ಫೇಸ್ ಬುಕ್ ನಲ್ಲಿ ಅವಮಾನ, ಸೌದಿಯಲ್ಲಿ ಬಂಧಿತರಾಗಿರುವ ಹರೀಶ್ ಬಂಗೇರ ನಿರಪರಾಧಿ, ಬಿಡುಗಡೆ

Saturday, August 14th, 2021
Harish Bangera

ಉಡುಪಿ : ಸೌದಿ ಅರೇಬಿಯಾದ ದೊರೆ ಹಾಗೂ ಧರ್ಮದ ಬಗ್ಗೆ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಗಳನ್ನು ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ಹಾಕಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು,  ಈ ಸಂಬಂಧ ಸೌದಿಯಲ್ಲಿ ಬಂಧಿತರಾಗಿರುವ ಕುಂದಾಪುರ ತಾಲೂಕಿನ ಹರೀಶ್ ಬಂಗೇರ ಅವರು ಆ.18ರಂದು ಬಿಡುಗಡೆಗೊಂಡು ಬೆಂಗಳೂರು ತಲುಪಲಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಹರೀಶ್ ಬಂಗೇರ ತಾಯ್ನಾಡಿಗೆ ಮರಳಲು ಪೂರೈಸಬೇಕಾಗಿದ್ದ  ಕೆಲಸಗಳು ಪೂರ್ಣಗೊಂಡಿದ್ದು ಆ.17ರಂದು ಸೌದಿ ಅರೇಬಿಯಾದ ದಮ್ಮಾಮ್ ವಿಮಾನ ನಿಲ್ದಾಣದಿಂದ ದೋಹಾ ಹೊರಟು ಆ.18 ರಂದು ಬೆಂಗಳೂರು […]

ಕಾಂಗ್ರೆಸ್ ಕಾರ್ಯಕರ್ತನನ್ನು ಪೊಲೀಸ್ ಠಾಣೆಗೆ ಕರೆಸಿ ಹಲ್ಲೆ, ಆಸ್ಪತ್ರೆಗೆ ದಾಖಲು

Friday, July 9th, 2021
Radhakrishna

ಕಾರ್ಕಳ:  ಕಾಂಗ್ರೆಸ್ ಕಾರ್ಯಕರ್ತನನ್ನು ಪೊಲೀಸ್ ಠಾಣೆಗೆ ಕರೆಸಿ ಆತನ ಮೇಲೆ ಠಾಣಾಧಿಕಾರಿ ಹಲ್ಲೆ ನಡೆಸಿದ ಪರಿಣಾಮ ಆತ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಕಾರ್ಕಳ ತಾಲೂಕಿನ ಹಿರ್ಗಾನ ನಿವಾಸಿ ರಾಧಾಕೃಷ್ಣ ಎಂಬವರು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ತನ್ನ ಫೇಸ್ ಬುಕ್ ನಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪೋಸ್ಟ್ ಗಳನ್ನು ಹಾಕಿದ್ದರು ಎಂದು ದೂರಲಾಗಿದೆ. ರಾಧಾಕೃಷ್ಣ ಅವರ  ಫೇಸ್ ಬುಕ್ ನ ಫೇಕ್ ಐಡಿಯ ಮುಖಾಂತರ 2020 ಆಗಸ್ಟ್ ನಲ್ಲಿ ಕಿಡಿಗೇಡಿಗಳು ಸೈನಿಕರ ಬಗ್ಗೆ […]

ಟೂಲ್‌ಕಿಟ್‌ ತಿರುಚಿದ ಬಳಿಕ ಟ್ವಿಟರ್‌, ಫೇಸ್‌ ಬುಕ್‌, ಇನ್‌ ಸ್ಟಾಗ್ರಾಂ ನಿಷೇಧಿಸಲು ಹೊರಟ ಕೇಂದ್ರ ಸರ್ಕಾರ

