ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ, ಆಕೆಯನ್ನು ಪ್ರೀತಿಸಿ ಮದುವೆಯಾಗಿದ್ದ, ಜೊತೆಗೆ ಇನ್ನೊಬ್ಬಳನ್ನೂ ಪ್ರೀತಿಸಿದ್ದ !

Saturday, August 8th, 2020
priyanka

ಹಾಸನ : ಯುವತಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಸಾಲಗಾಮೆ ಹೋಬಳಿ ಗೌಡಗೆರೆ ಗ್ರಾಮದ ಪ್ರಿಯಾಂಕಾ (23) ಮೃತ ಗೃಹಿಣಿ. ಆಕೆಯ ಗಂಡ ಹಾಗೂ ಅತ್ತೆ-ಮಾವ ಸೇರಿಕೊಂಡು ವರದಕ್ಷಿಣೆ ಕಿರುಕುಳ ಕೊಟ್ಟು ಕೊಲೆ ಮಾಡಿ, ನೇಣು ಬಿಗಿದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರೀತಿಸಿ ನಾಲ್ಕು ತಿಂಗಳ ಹಿಂದೆಯಷ್ಟೇ ಪ್ರಿಯಾಂಕಾ ಆಲೂರು ತಾಲೂಕಿನ ಪುರಬೈರವನಹಳ್ಳಿ ಗ್ರಾಮದ ಕಿರಣ್ ಜೊತೆ ಕಳೆದ ಮದುವೆಯಾಗಿದ್ದಳು. ನಮ್ಮ ಮಗಳಿಗೆ ಆಕೆಯ ಗಂಡ ಹಾಗೂ ಅತ್ತೆ, ಮಾವ […]

ಪ್ರಿಯಾಂಕಾ ಎಂಟ್ರಿ ಪಕ್ಷಕ್ಕೆ ಬಲ ತಂದಿದೆ : ಪೂಜಾರಿ

Thursday, January 24th, 2019
Poojary

ಮಂಗಳೂರು : ಪ್ರಿಯಾಂಕಾರಲ್ಲಿ ಜನರು ಇಂದಿರಾ ಗಾಂಧಿಯ ವರ್ಚಸ್ಸನ್ನು ಕಾಣುತ್ತಿದ್ದಾರೆ. ಅವರು ಪಕ್ಷದ ಸಕ್ರಿಯ ರಾಜಕೀಯಕ್ಕೆ ಪ್ರವೇಶ ಮಾಡಿರುವುದು ಪಕ್ಷಕ್ಕೆ ಬಲ ತಂದಿದೆ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ, ಮಾಜಿ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ ಸುದ್ದಿಗೋಷ್ಠಿ ಯಲ್ಲಿಂದು ಹೇಳಿದ್ದಾರೆ. ದೇಶದ ರಾಜಕೀಯಕ್ಕೂ ಅವರ ಅವಶ್ಯಕತೆ ಇದೆ ಎಂದು ಅವರು  ಅಭಿಪ್ರಾಯಿಸಿದ್ದಾರೆ. ನೆಹರು ಕುಟುಂಬ ದೇಶಕ್ಕೆ ಮಾಡಿರುವ ತ್ಯಾಗದ ಬಗ್ಗೆ ಜನತೆಗೆ ಅರಿವಿದೆ. ಇದರಿಂದಾಗಿ ಪ್ರಿಯಾಂಕಾ ಆಗಮನಕ್ಕೆ ದೇಶಾದ್ಯಂತ ಉತ್ತಮ ಸ್ವಾಗತ ವ್ಯಕ್ತವಾಗಿದೆ ಎಂದರು. ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜನಾರ್ದನ ಪೂಜಾರಿ, […]

