಣ್ಣ ಅವರಿದ್ದ ನ್ಯಾಯಪೀಠ ಚಿದಂಬರಂ ಅವರ ವಿರುದ್ಧ ಹೊರಡಿಸಲಾಗಿದ್ದ ಜಾಮೀನು ರಹಿತ ವಾರಂಟ್‌ ಮತ್ತು ಸಿಬಿಐ ಕಸ್ಟಡಿಗೆ ನೀಡಿದ್ದರ ವಿರುದ್ಧ ಸಲ್ಲಿಸಿದ್ದ ಅರ್ಜಿಯ ಕುರಿತ […]

ನವದೆಹಲಿ : ಪಿ.ಚಿದಂಬರಂ ಸೆಪ್ಟೆಂಬರ್ 2 ರವರೆ ಸಿಬಿಐ ವಶದಲ್ಲಿ

Friday, August 30th, 2019
chidambaram

ನವದೆಹಲಿ : ಐಎನ್‌ಎಕ್ಸ್‌ ಮೀಡಿಯಾ ಹಗರಣ ಪ್ರಕರಣದಲ್ಲಿ ಸಿಬಿಐ ವಶದಲ್ಲಿರುವ ಪಿ.ಚಿದಂಬರಂ ಅವರು ಸೆಪ್ಟೆಂಬರ್ 2 ರವರೆಗೂ ಸಿಬಿಐ ವಶದಲ್ಲಿಯೇ ಇರಲಿದ್ದಾರೆ. ಚಿದಂಬರಂ ಅವರನ್ನು ಆಗಸ್ಟ್ 30 ರವರೆಗೆ ಸಿಬಿಐ ವಶಕ್ಕೆ ನೀಡಿ ಆದೇಶ ನೀಡಲಾಗಿತ್ತು. ಇಂದು ಮತ್ತೆ ಅರ್ಜಿ ಸಲ್ಲಿಸಿದ ಸಿಬಿಐ ಮತ್ತೆ ಐದು ದಿನಗಳ ಕಾಲ ಸಿಬಿಐಗೆ ವಶಕ್ಕೆ ನೀಡುವಂತೆ ಕೇಳಿತ್ತು. ಆದರೆ ಇದಕ್ಕೆ ನಿರಾಕರಿಸಿರುವ ನ್ಯಾಯಾಲಯವು ಸೆಪ್ಟೆಂಬ್ ಎರಡರ ವರೆಗೆ ಮಾತ್ರವೇ ಚಿದಂಬರಂ ಅವರನ್ನು ಸಿಬಿಐ ವಶಕ್ಕೆ ನೀಡಿದೆ. ಸೆಪ್ಟೆಂಬರ್ 5 ವರೆಗೆ […]

ಪೆಟ್ರೋಲ್‌ ಬೆಲೆ 25 ರೂ.ಇಳಿಸಲು ಸಾಧ್ಯ, ಆದರೆ ಸರಕಾರ ಮಾಡದು: ಪಿ.ಚಿದಂಬರಂ

Wednesday, May 23rd, 2018
p-chidambaram

ಹೊಸದಿಲ್ಲಿ :”ದೇಶದ ಜನರು ಖರೀದಿಸುವ ಪ್ರತಿ ಲೀಟರ್‌ ಪೆಟ್ರೋಲ್‌ ದರದಲ್ಲಿ 25 ರೂ.ಗಳನ್ನು ಕೇಂದ್ರ ಸರಕಾರ ಬಾಚಿ ಕೊಳ್ಳುತ್ತಿದೆ ಮತ್ತು ತನ್ನ ಖಜಾನೆಯನ್ನು ಅದು ತುಂಬಿಸಿಕೊಳ್ಳುತ್ತಿದೆ” ಎಂದು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಆರೋಪಿಸಿದ್ದಾರೆ. ದಿಲ್ಲಿಯಲ್ಲಿಂದು ಪೆಟ್ರೋಲ್‌ ಲೀಟರ್‌ ದರ 30 ಪೈಸೆಯಷ್ಟು ಏರಿ 77 ರೂ. ಗಡಿ ದಾಟಿದ ಸಂದರ್ಭದಲ್ಲಿ ಚಿದಂಬರಂ ಅವರು ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಟ್ವಿಟರ್‌ ವಾಗ್ಧಾಳಿ ಆರಂಭಿಸಿದರು. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಇಳಿದಾಗ ಕೇಂದ್ರ ಸರಕಾರ ಜನರು […]

