ಬದಿಯಡ್ಕ ಹಿಂದೂ ಸಮಾಜೋತ್ಸವಕ್ಕೆ ಆಗಮಿಸಿದ ಸಾಧ್ವಿ ಬಾಲಿಕಾ ಸರಸ್ವತಿ

Friday, April 27th, 2018
Sadhwi Ballika Saraswati

ಮಂಗಳೂರು : ದೇಶದಲ್ಲಿ ಗೋವುಗಳು ಹಾಗೂ ಮಹಿಳೆಯರು ಸುರಕ್ಷಿತರಿಲ್ಲ, ಗೋಶಾಲೆ ಹಾಗೂ ಮನೆಗಳ ಹಟ್ಟಿಯಿಂದ ಮಾರಕಾಸ್ತ್ರಗಳಿಂದ ಬೆದರಿಸಿ ಗೋವುಗಳನ್ನು ಅಪಹರಿಸಿ ಕಸಾಯಿಖಾನೆಗೆ ಸಾಗಿಸುತ್ತಿರುವುದು ಆತಂಕಕಾರಿ ಪರಿಸ್ಥಿತಿ ಎಂದು ಸಾಧ್ವಿ ಬಾಲಿಕಾ ಸರಸ್ವತಿ  ಹೇಳಿದರು. ಬದಿಯಡ್ಕ ಹಿಂದೂ ಸಮಾಜೋತ್ಸವಕ್ಕೆ ಆಗಮಿಸುವ ಅವರು ಶುಕ್ರವಾರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ  ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದ ದುಷ್ಟ ಶಕ್ತಿಗಳೊಂದಿಗೆ ರಾಷ್ಟ್ರೀಯ ಪಕ್ಷವೊಂದು ಚುನಾವಣೆಗೋಸ್ಕರ ಒಪ್ಪಂದ ಮಾಡಿಕೊಂಡಿರುವುದು ದುರದೃಷ್ಟಕರ ಈ ಬೆಳವಣಿಗೆ ಮುಂಬರುವ ದಿನಗಳಲ್ಲಿ ಹಿಂದೂಗಳ ಸ್ಥಿತಿ ಏನಾಗಲಿದೆ ಎಂಬುದನ್ನು ಸೂಚಿಸುತ್ತದೆ ಎಂದು ಅವರು ಆತಂಕ […]

ಬದಿಯಡ್ಕ ಸಬ್ ರಿಜಿಸ್ಟ್ರಾರ್ ಕಛೇರಿಯ ಮುಂಭಾಗ ಕಾಂಗ್ರೆಸ್ ವತಿಯಿಂದ ಸ್ಟಾಂಪ್ ಪೇಪರ್ ಬೆಲೆಯೇರಿಕೆ ವಿರುದ್ಧ ಧರಣಿ

Friday, August 12th, 2016
Stamp-paper

ಬದಿಯಡ್ಕ : ಕಾರಡ್ಕ ಬ್ಲಾಕ್ ಕಾಂಗ್ರೆಸ್ ಕಮಿಟಿಯ ಆಶ್ರಯದಲ್ಲಿ ಪಾಲ್ಪಟ್ಟಿ ದೃಢಪತ್ರದ ಬೆಲೆಯೇರಿಕೆ ವಿರುದ್ಧ ಬದಿಯಡ್ಕ ಉಪನೋಂದಾವಣಾ ಕಚೇರಿಗೆ ನಡೆಸಿದ ಧರಣಿ ಸತ್ಯಾಗ್ರಹವನ್ನು ಕೇರಳ ಪ್ರದೇಶ್ ಕಾಂಗ್ರೆಸ್ಸ್ ಕಾರ್ಯದರ್ಶಿ ನೀಲಕಂಠನ್ ಉದ್ಘಾಟಿಸಿ, ಮಾತನಾಡಿ ಅಧಿಕಾರಕ್ಕೆ ಬಂದು 2 ತಿಂಗಳಲ್ಲೇ ಜನತೆಯನ್ನು ವಂಚಿಸಲು ಈ ಸರಕಾರ ಹೊರಟಿದೆ. ಸ್ಟಾಂಪ್ ಪೇಪರ್‌ನ ಬೆಲೆ ಹೆಚ್ಚಳವು ಜನಸಾಮಾನ್ಯರಿಗೆ ದೊಡ್ಡ ಹೊಡೆತವಾಗಿದೆ ಎಂದರು. ಈ ತೀರ್ಮಾನವನ್ನು ಕೂಡಲೇ ಹಿಂತೆಗೆದು ಸಾರ್ವಜನಿಕರಿಗಾಗುವ ತೊಂದರೆಯನ್ನು ನಿವಾರಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು. ಕಾರಡ್ಕ ಬ್ಲಾಕ್ ಅಧ್ಯಕ್ಷ ವಾರಿಜಾಕ್ಷನ್ ಅಧ್ಯಕ್ಷತೆ […]