ಲವ್ ಜಿಹಾದ್ ಗುಲ್ಲು… ಮೆಹಂದಿ ಮುನ್ನ ಓಡಿಹೋಗಿದ್ದ ವಧು ಜೈಲಿನಿಂದ ರಿಲೀಸ್

Saturday, December 30th, 2017
priyanka

ಮಂಗಳೂರು: ಮದುವೆಯ ಮೆಹಂದಿ ಮುನ್ನಾ ದಿನ ಪ್ರಿಯಕರನ ಜೊತೆ ನಾಪತ್ತೆಯಾಗಿ, ಲವ್ ಜಿಹಾದ್ ಎಂದು ಶಂಕಿಸಲ್ಪಟ್ಟ ಪ್ರಕರಣದ ವಧು ಶುಕ್ರವಾರ ಮಂಗಳೂರು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಆಹಾರದಲ್ಲಿ ಅಮಲಿನ ಪದಾರ್ಥ ಹಾಕಿ ಮನೆಯವರಿಗೆ ನೀಡಿದ್ದ ಆರೋಪದಲ್ಲಿ ಬಂಧಿತರಾಗಿ ಜೈಲು ಸೇರಿದ್ದ ವಧು ಜೈಲಿನಿಂದ ಹೊರ ಬರುತ್ತಿದ್ದಂತೆ ಮನೆಯವರನ್ನು ಕಂಡು ಅವರೊಂದಿಗೆ ಮನೆಗೆ ಹೋಗಲು ಮೊದಮೊದಲು ನಿರಾಕರಿಸಿ, ಬಳಿಕ ಮನೆಗೆ ತೆರಳಿದರು ಎಂದು ತಿಳಿದುಬಂದಿದೆ. ಯುವತಿಯ ಮದುವೆ ಡಿ.11ರಂದು ನಿಗದಿಯಾಗಿ, ಡಿ.9ರಂದು ಮೆಹಂದಿ ಕಾರ್ಯಕ್ರಮವಿತ್ತು. ಆದರೆ, ಡಿ.8ರಂದು ರಾತ್ರಿ ಮನೆಯವರು […]

ಪ್ರಿಯಾಂಕಾ ಮುಂಬಯಿಯಲ್ಲಿ?

Friday, December 22nd, 2017
priyanka

ಮಂಗಳೂರು: ಮದುವೆ ನಿಗದಿಯಾದ ಬಳಿಕ ನಾಪತ್ತೆಯಾಗಿದ್ದ ಯುವತಿ ಧರೆಗುಡ್ಡೆಯ ಪ್ರಿಯಾಂಕಾ (25) ತನಿಖೆಗೆ ತೆರಳಿದ ನಗರ ಪೊಲೀಸರಿಗೆ ಪ್ರಿಯಕರನ ಜತೆ ಪತ್ತೆಯಾಗಿದ್ದಾಳೆಂದು ಮೂಲಗಳಿಂದ ತಿಳಿದು ಬಂದಿದೆ. ಈಕೆಯ ಮದುವೆ ಡಿ. 11ರಂದು ನಿಗದಿಯಾಗಿತ್ತು. ಆದರೆ ಈ ನಡುವೆ ಡಿ. 9ರಂದು ಮೆಹಂದಿ ಕಾರ್ಯಕ್ರಮವಿತ್ತು. ಡಿ. 8ರಂದು ರಾತ್ರಿ ಮನೆಯವರು ಊಟ ಮಾಡಿ ಮಲಗಿದ ವೇಳೆ, ಆಕೆ ನಾಪತ್ತೆಯಾಗಿದ್ದಳು. ಪ್ರಿಯಾಂಕಾಳ ಕುಟುಂಬ 2 ವರ್ಷಗಳಿಂದ ಇನೋಳಿಯಲ್ಲಿ ವಾಸಿಸುತ್ತಿದ್ದು, ಅದೇ ಊರಿನ ನಿವಾಸಿ ಹೈದರ್‌ ಜತೆ ಆಕೆಗೆ ಪ್ರೀತಿ ವ್ಯವಹಾರವಿತ್ತೆಂದು […]

ಯುವತಿ ನಾಪತ್ತೆ ಪ್ರಕರಣ: ಪತ್ರ ತಂದಿಟ್ಟ ಕುತೂಹಲ

Monday, December 18th, 2017
missing-case

ಮೂಡುಬಿದಿರೆ: ಸುಮಾರು 10 ದಿನದ ಹಿಂದೆ ನಿಗೂಢವಾಗಿ ನಾಪತ್ತೆಯಾಗಿರುವ ದರೆಗುಡ್ಡೆ ಗ್ರಾಮದ ಐತಪ್ಪಭಂಡಾರಿ ಎಂಬವರ ಪುತ್ರಿ ಪ್ರಿಯಾಂಕಾ (25) ಬರೆದಿದ್ದಾಳೆ ಎನ್ನಲಾದ ಪತ್ರವೊಂದು ಮನೆಮಂದಿಗೆ ಶನಿವಾರ ಬಂದಿದ್ದು, ಅದೀಗ ತೀವ್ರ ಕುತೂಹಲ ಸೃಷ್ಟಿಸಿದೆ. ಬಂಟ್ವಾಳ ತಾಲೂಕಿನ ಪಜೀರ್‌ ಅಂಚೆ ಕಚೇರಿಯ ಸಹಿಯೊಂದಿಗೆ ಬಂದ ಈ ಪತ್ರದಲ್ಲಿ ‘ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ. ನಾನು ಇನೋಳಿಯ ಯುವಕನೊಂದಿಗೆ ಸ್ವ ಇಚ್ಛೆಯಿಂದ ತೆರಳಿದ್ದೇನೆ. ಕೆಲವೇ ದಿನಗಳಲ್ಲಿ ನಾವು ಜೊತೆಯಾಗಿ ನ್ಯಾಯಾಲಯಕ್ಕೆ ಹಾಜರಾಗುವೆವು’ ಎಂದು ಬರೆದಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ […]

