Blog Archive

ಇಂದು, ನಾಳೆ ಬೆಳದಿಂಗಳ ಸಾಹಿತ್ಯ ಸಮ್ಮೇಳನ

Friday, February 14th, 2014
Lyrics-Conference

ಮಂಗಳೂರು: ಇದೇ ಮೊದಲ ಬಾರಿಗೆ ಫೆ. 14 ರಂದು ಬೆಂಗರೆಯಲ್ಲಿ ಬೆಳದಿಂಗಳ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಅಧ್ಯಕ್ಷ ಶೇಖರ ಅಜೆಕಾರ್ ಹೇಳಿದ್ದಾರೆ. ಅಳಿವೆ ಬಾಗಿಲಿನಲ್ಲಿ ಬುಧವಾರ ದೋಣಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ಸಾಹಿತ್ಯ ಪ್ರೇಮಿಗಳ ದಿನಾಚರಣೆ’ ಶೀರ್ಷಿಕೆ ಮತ್ತು ‘ಮಾನವ ಕುಲಂ ತಾನೊಂದೆ ವಲಂ’ ಎಂಬ ಸದಾಶಯದೊಂದಿಗೆ ಸಾಹಿತಿ ನಾ. ಮೊಗಸಾಲೆ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ. ಫೆ. 14 ರಂದು 5 ರಿಂದ 5.30ವರೆಗೆ ಅಧ್ಯಕ್ಷರೊಂದಿಗೆ ಸಮುದ್ರ ವಿಹಾರ ಕಾರ್ಯಕ್ರಮ ಮೆರವಣಿಗೆಯಂತೆ […]

ಅಮಾಯಕರ ವಿರುದ್ಧದ ಕೇಸು, ಉಪವಾಸ ಸತ್ಯಾಗ್ರಹ: ಪೇಜಾವರಶ್ರೀ

Friday, February 14th, 2014
Pejavara-Shree

ಮಂಗಳೂರು: ಉಳ್ಳಾಲ ಗಲಭೆಗೆ ಸಂಬಂಧಿಸಿ ಅಮಾಯಕರ ಬಂಧನ ನಿಲ್ಲಿಸಬೇಕು, ಈಗಾಗಲೇ ಬಂಧಿತರಾಗಿರುವ ಅಮಾಯಕರನ್ನು ಬಿಡುಗಡೆಗೊಳಿಸಬೇಕು, ಸೊತ್ತು ಹಾನಿಗೀಡಾದವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗುರುವಾರ ಉಳ್ಳಾಲದಲ್ಲಿ ನಡೆದ ‘ಸಂತ್ರಸ್ತರ ಕಡೆಗೆ ಸನ್ಯಾಸಿಗಳ ನಡಿಗೆ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮತ್ತು ರಾಜ್ಯಪಾಲರನ್ನು ಒತ್ತಾಯಿಸಲಾಗಿದೆ. ಶೀಘ್ರವೇ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಸ್ವಾಮೀಜಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ. ಇದಕ್ಕೆ ಸರ್ಕಾರ ಸ್ಪಂದಿಸದಿದ್ದರೆ ಉಳ್ಳಾಲದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆಯನ್ನೂ ಸ್ವಾಮೀಜಿಗಳು ನೀಡಿದ್ದಾರೆ. ಉಳ್ಳಾಲದ ಮೊಗವೀರಪಟ್ಣದಲ್ಲಿ ಗಲಭೆ ಸಂತ್ರಸ್ತರ ಮನೆಗೆ ಭೇಟಿ […]

ನಕ್ಸಲರ ಜತೆ ಮಾತುಕತೆ ನಡೆಯುತ್ತಿದೆ, ವಿಫಲವಾದರೆ ಎಎನ್‌ಎಫ್ ಸಮಸ್ಯೆ ಪರಿಹರಿಸಲಿದೆ : ಕೆ.ಜೆ. ಜಾರ್ಜ್

Thursday, February 13th, 2014
KJ-George

ಮಂಗಳೂರು: ನಕ್ಸಲರು ಸಂಧಾನಕ್ಕೆ ಹಸಿರು ನಿಶಾನೆ ತೋರಿದ ಹಿನ್ನೆಲೆಯಲ್ಲಿಯೇ ನಕ್ಸಲರ ಪರವಾಗಿ ಸ್ವಯಂ ಸೇವಾಸಂಸ್ಥೆಗಳು ಸರ್ಕಾರದ ಜತೆ ಮಾತುಕತೆ ನಡೆಸುತ್ತಿವೆ. ಮಾತುಕತೆ ಫಲಪ್ರದವಾಗದೇ ಇದ್ದರೆ ನಕ್ಸಲ್ ನಿಗ್ರಹ ದಳದವರು ಸಮಸ್ಯೆ ಮಟ್ಟ ಹಾಕುತ್ತಾರೆ ಎಂದು ಗೃಹಸಚಿವ ಕೆ.ಜೆ.ಜಾರ್ಜ್ ಹೇಳಿದರು. ನಗರ ಸಹಾಯಕ ಪೊಲೀಸ್ ಕಮಿಷನರ್ ಕಚೇರಿ ಕಟ್ಟಡ ಉದ್ಘಾಟನೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ಅರಣ್ಯ ಪ್ರದೇಶದಲ್ಲಿ ಈಗ ಏಕಾ ಏಕಿ ಒಕ್ಕಲೆಬ್ಬಿಸಲು ಸಾಧ್ಯವಿಲ್ಲ. ಕಾಡಿನ ಮಧ್ಯೆ ಇರುವವರನ್ನು ಕಾಡಿನ ಅಂಚಿನಲ್ಲಿ ಪುನರ್ವಸತಿ ಮಾಡಲು ಅವಕಾಶ ಇದೆ […]

