ಬಾವಿಗೆ ಬಿದ್ದ ಕರು ಸುರಕ್ಷಿತ, ರಕ್ಷಿಸಲೆತ್ನಿಸಿದ ಸಹೋದರರಿಬ್ಬರು ಮೃತ

Wednesday, May 27th, 2020
paiwalike death

ಕಾಸರಗೋಡು : ಇದೊಂದು ದುರಂತ ಘಟನೆ, ತನ್ನ ಮನೆಯ ಬಾವಿಗೆ ಬಿದ್ದ ದನದ ಕರುವನ್ನು ರಕ್ಷಿಸಲೆತ್ನಿಸಿದಾಗ ಸಹೋದರರಿಬ್ಬರು ಮೃತಪಟ್ಟ ದಾರುಣ ಘಟನೆ ಇಂದು ಬೆಳಿಗ್ಗೆ ಪೈವಳಿಕೆ ಸಮೀಪದ ಸುಬ್ಬಯ್ಯಕಟ್ಟೆಯಲ್ಲಿ ನಡೆದಿದೆ. ಅವರಿಬ್ಬರೂ ಅಣ್ಣ ತಮ್ಮಂದಿರು  ಸುಬ್ಬಯ್ಯ ಕಟ್ಟೆಯ ನಾರಾಯಣ (50) ಮತ್ತು ಸಹೋದರ ಶಂಕರ (40) . ಕರುವನ್ನು ಮೇಲೆಕ್ಕೆತ್ತಲು ಮೊದಲಿಗೆ ಶಂಕರ  ಹಗ್ಗದ ಸಹಾಯದಿಂದ ಬಾವಿಗೆ ಇಳಿದಿದ್ದು, ಬಾವಿಯಲ್ಲಿ ಉಸಿರಾಟ ತೊಂದರೆ ಉಂಟಾಗಿ ಬಾವಿಯೊಳಗೆ ಕುಸಿದು ಬಿದ್ದಿದ್ದಾರೆ , ಇದ್ದನ್ನು ಕಂಡು ಸಹೋದರ ನಾರಾಯಣ ಎಂಬವರು ಕೂಡ ಬಾವಿಗೆ […]

ನವಂಬರ್ ತಿಂಗಳಲ್ಲಿ ಪೈವಳಿಕೆಯಲ್ಲಿ ‘ಅಣ್ಣ-ತಮ್ಮ ದೈವ’ ದ ಜೋಡುಕೆರೆ ಕಂಬಳ

Tuesday, September 18th, 2018
kamabala

ಉಪ್ಪಳ: ನವಂಬರ್ ತಿಂಗಳಲ್ಲಿ ಪೈವಳಿಕೆ ಪಂಚಾಯತ್ ಬೋಳಂಗಳವನ್ನು ಕೇಂದ್ರೀಕರಿಸಿ  ನಡೆಯಲಿರುವ ” ಅಣ್ಣ-ತಮ್ಮ ದೈವ ಜೋಡುಕೆರೆ ಕಂಬಳ” ದ ಪೂರ್ವಭಾವಿ ಸಭೆಯು  ಪೈವಳಿಕೆ ಲಾಲ್ ಭಾಗ್ ನಲ್ಲಿರುವ ಕುಲಾಲ ಮಂದಿರದಲ್ಲಿ ಪೈವಳಿಕೆ ಅರಮನೆಯ ಅರಸು ಬಲ್ಲಾಳರಾದ ರಂಗತ್ರೈ ಬಲ್ಲಾಳರಸರ ಅಧ್ಯಕ್ಷತೆ ಯಲ್ಲಿ ನಡೆಯಿತು. ತುಳುನಾಡಿನ ಕೃಷಿ ಪ್ರಧಾನ ಜೀವನ ಶೈಲಿ ಮತ್ತು ಜಾನಪದೀಯ ಹಿನ್ನೆಲೆಯ ಕಂಬಳ ಕ್ರೀಡೆಗೆ ಅದರದ್ದೇ ಮಹತ್ವಗಳಿದ್ದು, ಆಧುನಿಕತೆಯ ವೇಗದಲ್ಲಿ ಬಹುತೇಕ ಮರೆಯಾಗುವ ಭೀತಿ ಗಡಿನಾಡು ಕಾಸರಗೋಡಿನದು. ದಶಕಗಳ ಹಿಂದೆ ಕಾಸರಗೋಡಿನ ಅಲ್ಲಲ್ಲಿ ನಡೆದುಬರುತ್ತಿದ್ದ ಕಂಬಳ ಉತ್ಸವ ಕೃಷಿ ಸಾಗುವಳಿಗಳು ಮರೆಯಾದಂತೆ […]

