Blog Archive

ಮಧ್ಯಪ್ರದೇಶದ 18ನೇ ಮುಖ್ಯಮಂತ್ರಿಯಾಗಿ ಕಮಲನಾಥ್ ಪ್ರಮಾಣವಚನ ಸ್ವೀಕಾರ

Monday, December 17th, 2018
kamalnath

ಭೋಪಾಲ್: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಧ್ವಜ ನೆಟ್ಟು, ಗೆಲುವಿನ ನಗೆ ಬೀರಿದ ಕಮಲನಾಥ್ ಅವರು ಇಂದು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ನ್ಯಾಷನಲ್ ಕಾನ್ಫರೆನ್ಸ್ನ ಅಧ್ಯಕ್ಷ ಫರೂಕ್ ಅಬ್ದುಲ್ಲಾ, ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್, ಮಲ್ಲಿಕಾರ್ಜು ಖರ್ಗೆ, ಆಂಧ್ರಪ್ರದೇಶ ಸಿಎಂ ಎನ್. ಚಂದ್ರಬಾಬು ನಾಯ್ಡು, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ , ಜೆಡಿಯು ನಿರ್ಮಿತ ನಾಯಕ ಶರದ್ ಯಾದವ್, ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಡಿಸಿಎಂ ಸಚಿನ್ ಪೈಲಟ್, ನವಜೋತ್ ಸಿಂಗ್ ಸಿಧು, […]

ಪಂಚ ರಾಜ್ಯ ಚುನಾವಣೆ ಫಲಿತಾಂಶದ ಮೂಲಕ ಜನರಿಗೆ ನಿಜವಾದ ಅಚ್ಛೇ ದಿನ್‌ ದೊರೆತಿದೆ: ಮಿಥುನ್‌ ರೈ

Friday, December 14th, 2018
mithun-rai

ಸುಳ್ಯ: ನಾಲ್ಕೂವರೆ ವರ್ಷಗಳ ಕಾಲ ಜನವಿರೋಧಿ ಆಡಳಿತ ನಡೆಸಿದ ನರೇಂದ್ರ ಮೋದಿ ಸರಕಾರವನ್ನು ತಿರಸ್ಕರಿಸಿ, ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಮುಕ್ತ ರಾಜ್ಯದ ಫಲಿತಾಂಶದ ಮೂಲಕ ಜನರಿಗೆ ನಿಜವಾದ ಅಚ್ಛೇ ದಿನ್‌ ದೊರೆತಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ ಹೇಳಿದರು. ಸುಳ್ಯ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಗುರುವಾರ ನಗರದ ಖಾಸಗಿ ಬಸ್‌ ನಿಲ್ದಾಣದ ಬಳಿ ಪಂಚ ರಾಜ್ಯ ಫಲಿತಾಂಶದ ವಿಜಯೋತ್ಸವದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್‌ ಮುಕ್ತ ಮಾಡುವ ಮಾತುಗಳನ್ನಾಡಿದ ಮೋದಿಗೆ ಪ್ರಜ್ಞಾವಂತ ಜನ […]

ಪಂಚರಾಜ್ಯಗಳ ಚುನಾವಣೆ: ದೇಶದಲ್ಲಿ ಅಲೆ ಎಬ್ಬಿಸಿದ್ದ ಬಿಜೆಪಿಗೆ ಕಾಂಗ್ರೆಸ್​ ಚಾಟಿ ಏಟು..!

