ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಹರಕೆ ಸೀರೆಗಳನ್ನು ಪ್ರಸಾದ ರೂಪದಲ್ಲಿ ವಿತರಣೆ

Sunday, October 10th, 2021
Polali Temple

ಬಂಟ್ವಾಳ : ಲಲಿತಾಪಂಚಮಿಯ ದಿನದಂದು ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ಸನ್ನಿಧಾನದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ ಭಕ್ತಾದಿಗಳಿಗೆ ಅಮ್ಮನವರಿಗೆ ಹರಕೆ ರೂಪದಲ್ಲಿ ಬಂದ ಸೀರೆಗಳನ್ನು ಪ್ರಸಾದ ರೂಪದಲ್ಲಿ ವಿತರಿಸಲು ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕರಾದ ಉಳಿಪ್ಪಾಡಿಗುತ್ತು ರಾಜೇಶ್ ನಾಯ್ಕ್, ಆಡಳಿತ ಮೋಕ್ತೇಸರರಾದ ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು,ಚೇರಾ ಸೂರ್ಯನಾರಾಯಣ ರಾವ್,ಪವಿತ್ರಪಾಣಿ ಮಾಧವ ಭಟ್,ಮಾಜಿ ಸಚಿವರಾದ ಬಿ.ನಾಗರಾಜ ಶೆಟ್ಟಿ ಪ್ರಮುಖರು ಉಪಸ್ಥಿತರಿದ್ದರು.ಊರ ಪರವೂರ ಭಕ್ತಾದಿಗಳು ಈ ಸಂದರ್ಭದಲ್ಲಿ ಸೀರೆ ಪ್ರಸಾದ ಸ್ವೀಕರಿಸಿದರು.  

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಗದ್ದೆಯಲ್ಲಿ ಯಾಂತ್ರೀಕೃತ ಭತ್ತ ನಾಟಿ ಪ್ರಾತ್ಯಕ್ಷಿಕೆ

Tuesday, July 13th, 2021
Bantwal Farming

ಬಂಟ್ವಾಳ: ದ.ಕ.ಜಿ.ಪಂ., ಕೃಷಿ ಇಲಾಖೆ ಹಾಗೂ ಬಂಟ್ವಾಳ ಕೃಷಿಕ ಸಮಾಜದ ಸಹಯೋಗದಲ್ಲಿ ಯಾಂತ್ರೀಕೃತ ಭತ್ತ ನಾಟಿ ಪ್ರಾತ್ಯಕ್ಷಿಕೆ ಕಾರ್ಯಾಗಾರಕ್ಕೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಗದ್ದೆಯಲ್ಲಿ ಚಾಲನೆ ನೀಡಲಾಯಿತು. ಪೊಳಲಿ ದೇವಸ್ಥಾನದ ಸುಮಾರು 2 ಎಕರೆ ವಿಸ್ತೀರ್ಣದಲ್ಲಿ ಭತ್ತದ ನಾಟಿ ಕಾರ್ಯ ನಡೆಯಲಿದೆ. ಕೃಷಿ ಸಂಜೀವಿನಿ, ರೋಟರಿ ಟಿಲ್ಲರನ್ನು ಕೂಡ ಈ ಸಂದರ್ಭದಲ್ಲಿ ಪ್ರದರ್ಶನ ಮಾಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ದ.ಕ.ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ […]

ಪೊಳಲಿ ದೇವಳಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

Tuesday, September 3rd, 2019
polali

ಮಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಇಂದು ಬೆಳಗ್ಗೆ ಇತಿಹಾನ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನವನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಬಂಟ್ವಾಳ್ ಶಾಸಕ ರಾಜೇಶ್ ನಾಯ್ಕ್ , ಬಿಜೆಪಿ ಪ್ರಮುಖ ಮುಖಂಡ ರಾಮದಾಸ್ ಬಂಟ್ವಾಳ್, ವೆಂಕಟೇಶ ನಾವಡ, ಗೋಪಾಲ ಬಂಗೇರ,ಚಂದ್ರಹಾಸ ಶೆಟ್ಟಿ ಮತ್ತಿತರು ಪಾಲ್ಗೊಂಡಿದ್ದರು.    

