Blog Archive

ಮಂಗಳೂರು : ಕಾಂಗ್ರೇಸ್ ಮುಖಂಡರು ಬಿಜೆಪಿ ಸೇರ್ಪಡೆ

Monday, November 4th, 2019
congress-leaders

ಮಂಗಳೂರು  : ಕಾಂಗ್ರೇಸ್ ಮುಖಂಡ ಹಾಗೂ ಕೆಥೋಲಿಕ್ ಸಭಾ ಮಂಗಳೂರು ಧರ್ಮ ಪ್ರಾಂತ ಇದರ ರಾಜಕೀಯ ಸಂಚಾಲಕ, ಅಖಿಲ ಭಾರತ ಕೆಥೋಲಿಕ್ ಯೂನಿಯನ್ ರಾಜ್ಯ ಕಾರ್ಯದರ್ಶಿ ಆಗಿರುವ ದೀಪಕ್ ಅತ್ತಾವರ ಅವರ ನೇತೃತ್ವದಲ್ಲಿ ಕಾಂಗ್ರೇಸ್ ಪ್ರಮುಖ ಕಾರ್ಯಕರ್ತರಾದ ಸಿಡ್ನಿ ಫೆರ್ನಾಂಡೀಸ್ ಫಳ್ನೀರ್, ನವೀನ್ ವಾಸ್ ಬಾಬುಗುಡ್ಡ ಇವರು ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡರು. ಶಾಸಕ ವೇದವ್ಯಾಸ್ ಕಾಮತ್ ಅವರು ಶಾಲು ಹೊದೆಸಿ ಪಕ್ಷದ ಧ್ವಜ ಹಸ್ತಾಂತರಿಸುವ ಮೂಲಕ ಅಧಿಕೃತವಾಗಿ ಪಕ್ಷಕ್ಕೆ ಬರಮಾಡಿಕೊಂಡರು. ಈ ವೇಳೆ ಮಾತನಾಡಿದ […]

ಗುಜರಾತ್​ ಉಪಚುನಾವಣೆಯ ಮತ ಎಣಿಕೆ : ತಲಾ ಮೂರು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಕಾಂಗ್ರೆಸ್, ಬಿಜೆಪಿ

Thursday, October 24th, 2019
gujarat

ಅಹಮದಾಬಾದ್ : ಗುಜರಾತ್ನ ಆರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶವೂ ಗುರುವಾರ ಪ್ರಕಟವಾಗುತ್ತಿದ್ದು, ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇತ್ತೀಚಿನ ಮಾಹಿತಿ ಪ್ರಕಾರ, ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ತಲಾ ಮೂರರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುನ್ನಡೆ ಕಾಯ್ದುಕೊಂಡಿವೆ. ಪಟನ್ ಜಿಲ್ಲೆಯ ರಾಧಾನ್ಪುರ ಕ್ಷೇತ್ರದಲ್ಲಿ ಒಬಿಸಿ ನಾಯಕ ಬಿಜೆಪಿ ಅಭ್ಯರ್ಥಿ ರಘು ದೇಸಾಯಿ ಕಾಂಗ್ರೆಸ್ನ ಅಲ್ಪೇಶ್ ಠಾಕೂರ್ ವಿರುದ್ಧ 3,000 ಮತಗಳ ಹಿನ್ನಡೆ ಅನುಭವಿಸಿದ್ದಾರೆ. ಅರಾವಳಿಯ ಬಯಾಡ್ನಲ್ಲಿ ಬಿಜೆಪಿ ಅಭ್ಯರ್ಥಿ ಧವಲಸಿಂಗ್ ಝಲಾ ಅವರು ಕಾಂಗ್ರೆಸ್ ಅಭ್ಯರ್ಥಿ […]