ರು. 3 ಲಕ್ಷ ಕೋಟಿ ವ್ಯವಹಾರ ಗಡಿ ದಾಟಿದ ಕಾರ್ಪ್ ಬ್ಯಾಂಕ್

Saturday, February 8th, 2014
corporation-bank

ಮಂಗಳೂರು: ಕಾರ್ಪೊರೇಶನ್ ಬ್ಯಾಂಕ್ 3 ಲಕ್ಷ ಕೋಟಿ ಗಡಿ ದಾಟಿ ವ್ಯವಹಾರ ಮಾಡುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಕಾರ್ಪೊರೇಶನ್ ಬ್ಯಾಂಕ್ ಅಧ್ಯಕ್ಷ ಎಸ್.ಆರ್. ಬನ್ಸಾಲ್ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ, ಮೂರನೇ ತ್ರೈಮಾಸಿಕ ಹಣಕಾಸು ವ್ಯವಹಾರದ ವಿವರ ನೀಡಿದರು. 2013 ಡಿಸೆಂಬರ್‌ಗೆ ಹಣಕಾಸು ವ್ಯವಹಾರ ಕಳೆದ ವರ್ಷದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.23 ಹೆಚ್ಚಳ ದಾಖಲಿಸಿದ್ದು, 301,375 ಕೋಟಿ ವ್ಯವಹಾರ ಮಾಡಿದೆ ಎಂದರು. ಠೇವಣಿ ಶೇ.26,68  ಹೆಚ್ಚಳವಾಗಿದ್ದು, 177,845 ಕೋಟಿ ದಾಖಲಾಗಿದೆ. ಸಾಲ ನೀಡಿಕೆ ಶೇ.18.28 ಪ್ರಗತಿಯಾಗಿದ್ದು, 123,530 […]

ಬ್ಯಾಂಕ್ ಉದ್ಯೋಗಿಗಳ ವೇತನ ಪರಿಷ್ಕರಣೆಗೆ ಆಗ್ರಹ

Friday, February 7th, 2014
Indian-bank

ಮಂಗಳೂರು : ಸುಮಾರು 10 ಲಕ್ಷ ಬ್ಯಾಂಕ್ ಉದ್ಯೋಗಿಗಳ ವೇತನ ಪರಿಷ್ಕರಣೆ ನವಂಬರ್ 2012 ರಿಂದ ಜ್ಯಾರಿಗೆ ಬರಬೇಕಾಗಿದ್ದು, ಈ ಕುರಿತು ಕಳೆದ 15 ತಿಂಗಳುಗಳಲ್ಲಿ ಕೆಲವು  ಬಾರಿ ಮಾತುಕತೆ ನಡೆದರೂ ಯಾವುದೇ ಯಶಸ್ಸನ್ನು ಕಾಣಲಿಲ್ಲ. ಪ್ರಾರಂಭದಲ್ಲಿ ಶೇಕಡಾ 5 ರಷ್ಟು ಹೆಚ್ಚಳವನ್ನು ಕೊಡುವುದಾಗಿ ಹೇಳಿದ ಇಂಡಿಯನ್ ಬ್ಯಾಂಕ್ ಅಸೋಸಿಯೇಶನ್ ತದನಂತರ ಬ್ಯಾಂಕ್ ಉದ್ಯೋಗಿಗಳು ಒಂದು ದಿನದ ಮುಷ್ಕರ ಹೂಡಿದ ಬಳಿಕ ಶೇಕಡ 10 ಹೆಚ್ಚಳವನ್ನು ಕೊಡಲು ಮುಂದೆ ಬಂದಿದೆ. 9ನೇ ವೇತನ ಒಪ್ಪಂದದಲ್ಲಿ ಬ್ಯಾಂಕ್ ಉದ್ಯೋಗಿಗಳಿಗೆ […]