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

Wednesday, March 13th, 2019
Rajajeshwari

ಮಂಗಳೂರು : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಇಂದು ಮುಂಜಾನೆಯಿಂದಲೇ ಮಂಗಳೂರು  ಬ್ರಹ್ಮಕಲಶಾಭಿಷೇಕ ನಡೆಯುತ್ತಿದೆ. ಈ ಸಂಭ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದಾರೆ. ಇಂದು ಬುಧವಾರ ಬೆಳಗ್ಗೆ ಮೀನ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ. ಮಹಾಪೂಜೆ, ಮಧ್ಯಾಹ್ನ 12 ಗಂಟೆಗೆ ಪಲ್ಲಪೂಜೆ, ಬ್ರಾಹ್ಮಣ ಸುವಾಸಿನಿ ಆರಾಧನೆ ನಡೆಯಿತು. ಮುಂಜಾನೆಯಿಂದಲೇ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ವೈದಿಕ ವಿಧಿ ವಿಧಾನಗಳು ನಡೆದವು. ವೈಧಿಕ ವಿಧಿ ವಿಧಾನಗಳು ನಡೆಯುತ್ತಿರುವುದರಿಂದ ಬೆಳಗ್ಗೆ 10 ಗಂಟೆಯವರೆಗೆ ಭಕ್ತರಿಗೆ ದೇಗುಲ ಪ್ರವೇಶಾವಕಾಶ ನೀಡಲಾಗಿರಲಿಲ್ಲ. ಕ್ಷೇತ್ರದ ತಂತ್ರಿಗಳಾದ ವೇ ಮೂ ಸುಬ್ರಹ್ಮಣ್ಯ […]

ಪೊಳಲಿ : ನವಿಲು ಮೂರ್ತಿಯನ್ನು ಮೇಲಕ್ಕೇರಿಸುತ್ತಿದ್ದಂತೆ ನಿಜ ಗರುಡನ ಪ್ರತ್ಯಕ್ಷ -ವೀಡಿಯೋ

Tuesday, March 12th, 2019
polali Garuda

ಮಂಗಳೂರು :  ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮ ಶ್ರದ್ಧಾ ಭಕ್ತಿಯಿಂದ ನಡೆಯುತ್ತಿದ್ದು. ದೇಶದ ನಾನಾ ಮೂಲೆಗಳಿಂದ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದಾರೆ. ಮಾರ್ಚ್ 4ರಿಂದ   ಆರಂಭ ಗೊಂಡ ಕಾರ್ಯಕ್ರಮಗಳು ಮಾರ್ಚ್ 13 ಕ್ಕೆ ಕೊನೆಗೊಳ್ಳಲಿದೆ.  ಈ ಹತ್ತು ದಿನಗಳ ಅವಧಿಯಲ್ಲಿ ಕೊನೆಯ ಮೂರು ದಿನಗಳಲ್ಲಿ ದೇವರ,  ಧ್ವಜಸ್ತಂಭ ಪ್ರತಿಷ್ಠೆ, ಜೀವ ಕಲಶಾಭಿಷೇಕ ವೈದಿಕ ವಿಧಿ ವಿಧಾನಗಳು ನಡೆಯುತ್ತದೆ.  ಮಾರ್ಚ್ 10 ರ ಧ್ವಜಸ್ತಂಭ ಪ್ರತಿಷ್ಠೆ ವೇಳೆ ಪವಾಡ ನಡೆದಿರುವುದು  ಭಕ್ತ ಸಮುದಾಯದಲ್ಲಿ ಅಚ್ಚರಿ  ಮೂಡಿಸಿದೆ. ದೇವಳದ ಧ್ವಜಸ್ತಂಭಕ್ಕೆ ಗರುಡನ ಮೂರ್ತಿಯನ್ನು […]

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಳಲಿಯಲ್ಲಿ ಪ್ರಾರ್ಥನೆ

Monday, March 11th, 2019
sidharamayuya-polali

ಪೊಳಲಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ರವಿವಾರ ಪೊಳಲಿ ದೇವಸ್ಥಾನಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಾಜೇಶ್‌ ನಾಯ್ಕ ಹಾಗೂ ಮೊಕ್ತೇಸರರು ಸ್ವಾಗತಿಸಿದರು. ಅರ್ಚಕರಿಂದ ದೇವಸ್ಥಾನದ ಮಾಹಿತಿ ಪಡೆದ ಗಣ್ಯರು ವಾಸ್ತುಶಿಲ್ಪವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಚಿವ ಯು.ಟಿ. ಖಾದರ್‌, ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ, ಮಾಜಿ ಸಚಿವ ರಮಾನಾಥ ರೈ ಜತೆಗಿದ್ದರು.