ಬಿಬಿಎಂಪಿ ನೂತನ ಮೇಯರ್ ಆಗಿ ಬಿಜೆಪಿ ಅಭ್ಯರ್ಥಿ ಎಂ.ಗೌತಮ್ ಕುಮಾರ್ ಆಯ್ಕೆ

Tuesday, October 1st, 2019
M.Gawtham

ಬೆಂಗಳೂರು : ಸಾಕಷ್ಟು ಗೊಂದಲಗಳ ನಡುವೆ ಬಿಬಿಎಂಪಿ ಮೇಯರ್ ಆಗಿ ಬಿಜೆಪಿ ಅಭ್ಯರ್ಥಿ ಗೌತಮ್ ಕುಮಾರ್ ಆಯ್ಕೆಯಾಗಿದ್ದಾರೆ. ಚುನಾವಣೆ ಖಚಿತವಾದರೂ ಬಿಜೆಪಿ ಪಕ್ಷದೊಳಗಿನ ಭಿನ್ನಮತ ಮಾತ್ರ ಹಾಗೆಯೇ ಮುಂದುವರೆದಿದೆ. ಇದಕ್ಕೆ ಸಿಎಂ ಬಿಎಸ್ವೈ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಡುವಿನ ಮುಸುಕಿನ ಗುದ್ದಾಟವೇ ಕಾರಣವಾಗಿದೆ. ಉಪಮೇಯರ್ ಆಗಿ ಗುರುಮೂರ್ತಿ ಆಯ್ಕೆಯಾಗಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಬಿಬಿಎಂಪಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಸಾಧಿಸಿಕೊಂಡು ಅಧಿಕಾರ ನಡೆಸುತ್ತಿವೆ. ಹೀಗಾಗಿ ಮೇಯರ್ ಉಪ ಮೇಯರ್ ಸ್ಥಾನ […]

ಬಿಜೆಪಿ ಕಚೇರಿ ಮುಂದೆ ಸಾರ್ವಜನಿಕ ಸಂಚಾರ ಬಂದ್

Friday, September 6th, 2019
badhrate

ಬೆಂಗಳೂರು : ಸಿಎಂ ನಿವಾಸದ ಮುಂದೆ ಸಾರ್ವಜನಿಕರ ಮುಕ್ತ ಸಂಚಾರ ನಿರ್ಬಂಧ ಮಾಡಿದ ಬೆನ್ನಲ್ಲೇ ಇದೀಗ ಬಿಜೆಪಿ ಕಚೇರಿ ಮುಂದೆಯೂ ಸಿಎಂ ಇರುವ ವೇಳೆ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಜನರು ಪರದಾಡುವಂತಾಗಿದೆ. ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಮಾಜಿ ಸಚಿವ ಡಿ ಕೆ ಶಿವಕುಮಾರ್ ಬಂಧನ ಖಂಡಿಸಿ ಬಿಜೆಪಿ ಕಚೇರಿಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕುವ ಸಾಧ್ಯತೆ ಹಿನ್ನಲೆಯಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಆದರೆ, ಮುಖ್ಯಮಂತ್ರಿಗಳು ಬಿಜೆಪಿ ಕಚೇರಿಗೆ ಬರುವ ವೇಳೆ […]

ನೂತನ ಬಿಜಿಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಳಿನ್ ಕುಮಾರ್ ಕಟೀಲ್ ರವರಿಗೆ ಮಂಗಳೂರಿನಲ್ಲಿ ಸ್ವಾಗತ

Wednesday, August 21st, 2019
nalin-kumar

ಮಂಗಳೂರು : ನೂತನವಾಗಿ ಬಿಜಿಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಳಿನ್ ಕುಮಾರ್ ಕಟೀಲ್ ರವರಿಗೆ ಇಂದು ಬೆಳಗ್ಗೆ ಬಿಜೆಪಿಯ ನೂರಾರು ಕಾರ್ಯಕರ್ತರು ಧಾರಾಕಾರ ಮಳೆಯ ನಡುವೆ ಮಂಗಳೂರು ನಗರ ಹೊರಭಾಗದ ಕಂಕನಾಡಿ ರೈಲ್ವೆ ಜಂಕ್ಷನ್ ಬಳಿ ಚಂಡೆ, ವಾದ್ಯ ಘೋಷದೊಂದಿಗೆ ಸ್ವಾಗತಿಸಿದರು. ನಂತರ ನಳಿನ್ ಕುಮಾರ್ ಕಟೀಲ್ ರವರು ತನ್ನ ಸ್ವಗೃಹಕ್ಕೆ ತೆರಳಿ ತಾಯಿಯ ಆಶೀರ್ವಾದ ಪಡೆದು ಮನೆಯವರೊಂದಿಗೆ ಸಿಹಿಯನ್ನು ಹಂಚಿಕೊಂಡರು. ಈ ಸಂಧರ್ಭದಲ್ಲಿ ಬಿಜೆಪಿಯ ಕಾರ್ಯಕರ್ತರು ಉಪಸ್ಥಿತರಿದ್ದರು.  

