Blog Archive

ಗೊಂದಲವಿದ್ದರೂ ಸರಕಾರ ಬೀಳುವ ಮಟ್ಟಕ್ಕೆ ಯಾವುದೇ ಸಮಸ್ಯೆ ಇಲ್ಲ: ಡಾ.ಜಿ. ಪರಮೇಶ್ವರ್ 

Friday, September 14th, 2018
parameshwar

ಬೆಂಗಳೂರು: ಆಂತರಿಕವಾಗಿ ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ, ಕೆಲ ಗೊಂದಲವಿದ್ದರೂ ಸರಕಾರ ಬೀಳುವ ಮಟ್ಟಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ. ಸಚಿವ ಡಿ.ಕೆ.‌ಶಿವಕುಮಾರ್ ನಿವಾಸಕ್ಕೆ ತೆರಳಿ ಅವರೊಂದಿಗೆ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿ ಅವರು, ಆಂತರಿಕವಾಗಿ ಪಕ್ಷದಲ್ಲಿ ಅಸಮಾಧಾನ ಇಲ್ಲ, ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅವರು ಹೇಳಿದ್ದಾರೆ. ಹೊಗೆ ಆಡಿದ ತಕ್ಷಣವೇ ದೊಡ್ಡ ಅನಾಹುತ ಅಂದರೆ ಹೇಗೆ. ತಾವೆಲ್ಲಾ ತಿಳಿದಿರುವಷ್ಟು ವಿಷಯ ಗಂಭೀರವಾಗಿಲ್ಲ, ‌ ಸರ್ಕಾರ ಸುಭದ್ರವಾಗಿದೆ ಎಂದು […]

ನಗರದ ಹೊರವಲಯದಲ್ಲಿ ಸರಣಿ ಅಪಘಾತ: ಮೂವರ ದುರ್ಮರಣ

Friday, September 14th, 2018
accident

ಬೆಂಗಳೂರು: ನಗರದ ಹೊರವಲಯದಲ್ಲಿ ಸರಣಿ ಅಪಘಾತ ನಡೆದಿದ್ದು, ಹಿಂಬದಿಯಿಂದ ಬಂದ ಕಾರೊಂದು ಬೈಕ್ ಹಾಗೂ ಲಾರಿಗೆ ಗುದ್ದಿದ ಪರಿಣಾಮ ಮೂವರು ಮೃತಪಟ್ಟಿದ್ದಾರೆ. ಬೆಂಗಳೂರು ಹೊರವಲಯ ಆವಲಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಈ ದುರ್ಘಟನೆ ನಡೆದಿದೆ. ಕುಡಿದು ಚಾಲನೆ ಮಾಡುತ್ತಿದ್ದ ಕಾರಿನ ಸವಾರ ಮೊದಲಿಗೆ ಬೈಕ್ಗೆ ಗುದ್ದಿದ್ದಾನೆ. ತದನಂತರ ಲಾರಿಗೆ ಡಿಕ್ಕಿ ಹೊಡೆದಿದ್ದರಿಂದ ಮೂವರು ಮೃತಪಟ್ಟಿದ್ದಾರೆ.‌ ಮೃತಪಟ್ಟವರು ಯಾರೆಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ಸ್ಥಳಕ್ಕೆ ಆವಲಹಳ್ಳಿ ಪೊಲೀಸರು ಭೇಟಿ‌‌‌‌ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಣ್ಣಿನಿಂದ ಗಿಡವಾಗಿ ಬೆಳೆಯೋ ಗಣೇಶ… ಶಾಸಕರಿಂದ ಪರಿಸರಸ್ನೇಹಿ ಗಣಪನ ಬಗ್ಗೆ ಜಾಗೃತಿ

Wednesday, September 12th, 2018
Sowmya

ಬೆಂಗಳೂರು: ಎಲ್ಲರೂ ಮಣ್ಣಿನ ಗಣಪನನ್ನೇ ಬಳಸಿ, ಕೆರೆ ಪರಿಸರ ರಕ್ಷಿಸಿ ಅಂತಾ ಭಾಷಣ ಮಾಡೋದನ್ನು ಕೇಳಿರುತ್ತೇವೆ. ಆದ್ರೆ ಜಯನಗರದ ಶಾಸಕಿ ಸೌಮ್ಯಾ ರೆಡ್ಡಿ ಮಾತ್ರ ಒಂದು ಹೆಜ್ಜೆ ಮುಂದುವರಿದು ಗಣೇಶ ವಿಸರ್ಜನೆ ಬಳಿಕ ಅದರಿಂದಲೇ ಗಿಡ ಮರ ಬೆಳೆಸೋ ಪ್ಲಾನ್ ಕೂಡಾ ಮಾಡಿದ್ದಾರೆ. ಹೌದು, ಕಲರ್ ಕಲರ್ ಆಗಿ ಕಾಣಿಸುತ್ತಾ ಪರಿಸರದ ಸೊಬಗನ್ನೇ ಹಾಳು ಮಾಡುವ ಪಿಒಪಿ ಗಣೇಶನ ಪ್ರತಿಷ್ಠಾಪನೆಗೆ ಬ್ರೇಕ್ ಹಾಕಿ.. ಜೇಡಿ ಮಣ್ಣಿನಿಂದ ಮಾಡಿದ ಈ ಹಸಿರು ಗಣಪನನ್ನು ಕೂರಿಸಿ ನೀವು ಪರಿಸರ ಸ್ನೇಹಿಗಳಾಗಿ. […]