Tuesday, December 11th, 2018
congress

ನವದೆಹಲಿ: ಜನರ ಕುತೂಹಲ ಕೆರಳಿಸಿದ್ದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಈಗಾಗಲೇ ಮಹತ್ವದ ಘಟ್ಟ ತಲುಪಿದೆ. ದೇಶದಲ್ಲಿ ಅಲೆ ಎಬ್ಬಿಸಿದ್ದ ಬಿಜೆಪಿಗೆ ಕಾಂಗ್ರೆಸ್ ಚಾಟಿ ಏಟು ನೀಡುತ್ತಿದೆ. ಚುನಾವಣೆಯಲ್ಲಿ ಬಲ ಸಾಧಿಸುತ್ತಿರುವ ಕೈ ಪಾಳಯಕ್ಕೆ ಇಂದು ಮತ್ತೊಂದು ಖುಷಿ ಇದೆ. ರಾಹುಲ್ ಗಾಂಧಿ ಎಐಸಿಸಿಯ ಅಧ್ಯಕ್ಷ ಪಟ್ಟಕ್ಕೇರಿ ಇಂದಿಗೆ ಒಂದು ವರ್ಷ ಸಂದಿದೆ. ಅಧ್ಯಕ್ಷರಾದಾಗಿನಿಂದ ಸದಾ ಟೀಕೆಗೆ ಒಳಗಾಗುತ್ತಿದ್ದ ರಾಹುಲ್ ಈ ಬಾರಿ ಡಬಲ್ ಖುಷಿ ಅನುಭವಿಸುತ್ತಿದ್ದಾರೆ. ವರ್ಷ ಪೂರ್ಣಗೊಂಡ ಬೆನ್ನಲ್ಲೆ ಚುನಾವಣೆ ಫಲಿತಾಂಶದಲ್ಲಿ ಮುನ್ನಡೆಯೂ ಅವರಿಗೆ ಅಪಾರ […]

ಬಿಜೆಪಿ ಪ್ರಶಿಕ್ಷಣ ಶಿಬಿರ ಉದ್ಘಾಟಿಸಿದ ರಮೇಶ್​ ಜಿಗಜಿಣಗಿ

Monday, December 3rd, 2018
bharatiya-party

ಬೆಂಗಳೂರು: ದಕ್ಷಿಣ ರಾಜ್ಯಗಳ ಬಿಜೆಪಿ ಶಾಸಕರು, ಸಂಸತ್ ಸದಸ್ಯರುಗಳ ಆಪ್ತ ಸಹಾಯಕರುಗಳ ಪ್ರಶಿಕ್ಷಣ ಶಿಬಿರವನ್ನು ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಇಂದು ಬೆಂಗಳೂರಿನಲ್ಲಿ ಉದ್ಘಾಟಿಸಿದರು. ಬಿಜೆಪಿ ಕೇಂದ್ರೀಯ ಪ್ರಶಿಕ್ಷಣ ಪ್ರಕೋಷ್ಠದ ಸದಸ್ಯರಾದ ರವೀಂದ್ರ ಸಾಠೆ, ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ರಾಜ್ಯ ಬಿಜೆಪಿ ಕಾರ್ಯದರ್ಶಿ ಜಗದೀಶ್ ಹಿರೇಮನಿ, ರಾಜ್ಯ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯೆ ಮಧುಶ್ರೀ ಈ ಸಂದರ್ಭದಲ್ಲಿ ಹಾಜರಿದ್ದರು. ಸಭೆಯಲ್ಲಿ ಹಿರಿಯ ಬಿಜೆಪಿ ನಾಯಕರಾದ ರಾಮಚಂದ್ರ ಗೌಡ ಮಾತನಾಡಿ, ದಕ್ಷಿಣ ರಾಜ್ಯದಲ್ಲಿ […]

ಬಿಜೆಪಿ ಶಾಸಕರನ್ನು‌ ಹೊರಗಿಟ್ಟು ಮಹಾನಗರ ಪಾಲಿಕೆ ಸಾಮಾನ್ಯ ಸಭೆ ನಡೆಸಲಾಗಿದೆ: ಪ್ರೇಮಾನಂದ್ ಶೆಟ್ಟಿ

Tuesday, November 20th, 2018
premananda-shetty

ಮಂಗಳೂರು: ಸಾಮಾನ್ಯ ಸಭೆ ಹಾಗೂ ವಿವಿಧ ಸ್ಥಾಯಿ ಸಮಿತಿಯ ಸಭೆಗಳು ಪ್ರತಿ ತಿಂಗಳು ಅಥವಾ 15 ದಿನಗಳಿಗೊಮ್ಮೆ‌ ನಡೆಸುವ ತೀರ್ಮಾನವನ್ನು ಮಾಜಿ‌ ಸಿಎಂ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಗಿತ್ತು. ಆದರೆ ಕಳೆದ ವಿಧಾನಸಭ ಚುನಾವಣೆಯ ನಂತರ ಈ ಸಭೆಗಳು ನಡೆದಿರುವುದು ಅತ್ಯಂತ ವಿರಳ. ಒಂದು ಸಭೆ ಅಕ್ಟೋಬರ್ಗೆ ನಡೆದಿದೆ, ಮತ್ತೊಂದು ಇಂದು ಕರೆಯಲಾಗಿತ್ತು. ಆದರೆ ನಾವು ಈ ಸಭೆಯನ್ನು ಬಹಿಷ್ಕರಿಸಿದ್ದೇವೆ ಎಂದು ಪಾಲಿಕೆಯ ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ‌ ಮುಖಂಡ ಪ್ರೇಮಾನಂದ್ ಹೇಳಿದರು. ದ.ಕ. ಜಿಲ್ಲಾ ಬಿಜೆಪಿ […]

ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸದಿದ್ದರೆ ಬಿಜೆಪಿಯಿಂದ ಉಗ್ರ ಹೋರಾಟ: ಬಿ.ಎಸ್. ಯಡಿಯೂರಪ್ಪ

Monday, November 19th, 2018
yedyurappa

ಬೆಂಗಳೂರು: ಇಂದಿನ ರೈತರ ಸಭೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಇತ್ಯರ್ಥಕ್ಕೆ ಬರದೇ ಇದ್ದರೆ ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ಉಗ್ರ ಹೋರಾಟ‌ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸ ಧವಳಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳಗಾರರ ಸಮಸ್ಯೆ ವಿಕೋಪಕ್ಕೆ‌ ಹೋಗಿದೆ. ಸಾಲಮನ್ನಾ ಘೋಷಣೆ ಆದರೂ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲಮನ್ನಾ ಮಾಡ್ತೀನಿ ಅಂತ ರಾಜಕೀಯ ದೊಂಬರಾಟ ಮಾಡಿದ ಮುಖ್ಯಮಂತ್ರಿಗಳೇ ರೈತರ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಿದರು. […]

ಅಯ್ಯಪ್ಪನ ದರ್ಶನಕ್ಕೆ ಸಜ್ಜಾದ ತೃಪ್ತಿ ದೇಸಾಯಿ: ಕೊಚ್ಚಿನ್​ ಏರ್​ಪೋರ್ಟ್​ನಲ್ಲಿ ಬಿಜೆಪಿ ಪ್ರತಿಭಟನೆ

Friday, November 16th, 2018
Tripti-desai

ಕೊಚ್ಚಿನ್: ಅಯ್ಯಪ್ಪನ ದೇಗುಲಕ್ಕೆ ಮಹಿಳೆಯರ ಪ್ರವೇಶ ಸಂಬಂಧ ಭುಗಿಲೆದ್ದಿರುವ ವಿವಾದ ಶಮನವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಮಹಿಳೆಯರ ಪ್ರವೇಶಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೆ ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ದೇಗುಲ ಪ್ರವೇಶಕ್ಕೆ ಸಿದ್ಧರಾಗಿದ್ದಾರೆ. ದೇಗುಲ ಪ್ರವೇಶಿಸಿಯೇ ತೀರುತ್ತೇನೆ ಎಂದು ಪಣತೊಟ್ಟಿರುವ ಅವರು ಭಾರಿ ಭದ್ರತೆಯೊಂದಿಗೆ ನಿನ್ನೆ ಕೊಚ್ಚಿನ್ ವಿಮಾನನಿಲ್ದಾಣಕ್ಕೆ ಆಗಮಿಸಿದರು. ಅಲ್ಲದೆ, ಅಯ್ಯಪ್ಪನ ಭಕ್ತರು ಅವರಿಗೆ ಪ್ರತಿರೋಧವೊಡ್ಡಿದ ಘಟನೆಯೂ ನಡೆಯಿತು. ವಿಮಾನನಿಲ್ದಾಣದ ಬಳಿಯೇ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ವ್ಯಕ್ತಪಡಿಸಿದರು. ಪೊಲೀಸ್ ವಾಹನದಲ್ಲಿ ಅಥವಾ ಸರ್ಕಾರಿ ವಾಹನದಲ್ಲಿ ತೃಪ್ತಿ […]