ಬಿಜೆಪಿ ಸೇರಿದ್ದಕ್ಕೆ ಬಾಡಿಗೆ ಮನೆ ಖಾಲಿ ಮಾಡುವಂತೆ ಮುಸ್ಲಿಂ ಮಹಿಳೆಗೆ ಮಾಲೀಕನ ಒತ್ತಾಯ

Monday, July 8th, 2019
Allighar

ಅಲಿಘಡ: ಬಿಜೆಪಿ ಸೇರಿದಕ್ಕೆ ಬಾಡಿಗೆ ಮನೆ ಖಾಲಿ ಮಾಡುವಂತೆ ಮನೆ ಮಾಲೀಕ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಮುಸ್ಲಿಂ ಮಹಿಳೆಯೊಬ್ಬಳು ದೂರು ನೀಡಿರುವುದಾಗಿ ಉತ್ತರ ಪ್ರದೇಶದ ಪೊಲೀಸರು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಗುಲಿಸ್ತಾನ ಎಂಬ ಮಹಿಳೆ ನಿನ್ನೆಯಷ್ಟೇ ನಾನು ಬಿಜೆಪಿಗೆ ಸೇರಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಮನೆ ಮಾಲೀಕ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿ, ತಕ್ಷಣ ಮನೆ ಖಾಲಿ ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾಳೆ. ಗುಲಿಸ್ತಾನಳ ಬಳಿ ಮನೆ ಮಾಲೀಕನ ತಾಯಿ ವಿದ್ಯುತ್ ಬಿಲ್ ಎಂದು ಹೇಳಿ 4,000 ರೂ. […]

ಸ್ಥಳೀಯ ಸಂಸ್ಥೆ : ಮೂಡಬಿದ್ರೆ ಪುರಸಭೆ, ಸುಳ್ಯ ನಗರ ಪಂಚಾಯತ್ ಬಿಜೆಪಿ ಗೆ

Friday, May 31st, 2019
localboddy

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 2ರಲ್ಲಿ ಬಿಜೆಪಿ ಪಾರಮ್ಯ ಮೆರೆದಿದೆ. ಒಂದರಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಸುಳ್ಯ ನಗರ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿ ಸುಳ್ಯ ನಗರ ಸಭೆ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ. ಮೂಡಬಿದ್ರೆ ಪುರಸಭೆ ಅಧಿಕಾರದ ಚುಕ್ಕಾಣಿ ಬಿಜೆಪಿ ಹಿಡಿದಿದ್ದು, ಮುಲ್ಕಿ ನಗರ ಪಂಚಾಯತ್ ನಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಸುಳ್ಯ ನಗರ ಪಂಚಾಯತ್ ನ 20 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 14ರಲ್ಲಿ ಬಿಜೆಪಿ ಹಾಗು […]

ಶಿವನಗರದ 12 ಜನ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ

Tuesday, April 9th, 2019
Nalin-Kateel

ಮಂಗಳೂರು  : ಕಳೆದ ಐದು ವರ್ಷಗಳಿಂದ ನರೇಂದ್ರ ಮೋದಿಯವರ ಕೈಯಲ್ಲಿ ಭಾರತ ಬಲಾಡ್ಯವಾಗಿ, ಸುಭದ್ರವಾಗಿ ವಿಶ್ವದೆದುರು ಎದೆಯುಬ್ಬಿಸಿ ನಿಂತಿದೆ ಎಂದು ದಕ್ಷಿಣ ಕನ್ನಡ ಬಿಜೆಪಿ ನಳಿನ್ಕುಮಾರ್ ಕಟೀಲ್ ಹೇಳಿದ್ದಾರೆ. ನಾಗುರಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಈ ಹಿಂದೆ ಭಾರತಕ್ಕೆ ವಿಶ್ವದ ಬೇರೆ ಬೇರೆ ರಾಷ್ಟ್ರಗಳ ಪ್ರಮುಖರು ಭೇಟಿ ಕೊಟ್ಟಾಗ ಅವರಿಗೆ ಭಾರತವನ್ನು ಪರಿಚಯಿಸುವಲ್ಲಿ ಕಾಂಗ್ರೇಸ್ ನಿರಾಸಕ್ತಿ ತೋರಿಸಿದೆ.ಆದರೆ ಕಳೆದ ಐದು ವರ್ಷಗಳಿಂದ ಪ್ರಧಾನಿ ಮೋದಿಜೀ ಅವರು ಭಾರತದ ಪರಂಪರೆ ಆಚಾರ ವಿಚಾರಗಳನ್ನು ಜಗತ್ತಿನ […]

