ಡಾ. ಆರ್. ಎನ್. ಶೆಟ್ಟಿಯವರು ಸಂಕಲ್ಪದಂತೆ ನಿರ್ಮಿಸಿದ ನೂತನ ಬ್ರಹ್ಮರಥದ ಪುರಪ್ರವೇಶ

Thursday, January 6th, 2022
Brahmaratha

ಕುಂದಾಪುರ  : ಡಾ. ಆರ್. ಎನ್. ಶೆಟ್ಟಿಯವರು ಸಂಕಲ್ಪದಂತೆ ನಿರ್ಮಿಸಿದ ನೂತನ ರಥದ ಪುರಪ್ರವೇಶ ಕಾರ್ಯಕ್ರಮ ಗುರುವಾರ ಸಂಜೆ ಅತ್ಯಂತ ಅದ್ದೂರಿಯಾಗಿ ನಡೆಯಿತು. ಮಹತ್ಹೋಭಾರ ಶ್ರೀ ಮುರುಡೇಶ್ವರನ ಭಾವಚಿತ್ರವನ್ನು ಇರಿಸಿ ಆರತಿ ಬೆಳಗಿದ ಆರ್. ಎನ್. ಶೆಟ್ಟಿಯವರ ಪುತ್ರ ಸುನಿಲ್ ಶೆಟ್ಟಿಯವರು ರಥವನ್ನು ಬರಮಾಡಿಕೊಂಡರು. ಧಾರ್ಮಿಕ ವಿಧಿ ವಿದಾನಗಳನ್ನು ದೇವಸ್ಥಾನದ ಮುಖ್ಯ ಅರ್ಚಕರಾದ ಜಯರಾಮ ಅಡಿಗಳ್ ನೆರವೇರಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅರ್ಚಕ ಶಿವರಾಮ ಅಡಿಗಳ್ ಮುಂತಾದವರು ಉಪಸ್ಥಿತರಿದ್ದರು. ಮಹಿಳೆಯರಿಂದ ಪೂರ್ಣಕುಂಭ, ಮಹಿಳೆಯರ ಭಜನಾ ತಂಡ, ನಂತರ ವಿವಿಧ […]

ಕದ್ರಿಯಿಂದ ಕುಕ್ಕೆ ಸುಬ್ರಮಣ್ಯ ತಲುಪಲಿರುವ ನೂತನ ಬ್ರಹ್ಮರಥ

Tuesday, October 1st, 2019
Brahma-ratha

ಮಂಗಳೂರು : ಉದ್ಯಮಿ ಹಾಗೂ ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಮತ್ತು ಉದ್ಯಮಿ ಅಜಿತ್ ಶೆಟ್ಟಿ ಅವರು ಕಾಣಿಕೆ ರೂಪದಲ್ಲಿ ಸಮರ್ಪಿಸಲು ತಯಾರಿಸಿರುವ ರಥವನ್ನು ಮೆರವಣಿಗೆ ಮೂಲಕ ಕುಕ್ಕೆ ಸುಬ್ರಮಣ್ಯಕ್ಕೆ ತಲುಪಿಸಲಾಗುತ್ತಿದೆ. ಸುಮಾರು 400 ವರ್ಷಗಳಷ್ಟು ಹಳೆಯದಾದ ರಥದ ಮಾದರಿಯಲ್ಲೇ ನೂತನ ರಥವನ್ನೂ ರಥಶಿಲ್ಪಿ ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ್ಯರವರ ತಂಡವು ವೈಶಿಷ್ಟ್ಯಪೂರ್ಣವಾಗಿ ಪೂರ್ಣಗೊಳಿಸಿದೆ. ತಯಾರಿಸಿರುವ ರಥವು ಕೋಟೇಶ್ವರದಿಂದ ಭವ್ಯ ಮೆರವಣಿಗೆ ಮೂಲಕ ಹೊರಟಿದ್ದು, ಬ್ರಹ್ಮರಥವು ಉಡುಪಿ- ಪಡುಬಿದ್ರೆ ಮಾರ್ಗವಾಗಿ ಕದ್ರಿ- ಬಿ.ಸಿ.ರೋಡ್- ಉಪ್ಪಿನಂಗಡಿ, ಕಡಬ ಮೂಲಕ […]

ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಅಕ್ಟೋಬರ್​ 2 ರಂದು ನೂತನ ಬ್ರಹ್ಮರಥ ಸಮರ್ಪಣೆ