ಪೊಳಲಿ : ಮೀನಲಗ್ನ ಸುಮುಹೂರ್ತದಲ್ಲಿ ದೇವರ ಜೀವಕಲಶಾಭಿಷೇಕ- ಪ್ರತಿಷ್ಠೆ

Monday, March 11th, 2019
polali pratishte

ಪೊಳಲಿ : ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀದುರ್ಗಾಪರಮೇಶ್ವರೀ, ಶ್ರೀ ರಾಜ ರಾಜೇಶ್ವರೀ, ಶ್ರೀ ಸುಬ್ರಹ್ಮಣ್ಯ, ಶ್ರೀ ಗಣಪತಿ, ಶ್ರೀ ಭದ್ರಕಾಳಿ ದೇವರ ಪ್ರತಿಷ್ಠೆ- ಜೀವಕಲಶಾಭಿಷೇಕವನ್ನು ಮಾಡಿ ರವಿವಾರ ಮೂಲ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಯಿತು. ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ರವಿವಾರ ಬೆಳಗ್ಗೆ 7.23ರಿಂದ 8.23ರ ವರೆಗಿನ ಮೀನಲಗ್ನ ಸುಮುಹೂರ್ತದಲ್ಲಿ ಪ್ರತಿಷ್ಠೆ ನಡೆಸಲಾಯಿತು. ಇದಕ್ಕೂ ಮುನ್ನ ಪ್ರಾತಃಕಾಲ 4ರಿಂದ ಪುಣ್ಯಾಹ, ಗಣಹೋಮ, ಪ್ರಾಸಾದ ವಿತರಣೆ ನಡೆಯಿತು. ಬೆಳಗ್ಗೆ 10.40ಕ್ಕೆ ನಡೆಯುವ ವೃಷಭ ಲಗ್ನ ಸುಮುಹೂರ್ತದಲ್ಲಿ ಧ್ವಜಸ್ತಂಭ ಪ್ರತಿಷ್ಠೆ, ಧ್ವಜಕಲಶಾಭಿಷೇಕ, […]

ಪೊಳಲಿ: ಇಂದಿನಿಂದ ಬ್ರಹ್ಮಕಲಶೋತ್ಸವ ಆರಂಭ- ನಾನಾ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು

Monday, March 4th, 2019
polali brahmakalasa

ಪೊಳಲಿ: ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಇಂದಿನಿಂದ(ಮಾ.4) ಬ್ರಹ್ಮಕಲಶೋತ್ಸವ ಆರಂಭಗೊಳ್ಳಲಿದೆ. ಬೆಳಿಗ್ಗೆ 8.30ರಿಂದ ಆಚಾರ್ಯಾದಿ ಋತ್ವಿಜರ ಸ್ವಾಗತ, ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಹವಾಚನ, ನಾಂದಿ, ಋತಿಗ್ವರಣ, ಕಂಕಣಬಂಧ, ಆದ್ಯಗಣಯಾಗ, ವೇದ ಪಾರಾಯಣ ಆರಂಭಗೊಳ್ಳಲಿದೆ. ಸಾಯಂಕಾಲ 5 ರಿಂದ ಪ್ರಾದಾದಪರಿಗ್ರಹ, ಪುಣ್ಯಾಹವಾಚನ, ತೋರಣ ಮಹೂರ್ತ, ಉಗ್ರಾಣ ಮಹೂರ್ತ, ಸಪ್ತಶುದ್ಧಿ, ಪ್ರಾಸಾದಶುದ್ಧಿ, ರಾಕ್ಷೊಘ್ನಹೋಮ, ವಾಸ್ತುಪೂಜೆ, ವಾಸ್ತುಹೋಮ, ಕಲಶಾಭಿಷೇಕ ಹಾಗು ಮಹಾಪೂಜೆ ನಡೆಯಲಿದೆ. ಸಂಜೆ 6ಗಂಟೆಯಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಂಪುಟ ಶ್ರೀ ನರಸಿಂಹ ಮಠ ಸುಬ್ರಹ್ಮಣ್ಯ ಇಲ್ಲಿನ ಶ್ರೀವಿದ್ಯಾಪ್ರಸನ್ನ ತೀರ್ಥಸ್ವಾಮೀಜಿ ಆಶೀರ್ವಚನ-ಉಗ್ರಾಣ […]