ಬಿಜೆಪಿ ರೆಸಾರ್ಟ್ ರಾಜಕೀಯ ಖಂಡಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

Thursday, January 17th, 2019
Congress-protest

ಮಂಗಳೂರು :  ಬಿಜೆಪಿ ಆರಂಭಿಸಿರುವ ರೆಸಾರ್ಟ್ ರಾಜಕೀಯವನ್ನು ಖಂಡಿಸಿ ಗುರುವಾರ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಮಲ್ಲಿಕಟ್ಟೆಯಲ್ಲಿರುವ ಪಕ್ಷದ ಜಿಲ್ಲಾ ಕಚೇರಿಯ ಮುಂದೆ ಪ್ರತಿಭಟನೆ ನಡೆಯಿತು. ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಜನತೆಯ ಆಶೋತ್ತರಗಳನ್ನು ಈಡೇರಿಸಲು ಅತ್ಯುತ್ತಮ ಯೋಜನೆಗಳ ಮೂಲಕ ಆಡಳಿತ ನಡೆಸುತ್ತಿವೆ. ಇದನ್ನು ಸಹಿಸದ ಬಿಜೆಪಿ ಅಧಿಕಾರದ ಲಾಲಾಸೆಗಾಗಿ ಶಾಸಕರನ್ನು ರೆಸಾರ್ಟ್‌ಗಳಲ್ಲಿ ಕೂಡಿಟ್ಟು ಸರಕಾರ ಉರುಳಿಸಲು ಪ್ರಯತ್ನಿಸುತ್ತಿದೆ. ಇದು ಎಂದಿಗೂ ಫಲಿಸದು ಎಂದರು. ಈ […]

ಸೂಲಗಿತ್ತಿ ನರಸಮ್ಮನವರ ಆರೋಗ್ಯ ವಿಚಾರಿಸಿದ ಬಿಎಸ್​ವೈ

Tuesday, December 25th, 2018
yedyurappa

ಬೆಂಗಳೂರು: ಪದ್ಮಶ್ರೀ ಪುರಸ್ಕೃತರಾದ ಡಾ ಸೂಲಗಿತ್ತಿ ನರಸಮ್ಮನವರು ಉಸಿರಾಟದ ತೊಂದರೆಯಿಂದ ಕಳೆದ 25 ದಿನಗಳ ಹಿಂದೆ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ‌ ಹಿನ್ನೆಲೆಯಲ್ಲಿ ಇಂದು ಬಿಜಿಎಸ್ ಆಸ್ಪತ್ರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ವೈ ಆಗಮಿಸಿದ್ದು, ಸೂಲಗಿತ್ತಿ ನರಸಮ್ಮನವರ ಆರೋಗ್ಯ ವಿಚಾರಿಸಿದರು. ಇಂದು ನರಸಮ್ಮ ಅವರಿಗೆ ವೆಂಟಿಲೇಟರ್ನಲ್ಲಿ ಚಿಕಿತ್ಸೆ ಆರಂಭ ಮಾಡಲಿದ್ದು, ಹೆಚ್ಚಿನ ಧನ ಸಹಾಯದ ಅಗತ್ಯವಿದ್ದರೆ ಸಹಾಯ ನೀಡುವುದಾಗಿ ಬಿಎಸ್ವೈ ತಿಳಿಸಿದ್ದಾರೆ. ಸೂಲಗಿತ್ತಿ ನರಸಮ್ಮ, ಗ್ರಾಮೀಣ ಭಾಗದ ಗರ್ಭಿಣಿಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಾವಿರಾರು ಹೆರಿಗೆಗಳನ್ನು ಮಾಡಿಸಿದ್ದಾರೆ. ಇವರ […]