ರಾಜ್ಯ ಸಮ್ಮಿಶ್ರ ಸರ್ಕಾರ ಇಬ್ಬಗೆಯ ನೀತಿ ಅನುಸರಿಸುತ್ತಿದೆ: ಬಿಜೆಪಿ ವಕ್ತಾರ ಸಿ.ಟಿ. ರವಿ

Wednesday, November 14th, 2018
c-t-ravi

ಮಂಗಳೂರು: ಪತ್ರಕರ್ತ ಸಂತೋಷ್ ತಮ್ಮಯ್ಯರನ್ನು ಬಂಧಿಸಿದ ರಾಜ್ಯ ಸಮ್ಮಿಶ್ರ ಸರ್ಕಾರ ಇಬ್ಬಗೆಯ ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಸಿ.ಟಿ. ರವಿ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ರೀರಾಮ, ಭಗವದ್ಗೀತೆ, ವಿವೇಕಾನಂದ, ‌ಮೋದಿ ಅವಹೇಳನ ಮಾಡುವವರಿಗೆ ಒಂದು ನೀತಿ, ಟಿಪ್ಪು ವಿರೋಧಿಸುವವರಿಗೆ ಒಂದು ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ ಎಂದರು. ರಾಮ, ರಾಮಾಯಣ ಅವಹೇಳನ ಮಾಡಿದ ಪ್ರೊ ಭಗವಾನ್, ಮಹೇಶ್ ಚಂದ್ರ, ಯೋಗೀಶ್ ಮಾಸ್ಟರ್ ಅವರನ್ನು ಸರ್ಕಾರ ಬಂಧಿಸುವುದಿಲ್ಲ. ನಗರ ನಕ್ಸಲ್ ಎಂದು ಬೋರ್ಡ್ […]

ಕೇಂದ್ರ ಸಚಿವ ಎಚ್‌.ಎನ್. ಅನಂತ್‌ಕುಮಾರ್ ನಿಧನ

Monday, November 12th, 2018
Ananth Kumar

ಬೆಂಗಳೂರು: ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್‌.ಎನ್. ಅನಂತ್‌ಕುಮಾರ್ (59) ಸೋಮವಾರ ನಸುಕಿನ 3 ಗಂಟೆಗೆ ನಿಧನರಾದರು. ಚಾಮರಾಜಪೇಟೆಯ ಶಂಕರ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಬಿಜೆಪಿ ರಾಜ್ಯ ಘಟಕದ ಆಧಾರ ಸ್ತಂಭಗಳಲ್ಲಿ ಒಂದಾಗಿದ್ದ ಅವರು, ಕಳೆದ ಕೆಲ ತಿಂಗಳುಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಪಾರ್ಥೀವ ಶರೀರವನ್ನು ಬಸವನಗುಡಿಯ ಮನೆಗೆ ತರಲಾಗಿದೆ. ನ್ಯಾಷನಲ್ ಕಾಲೇಜು ಮೈದಾನದಲ್ಲಿ 9 ಗಂಟೆಯ ನಂತರ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು. ಶಂಕರ ಕ್ಯಾನ್ಸರ್ ಆಸ್ಪತ್ರೆಗೆ ಕೆಲ ದಿನಗಳ […]

ಬಿಜೆಪಿಗೆ ಬಿಗ್ ಶಾಕ್: ಡಿ.ಕೆ.ಸುರೇಶ್ ಜೊತೆ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಪತ್ರಿಕಾಗೋಷ್ಠಿಯಲ್ಲಿ ಪ್ರತ್ಯಕ್ಷ..!

Thursday, November 1st, 2018
chandrashekar

ರಾಮನಗರ: ರಾಮನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಕಣದಿಂದಲೇ ಹಿಂದೆ ಸರಿಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಉಪಚುನಾವಣೆ ಹಿನ್ನೆಲೆಯಲ್ಲಿ ಚಂದ್ರಶೇಖರ್ ಗೆ ಟಿಕೆಟ್ ಕೊಟ್ಟಿದ್ದ ಬಿಜೆಪಿ ರಾಮನಗರದಲ್ಲಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿತ್ತು. ನಿನ್ನೆಯವರೆಗೂ ಅಭ್ಯರ್ಥಿ ಪರ ಭಾರೀ ಪ್ರಚಾರ ಕೂಡ ನಡೆಸಲಾಗಿತ್ತು. ಆದ್ರೆ ಇಂದು ಬೆಳಿಗ್ಗೆ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಜೊತೆ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಪತ್ರಿಕಾಗೋಷ್ಠಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಅಲ್ಲದೇ ತಾನು ಚುನಾವಣ ಕಣದಿಂದಲೇ ಹಿಂದಕ್ಕೆ ಸರಿಯುತ್ತಿರುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಬಿಜೆಪಿಗೆ ರಾಷ್ಟ್ರೀಯ ಮಟ್ಟದಲ್ಲಿ ಬಿಗ್ […]