ಪೊಳಲಿಯಲ್ಲಿ ಕೊನೆ ಚೆಂಡು ಸಮಾಪ್ತಿ- ಇಂದು ರಥೋತ್ಸವದ ಸಂಭ್ರಮ

Friday, April 13th, 2018
polali

ಮಂಗಳೂರು: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಕೊನೆಯ ಚೆಂಡು ಏ.11ರ ಬುಧವಾರ ಸಮಾಪ್ತಿಗೊಂಡಿತು. ಏ 7 ರ ಶನಿವಾರ ಆರಂಭಗೊಂಡ ಚೆಂಡು ಐದು ದಿನವು ಚೆಂಡಿನ ಉತ್ಸವ ಸರಳ ವಿಧಿ ವಿಧಾನಗಳ ಮೂಲಕ ನಡೆಯಿತು. ಇಂದು ಶ್ರೀ ಕ್ಷೇತ್ರ ಪೊಳಲಿಯಲ್ಲಿ ಮಹಾರಥೋತ್ಸವ ಹಾಗೂ ಏ ೧೩ ರಂದು ಅವಭೄತ ನಡೆಯಲಿದೆ. ಇನ್ನು ಪೊಳಲಿ ದೇವಾಲಯದ ಜೀರ್ಣೋದ್ದಾರ ಪ್ರಕ್ರಿಯೆ ಪ್ರಗತಿಯಲ್ಲಿರುವುದರಿಂದ ಕೆಲವೊಂದು ಸೇವೆಗಳನ್ನು ಈ ಬಾರಿ ನಡೆಸಲಾಗಿಲ್ಲ ಅಲ್ಲದೆ ಈ ಬಾರಿ ಸಾಂಕೇತಿಕವಾಗಿ ಮೂರು […]

ಇಂದಿನಿಂದ ಪೊಳಲಿ ದೇಗುಲದ ಕಾಲಾವಧಿ ಜಾತ್ರೆ ಆರಂಭ

Friday, March 16th, 2018
polali

ಮಂಗಳೂರು: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಜೀರ್ಣೋದ್ಧಾರ ಪ್ರಕ್ರಿಯೆಗಳು ನಡೆಯುವುದರಿಂದ ದೈವಜ್ಞರ ಸಲಹೆಯಂತೆ ಶಿಷ್ಟಾಚಾರಕ್ಕೆ ಅಪಚಾರವಾಗದಂತೆ ಕಾಲಾವಧಿ ಜಾತ್ರೆ ನಡೆಯಲಿದೆ. ಬುಧವಾರ ರಾತ್ರಿ ಉಳಿಪಾಡಿಗುತ್ತಿನಿಂದ ದೈವದ ಭಂಡಾರ ಮತ್ತು ಅಡ್ಡೂರು ನಂದ್ಯದಿಂದ ಭಗವತೀ ದೈವದ ಭಂಡಾರ ಬಂದು ಧ್ವಜಾರೋಹಣವಾಯಿತು. ಗುರುವಾರ ಬೆಳಗ್ಗೆ ಕಂಚುಬಲಿ ಉತ್ಸವ ನಡೆದು ಅನಂತರ ಕುದಿ ಕರೆಯುವ ವಿಶಿಷ್ಟ ಪದ್ಧತಿಯ ಪ್ರಕಾರ ಜಾತ್ರೋತ್ಸವದ 30 ದಿನಗಳೆಂದು ನಿಗದಿತವಾಯಿತು. ಇದರಂತೆ ಎ.7ರಂದು ಒಂದನೇ ಚೆಂಡು, 8ರಂದು ಎರಡನೇ ಚೆಂಡು, 9ರಂದು ಮೂರನೇ […]