Blog Archive

ಪ್ರತಿಭಟನೆ, ಮೆರವಣಿಗೆ ಹೆಸರಿನಲ್ಲಿ ಶಾಲಾಮಕ್ಕಳ ದುರುಪಯೋಗ

Saturday, August 25th, 2018
Hindu Jana Jagruti

ಮಂಗಳೂರು : ಪ್ರತಿಭಟನೆ, ಮೆರವಣಿಗೆ ಹೆಸರಿನಲ್ಲಿ ಶಾಲಾಮಕ್ಕಳ ದುರುಪಯೋಗವನ್ನು ತಡೆಯಲು ಸೂಕ್ತ ಕ್ರಮ ಜರುಗಿಸುವ ಕುರಿತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಂಗಳೂರಿನಲ್ಲಿ ಶಿಕ್ಷಣ ಇಲಾಖೆಗೆ ಮನವಿ ನೀಡಲಾಯಿತು. ಇತ್ತೀಚಿನ ದಿನಗಳಲ್ಲಿ ಶಾಲಾ ಮಕ್ಕಳನ್ನು ಕೆಲವು ತಥಾಕಥಿತಬುದ್ಧಿಜೀವಿಗಳು, ಪ್ರಗತಿಪರರರು, ಸಾಮ್ಯವಾದಿ ವಿಚಾರಸರಣಿಯವರು ತಮ್ಮ ಸ್ವಾರ್ಥದ ರಾಜಕೀಯ ಪ್ರೇರಿತ ಕಾರ್ಯಕ್ರಮ, ಪ್ರತಿಭಟನೆ, ಮೆರವಣಿಗೆಗಳಿಗೆ ಉಪಯೋಗಿಸುವುದು, ಆ ಮೂಲಕ ತಮ್ಮ ವಾಂಛಿಕ ಸ್ವಾರ್ಥಸಾಧನೆ ಮಾಡುವುದು ಗಮನಕ್ಕೆ ಬರುತ್ತಿದೆ. ಇದು ಖಂಡನೀಯವಾಗಿದೆ. ಅದಕ್ಕಾಗಿ ಶಾಲಾ ಮಕ್ಕಳನ್ನು ಯಾವುದೇ ಕಾರಣಕ್ಕಾಗಿ ಖಾಸಗಿ ವ್ಯಕ್ತಿಗಳ […]

ಕೇಂದ್ರ ಸರ್ಕಾರಕ್ಕೆ 4ರ ಸಂಭ್ರಮ: ಮಂಗಳೂರಲ್ಲಿ ‌ಮಹಿಳಾ ಕಾಂಗ್ರೆಸ್ ಪ್ರತಿಭಟನೆ

Saturday, May 26th, 2018
protest

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ನಾಲ್ಕು ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಂಗಳೂರಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯು.ಟಿ‌.ಖಾದರ್, ಮೋದಿ‌ ಅಧಿಕಾರಕ್ಕೆ ಬಂದಾಗ ತಾನು ದೇಶದ ಗೇಟ್ ಕೀಪರ್ ಆಗುತ್ತೇನೆ ಎಂದರು. ಆದರೆ ಇವರ‌ ಜೊತೆ ಫೋಟೋ ತೆಗೆಸಿಕೊಂಡು ಕೆಲವರು ಸಾವಿರಾರು ಕೋಟಿ ಸಮೇತ ವಿದೇಶಕ್ಕೆ ಹಾರಿದ್ದಾರೆ. […]

ಕುಥುವಾ ದಲ್ಲಿ ಹತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿಗೆ ನ್ಯಾಯ ಒದಗಿಸಲು ಪ್ರತಿಭಟನೆ

Wednesday, April 18th, 2018

ರತ್ನಾಕರ ಶೆಟ್ಟಿ ಮೇಲಿನ ಗಡೀಪಾರು ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ಪ್ರತಿಭಟನೆ

