Blog Archive

ನಿಮಗೆ ಅಧಿಕಾರ ನಡೆಸಲು ಹೇಳಿ ಕೊಟ್ಟವರೇ ನಾವು: ಯಡಿಯೂರಪ್ಪಗೆ ಸಿಎಂ ಟಾಂಗ್

Tuesday, October 30th, 2018
kumarswamy

ಶಿವಮೊಗ್ಗ: ನಿಮಗೆ ಅಧಿಕಾರ ನಡೆಸಲು ಹೇಳಿ ಕೊಟ್ಟವರೇ ನಾವು. ಇಲ್ಲದಿದ್ದರೆ ನಿಮಗೆ ಅಧಿಕಾರ ನಡೆಸಲು ಬರುತ್ತಿರಲಿಲ್ಲ ಎಂದು ಶಿವಮೊಗ್ಗದಲ್ಲಿ ಸಿಎಂ ಕುಮಾರಸ್ವಾಮಿ ಮಾಜಿ ಸಿಎಂ ಯಡಿಯೂರಪ್ಪಗೆ ಟಾಂಗ್ ನೀಡಿದ್ದಾರೆ. ಪ್ರೆಸ್ ಟ್ರಸ್ಟ್ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರ ರಚನೆಯಾದಾಗಿನಿಂದ ಮಾಧ್ಯಮದವರನ್ನು ಬಿಜೆಪಿಯವರು ದಾರಿ ತಪ್ಪಿಸುತ್ತಿದ್ದಾರೆ. ಕೇವಲ ಡೆಡ್ಲೈನ್ ನೀಡುತ್ತಾ ಬರುತ್ತಿದ್ದಾರೆ. ಇವರೇನು ಜ್ಯೋತಿಷ್ಯಗಳಾ..? ಎಂದು ಟಾಂಗ್ ನೀಡಿದರು. ಅಧಿಕಾರಿಗಳನ್ನು ದಾರಿ ತಪ್ಪಿಸುತ್ತಿದ್ದಾರೆ. ಶಾಸಕರನ್ನು ಕೊಂಡುಕೊಂಡಿದ್ದೇವೆ. ದೀಪವಾಳಿಯ ನಂತರ ಸರ್ಕಾರ ಬಿದ್ದು ಹೋಗುತ್ತೆ ಅಂತ ಹೇಳಿಕೊಂಡು ಓಡಾಡುತ್ತಿದ್ದಾರೆ. […]

ಮಧು ಬಂಗಾರಪ್ಪ ಡಮ್ಮಿ ಅಲ್ಲ..ಬಿಜೆಪಿಯ ರಾಘವೇಂದ್ರ ಅವರೇ ಡಮ್ಮಿ ಕ್ಯಾಂಡಿಟೇಟ್: ಸಿದ್ದರಾಮಯ್ಯ

Friday, October 26th, 2018
congress

ಶಿವಮೊಗ್ಗ: ಲೋಕಸಭಾ ಉಪ ಚುನಾವಣೆಯಲ್ಲಿ ಮಧು ಬಂಗಾರಪ್ಪ ಡಮ್ಮಿ ಕ್ಯಾಂಡಿಟೇಟ್ ಅಲ್ಲ, ಬಿಜೆಪಿಯ ರಾಘವೇಂದ್ರ ಅವರೇ ಡಮ್ಮಿ ಕ್ಯಾಂಡಿಟೇಟ್ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶಿವಮೊಗ್ಗ ಪ್ರೆಸ್ ಟ್ರಸ್ಟ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಹಾಗೂ ಈಶ್ವರಪ್ಪ ಹಾವು ಮುಂಗೂಸಿಯಂತೆ ಇದ್ರು. ಈಗ ಒಂದಾಗಿದ್ದಾರಷ್ಟೆ ಎಂದು ನಿನ್ನೆ ಬಿಎಸ್ವೈ ಮೈತ್ರಿ ಬಗ್ಗೆ ಯಂಕ ನಾಣಿ, ಸೀನ ಒಂದಾಗಿದ್ದಾರೆ ಎಂದು ತಿರುಗೇಟು ನೀಡಿದರು. ಈ ಬಾರಿ ಶಿವಮೊಗ್ಗ ಲೊಕಸಭಾ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟು ಕೊಟ್ಟಿದ್ದೇವೆ. […]