ಬದಿಯಡ್ಕದಲ್ಲಿ ಪ್ರೆಸ್ ಪೋರಂ ಸಭೆ

Saturday, July 30th, 2016
Pressforam-meeting

ಬದಿಯಡ್ಕ:ಸ್ಥಳೀಯ ಪತ್ರಕರ್ತರ ಸಂಘಟನೆ ಬದಿಯಡ್ಕ ಪ್ರೆಸ್ ಪೋರಂ ಸಭೆ ಬದಿಯಡ್ಕದಲ್ಲಿ ಶುಕ್ರವಾರ ನಡೆಯಿತು. ಬದಿಯಡ್ಕ ಪ್ರೆಸ್ ಪೋರಂ ಅಧ್ಯಕ್ಷ ಗಂಗಾಧರ ಪಳ್ಳತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಸದಸ್ಯತ್ವ ನವೀಕರಣ,ನೂತನ ಸದಸ್ಯರಿಗೆ ಸದಸ್ಯತ್ವ,ಸಾಮಾಜಿಕ ವಿಚಾರಗಳಲ್ಲಿ ಬರವಣಿಗೆಯ ಸವಾಲುಗಳು ಹಾಗೂ ಭದ್ರತೆಯ ವಿಷಯಗಳ ಬಗ್ಗೆ ಚರ್ಚಿಸಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಪ್ರೆಸ್ ಪೋರಂ ಜಿಲ್ಲಾ ಅಧ್ಯಕ್ಷ ಅಶೋಕ ನೀರ್ಚಾಲು ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ಪತ್ರಕರ್ತರಾದ ಶಿವಶಂಕರ ಪೆರ್ಲ,ರವೀಂದ್ರ ರೈ ಮಲ್ಲಾವರ,ಪುರುಷೋತ್ತಮ ಭಟ್ ಕೆ,ಅಖಿಲೇಶ್ ಯಾದವ್ ಮೊದಲಾದವರು ಉಪಸ್ಥಿತರಿದ್ದರು.

ಬ್ರಿಟಿಷರಿಗೆ ಧನ್ಯವಾದದ ಪ್ಲೆಕ್ಸ್ ಪ್ರತ್ಯಕ್ಷ

Monday, May 16th, 2016
Kerala Flex

ಬದಿಯಡ್ಕ: ವ್ಯವಸ್ಥೆಗೆ ಬೇಸತ್ತು ಹಲವರು ಕೆಲವೊಮ್ಮೆ ರಾಷ್ಟ್ರಕ್ಕೆ ಸ್ವಾತಂತ್ರ್ಯ ಲಭಿಸುವ ಬದಲು ಈಗಲೂ ಬ್ರಿಟೀಷರೇ ದೇಶವನ್ನು ಆಳ ಬೇಕಿತ್ತೆಂಬ ಮಾತುಗಳು ಹಲವೊಮ್ಮೆ ನಮ್ಮಲ್ಲಿ ಕಂಡುಬರುವುದಿದೆ. ಅದಕ್ಕೆ ಪುಷ್ಠಿ ನೀಡಲೋ ಎಂಬಂತೆ ಬ್ರಿಟಿಷರಿಗೆ ಧನ್ಯವಾದ ತಿಳಿಸಿ ಬದಿಯಡ್ಕದಲ್ಲಿ ಪ್ಲೆಕ್ಸ್ ಬೋರ್ಡ್ ಕಂಡುಬಂದಿದ್ದು, ಆಶ್ಚರ್ಯಕ್ಕೆ ಕಾರಣವಾಗಿದೆ. ಬದಿಯಡ್ಕ-ವಿದ್ಯಾಗಿರಿ ರಸ್ತೆಯ ಕುಂಡಡ್ಕ ಸೇತುವೆಯ ಬಳಿ ಭಾನುವಾರ ಬೆಳಿಗ್ಗೆ ನೀವು ಈ ಸೇತುವೆ ನಿರ್ಮಿಸದೇ ಇದ್ದಲ್ಲಿ ನಮ್ಮ ಯಾತ್ರೆ ಇದಕ್ಕಿಂತಲೂ ಭಯಾನಕವಾಗುತ್ತಿತ್ತು. ಈ ರಸ್ತೆ ಹಾಗೂ ಸೇತುವೆ ಕುಸಿದು ಹಲವು ವರ್ಷಗಳಾದರೂ ,ಮರಳಿ […]