Tuesday, May 25th, 2021
social Media

ಹೊಸದಿಲ್ಲಿ: ಕಾಂಗ್ರೆಸ್‌ ನದ್ದು ಎನ್ನಲಾದ ಟೂಲ್‌ಕಿಟ್‌ ಅನ್ನು “ತಿರುಚಿದ ಅಂಶಗಳುಳ್ಳ ವಿಷಯ’ ಎಂದು ಉಲ್ಲೇಖೀಸಿದ್ದ ಟ್ವಿಟರ್‌ಗೆ ದಿಲ್ಲಿ ಪೊಲೀಸರ ವಿಶೇಷ ಘಟಕ ಸೋಮವಾರ ನೋಟಿಸ್‌ ಜಾರಿ ಮಾಡಿದೆ. ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ ಅವರು ಟೂಲ್‌ಕಿಟ್‌ ಕುರಿತು ಮಾಡಿದ್ದ ಟ್ವೀಟ್‌ ಅನ್ನು ಟ್ವಿಟರ್‌ ಇತ್ತೀಚೆಗೆ “ತಿರುಚಿದ ಅಂಶಗಳುಳ್ಳ ವಿಷಯ’ ಎಂದು ಘೋಷಿಸದ ಬೆನ್ನಲ್ಲೇ  ಟ್ವಿಟರ್‌, ಫೇಸ್‌ ಬುಕ್‌, ಇನ್‌ ಸ್ಟಾಗ್ರಾಂ ಸೇರಿದಂತೆ ಬಹುತೇಕ ಸಾಮಾಜಿಕ ಜಾಲತಾಣಗಳನ್ನು ಕೇಂದ್ರ ಸರ್ಕಾರ ನಿದೇಶಿಸಲು ಮುಂದಾಗಿದೆ. ಡಿಜಿಟಲ್‌ ಕಂಟೆಂಟ್‌ ಗಳ ಮೇಲೆ ನಿಯಂತ್ರಣ ಹೇರಲು ಕೇಂದ್ರ ಸರಕಾರ […]

ಮೋದಿ ಸಾಯಬೇಕು ಎಂದಿದ್ದ ವ್ಯಕ್ತಿಯ ಪತ್ನಿಯನ್ನು ಪದಮುಕ್ತಗೊಳಿಸಿದ ಬ್ಯಾರಿ ಸಾಹಿತ್ಯ ಅಕಾಡೆಮೆ

Wednesday, April 28th, 2021
Modi

ಮಂಗಳೂರು: ಪ್ರಧಾನಿ ಮೋದಿಯವರ ಬಗ್ಗೆ ವ್ಯಕ್ತಿಯೊಬ್ಬರು ಫೇಸ್ ಬುಕ್ ನಲ್ಲಿ ನರಕಯಾತನೆ ಅನುಭವಿಸಿ ಸಾಯುವಂತಾಗಲು ಎಲ್ಲರು ಪ್ರಾರ್ಥಿಸಬೇಕು ಎಂದು ಅವಹೇಳಕಾರಿ ಪೋಸ್ಟ್ ಮಾಡಿರುವ ಹಿನ್ನೆಲೆಯಲ್ಲಿ ಆತನ ಪತ್ನಿಯನ್ನು ಸದಸ್ಯೆ ಸ್ಥಾನದಿಂದ ಪದಮುಕ್ತಗೊಳಿಸಿದ ಘಟನೆ  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಲ್ಲಿ ನಡೆದಿದೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಪತ್ರ ಮುಖೇನ ನಫೀಸಾ ಮಿಸ್ರಿಯಾ ಅವರಿಗೆ ಅಕಾಡೆಮಿ ಸದಸ್ಯತ್ವದಿಂದ ಪದಮುಕ್ತಗೊಳಿಸಿರುವ ಬಗ್ಗೆ ಆದೇಶ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಫೇಸ್ಬುಕ್ ಪೇಜ್ನಲ್ಲಿ ಕಾಂಗ್ರೆಸ್ ಮುಖಂಡರು ಎನ್ನಲಾದ ಲುಕ್ಮಾನ್ ಅಡ್ಯಾರ್ ಅವಹೇಳನಕಾರಿ ಪೋಸ್ಟ್ […]