ಇಡೀ ವಿಶ್ವವೇ ಪ್ರಧಾನಿ ಮೋದಿಯವರ ಜನಪರವಾದ ಆಡಳಿತವನ್ನು ಶ್ಲಾಘಿಸುತ್ತಿದೆ: ನಟಿ ತಾರಾ

Friday, October 26th, 2018
actress-tara

ಕುಂದಾಪುರ: ಇಂದು ಇಡೀ ವಿಶ್ವವೇ ಪ್ರಧಾನಿ ಮೋದಿಯವರ ಜನಪರವಾದ ಆಡಳಿತವನ್ನು ಶ್ಲಾಘಿಸುತ್ತಿದೆ. ಈಗಾಗಲೇ ಚುನಾವಣಾ ಪ್ರಚಾರಕ್ಕಾಗಿ ಕ್ಷೇತ್ರಕ್ಕೆ ಭೇಟಿ ನೀಡಿದ್ದೇನೆ. ಬೈಂದೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಕಡೆಗಳಲ್ಲೂ ಬಿಜೆಪಿ ಪರ ಅಲೆ ಇದೆ. ಎಲ್ಲರೂ ಮೋದಿಜಿ ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಬೇಕು ಎಂದು ಹಂಬಲಿಸುತ್ತಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರು ಬಹುದೊಡ್ಡ ಮುನ್ನಡೆಯಿಂದ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಎಮ್‌ಎಲ್‌ಸಿ, ಬಿಜೆಪಿ ಮಹಿಳಾ ನಾಯಕಿ ತಾರಾ ವಿಶ್ವಾಸ ವ್ಯಕ್ತಪಡಿಸಿದರು. ಶಿವಮೊಗ್ಗ ಲೋಕಸಭಾ […]

ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ರನ್ನು ಸ್ವಾಗತಿಸಿದ ಮಂಗಳೂರಿನ ಶಾಸಕರು

Friday, October 19th, 2018
yedyurappa

ಮಂಗಳೂರು: ಮಾಜಿ ಮುಖ್ಯಮಂತ್ರಿ , ಬಿ ಜೆ ಪಿ ರಾಜ್ಯಾಧ್ಯಕ್ಷ ಬಿ ಯಸ್ .ಯೆಡಿಯೂರಪ್ಪ ರವರನ್ನು ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಶಾಸಕ ಡಿ ವೇದವ್ಯಾಸ್ ಕಾಮತ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಹಾಗೂ ಪುತ್ತೂರು ಶಾಸಕ ಸಂಜೀವ್ ಮಟ್ಟಂದುರ್ , ನಿತಿನ್ ಕುಮಾರ್ , ಕ್ಯಾಪ್ಟ್ . ಬೃಜೇಶ್ ಚೌಟ , ಸ್ಥಳೀಯ ಮನಪಾ ಸದಸ್ಯ ದಿವಾಕರ್ ಪಾಂಡೇಶ್ವರ್ , ಮುಖಂಡರಾದ ವಸಂತ್ ಜೆ ಪೂಜಾರಿ ಉಪಸ್ಥಿತರಿದ್ದರು.

ಮಂಡ್ಯದಲ್ಲಿ ಬೇರೆ ಪಕ್ಷದವರೂ ನಮ್ಮ ಪಕ್ಷದ ಟಿಕೆಟ್​ಗೆ​​​​​​​ ಬೇಡಿಕೆ ಇಟ್ಟಿದ್ದಾರೆ: ಅಶೋಕ್

Tuesday, October 9th, 2018
r-ashok

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸಲು ಮೂವರು ಆಕಾಂಕ್ಷಿಗಳಿದ್ದು, ಬೇರೆ ಪಕ್ಷದ ಮುಖಂಡರೊಬ್ಬರು ಟಿಕೆಟ್ ಕೇಳಿದ್ದಾರೆ. ಯಾರಿಗೆ ಟಿಕೆಟ್ ಎಂದು ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರವಾಗಲಿದೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಹೇಳಿಕೆ ನೀಡಿದ್ದು, ಮಾಜಿ ಸಚಿವ ಚಲುವರಾಯಸ್ವಾಮಿ ಕಾಂಗ್ರೆಸ್ ತೊರೆದು ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆಯ ಸುಳಿವು ನೀಡಿದ್ದಾರೆ. ಯಡಿಯೂರಪ್ಪ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಗೆ ಅಭ್ಯರ್ಥಿಗಳ ಕೊರತೆ ಇಲ್ಲ. ಮಂಡ್ಯದಲ್ಲಿ ಸ್ಪರ್ಧಿಸಲು ಮೂವರು ಆಕಾಂಕ್ಷಿಗಳಿದ್ದಾರೆ. ರಾಮನಗರದಿಂದ ಸ್ಪರ್ಧಿಸಲು ಇಬ್ಬರು ಆಕಾಂಕ್ಷಿಗಳಿದ್ದಾರೆ. […]

