Blog Archive

ಶಿಕ್ಷಕರ ದಿನಾಚರಣೆಯಂದು ಮುಂದುವರಿದ ಆರ್​ಎಂಎಸ್​ಎ ಶಿಕ್ಷಕರ ಪ್ರತಿಭಟನೆ

Wednesday, September 5th, 2018
rnss-teachers

ಮಂಗಳೂರು: ವೇತನ ಅನುದಾನ ಬಿಡುಗಡೆಗೆ ಅಗ್ರಹಿಸಿ ನಿನ್ನೆ ಧರಣಿ ನಡೆಸಿದ ಆರ್ಎಂಎಸ್ಎ ಶಿಕ್ಷಕರು ಇಂದು ಶಿಕ್ಷಕರ ದಿನಾಚರಣೆಯ ನಡುವೆಯೂ ಪ್ರತಿಭಟನೆ ಮುಂದುವರಿಸಿದ್ದಾರೆ. ಬೆಳ್ತಂಗಡಿ ಕ್ಷೇತ್ರ ಶಿಕ್ಣಣಾಧಿಕಾರಿ ಕಚೇರಿ ಮುಂದೆ ನಿನ್ನೆ ಧರಣಿ ಆರಂಭಿಸಿದ್ದ ಶಿಕ್ಷಕರು ಬೇಡಿಕೆ ಈಡೇರದಿದ್ದರೆ ಶಿಕ್ಷಕರ ದಿನಾಚರಣೆಯಂದು ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದರು. ಅದರಂತೆ ಬೆಳ್ತಂಗಡಿ ಶಿಕ್ಷಣಾಧಿಕಾರಿ ಕಚೇರಿ ಮುಂದೆ 24 ಶಿಕ್ಷಕರಿಂದ ಧರಣಿ ನಡೆಯುತ್ತಿದ್ದು, ಶಿಕ್ಷಕರ ದಿನಾಚರಣೆಯನ್ನು ಪ್ರತಿಭಟನಾ ಸ್ಥಳದಲ್ಲಿ ಸಾಂಕೇತಿಕವಾಗಿ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಬಾಲಕಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ..!

Wednesday, September 5th, 2018
suicide

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕಬ್ಲಾಜೆಯಲ್ಲಿ ಬಾಲಕಿಯೊಬ್ಬಳು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಬಾಲಕಿಗೆ 16 ವರ್ಷವಾಗಿತ್ತು ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯ ಯಾವುದೋ ಕಾರಣದಿಂದ ಮನನೊಂದು ಸೀಮೆಎಣ್ಣೆ ಮೈಗೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ ಎನ್ನಲಾಗಿದೆ. ತೀವ್ರ ಸುಟ್ಟ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಮೃತರ ತಾಯಿ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಲ್ವರು ಗೆಳೆಯರೊಂದಿಗೆ ಈಜಲು ತೆರಳಿದ ಬಾಲಕನೊಬ್ಬ ನೀರುಪಾಲು..!

Monday, September 3rd, 2018
died

ಮಂಗಳೂರು: ನಾಲ್ವರು ಗೆಳೆಯರೊಂದಿಗೆ ಈಜಲು ತೆರಳಿದ ಬಾಲಕನೊಬ್ಬ ಗೆಳೆಯರೆದುರೇ ನೀರುಪಾಲಾದ ಘಟನೆ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯ ಎರುಕಡಪು ಎಂಬಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ಹರಿಪ್ರಸಾದ್(18) ಮೃತ ಬಾಲಕ. ಮೃತ ಬಾಲಕ ಗೇರುಕಟ್ಟೆ ನಿವಾಸಿಯಾಗಿದ್ದು, ಗೆಳೆಯರೊಂದಿಗೆ‌ ನದಿಯಲ್ಲಿ ಜತೆಯಾಗಿ ಈಜಲು ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಗೆಳೆಯ ನೀರಿಗೆ ಬಿದ್ದು ಸಾವನ್ನಪ್ಪಿರುವ ವಿಚಾರವನ್ನು ಈತನ ಜೊತೆ ಹೋಗಿದ್ದ ನಾಲ್ಕು ಬಾಲಕರು ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ […]

ಬೆಳ್ತಂಗಡಿ ತಾಲೂಕಿನ ಬಿಷಪ್ ಹೌಸ್​ನಿಂದ 7 ಲೋಡ್​ಗಳಲ್ಲಿ ನೆರೆ ಪರಿಹಾರ..!