ಇಂಜಿನಿಯರಿಂಗ್ ಸೀಟು ಕೊಡಿಸುವುದಾಗಿ ಲಕ್ಷಾಂತರ ಹಣ ವಂಚನೆ

Tuesday, September 11th, 2018
arrested

ಬೆಂಗಳೂರು: ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ಸೀಟು ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆಮಾಡಿದ ಇಬ್ಬರು ಖದೀಮರನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಇಂದ್ರೇಶ್ ದುಬೆ ಹಾಗೂ ಗೌರವ್ ಬಂಧಿತ ಆರೋಪಿಗಳು.‌ ವಾರಣಾಸಿ ಮೂಲದ ಸತ್ಯಪ್ರಕಾಶ್ ಎಂಬುವರು ವಂಚನೆಗೊಳಗಾದವರು. ಸತ್ಯಪ್ರಕಾಶ್ ಎಂಬುವರ ಪುತ್ರನಿಗೆ ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ಸೀಟು ಕೊಡಿಸಲು ಆರೋಪಿಗಳು 10 ಲಕ್ಷ ರೂ. ಹಣ ಪಡೆದು ವಂಚಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಮೂವರು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು […]

ಗೌರಿ ಲಂಕೇಶ್​ಗೆ ಫ್ರಾನ್ಸ್​​ನಿಂದ ಮರಣೋತ್ತರ ಪ್ರಶಸ್ತಿ

Wednesday, September 5th, 2018
gouri-journalist

ಬೆಂಗಳೂರು: ಕಳೆದ ವರ್ಷ ಸೆ. 5 ರಂದು ನಗರದಲ್ಲಿ ಹತ್ಯೆಗೀಡಾಗಿದ್ದ ಪತ್ರಕರ್ತೆ ಗೌರಿ ಲಂಕೇಶ್ ಮರಣೋತ್ತರವಾಗಿ ಫ್ರಾನ್ಸ್ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಹಂತಕರ ಗುಂಡೇಟಿಗೆ ಬಲಿಯಾಗಿದ್ದ ಗೌರಿ ಲಂಕೇಶ್ ಗೆ ಮರಣೋತ್ತರವಾಗಿ ದಿ ಬೇಯಕ್ಸ್ ಕಲ್ವಾಡೊಸ್ ಪ್ರಶಸ್ತಿ ನೀಡಲಾಗ್ತಿದೆ. ಅಕ್ಟೋಬರ್ 8 ರಂದು ಫ್ರಾನ್ಸ್ ನಲ್ಲಿ ಪ್ರಶಸ್ತಿ ವಿತರಿಸಲಾಗುತ್ತಿದ್ದು, ಈ ಪ್ರಶಸ್ತಿಯನ್ನ ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್ ಸ್ವೀಕರಿಸಲಿದ್ದಾರೆ.