ಉಡುಪಿ SPಅನ್ನು ರಾಜಕೀಯ ಕಾರಣಕ್ಕೆ ವರ್ಗಾವಣೆ ಮಾಡಿದರೆ ಸಹಿಸುವುದಿಲ್ಲ: ಕೋಟ ಶ್ರೀನಿವಾಸ ಪೂಜಾರಿ

Wednesday, October 3rd, 2018
srinivas-poojary

ಉಡುಪಿ: ಸುಸೂತ್ರ ಆಡಳಿತಕ್ಕೆ ನಮ್ಮ ಸಹಕಾರವಿದೆ. ಆದರೆ ಉಡುಪಿ ಜಿಲ್ಲಾ ಎಸ್ಪಿಯವರನ್ನು ರಾಜಕೀಯ ಕಾರಣಕ್ಕೆ ವರ್ಗಾವಣೆ ಮಾಡಿದರೆ ಅಹಿಸೋದಿಲ್ಲ..ಇದು ಎಚ್ಚರಿಕೆ ಎಂದು ಸರಕಾರಕ್ಕೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಸಿದ ಟ್ವೀಟ್ ಇದು. ಕೆಲ ದಿನಗಳ ಹಿಂದೆ ನಡೆದ ಭಾರತ್ ಬಂದ್ ವೇಳೆ ಉಡುಪಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಜೊತೆ ವಾಗ್ವಾದ ನಡೆದಿತ್ತು. ಆ ಬಳಿಕ ಪೊಲೀಸ್ ವರಿಷ್ಟಾಧಿಕಾರಿಗಳ ಕಛೆರಿ ಎದುರು ಇತ್ತಂಡದವರು ಜಮಾಯಿಸಿದ್ದರು. ಈ ವಾಗ್ವಾದ ವಿಕೋಪಕ್ಕೆ ತಿರುಗಿ […]

ಮಂಗಳೂರಿನಲ್ಲಿ ಸರ್ಜಿಕಲ್ ಸ್ಟ್ರೈಕ್ ಶೌರ್ಯ ದಿನಾಚರಣೆ

Saturday, September 29th, 2018
vedvyasa-kamath

ಮಂಗಳೂರು: ಸರ್ಜಿಕಲ್ ಸ್ಟ್ರೈಕ್ಗೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಇಂದು ಮಂಗಳೂರಿನಲ್ಲಿ ಸರ್ಜಿಕಲ್ ಸ್ಟ್ರೈಕ್ ಶೌರ್ಯ ದಿನಾಚರಣೆ ಆಚರಿಸಲಾಯಿತು. ಮಂಗಳೂರಿನ ಕದ್ರಿಯಲ್ಲಿರುವ ಹುತಾತ್ಮರ ಸ್ಮಾರಕದಲ್ಲಿ ಬಿಜೆಪಿ ಈ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್, ಮಾಜಿ ವಿಧಾನಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಮಾಜಿ ಸೈನಿಕರು ಮೊದಲಾದವರು ಉಪಸ್ಥಿತರಿದ್ದು ಹುತಾತ್ಮ ಸೈನಿಕರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.