Monday, August 20th, 2018
church

ಮಂಗಳೂರು: ಕೇರಳದಲ್ಲಿ ನೆರೆ ಪ್ರವಾಹ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಿಷಪ್ ಹೌಸ್ನಿಂದ 7 ಲೋಡ್ಗಳಲ್ಲಿ ನೆರೆ ಪರಿಹಾರ ಸಾಮಾಗ್ರಿಗಳನ್ನು ಕೇರಳಕ್ಕೆ ರವಾನಿಸಲಾಗಿದೆ. ಬೆಳ್ತಂಗಡಿಯ ಕರ್ನಾಟಕ ಸೀರೊ ಮಲಬಾರ್ ಕ್ರಿಶ್ಚಿಯನ್ ಅಸೋಸಿಯೇಷನ್ (ಕೆ ಎಸ್ಎಂಸಿಎ) ಸಂಸ್ಥೆಯು ಬೆಳ್ತಂಗಡಿ ಬಿಷಪ್ ಮಾರ್ ಲಾರೆನ್ಸ್ ಮುಕ್ಕುಯಿ ನೇತೃತ್ವದಲ್ಲಿ ನೆರೆ ಪರಿಹಾರ ಸಂಗ್ರಹಿಸಿತ್ತು. ಸಂಗ್ರಹವಾದ 7 ಲೋಡ್ ಸಾಮಾಗ್ರಿಗಳನ್ನು ಲಾರಿಗಳ ಮೂಲಕ ರವಾನಿಸಲಾಗಿದೆ. ಕೇರಳ ರಾಜ್ಯದ ವಯನಾಡ್ ಹಾಗೂ ಮಾನಂದವಾಡಿಗೆ ಬೆಳ್ತಂಗಡಿಯಿಂದ ಲಾರಿ ಮೂಲಕ ರವಾನೆ ಮಾಡಲಾಗಿದೆ. ಅಕ್ಕಿ, […]

ಜಿಲ್ಲೆಯಲ್ಲಿ ಭಾರಿ ಮಳೆ..ನಿರ್ಮಾಣ ಹಂತದಲ್ಲಿದ್ದ ಮನೆ ಕುಸಿತ!

Thursday, August 16th, 2018
fell-down

ಮಂಗಳೂರು: ರಾಜ್ಯದೆಲ್ಲೆಡೆ ಮಳೆಯ ಆರ್ಭಟ ಜೋರಾಗಿದ್ದು, ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯೊಂದು ನೋಡ ನೋಡುತ್ತಿದ್ದಂತೆ‌ ಕುಸಿದು ಬಿದ್ದಿದೆ. ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟುವಿನಲ್ಲಿ ಸ್ವರ್ಣಲತಾ ಎಂಬವರು ಮನೆ ಕಟ್ಟಿಸುತ್ತಿದ್ದರು. ಆದರೆ ಮಳೆಯ ಅಬ್ಬರಕ್ಕೆ‌ ಮಣ್ಣು ಸಡಿಲಗೊಂಡು ನಿರ್ಮಾಣವಾಗುತ್ತಿದ್ದ ಮನೆ ‌ಕುಸಿದಿದೆ.