ಭೂಕುಸಿತ ಹಿನ್ನೆಲೆ: ಮಂಗಳೂರು-ಬೆಂಗಳೂರು ರೈಲು ರದ್ದು

Saturday, September 1st, 2018
rail-track

ಮಂಗಳೂರು: ಸುಬ್ರಹ್ಮಣ್ಯ ರೋಡ್‌- ಸಕಲೇಶಪುರ ರೈಲು ನಿಲ್ದಾಣ ಮಧ್ಯೆ ಭೂಕುಸಿತ ಹಿನ್ನೆಲೆಯಲ್ಲಿ ರೈಲು ನಂ. 16517/16523 ಕೆಎಸ್‌ಆರ್‌ ಬೆಂಗಳೂರು- ಕಣ್ಣೂರು /ಕಾರವಾರ ಎಕ್ಸ್‌ಪ್ರೆಸ್‌ನ ಸಂಚಾರವನ್ನು ಸೆ. 2ರಿಂದ ಸೆ. 4ರ ವರೆಗೆ ಮತ್ತು ಸೆ. 9ರಿಂದ ಸೆ. 11 ರ ವರೆಗೆ ರದ್ದುಪಡಿಸಲಾಗಿದೆ. ರೈಲು ನಂ. 16511/16513 ಕೆಎಸ್‌ಆರ್‌ ಬೆಂಗಳೂರು- ಕಣ್ಣೂರು / ಕಾರವಾರ ಎಕ್ಸ್‌ಪ್ರೆಸ್‌ನ ಸಂಚಾರವನ್ನು ಸೆ. 1ರಿಂದ ಸೆ. 8ರ ವರೆಗೆ ಹಾಗೂ ಸೆ. 12 , ಸೆ.13 ಹಾಗೂ ಸೆ. 14ರಂದು ರದ್ದುಗೊಳಿಸಲಾಗಿದೆ. […]

ಬಿಬಿಎಂಪಿ ವಿರುದ್ಧ ಬೃಹತ್ ಹಗರಣದ ಆರೋಪ!

Saturday, September 1st, 2018
BBMP

ಬೆಂಗಳೂರು: ಬಿಬಿಎಂಪಿ ವಿರುದ್ಧ ಬೃಹತ್ ಹಗರಣದ ಆರೋಪ ಕೇಳಿ ಬಂದಿದ್ದು, ಆರ್ಟಿಐ ಕಾರ್ಯಕರ್ತ ಡಿ.ವಿ ಚಕ್ರವರ್ತಿ ಹಾಗೂ ಹೈಕೋರ್ಟ್ ಹಿರಿಯ ವಕೀಲ ಎಸ್ ನಟರಾಜ್ ಶರ್ಮಾ ಈ ಆರೋಪ ಮಾಡಿದ್ದಾರೆ. 150 ಕೋಟಿ ರೂ. ಭ್ರಷ್ಟಾಚಾರ ಆರೋಪ ನಡೆದಿದೆ ಎಂದು ಆರೋಪಿಸಿರುವ ಇವರು, 2017 ರಲ್ಲಿ ನಗರದಲ್ಲಿ ಎಲ್ಇಡಿ ಬಲ್ಬ್ ಅಳವಡಿಸಲು ಯೋಜನೆ ರೂಪಿಸಿತ್ತು. ಈ ಯೋಜನೆಗೆ ಸಲಹಾ ಸಂಸ್ಥೆಯನ್ನು ನೇಮಿಸುವಾಗ ಇರಬೇಕಾದ ನೀತಿ ನಿಂಬಂಧನೆಗಳನ್ನು ಗಾಳಿಗೆ ತೂರಿರುವ ಪಾಲಿಕೆ, ಇಂಟರ್ ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್ ಎಂಬ […]

ಬೀದಿಗಳಲ್ಲಿ ಆಸರೆ ಇಲ್ಲದೇ ನರಳುತ್ತಿರುವ ಪ್ರಾಣಿಗಳನ್ನು ರಕ್ಷಿಸಲು ಎಲ್ಲರೂ ಮುಂದಾಗಿ: ಸಂಯುಕ್ತ ಹೊರ್ನಾಡ್

Saturday, September 1st, 2018
sayunkta-hornad

ಬೆಂಗಳೂರು: ಬೆಂಗಳೂರಿನ ಬೀದಿಗಳಲ್ಲಿ ಆಸರೆ ಇಲ್ಲದೇ ನರಳುತ್ತಿರುವ ಪ್ರಾಣಿಗಳನ್ನು ರಕ್ಷಿಸಲು ಎಲ್ಲರೂ ಮುಂದಾಗಬೇಕೆಂದು ನಟಿ ಸಂಯುಕ್ತ ಹೊರ್ನಾಡ್ ಹೇಳಿದರು. ಮಹಾತ್ಮ ಗಾಂಧಿ ರಸ್ತೆಯ ಛಾಯಾ ಕಲಾ ಮಂದಿರದಲ್ಲಿ ನಮ್ಮ ಪ್ರಾಣಿಗಳ ಸಂರಕ್ಷಣಾ ಚಾರಿಟೇಬಲ್ ಟ್ರಸ್ಟ್ ಏರ್ಪಡಿಸಿದ್ದ ಎಂಪ್ಯಾಶನ್ ಕೃತಿ ಬಿಡುಗಡೆ ಮತ್ತು ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಗರದ ಬೀದಿಗಳಲ್ಲಿ ಸಂರಕ್ಷಿಸಲಾದ ನಾಯಿಗಳನ್ನು ಕಲಾ ಕುಂಚದಲ್ಲಿ ಚಿತ್ರಿಸಿದ ಛಾಯಾಚಿತ್ರಗಳನ್ನು ಇಲ್ಲಿ ಅನಾವರಣ ಮಾಡಲಾಗಿತ್ತು. ಸಾಮಾಜಿಕ ಮಾಧ್ಯಮಗಳು ಸಹ ಇಂತಹ ವಿಚಾರಗಳ ಬಗ್ಗೆ ಹೆಚ್ಚು ಚರ್ಚಿಸಿ […]

ಅಭಿಮಾನಿಗಾಗಿ ಭದ್ರಾವತಿಗೆ ಬಂದಿದ್ದರು ವಾಜಪೇಯಿ..!