ಮೇಯರ್ ಚುನಾವಣೆಯಲ್ಲಿ ಬಿಜೆಪಿ ಸರ್ಕಸ್​ ನಡೀಲಿಲ್ಲ: ಕುಮಾರಸ್ವಾಮಿ

Friday, September 28th, 2018
kumarswamy

ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ಮಾಡಿದಂತೆ ಬಿಜೆಪಿ ಬಿಬಿಎಂಪಿ ಮೇಯರ್ ಚುನಾವಣೆಯಲ್ಲೂ ಹೈವೋಲ್ಟೇಜ್ ಮಾಡಲು ಯತ್ನಿಸಿತು, ಆದರೆ ಯಾರೋ ಫ್ಯೂಸ್ ಕಿತ್ತುಕೊಂಡು ಹೋದರು ಎಂದು ಸಿಎಂ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಪಾಲಿಕೆ ಚುನಾವಣೆಯಲ್ಲೂ ಬಿಜೆಪಿಯವರು ಸರ್ಕಸ್ ಮಾಡಲು ಹೋದರು. ಆದರೆ ಯಾರೋ ಫ್ಯೂಜ್ಕಿತ್ತುಕೊಂಡು ಹೋಗಿದ್ದಾರೆ ಎನಿಸುತ್ತಿದೆ. ಅದರಲ್ಲಿ ಕರೆಂಟ್ ಹರಿಯಲಿಲ್ಲ. ಹೀಗಾಗಿ ಬಿಜೆಪಿ ಮತ್ತೆ ವಿಫಲವಾಯ್ತು ಎಂದು ಟೀಕಿಸಿದರು. ಇದೇ ವೇಳೆ ಶಬರಿಮಲೈಗೆ ಸ್ತ್ರೀಯರ ಪ್ರವೇಶಕ್ಕೆ ಅವಕಾಶ ನೀಡಿ ಸುಪ್ರೀಂಕೋರ್ಟ್ ತೀರ್ಪು ನೀಡಿದ ಸಂಬಂಧ ಪ್ರತಿಕ್ರಿಯಿಸಿದ […]

ರಾಜ್ಯ ಬಿಜೆಪಿ ಲೋಕಸಭಾ ಚುನಾವಣೆ: 24 ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Wednesday, September 26th, 2018
parathap-simha

ಮಂಗಳೂರು: ಕರ್ನಾಟಕ ರಾಜ್ಯ ಬಿಜೆಪಿ ಘಟಕ 2019ರ ಲೋಕಸಭಾ ಚುನಾವಣೆಯಾ 24 ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ತಯಾರು ಮಾಡಿದೆ. ಈ ಪಟ್ಟಿಯ ಪ್ರಕಾರ ದ.ಕ ಜಿಲ್ಲೆಗೆ ಮತ್ತೆ ನಳಿನ್ ಕುಮಾರ್ ಕಟೀಲ್ ಅಭ್ಯರ್ಥಿಯಾಗುವ ಸಾಧ್ಯತೆಯಿದೆ. ಇನ್ನು ಪಟ್ಟಿ ತಯಾರಾದ ಹಿನ್ನೆಲೆಯಲ್ಲಿ ಅಕ್ಟೋಬರ್‌ ತಿಂಗಳಿನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ. ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಆದರೆ 4 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದ್ದು, ಯಡಿಯೂರಪ್ಪ ರಾಜೀನಾಮೆಯಿಂದ ತೆರವಾದ ಶಿವಮೊಗ್ಗ, […]

ಮೊದಲ ಹಂತದಲ್ಲಿ ಬಿಡಿಎ ಮೂಲಕ ಐದು ಸಾವಿರ ಸೈಟ್ ಹಂಚಿಕೆ: ಹೆಚ್.ಡಿ.ಕುಮಾರಸ್ವಾಮಿ

Tuesday, September 25th, 2018
kumarswamy

ಬೆಂಗಳೂರು: ಮೊದಲ ಹಂತದಲ್ಲಿ ಬಿಡಿಎ ಮೂಲಕ ಐದು ಸಾವಿರ ಸೈಟ್ ಹಂಚಿಕೆ ಮಾಡಲಾಗಿದೆ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಡಿಸಿಎಂ ಪರಮೇಶ್ವರ್ ಅವರೊಂದಿಗೆ ಸೇರಿ ಆನ್ಲೈನ್ ಮೂಲಕ ಸೈಟ್ ಹಂಚಿಕೆ ಮಾಡಿ ಸಿಎಂ ಕುಮಾರಸ್ವಾಮಿ ಮಾತನಾಡಿದರು. ಈಗಾಗಲೇ 18,920 ಒಟ್ಟಾರೆ ಸೈಟ್ಗಳನ್ನ ಕೆಂಪೇಗೌಡ ಬಡಾವಣೆಯಲ್ಲಿ ಹಂಚಿಕೆ ಮಾಡಲಾಗಿದೆ. ಭೂಮಾಲೀಕರಿಗೆ 2,165 ಸೈಟ್ ನೀಡಲಾಗಿದೆ. 869 ಸೈಟ್ಗಳನ್ನ ಅರ್ಕಾವತಿ ಲೇಔಟ್ ನಿವೇಶನದಾರರಿಗೆ ಹಂಚಿಕೆ ಮಾಡಲಾಗಿದ್ದು, ಹಂಚಿಕೆದಾರರ ಹೆಸರುಗಳನ್ನ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು. ಮೂಲಭೂತ […]