ಹೆಬ್ಟಾವಿನೊಂದಿಗೆ ಸೆಣಸಿ ಪಾರಾದ ಬಾಲಕನ ಮನೆಯಂಗಳದಲ್ಲಿ ಮತ್ತೆ ಪ್ರತ್ಯಕ್ಷವಾದ ಹೆಬ್ಟಾವು

Saturday, October 8th, 2016
python

ಮಂಗಳೂರು: ಹೆಬ್ಟಾವಿನೊಂದಿಗೆ ಸೆಣಸಿ ಪ್ರಾಣಾಪಾಯದಿಂದ ಪಾರಾದ ಬಂಟ್ವಾಳ ತಾಲೂಕು ಸಜೀಪ ಸಮೀಪದ ಕೊಳಕೆಯ ಬಾಲಕ ವೈಶಾಖ್‌ (11) ಚೇತರಿಸಿಕೊಂಡಿದ್ದು, ಗುರುವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾನೆ. ವಿಲಕ್ಷಣ ವಿದ್ಯಮಾನ ಎಂಬಂತೆ ಬಾಲಕ ಮನೆಗೆ ತಲುಪಿದಾಗ ಮನೆಯಂಗಳದಲ್ಲಿ ಹೆಬ್ಟಾವೊಂದು ಮತ್ತೆ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದೆ. ಆದರೆ ಈ ಹೆಬ್ಟಾವು ಕಳೆದ ಮಂಗಳವಾರ ಬಾಲಕನನ್ನು ಕಚ್ಚಿದ ಹೆಬ್ಟಾವೇ ಎಂಬುದು ಖಚಿತವಾಗಿಲ್ಲ. ಜನ ಸೇರುತ್ತಿದ್ದಂತೆ ಹೆಬ್ಟಾವು ಪೊದೆಯಲ್ಲಿ ಸೇರಿ ಮರೆಯಾಗಿದ್ದು, ಸ್ಥಳೀಯರು ಹುಡುಕಾಟ ನಡೆಸಿದ್ದಾರೆ. ಸಜೀಪ ಗ್ರಾಮದ ಕೊಳಕೆ ಕೂಡೂರಿನ […]

ಹೆಬ್ಟಾವಿನೊಂದಿಗೆ ಸೆಣಸಿ ಪ್ರಾಣಾಪಾಯದಿಂದ ಪಾರಾದ ವೈಶಾಖ್‌ಗೆ ಶೌರ್ಯ ಪ್ರಶಸ್ತಿ ಶಿಫಾರಸು: ಐವನ್‌

Thursday, October 6th, 2016
ivan-dsouza

ಮಂಗಳೂರು: ಹೆಬ್ಟಾವಿನೊಂದಿಗೆ ಸೆಣಸಿ ಪ್ರಾಣಾಪಾಯದಿಂದ ಪಾರಾದ ಬಂಟ್ವಾಳ ತಾಲೂಕು ಸಜೀಪ ಸಮೀಪದ ಕೊಳಕೆಯ ಬಾಲಕ ವೈಶಾಖ್‌ನನ್ನು ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡುವುದಾಗಿ ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ತಿಳಿಸಿದ್ದಾರೆ. ಅವರು ಬುಧವಾರ ನಗರದ ಕಂಕನಾಡಿ ಫಾದರ್‌ ಮುಲ್ಲರ್‌ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನನ್ನು ಕಂಡು ಆರೋಗ್ಯ ವಿಚಾರಿಸಿದರು. ವೈಶಾಖ್‌ನ ಸಾಹಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಆತನನ್ನು ಶಾಲು ಹೊದೆಸಿ, ಹಾರ ಹಾಕಿ ಐವನ್‌  ಡಿ’ಸೋಜಾ ಬಾಲಕನನ್ನು ಗೌರವಿಸಿದರು. ಬಾಲಕನ ತಾಯಿ, ಹರಿಣಾಕ್ಷಿ […]

ಹೆಬ್ಟಾವಿನ ಜತೆ ಕಾದಾಡಿ ಜೀವವುಳಿಸಿಕೊಂಡು ಸಾಹಸ ಮೆರೆದ ಬಾಲಕ ವೈಶಾಖ್‌

Wednesday, October 5th, 2016
python-attack

ಮಂಗಳೂರು: ದಾರಿಯಲ್ಲಿ ಸಾಗುತ್ತಿದ್ದಾಗ ಮೈಮೇಲೆ ಹಾರಿ ಸುತ್ತಿಕೊಳ್ಳಲಾರಂಭಿಸಿದ ಹೆಬ್ಟಾವಿನ ಜತೆ ಬಾಲಕನೋರ್ವ ಕಾದಾಡಿ ಜೀವವುಳಿಸಿಕೊಂಡ ಘಟನೆ ಬಂಟ್ವಾಳ ತಾಲೂಕಿನ ಸಜೀಪ ಸಮೀಪದ ಕೊಳಕೆಯಲ್ಲಿ ಮಂಗಳವಾರ ನಡೆದಿದೆ. ಸಜೀಪ ಆದರ್ಶ ಆಂಗ್ಲಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿ 11ರ ಹರೆಯದ ವೈಶಾಖ್‌ ಸಾಹಸ ಮೆರೆದು ಪ್ರಾಣವುಳಿಸಿಕೊಂಡ ಬಾಲಕ. ಕೊಳಕೆ ಕೂಡೂರು ನಿವಾಸಿ ಸುರೇಶ್‌ ಅವರ ಪುತ್ರ ವೈಶಾಖ್‌ ಎಂದಿನಂತೆ ಸಂಜೆ ಶಾಲೆಯಿಂದ ಮನೆಗೆ ಬಂದು ಉಪಾಹಾರ ಸೇವಿಸಿ, ಸಮೀಪದಲ್ಲೇ ಇರುವ ತನ್ನ ಅಜ್ಜನ ಮನೆಗೆ ತೆರಳಿದ್ದ. ಸಾಗುವ ಹಾದಿ […]

ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕ್ಯುಟ್‌

Wednesday, January 9th, 2013
Fr Muller Hospital Fire accident

ಮಂಗಳೂರು : ಮಂಗಳವಾರ ಫಾದರ್ ಮುಲ್ಲರ್ ಆಸ್ಪತ್ರೆಯ ಹೃದ್ರೋಗ ತೀವ್ರ ನಿಗಾ ಘಟಕದ ಎ.ಸಿ. ಯಲ್ಲಿ ಶಾರ್ಟ್ ಸರ್ಕ್ಯುಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡು ಸ್ವಲ್ಪ ಹೊತ್ತು ಗಲಭೆಯ ವಾತಾವರಣ ನಿರ್ಮಾಣವಾಯಿತು. ಆದರೆ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಬೆಳಗ್ಗೆ 10.30 ರ ವೇಳೆಗೆ ಏರ್‌ಕಂಡೀಷನ್ ಯಂತ್ರದ ಒಳಗೆ ಹೊಗೆ, ಸುಟ್ಟ ವಾಸನೆ ಹಾಗೂ ಸ್ವಲ್ಪ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೆ ಆಸ್ಪತ್ರೆಯ ಸಿಬ್ಬಂದಿ, ಕೊಠಡಿಯ ಕಿಟಕಿ ಗಾಜುಗಳನ್ನು ಒಡೆದು ಉಸಿರಾಟಕ್ಕೆ ಸಮಸ್ಯೆಯಾಗದಂತೆ ನೋಡಿಕೊಂಡರು. ಸಂಸ್ಥೆಯ ಭದ್ರತಾ ಸಿಬ್ಬಂದಿ […]