Tuesday, January 2nd, 2018
rathnakar-2

ಬಂಟ್ವಾಳ: ಹಿಂದೂ ಜಾಗರಣಾ ವೇದಿಕೆ ಅಮ್ಟಾಡಿ ವಲಯ ಮತ್ತು ಹಿಂದೂ ಜಾಗರಣಾ ವೇದಿಕೆ ಮಹಿಳಾ ಘಟಕ ಅಮ್ಟಾಡಿ ಇವರ ನೇತೃತ್ವದಲ್ಲಿ, ಹಿಂದು ಜಾಗರಣಾ ವೇದಿಕೆ ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿ ಮೇಲಿನ ಗಡೀಪಾರು ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಬಿ.ಸಿ.ರೋಡಿನ ಮಿನಿ ವಿಧಾನಸೌಧ ಮುಂಭಾಗ ಒಂದು ವಾರಗಳ ಕಾಲ ನಿರಂತರ ನಡೆಯುವ ಪ್ರತಿಭಟನೆಗೆ ಇಂದು ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಆಗಮಿಸಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಅವರು ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ದುರುದ್ದೇಶದಿಂದ ಹಿಂದೂ […]

ಖಾಸಗಿ ವೈದ್ಯರುಗಳು ನಡೆಸುತ್ತಿರುವ ಪ್ರತಿಭಟನೆ, ರೋಗಿಗಳು ನಿರಾಶ

Friday, November 3rd, 2017
private hospitals

ಮಂಗಳೂರು : ಖಾಸಗಿ ವೈದ್ಯರುಗಳು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಸೂದೆ (ತಿದ್ದುಪಡಿ) 2017 ಅನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯ ಬಿಸಿ ಮಂಗಳೂರು ಮತ್ತು ಉಡುಪಿ ರೋಗಿಗಳಿಗೂ ಬಲವಾಗಿ ತಟ್ಟಿದೆ. ಶುಕ್ರವಾರ ಬೆಳಿಗ್ಗೆ 8 ಗಂಟೆಯಿಂದ ಶನಿವಾರ ಬೆಳಿಗ್ಗೆ 8 ಗಂಟೆಯವರೆಗೆ ಪ್ರತಿಭಟನೆ ಇರಲಿರುವುದರಿಂದ, ಪ್ರತಿಭಟನೆ ಮತ್ತು ಪರಿಸ್ಥಿತಿಯ ಅರಿವಿರದ ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ಎಡತಾಕುತ್ತಲೇ ಇದ್ದಾರೆ, ಅಲ್ಲಿ ಹೊರರೋಗಿಗಳಿಗೆ ಸೇವೆ ಸಿಗದೆ ನಿರಾಶರಾಗುತ್ತಿದ್ದಾರೆ. ಒಳರೋಗಿಗಳಿಗೆ ಮಾತ್ರ ಅವಶ್ಯಕ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಇದರಿಂದ ರೋಗಿಗಳಿಗಳಿಗೆ ಹೊರರೋಗಿಗಳ ಘಟಕದಲ್ಲಿ […]