Friday, August 17th, 2018
badravathi

ಬೆಂಗಳೂರು: ಅಟಲ್ ಬಿಹಾರಿ ವಾಜಪೇಯಿ ಅವರಿಗೂ ಕರ್ನಾಟಕಕ್ಕೂ ಅಳಿಯದ ನಂಟಿದೆ. ಅವರು ತಮ್ಮ ಕಷ್ಟದ ದಿನಗಳಲ್ಲಿ ಕರ್ನಾಟಕಕ್ಕೆ ಬಂದಿದ್ದರು. ಇಲ್ಲಿಂದಲೇ ಸ್ಫೂರ್ಥಿ ಪಡೆದು ಮುನ್ನುಗ್ಗಿದ್ದರು. ಅದು 1984ರ ಸಮಯ ಕಾಂಗ್ರೆಸ್ ಪಕ್ಷ ಹಿಂದೆಂದೂ ಕಾಣದಂತ ವಿಜಯವನ್ನು ಲೋಕಸಭೆ ಚುನಾವಣೆಯಲ್ಲಿ ಕಂಡಿತ್ತು. ಅದಕ್ಕೆ ಕಾರಣವೂ ಇತ್ತು. ಅದಾಗ ತಾನೇ ಇಂದಿರಾ ಗಾಂಧಿ ಹತ್ಯೆಯಾಗಿತ್ತು. ದೇಶದೆಲ್ಲೆಡೆ ಕಾಂಗ್ರೆಸ್ ಹವಾ ಎದ್ದಿತ್ತು, ಆ ಹವಾಕ್ಕೆ ಬಿಜೆಪಿಯ ಮುಖ್ಯ ಮುಖ ಎನಿಸಿಕೊಂಡಿದ್ದ ವಾಜಪೇಯಿ ಅವರೂ ಸಹ ಸೋತುಬಿಟ್ಟಿದ್ದರು. ಬಿಜೆಪಿಗೆ ಅದು ಭಾರಿ ಹಿನ್ನಡೆ. […]

‘ಕೈಗಾರಿಕಾ ಕ್ಲಸ್ಟರ್’ ಗಳ ಸ್ಥಾಪನೆ ಮೂಲಕ ಸ್ಥಳೀಯರಿಗೆ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ: ಹೆಚ್​.ಡಿ. ಕುಮಾರಸ್ವಾಮಿ

Wednesday, August 15th, 2018
kumarswamy

ಬೆಂಗಳೂರು: ವಿವಿಧ ಜಿಲ್ಲೆಗಳಲ್ಲಿ ‘ಕೈಗಾರಿಕಾ ಕ್ಲಸ್ಟರ್’ಗಳ ಸ್ಥಾಪನೆ ಮೂಲಕ ಸ್ಥಳೀಯರಿಗೆ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. 72ನೇ ಸ್ವಾತಂತ್ರ್ಯೋತ್ಸವ ಆಚರಣೆ ಹಿನ್ನೆಲೆ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಹಿಸಿ ಮಾತನಾಡಿದ ಅವರು, ಸ್ಥಳೀಯವಾಗಿ ದೊರೆಯುವ ಕಚ್ಚಾವಸ್ತುಗಳಿಗೆ ಅನುಗುಣವಾಗಿ ಕೈಗಾರಿಕಾ ಕ್ಲಸ್ಟರ್ ಸ್ಥಾಪಿಸುವುದರ ಜೊತೆಗೆ ಸ್ಥಳೀಯರಿಗೆ ಕೌಶಲ್ಯ ತರಬೇತಿ ನೀಡುವ ಮೂಲಕ ಉದ್ಯೋಗಾವಕಾಶ ಕಲ್ಪಿಸುವುದು. ಅತ್ಯಂತ ಪ್ರತಿಷ್ಠಿತ ‘ಬೆಂಗಳೂರು ಟೆಕ್ ಸಮಿಟ್’ ಈ ವರ್ಷ ನವೆಂಬರ್ 29 ರಿಂದ ಮೂರು ದಿನಗಳ ಕಾಲ […]