ಮೋದಿ ನರಕಯಾತನೆ ಅನುಭವಿಸಿ ಸಾಯಬೇಕು ಎಂದ ವ್ಯಕ್ತಿ ವಿರುದ್ಧ ದೂರು

Wednesday, April 28th, 2021
modi

ಮಂಗಳೂರು  : ಪ್ರಧಾನಿ ನರೇಂದ್ರ ಮೋದಿಯವರನ್ನು ಏಕವಚನದಲ್ಲಿ ಸಂಬೋಧಿಸಿದ್ದಲ್ಲದೆ, ಅವರು ಬೀದಿಬದಿಯಲ್ಲಿ ನರಕಯಾತನೆ ಅನುಭವಿಸಿ ಸಾಯುವಂತಾಗಲು ಎಲ್ಲರು ಪ್ರಾರ್ಥಿಸಬೇಕು ಎಂದು ಫೇಸ್‌ ಬುಕ್‌ನಲ್ಲಿ ಮನವಿ ಮಾಡಿದ ಲುಕ್ಮನ್‌ ಅಡ್ಯಾರ್‌ ಎಂಬಾತ ನ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ರಂಝಾನ್‌ ತಿಂಗಳ ಈ ಸಮಯದಲ್ಲಿ ಫೇಸ್‌ಬುಕ್‌ ಸಾಮಾಜಿಕ ಜಾಲತಾಣದಲ್ಲಿ ವಿಷಬೀಜ ಬಿತ್ತುತ್ತಿದ್ದಾನೆ ಎಂದು ಆರೋಪಿಸಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ಅಲ್ಪಸಂಖ್ಯಾತ ವಿಭಾಗ ಮುಖಂಡ ಫಝಲ್‌ ಅಸೈಗೋಳಿ ಮತ್ತು ನ್ಯಾಯವಾದಿ ಅಸ್ಗರ್‌ ಅಲಿ ಎಂಬವರು ಕೊಣಾಜೆ ಠಾಣೆಗೆ ದೂರು […]

ತಾಲೂಕು ಕಚೇರಿಯಲ್ಲಿ ಕೆಲಸ ದೊರಕಿಸಿಕೊಡುವುದಾಗಿ ವಂಚಿಸಿದವನಿಗೆ ಬೆಲ್ಟ್ ನಿಂದ ಹಲ್ಲೆ

Thursday, March 4th, 2021
Jeetu Shetty

ಮಂಗಳೂರು: ಫೇಸ್ ಬುಕ್ ಮೂಲಕ ಪರಿಚಯ ಮಾಡಿಸಿಕೊಂಡು ತಾಲೂಕು ಕಚೇರಿಯಲ್ಲಿ ಕೆಲಸ ದೊರಕಿಸಿಕೊಡುವುದಾಗಿ ಹೇಳಿ ಮಹಿಳೆಯರ ಸಹಿತ ಹಲವು ಮಂದಿಗೆ ವಂಚನೆಗೈದ ಆರೋಪಿಗೆ ಕೆಲವು ವ್ಯಕ್ತಿಗಳು  ಬೆಲ್ಟ್ ನಿಂದ ಮತ್ತು ಗುಂಪಾಗಿ ಸೇರಿ ಹಲ್ಲೆ ನಡೆಸಿರುವ ಘಟನೆ ಮುಲ್ಕಿ ಸಮೀಪ ನಡೆದಿದೆ. ಪುನರೂರು ಎಂಬಲ್ಲಿನ ಜೀತು ಶೆಟ್ಟಿ ಅಲಿಯಾಸ್ ಅಜಯ್ ಶೆಟ್ಟಿ ಎಂಬಾತ, ತನಗೆ ಶಾಸಕ ಡಾ.ವೈ.ಭರತ್ ಶೆಟ್ಟಿಯವರ ಪರಿಚಯ ಇದೆ ಎಂದು ಏಳೆಂಟು ಮಂದಿಗೆ ನಂಬಿಸಿದ್ದಾನೆ. ಎಫ್ಬಿ ಮುಖಾಂತರ ಅವರನ್ನು ಪರಿಚಯಿಸಿಕೊಂಡು ತಾಲೂಕು ಆಫೀಸ್ ನಲ್ಲಿ ಕೆಲಸ ದೊರಕಿಸುವ ಭರವಸೆ ನೀಡಿದ್ದಾನೆ. […]

ಚಂದನ್ ಶೆಟ್ಟಿ-ವೈಷ್ಣವಿ ಗೌಡ ಮದುವೆ ಆಗ್ತಾರಂತೆ.! ಇದು ನಿಜವೇ.?