ನಿನ್ನೆ ಸುರಿದ ಭಾರಿ ಮಳೆಗೆ ವ್ಯಕ್ತಿಯೊಬ್ಬರು ನೀರುಪಾಲು

Monday, August 13th, 2018
died

ಮಂಗಳೂರು: ದಕ್ಷಿಣ ಕನ್ನಡದಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ ಕಾಲುಸಂಕ ದಾಟುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ನೀರುಪಾಲಾಗಿದ್ದು, ಅವರ ಮೃತದೇಹ ಇಂದು ಪತ್ತೆಯಾಗಿದೆ. ಮರೋಡಿ ಮಡ್ಯರಪ್ಪು ನಿವಾಸಿ ಬೊಯಿದಾಸ( 65 ) ಮೃತಪಟ್ಟ ವ್ಯಕ್ತಿ. ಮರದ ಕಾಲುಸಂಕ ದಾಟುತ್ತಿದ್ದ ವೇಳೆ ಆಕಸ್ಮಿಕವಾಗಿ ತೋಡಿಗೆ ಬಿದ್ದು ಅವರು ನೀರು ಪಾಲಾಗಿದ್ದರು. ಬೆಳ್ತಂಗಡಿ ತಾಲೂಕಿನ ಮರೋಡಿಯಲ್ಲಿ ಈ ಘಟನೆ ನಡೆದಿದ್ದು ರವಿವಾರ ಸಂಜೆ ನಾರಾವಿಗೆ ತೆರಳಿ ವಾಪಾಸು ಆಗುತ್ತಿದ್ದಾಗ ಮನೆಯ ಎದುರಿನ ತೋಡು ದಾಟುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿತ್ತು.

ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ..!

Friday, August 10th, 2018
arrested

ಬೆಳ್ತಂಗಡಿ: ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಜಕ್ರಿಬೆಟ್ಟುವಿನಲ್ಲಿ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ತುಂಬೆ ರಾಮಲ್ ಕಟ್ಟೆ ನಿವಾಸಿ ಅಬ್ದುಲ್ ಜಬ್ಬಾರ್ ಮತ್ತು ಬಾಂಬಿಲ ನಿವಾಸಿ ಸಂಶೀರ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 850 ಕೆ.ಜಿ. ಗೋಮಾಂಸ ಮತ್ತು ಪಿಕಪ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೂಂಜಾಲಕಟ್ಟೆ ಕಡೆಯಿಂದ ಮಂಗಳೂರಿಗೆ ಪಿಕಪ್ ವಾಹನದಲ್ಲಿ ದನದ ಮಾಂಸ ಸಾಗಾಟ ಮಾಡುತ್ತಾರೆಂದು ಬಂದ ಮಾಹಿತಿಯಂತೆ ಜಕ್ರಿಬೆಟ್ಟುವಿನಲ್ಲಿ ಪೊಲೀಸರು ಪಿಕಪ್ ವಾಹನವನ್ನು ತಡೆದಿದ್ದರು. ಈ ಸಂದರ್ಭ ಪಿಕಪ್ನಲ್ಲಿ 850 ಕೆ.ಜಿ ದನದ […]

ಬೆಳ್ತಂಗಡಿ, ಸುಳ್ಯದಲ್ಲಿ ಭಾರಿ ಮಳೆ..!

Thursday, August 9th, 2018
belthangady

ಮಂಗಳೂರು: ಪಶ್ಚಿಮಘಟ್ಟದಲ್ಲಿ ಬುಧವಾರದಿಂದ ಮಳೆ ಸುರಿಯುತ್ತಿದ್ದು ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಬೆಳ್ತಂಗಡಿ, ಸುಳ್ಯದಲ್ಲಿಯೂ ವರುಣನ ಆರ್ಭಟ ಜೋರಾಗಿದೆ. ಭಾರಿ ಮಳೆಯ ಪರಿಣಾಮ ಕುಮಾರಧಾರ, ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಮಳೆಯ ಪರಿಣಾಮ ಪುತ್ತೂರು ತಾಲೂಕಿನ ಗುಂಡ್ಯಾ ಸಮೀಪದ ಉದನೆಯಲ್ಲಿ ಸೇತುವೆಯ ಮೇಲೆ ನೀರು ಹರಿಯುತ್ತಿದೆ. ಶಿರಾಡಿ ಗ್ರಾಮದ ಹಲವು ‌ಮನೆಗಳು ಜಲಾವೃತವಾಗಿದ್ದು, ಉಪ್ಪಿನಂಗಡಿಯಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ‌ ಸಂಪರ್ಕ ಕಲ್ಪಿಸುವ ಹೊಸ್ಮಠ ಸೇತುವೆಯೂ ಮುಳುಗಡೆಯಾಗಿದೆ.