ಪೈವಳಿಕೆ ಗ್ರಾ.ಪಂ ಬಜೆಟ್ : ಕೃಷಿಕರ ಅವಗಣನೆ

Friday, March 11th, 2016
subrahmanya bhat

ಉಪ್ಪಳ: ಪೈವಳಿಕೆ ಗ್ರಾ. ಪಂ ಬಜೆಟ್ ವಾರದ ಹಿಂದೆ ಮಂಡನೆಯಾಗಿದ್ದು, ಕೃಷಿ ಕ್ಷೇತ್ರವನ್ನು ಸಂಪೂರ್ಣ ಅವಗಣಿಸಲಾಗಿದೆ. ವಾರ್ಡ್‌ವೊಂದಕ್ಕೆ ಎರಡೂವರೆ ಲಕ್ಷ ರೂಪಾಯಿಗಳಂತಿರಿಸಿದ ಹಣವೂ ಕೃಷಿ ಅಭಿವೃದ್ಧಿಗೆ ಕಿಂಚಿತ್ತೂ ಸಾಲದು ಎಂದು ಪೈವಳಿಕೆ ಗ್ರಾ. ಪಂ ಸದಸ್ಯ ಹಾಗೂ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಆಟಿಕುಕ್ಕೆ ಸುಬ್ರಹ್ಮಣ್ಯ ಭಟ್ ಹೇಳಿದ್ದಾರೆ. 72.2 ಚದರ ಕಿ.ಮೀ ವಿಸ್ತೀರ್ಣವಿರುವ ಮಂಜೇಶ್ವರ ತಾಲೂಕಿನ ದೊಡ್ಡ ಪಂಚಾಯತ್ ಹೆಗ್ಗಳಿಕೆಯ ಪೈವಳಿಕೆಯಲ್ಲಿ 70% ಕೃಷಿಕರು ಮತ್ತು ಕೃಷಿ ಕಾರ್ಮಿಕರಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ಕೃಷಿ ಕಾರ್ಮಿಕರಿಗೆ […]

ಆಗಸ್ಟ್ 3 ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಗೆ ಬೃಹತ್ ಮೆರವಣಿಗೆ

Thursday, July 30th, 2015
Muneer

ಮಂಗಳೂರು : MRPL ಕೋಕ್, ಸಲ್ಫರ್ ಘಟಕದ ಮಾಲಿನ್ಯಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ, ಕೋಕ್, ಸಲ್ಫರ್ ಘಟಕದ ಪರವಾನಿಗೆ ನವೀಕರಿಸಲು ಮುಂದಾಗಿರುವ ಮಾಲಿನ್ಯ ನಿಯಂತ್ರಣ ಮಂಡಳಿಯ ಕ್ರಮವನ್ನು ಖಂಡಿಸಿ, ಆಗಸ್ಟ್ ೩ರಂದು ’ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ’ ಬೈಕಂಪಾಡಿಯಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ. ನಾಗರಿಕ ಹೋರಾಟ ಸಮಿತಿಯ ಮುನೀರ್ ಕಾಟಿಪಳ್ಳ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, MRPL ಕೋಕ್, ಸಲ್ಫರ್ ಘಟಕದ ಮಾಲಿನ್ಯದ ವಿರುದ್ಧ ಕಳೆದ ಹತ್ತು ತಿಂಗಳುಗಳಿಂದ ಜೋಕಟ್ಟೆ […]