Tuesday, February 6th, 2018
chandan

‘ಬಿಗ್ ಬಾಸ್ ಕನ್ನಡ-5’ ಕಾರ್ಯಕ್ರಮದ ವಿನ್ನರ್ ಚಂದನ್ ಶೆಟ್ಟಿ ಸದ್ಯದಲ್ಲೇ ಮದುವೆ ಆಗ್ತಾರಂತೆ. ಇದೇ ತಿಂಗಳು ಚಂದನ್ ಶೆಟ್ಟಿ ನಿಶ್ಚಿತಾರ್ಥ ನಡೆಯಲಿದೆಯಂತೆ. ಹೌದಾ…? ಎಂದು ಕಣ್ಣರಳಿಸುವ ಮುನ್ನ ಮೊದಲು ಹುಡುಗಿ ಯಾರು ಅಂತ ತಿಳಿದುಕೊಳ್ಳಿ… ಚಂದನ್ ಶೆಟ್ಟಿ ಮದುವೆ ಆಗುತ್ತಿರುವ ಹುಡುಗಿ ಹೆಸರು ವೈಷ್ಣವಿ ಗೌಡ ಅಂತೆ. ಯಾರೀ ವೈಷ್ಣವಿ ಗೌಡ ಅಂತೀರಾ.? ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ಅಗ್ನಿಸಾಕ್ಷಿ’ ಧಾರಾವಾಹಿಯ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಕಣ್ರೀ.! ಹೀಗಂತ ನಾವು ಹೇಳ್ತಿಲ್ಲ ಸ್ವಾಮಿ… ಒಮ್ಮೆ […]

ಯುವತಿಯ ನಗ್ನ ಫೋಟೊ ಫೇಸ್ ಬುಕ್ ಗೆ ಅಪ್ ಲೋಡ್ ಮಾಡಿದ ಪ್ರಿಯಕರ

Friday, June 21st, 2013
Kusumadhara

ಸುಳ್ಯ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಟೀ ಸ್ಟಾಲ್ ಹೊಂದಿರುವ ಅಲೆಟ್ಟಿ ಗ್ರಾಮದ ಮೊರಂಗಲ್ಲು ನಿವಾಸಿ ಕುಸುಮಾಧರ(26) ಎಂಬಾತ ಸಂಬಂಧಿ ಯುವತಿಯೊಬ್ಬಳನ್ನು  ಅತ್ಯಾಚಾರ ಮಾಡಿ ಆಕೆಯ ನಗ್ನ ಚಿತ್ರಗಳನ್ನು ಫೇಸ್ ಬುಕ್ ಗೆ ಅಪಲೋಡ್ ಮಾಡಿ ಸಿಕ್ಕಿಬಿದ್ದಿದ್ದಾನೆ. ಸುಳ್ಯ ಅರಣ್ಯ ಇಲಾಖೆಯಲ್ಲಿ ಗುಮಾಸ್ತೆಯಾಗಿರುವ ಅರಂತೋಡು ಗ್ರಾಮದ ಬಿಳಿಯಾರು ನಿವಾಸಿ ಯುವತಿ ಈ ಬಗ್ಗೆ ದೂರು ನೀಡಿದ್ದು,  ಸುಳ್ಯ ಪೊಲೀಸರು ಕುಸುಮಾಧರನನ್ನು ಆತನ ಟೀ ಸ್ಟಾಲ್ ನಿಂದ ಗುರುವಾರ ಬಂಧಿಸಿದ್ದಾರೆ.  ಈತನ ವಿರುದ್ಧ ಅತ್ಯಾಚಾರ ಮತ್ತು ಜೀವ ಬೆದರಿಕೆ ದೂರು ದಾಖಲು ಮಾಡಲಾಗಿದೆ. […]