Monday, September 30th, 2019
subrahmanya

ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಮರ್ಪಣೆಗೊಳ್ಳಲಿರುವ ನೂತನ ಬ್ರಹ್ಮರಥವು ಅಕ್ಟೋಬರ್ 2ರಂದು ಉಪ್ಪಿನಂಗಡಿ, ಕಡಬದ ಮೂಲಕ ತೆರಳುವ ರಥಕ್ಕೆ ವಿವಿಧ ಕಡೆಗಳಲ್ಲಿ ಅದ್ಧೂರಿ ಸ್ವಾಗತ ನೀಡಲು ಸಿದ್ಧತೆಗಳು ಆರಂಭವಾಗಿದೆ. ಉದ್ಯಮಿ ಎನ್. ಮುತ್ತಪ್ಪ ರೈ ಹಾಗೂ ಕಡಬದ ಅಜಿತ್ ಶೆಟ್ಟಿ ಅವರು 2.5 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಬ್ರಹ್ಮರಥವನ್ನು ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಕಾಣಿಕೆಯಾಗಿ ಸಮರ್ಪಣೆ ಮಾಡಲಿದ್ದಾರೆ. ಬ್ರಹ್ಮರಥವು ಇಂದು ಬೆಳಿಗ್ಗೆ ಕೋಟೇಶ್ವರದಿಂದ ಹೊರಟು ಮೂಲ್ಕಿ, ಬಪ್ಪನಾಡು ಮಾರ್ಗವಾಗಿ ಸಂಜೆ ವೇಳೆ ಮಂಗಳೂರಿನ ಕದ್ರಿಗೆ […]

ಕುಕ್ಕೆ: ಬ್ರಹ್ಮರಥ ನಿರ್ಮಿಸುವ ಪ್ರಸ್ತಾಪ, ನಿರ್ಮಾಣ ವಿಚಾರದಲ್ಲಿ ಚರ್ಚೆ

Wednesday, October 18th, 2017
kukke subramanya

ಮಂಗಳೂರು: ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಬ್ರಹ್ಮರಥದ ನಿರ್ಮಾಣ ವಿಚಾರದಲ್ಲಿ ಗೊಂದಲ ಉಂಟಾಗಿದೆ. ಉದ್ಯಮಿ ಹಾಗೂ ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ತನ್ನ ಸ್ವಂತ ಖರ್ಚಿನಲ್ಲಿ ಕ್ಷೇತ್ರಕ್ಕೆ ಬ್ರಹ್ಮರಥ ನಿರ್ಮಿಸುವ ಪ್ರಸ್ತಾಪವನ್ನು ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿ ಮುಂದಿಟ್ಟಿದ್ದಾರೆ. ಈ ವಿಚಾರವನ್ನು ವ್ಯವಸ್ಥಾಪನಾ ಮಂಡಳಿ ಇಂದು ದೇವಸ್ಥಾನದಲ್ಲಿ ನಡೆದ ದೇವಸ್ಥಾನದ ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಪ್ರಸ್ತುತ ಪಡಿಸಿದ್ದು, ಇದಕ್ಕೆ ಭಕ್ತರಿಂದ ವಿರೋಧ ವ್ಯಕ್ತವಾಗಿದೆ. ಕೇವಲ ಒಬ್ಬ ಭಕ್ತ ಕೊಡುವ ಬ್ರಹ್ಮರಥದಲ್ಲಿ ಸುಬ್ರಮಣ್ಯ ಸ್ವಾಮಿ ಸಂತುಷ್ಚನಾಗಲಾರ. ಈ […]

ಉಡುಪಿ ಶ್ರೀಕೃಷ್ಣ ಮಠದ ನೂತನ ಬ್ರಹ್ಮರಥ ಶ್ರೀಕೃಷ್ಣನ ಸೇವೆಗೆ ಅರ್ಪಣೆ

Tuesday, January 15th, 2013
Brahmaratha Sri Krishna Mutt

ಉಡುಪಿ : ಶ್ರೀಕೃಷ್ಣ ಇಹಲೋಕ ತ್ಯಜಿಸಿದ ಬಳಿಕ ಅರ್ಜುನನ ಮೇಲೆ ಇತರರು ಆಕ್ರಮಣ ನಡೆಸಿದರು. ಆಗ ಅರ್ಜುನ ಸೋತು ಹೋಗುತ್ತಾನೆ. ಕಾರಣವೆಂದರೆ ಕೃಷ್ಣ ಇಲ್ಲದೆ ಇರುವುದು. ಇಲ್ಲಿಯೂ ರಥ ನಿರ್ಮಿಸಿರಬಹುದು. ಅದರಲ್ಲಿ ಶ್ರೀಕೃಷ್ಣ ಪ್ರತಿಷ್ಠೆ ಆದರೆ ಮಾತ್ರ ಶೋಭೆ’ ಎಂದು ಶ್ರೀಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭತೀರ್ಥರು ಹೇಳಿದರು. ಅವರು ಉಡುಪಿ ಶ್ರೀಕೃಷ್ಣ ಮಠದಲ್ಲಿ ನೂತನವಾಗಿ ನಿರ್ಮಿಸಲಾದ ರಥವನ್ನು ಶ್ರೀಕೃಷ್ಣನ ಸೇವೆಗೆ ಅರ್ಪಿಸಿದರು. ಉಡುಪಿ ಶ್ರೀಕೃಷ್ಣ ಮಠದಲ್ಲಿ ನಿರ್ಮಿಸಲಾದ ನೂತನ ಬ್ರಹ್ಮರಥ ಶ್ರೀಕೃಷ್ಣನ ಸೇವೆಗೆ ಸೋಮವಾರ ಮಕರ ಸಂಕ್ರಮಣ […]