ಕುಲದೈವ ಕೊರಗಜ್ಜ ದೈವದ ಅವಹೇಳನ, ಕೊರಗ ಸಮಾಜದಿಂದ ಪ್ರತಿಭಟನೆ

Monday, October 30th, 2017
koraga

ಮಂಗಳೂರು: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದಿಂದ  ಸಾಮಾಜಿಕ ಜಾಲತಾಣದ ಮೂಲಕ ಕೊರಗ ಸಮುದಾಯದ ಕುಲದೈವ, ಸಾಂಸ್ಕೃತಿಕ ಪುರುಷನಾಗಿ ಆರಾಧಿಸಲ್ಪಡುವ ಕೊರಗಜ್ಜನನ್ನು ಅವಹೇಳನ ಮಾಡಿರುವ ವ್ಯಕ್ತಿಯನ್ನು ಬಂಧಿಸಬೇಕೆಂದು ಆಗ್ರಹಿಸಿ ಇಂದು ಪ್ರತಿಭಟನೆ ನಡೆಯಿತು. ಒಕ್ಕೂಟದ ಅಧ್ಯಕ್ಷ ಎಂ. ಸುಂದರ, ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಕರಾವಳಿ ಕರ್ನಾಟಕದ ಮೂಲ ಜನಾಂಗವಾದ ಕೊರಗ ಸಮಾಜ ಹಾಗೂ ಸಮಾಜದ ಕೊರಗಜ್ಜ ದೈವದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡುವ ಕಾರ್ಯ ನಿರಂತರವಾಗಿ ನಡೆಯುತ್ತಿರುುದು ಬೇಸರದ ಸಂಗತಿ ಎಂದರು. […]

ಮಹಿಳಾ ಸಿಬ್ಬಂದಿ ಮೇಲೆ ನಡೆಸುತ್ತಿರುವ ದೌರ್ಜನ್ಯ ವಿರೋಧಿಸಿ ಮಂಗಳೂರು ಒನ್ ಕೇಂದ್ರದ ಎದುರು ಪ್ರತಿಭಟನೆ

Tuesday, August 30th, 2016
CMC-computers

ಮಂಗಳೂರು: ಸರ್ಕಾರದ ಇ ಆಡಳಿತ ವ್ಯಾಪ್ತಿಗೊಳಪಡುವ ಮಂಗಳೂರು-ಒನ್ ಗುತ್ತಿಗೆ ಪಡೆದಿರುವ ಸಿಎಂಎಸ್ ಕಂಪ್ಯೂಟರ್ಸ್ ಸಂಸ್ಥೆ ಅಧಿಕಾರಿಗಳು ಮಹಿಳಾ ಸಿಬ್ಬಂದಿ ಮೇಲೆ ನಡೆಸುತ್ತಿರುವ ದೌರ್ಜನ್ಯ ವಿರೋಧಿಸಿ ಮಂಗಳೂರು ಒನ್ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿದ ನೌಕರರ ಹಿತರಕ್ಷಣಾ ವೇದಿಕೆ ಸಲಹೆಗಾರ ಬಿ.ಎಸ್. ಚಂದ್ರು, ಮಂಗಳೂರು ಒನ್ ಮಹಿಳಾ ಸಿಬ್ಬಂದಿ ತಮಗೆ ಆಗುತ್ತಿರುವ ಕಿರುಕುಳದ ಬಗ್ಗೆ ಕದ್ರಿ ಠಾಣೆಯಲ್ಲಿ ದೂರು ನೀಡಿದ್ದರು. ಇದರಿಂದ ಏಳು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸಂಸ್ಥೆಯ ಈ ಕ್ರಮವನ್ನು […]

ಸರ್ಕಿಟ್‌ ಹೌಸ್ ಮುಂದೆ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

Monday, August 22nd, 2016
Amit-against-protest

ಮಂಗಳೂರು: ಗೋರಕ್ಷಣೆಯ ಹೆಸರಿನಲ್ಲಿ ಅಮಾಯಕರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಕೊಲೆ ಪ್ರಕರಣಗಳನ್ನು ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಇಂದು ನಗರಕ್ಕೆ ಆಮಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ತಂಗಿದ್ದ ಸರ್ಕಿಟ್‌ ಹೌಸ್ ಮುಂದೆ ಅಧ್ಯಕ್ಷ ಮಿಥುನ್ ರೈ ನೇತೃತ್ವದಲ್ಲಿ ಕಪ್ಪು ಪಟ್ಟಿ ಧರಿಸಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಗೋ ಮಾತೆಯ ಹೆಸರಿನಲ್ಲಿ ನಕಲಿ ಗೋರಕ್ಷಕರು ಅಮಾಯಕರನ್ನು ಹತ್ಯೆ ಮಾಡುತ್ತಿದ್ದಾರೆ. ಶಾಂತಿ, ನೆಮ್ಮದಿಯಿಂದ ಇದ್ದ ಅವಿಭಜಿತ ದಕ್ಷಿಣ ಕನ್ನಡ […]

ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

Wednesday, August 10th, 2016
Motamma

ಮಂಗಳೂರು: ನರಭಕ್ಷಕರಾಗಿ, ಗೋಮುಖ ವ್ಯಾಘ್ರರಂತೆ ದಲಿತರ ಚರ್ಮ ಸುಲಿಯುತ್ತಿರುವ ಸಂಘ ಪರಿವಾರಕ್ಕೆ ದಲಿತರ ಮೇಲೆ ಹಲ್ಲೆ ಮಾಡಲು ಅಧಿಕಾರ ಕೊಟ್ಟವರು ಯಾರು ಎಂದು ಕಾಂಗ್ರೆಸ್ ಹಿರಿಯ ಮುಖಂಡೆ ಮೋಟಮ್ಮ ಪ್ರಶ್ನಿಸಿದ್ದಾರೆ. ದೇಶಾದ್ಯಂತ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ನಗರದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಪ್ರಶ್ನಿಸಿದ ಮೋಟಮ್ಮ, ಧರ್ಮ, ಜಾತಿ, ಭಾಷೆ ಎಲ್ಲವನ್ನೂ ಬದಿಗಿಟ್ಟು ಎಲ್ಲರನ್ನೂ ಸಮನಾಗಿ ರಕ್ಷಿಸುವ ಕಾರ್ಯವನ್ನು ಕೇಂದ್ರ ಸರ್ಕಾರ ಮರೆತಿದೆ. ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳು ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹೆಚ್ಚಿದೆ. […]

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಿರಾಕರಿಸಿದ ಜಿಲ್ಲಾಧಿಕಾರಿ

Friday, January 22nd, 2016
DC Ibrahim

ಮಂಗಳೂರು : ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಗೆ ಅವಕಾಶ ನಿರಾಕರಿಸಿದ ಜಿಲ್ಲಾಧಿಕಾರಿ ಎ. ಬಿ. ಇಬ್ರಾಹಿಂ, ಪ್ರತಿಭಟನೆ ಮಾಡಲೆಂದೇ ನಾಲ್ಕು ಸ್ಥಳಗಳನ್ನು ಗೊತ್ತುಮಾಡಿ ವಾರದೊಳಗೆ ಸೂಚನೆ ಹೊರಡಿಸುವುದಾಗಿ ಮಾಹಿತಿ ನೀಡಿದ್ದಾರೆ. ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿ ಸಂಘಟನೆಗಳು, ಸಾರ್ವಜನಿಕರು ಒಂದು ನಿರ್ದಿಷ್ಟ ಜಾಗದಲ್ಲಿ ಪ್ರತಿಭಟನೆ ನಡೆಸಲು ಸಹಕಾರಿಯಾಗುವಂತೆ ನಗರದ ಕೇಂದ್ರ ಸ್ಥಾನದಲ್ಲಿ ನಾಲ್ಕು ಪ್ರದೇಶಗಳನ್ನು ಪರಿಶೀಲಿಸಲಾಗಿದೆ ಎಂದು ತಿಳಿಸಿದರು. ನೆಹರೂ ಮೈದಾನದ ಕ್ರಿಕೆಟ್ ಪೆವಿಲಿಯನ್‌ ಬಳಿ ಸಣ್ಣದಾದ ಪ್ರದೇಶ, ನೆಹರೂ ಮೈದಾನದ (ಫುಟ್ಬಾಲ್‌) ಹಿಂಬದಿಯ ಟೆಂಪೋ ನಿಲುಗಡೆ ಸ್ಥಳ, […]