ಟ್ಯಾಕ್ಸಿ ಡ್ರೈವರ್‌ಗಳು ಪೋಲೀಸರ ಕಣ್ಣಾಗಿರಬೇಕು – ಬದಿಯಡ್ಕ ಎಸ್.ಐ. ದಾಮೋದರನ್

Friday, March 11th, 2016
Kasargod Traffic

ಬದಿಯಡ್ಕ : ಟ್ಯಾಕ್ಸಿ ಡ್ರೈವರುಗಳು ಸದಾ ಪೋಲೀಸರೊಂದಿಗೆ ಸಹಕರಿಸುತ್ತಿರಬೇಕು. ತಮ್ಮ ನಿಲ್ದಾಣಗಳಲ್ಲಿ ಏನೇ ನಡೆದರೂ ಅದನ್ನು ಪೋಲೀಸರಿಗೆ ತಿಳಿಸಬೇಕು. ನೀವು ನಮ್ಮ ಕಣ್ಣಾಗಿರಬೇಕು ಎಂದು ಬದಿಯಡ್ಕ ಪೋಲೀಸ್ ಸಬ್ ಇನ್ಸ್‌ಪೆಕ್ಟರ್ ದಾಮೋದರನ್ ಅವರು ನುಡಿದರು. ಅವರು ಗುರುವಾರ ಬದಿಯಡ್ಕ ಎಂ.ಎಸ್. ಆಡೊಟೋರಿಯಂನಲ್ಲಿ ಜನಮೈತ್ರಿ ಪೋಲೀಸ್ ಸ್ಟೇಶನ್‌ನ ನೇತೃತ್ವದಲ್ಲಿ ಟ್ಯಾಕ್ಸಿ ಚಾಲಕರಿಗಾಗಿ ನಡೆದ ತಿಳುವಳಿಕಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಅವರು ಮಾತನಾಡಿ ಮನೆಯವರು ನಮ್ಮ ಬರುವಿಕೆಯನ್ನು ಎದುರುನೋಡುತ್ತಿರುತ್ತಾರೆ. ನಾವು ಸುರಕ್ಷಿತರಾಗಿ ವಾಹನ ಚಲಾಯಿಸಿ ಸದಾ ಸಂತಸವನ್ನೇ ನೀಡಬೇಕೆಂಬ ಆಕಾಂಕ್ಷೆ […]

ರುಡ್‌ಸೆಟ್ ಸಂಸ್ಥೆಯಲ್ಲಿ ತರಬೇತಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭ

Wednesday, July 29th, 2015
rgcy

ಉಜಿರೆ : ರುಡ್‌ಸೆಟ್ ಸಂಸ್ಥೆಯಲ್ಲಿ ನಡೆಯುತ್ತಿದ್ದ ಎರಡು ತರಬೇತಿ ಕಾರ್ಯಕ್ರಮಗಳಾದ ಮೋಟಾರ್ ರಿವೈಂಡಿಂಗ್ ಮತ್ತು ದ.ಕ ಜಿಲ್ಲಾ ಪಂಚಾಯತ್ ಪ್ರಯೋಜಕತ್ವದ ಆರ್‌ಜಿಸಿವೈ-ಹೈನುಗಾರಿಕಾ ತರಬೇತಿಗಳ ಸಮಾರೋಪ ಸಮಾರಂಭವು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿಯ ಹಿರಿಯ ನ್ಯಾಯವಾದಿಗಳಾದ ರೊ.ಪ್ರತಾಪ್‌ಸಿಂಹ ನಾಯಕ್‌ರವರು ಭಾಗವಹಿಸಿ ಪ್ರಮಾಣ ಪತ್ರಗಳನ್ನು ಶಿಭಿರಾರ್ಥಿಗಳಿಗೆ ವಿತರಿಸುತ್ತಾ ಸ್ವ ಉದ್ಯೋಗದಲ್ಲಿ ಸಂಯಮ, ತಾಳ್ಮೆ ಮತ್ತು ಸಮಾಧಾನದಿಂದ ವರ್ತಿಸಿ ಎಂದು ಕರೆ ನೀಡಿದರು. ಸಂಸ್ಥೆಯ ನಿರ್ದೇಶಕರಾದ ಶ್ರೀ ಅಜಿತ್ ಕೆ. ರಾಜಣ್ಣವರ್ ಅತಿಥಿಗಳನ್ನು ಸ್ವಾಗತಿಸಿ, ಉಪನ್ಯಾಸಕರಾದ ಶ್ರೀ ಅಬ್ರಹಾಂ […]