ಬೆಳ್ತಂಗಡಿ ಕೆಎಸ್ಆರ್ ಟಿಸಿ ಬಸ್ಸಿಗೆ ಕಾರು ಡಿಕ್ಕಿ ಇಬ್ಬರು ಸ್ಥಳದಲ್ಲೇ ಸಾವು

Monday, August 6th, 2018
Belthangady Accident

ಮಂಗಳೂರು : ಬೆಳ್ತಂಗಡಿ ತಾಲೂಕಿನ ಕೌಕ್ರಾಡಿ ಬಳಿ ಬೆಂಗಳೂರು ಕಡೆ ತೆರಳುತ್ತಿದ್ದ ಕೆಎಸ್ಆರ್ ಟಿಸಿ ಬಸ್ಸಿಗೆ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆಯಿಂದ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದ ಧರ್ಮಸ್ಥಳ ನಿವಾಸಿಗಳಾದ ದಿನೇಶ್(32) ಹಾಗೂ ಸಂದೇಶ್(30) ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಈ ಇಬ್ಬರು ತೀವ್ರವಾಗಿ ಗಾಯಗೊಂಡು ನರಳಾಡುತ್ತಿದ್ದರು. ಅವರನ್ನು ಸ್ಥಳೀಯ ಯುವಕರು ಹರಸಾಹಸಪಟ್ಟು ಕಾರಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ದಿನೇಶ್ ಮತ್ತು ಸಂದೇಶ ಅಸುನೀಗಿದ್ದಾರೆ. […]

ಶ್ರೀ ವೀರಾಂಜನೇಯ ಸೇವಾ ಸಮಿತಿಯಿಂದ ಎರಡು ಬಡವಿದ್ಯಾರ್ಥಿಗಳಿಗೆ ಸಹಾಯಧನ ನೆರವು

Tuesday, July 24th, 2018
harish-poonja

ಬೆಳ್ತಂಗಡಿ: ಬಡವರ ಸೇವೆಯೆ ನಮ್ಮ ದ್ಯೇಯ ಎಂಬ ಧ್ಯೇಯ ವಾಕ್ಯವನ್ನು ಮುಂದಿಟ್ಟು ಶ್ರೀ ವೀರಾಂಜನೇಯ ಸೇವಾ ಸಮಿತಿಯು 1ವರ್ಷ 5ತಿಂಗಳ ಪಯಣದಲ್ಲಿ ಇಷ್ಟರವರೆಗೆ 17ಸೇವಾ ಯೋಜನೆ ಹಾಗೂ 3ತುರ್ತು ಸೇವಾಯೋಜನಯನ್ನು ನೀಡಿ ಬಡವರ ಕಣ್ಣಿರೊರೆಸುವ ಸಣ್ಣ ಕಾರ್ಯವನ್ನು ಮಾಡಿ ಮುಂದುವರಿಯುತ್ತಿದೆ. 22/07/2018ರಂದು ಮತ್ತೆ ಎರಡು ಬಡಕುಟುಂಬದ ವಿದ್ಯಾರ್ಥಿಗಳಿಗೆ ವಿಧ್ಯಾಭ್ಯಾಸಕ್ಕಾಗಿ ಮೆಲಂತಬೆಟ್ಟು ಗುರುವಾಯನಕೆರೆ ಬೆಳ್ತಂಗಡಿ ಶಾಸಕರ ಕಚೇರಿಯಲ್ಲಿ ಶಾಕಕರಾದ ಹರೀಶ್ ಪೂಂಜ ಹಾಗೂ ಸಮಿತಿಯ ಸದಸ್ಯರ ಸಮ್ಕುಖದಲ್ಲಿ ಸಹಾಯಧನ ಹಸ್ತಾಂತರಿಸಲಾಯಿತು. ಬೆಳ್ತಂಗಡಿ ಕನ್ಯಾಡಿಯ ಕುಮಾರಿ ವಿನುತ ಇವರಿಗೆ ವಿಧ್ಯಾಭ್ಯಾಸಕ್ಕಾಗಿ […]