ಕಾಂಗ್ರೆಸ್ ಪಿಎಂ ಅಭ್ಯರ್ಥಿಯನ್ನು ಮೋದಿ ತೀರ್ಮಾನ ಮಾಡೋದಲ್ಲ: ಪಿ. ಚಿದಂಬರಂ

Wednesday, May 9th, 2018
congress

ಮಂಗಳೂರು: ‘ಪ್ರಧಾನಿ ಹುದ್ದೆ ವಹಿಸಿಕೊಳ್ಳಲು ನಾನು ಸಿದ್ಧ’ ಎಂದ ರಾಹುಲ್ ಗಾಂಧಿಯವರನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಲೇವಡಿ ಮಾಡಿದ್ದರು. ಈ ಸಂಬಂಧ ಇದೀಗ ಪ್ರಧಾನಿ ವಿರುದ್ಧ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, “ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿಯನ್ನು ನರೇಂದ್ರ ಮೋದಿ ತೀರ್ಮಾನ ಮಾಡೋದಲ್ಲ. ಅದನ್ನು ಕಾಂಗ್ರೆಸ್ ಹಿರಿಯ ನಾಯಕರು ನಿರ್ಧಾರ ಮಾಡುತ್ತಾರೆ. ಬಹುಮತ ಬಂದರೆ ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆ. ಆದರೆ, ಈ ವಿಚಾರವನ್ನು ಕಾಂಗ್ರೆಸಿನ ಹಿರಿಯ ನಾಯಕರು […]

ಅಭಿವೃದ್ಧಿಯ ಮುನ್ನಡೆಗೆ ಮತ್ತೆ ಕಾಂಗ್ರೆಸ್ ಸರ್ಕಾರ ಅನಿವಾರ್ಯ: ಪಿ. ಚಿದಂಬರಂ

Wednesday, May 9th, 2018
congress

ಮಂಗಳೂರು: ಕಾಂಗ್ರೆಸ್‌ಗೆ ಪೂರ್ಣ ಬಹುಮತ ನೀಡಲು ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಜನತೆಗೆ ಕರೆ ನೀಡಿದ್ದಾರೆ. ಮಂಗಳೂರಿನಲ್ಲಿ ಸುದ್ಧಿಗೋಷ್ಠಿಯಲ್ಲಿ ಮತನಾಡಿದ ಅವರು ಅಭಿವೃದ್ಧಿಯ ಮುನ್ನಡೆಗೆ ಮತ್ತೆ ಕಾಂಗ್ರೆಸ್ ಸರ್ಕಾರ ಅನಿವಾರ್ಯ. ರಾಜ್ಯದ ಅಭಿವೃದ್ಧಿ ದರ ಅತ್ಯುತ್ತಮ ಮಟ್ಟದಲ್ಲಿದೆ. ಉದ್ಯೋಗ, ಶಿಕ್ಷಣ, ಔದ್ಯಮಿಕ ವಲಯದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ದೇಶದ ದರಕ್ಕೆ ಹೋಲಿಸಿದರೆ ಇದು ಸಾಕಷ್ಟು ಎತ್ತರದಲ್ಲಿದೆ ಎಂದು ಹೇಳಿದರು. ಸಿದ್ದರಾಮಯ್ಯ ಸರ್ಕಾರದಲ್ಲಿ ಉತ್ತಮ ಹಣಕಾಸಿನ ನಿರ್ವಹಣೆ ನೀಡಿದೆ.ಸಾಮಾಜಿಕ ವಲಯದಲ್ಲಿ ಬಜೆಟ್‌ನಲ್ಲಿ ಉತ್ತಮ ಅನುದಾನ. ಆದರೆ, ಬಿಜೆಪಿ […]