ಮೂಡಬಿದಿರೆ ಹುಡುಗಿ ಪ್ರಿಯಾಂಕಾ ಮಿಸ್ಸಿಂಗ್ ಕೇಸ್ ಹಿಂದೆ ಲವ್‌ ಜೆಹಾದ್‌

Monday, December 11th, 2017
priyanka

  ಮೂಡಬಿದಿರೆ: ಎಲ್ಲವೂ ಸುಗಮವಾಗಿ ನಡೆಯುತ್ತಿದ್ದರೆ ದರೆಗುಡ್ಡೆಯ ಪ್ರಿಯಾಂಕಾಳ ವಿವಾಹ ಅಳಿಯೂರಿನಲ್ಲಿ ಸೋಮವಾರ ನಡೆಯುತ್ತಿತ್ತೇನೋ. ಆದರೆ ಅದರ ಮೊದಲೇ ಅಂದರೆ ಮೆಹೆಂದಿ ಕಾರ್ಯಕ್ರಮ ನಡೆದಿದ್ದ ಶುಕ್ರವಾರ ತಡರಾತ್ರಿ ಆಕೆ ಮನೆ ಬಿಟ್ಟು “ಓಡಿ’ ಹೋದದ್ದು ಎಲ್ಲ ಗೊಂದಲಗಳಿಗೆ ಕಾರಣವಾಗಿದೆ. ಇಷ್ಟಕ್ಕೂ ಅವಳನ್ನು ಹಾರಿಸಿಕೊಂಡು ಹೋಗಲಾಗಿದೆಯೇ ಅಥವಾ ವ್ಯವಸ್ಥಿತವಾಗಿ ಆಕೆ ಓಡಿ ಹೋದದ್ದೇ ಎಂಬುದು ಸ್ಪಷ್ಟವಾಗುತ್ತಿಲ್ಲ. ಮೇಲ್ನೋಟಕ್ಕೆ ಆಕೆ ಅನ್ಯಕೋಮಿನ ವ್ಯಕ್ತಿ ಜತೆ ಪರಾರಿಯಾಗಿದ್ದಾಳೆಯೇ ಎಂಬ ಶಂಕೆ ಮೂಡುತ್ತಿದೆ. ಪ್ರಿಯಾಂಕಾ ತಂದೆ ದಿವಂಗತ ಐತಪ್ಪ ಭಂಡಾರಿ. ಅಕ್ಕನಿಗೆ ಮದುವೆಯಾಗಿದೆ. […]

ಉಪೇಂದ್ರ ಹೊಸ ಚಿತ್ರ ‘ಶ್ರೀಮತಿ’

Wednesday, July 6th, 2011
srimathi/ ಶ್ರೀಮತಿ

ಹಿಂದಿಯ ‘ಐತ್‌ರಾಜ್’ ಚಿತ್ರದ ರೀಮೇಕ್ ‘ಶ್ರೀಮತಿ’ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದಲ್ಲಿ ತಯಾರಾಗಿದೆ. ಅಂದ ಹಾಗೆ ಈ  ಚಿತ್ರ ವಯಸ್ಕರಿಗೆ ಮಾತ್ರ. ಉಪ್ಪಿ ಜೊತೆ ಅವರ ಶ್ರೀಮತಿ ಪ್ರಿಯಾಂಕಾ ಉಪೇಂದ್ರಕೂಡಾ ಅಭಿನಯಿಸಿದ್ದಾರೆ.  ಸೆಲೀನಾ ಜೇಟ್ಲಿ, ಪ್ರೇಮ್ ಚೋಪ್ರಾ, ಕೋಟ, ಸಯ್ಯಾಜಿ ಶಿಂಧೆ ತಾರಾಗಣದ ಈ  ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ‘ಎ’ ಸರ್ಟಿಫಿಕೇಟ್ ನೀಡಿದೆ. ಹದಿ ಹರೆಯದ ಯುವಕರನ್ನು ಬೆಚ್ಚಗೆ ಮಾಡುವ ಕೆಲವು ದೃಶ್ಯಗಳಿರುವುದೇ “ವಯಸ್ಕರ ಚಿತ್ರ”ದ ಹಣೆಪಟ್ಟಿ ಬೀಳಲು ಕಾರಣ ಎನ್ನಲಾಗಿದೆ. ಜುಲೈ 8ಕ್ಕೆ ಉಪೇಂದ್ರ […]