ದೇವಸ್ಥಾನಗಳಲ್ಲಿ ಸನಾತನ ಗ್ರಂಥಾಲಯದ ಉದ್ಘಾಟಣೆ

Friday, February 7th, 2014
Temple-Shree

ಮಂಗಳೂರುಃ   ಮಂಗಳೂರಿನ  ಶ್ರೀ ಮಾರಿಯಮ್ಮ ದೇವಸ್ಥಾನ ಉರ್ವ ದಿನಾಂಕ 04 ಫೆಬ್ರವರಿ 2014 ರಂದು ಇಲ್ಲಿನ ಆಡಳಿತ ಮೊಕ್ತೇಸರರಾದ ಶ್ರೀ ಮೋಹನ ಬೋಳೂರು ಇವರು  ದೀಪಪ್ರಜ್ವಲನೆ ಮಾಡಿ  ಸನಾತನ ಗ್ರಂಥಾಲಯದ ಉದ್ಘಾಟಣೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಸಹ ಮೊಕ್ತೇಸರರಾದ ಶ್ರೀ ಗಂಗಾಧರ ಪಾಂಗಲ್ ಬೈಕಂಪಾಡಿ, ಶ್ರೀ ಪುರಂದರ ಗುರಿಕಾರ ಹೋಸಬೆಟ್ಟು,ಶ್ರೀ ಭಾಸ್ಕರ ಸಾಲಿಯಾನ ಬೋಳೂರು,ಶ್ರೀ ದಯಾನಂದ ಪುತ್ರನ್ ಕುದ್ರೋಳಿ, ಸನಾತನ ಸಂಸ್ಥೆಯ ಕು ವಿಜಯಲಕ್ಷ್ಮೀ ಹಿಂದೂ ಜನಜಾಗ್ರತಿ ಸಮಿತಿಯ ಶ್ರೀ ಪ್ರಸನ್ನ್ ಕಾಮತ ಮತ್ತಿತರ ಗಣ್ಯ ವ್ಯಕ್ತಿಗಳು […]

ಫತ್ವಾ ಯಾರ ಮೇಲೂ ಹೇರುವುದಿಲ್ಲ: ಪಳ್ಳಿ ಉಸ್ತಾದ್

Thursday, February 6th, 2014
AB-Ibrahim

ಮಂಗಳೂರು: ಪುತ್ತೂರು ಕೊಡಿಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫತ್ವಾ ಹೊರಡಿಸಿದ ಧರ್ಮಗುರುವನ್ನು ಜಿಲ್ಲಾಧಿಕಾರಿ ಆದೇಶದಂತೆ ಶಾಲೆಗೆ ಕರೆಸಿ ಕ್ಷೇತ್ರ ಶಿಕ್ಷಣಾಧಿಕಾರಿ, ಅಧಿಕೃತವಾಗಿ ಹೇಳಿಕೆ ಪಡೆದಿದ್ದಾರೆ. ಈ ನಡುವೆ ಕನ್ನಡಪ್ರಭ ಜತೆ ಮಾತನಾಡಿದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಶಾಲೆಯಲ್ಲಿ ಎಲ್ಲರಿಗೂ ಮನವರಿಕೆ ಮಾಡಿ ಪ್ರಕರಣವನ್ನು ಸೌಹಾರ್ದಯುತವಾಗಿ ಪರಿಹರಿಸುವುದಾಗಿ ತಿಳಿಸಿದರು.  ಕನ್ನಡಪ್ರಭದಲ್ಲಿ ಬುಧವಾರ ‘ಮುಸ್ಲಿಂ ಹೆಣ್ಣುಮಕ್ಕಳ ನೃತ್ಯಕ್ಕೆ ಫತ್ವಾ ಅಡ್ಡಿ’ ವಿಶೇಷ ವರದಿ ಪ್ರಕಟವಾಗಿತ್ತು. ಈ ವರದಿ ಪ್ರಸ್ತಾಪಿಸಿದ ಜಿಲ್ಲಾಧಿಕಾರಿ, ಪತ್ರಿಕೆಯಲ್ಲಿ ವರದಿ ಪ್ರಕಟವಾಗಿರುವುದನ್ನು ನೋಡಿದೆ. ಸಾಹಿತಿಗಳು, ಪ್ರಗತಿ […]

ಅಸೈನ್‌ಮೆಂಟ್‌ಗೆ ಕಾಂಟಾಕ್ಟ್ ಪ್ರೋಗ್ರಾಮ್ ಕಡ್ಡಾಯ!

Thursday, February 6th, 2014
Open-University

ಮಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(ಕರಾಮುವಿ) ಪ್ರಥಮ ಹಾಗೂ ಅಂತಿಮ ವರ್ಷದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಗೆ ಕೊನೆಕ್ಷಣದಲ್ಲಿ ಸಂಪರ್ಕ ಕಾರ್ಯಕ್ರಮ (ಕಾಂಟಾಕ್ಟ್ ಪ್ರೋಗ್ರಾಮ್) ಕಡ್ಡಾಯಗೊಳಿಸಿದೆ. ಅಷ್ಟು ಮಾತ್ರವಲ್ಲ, ಅಸೈನ್‌ಮೆಂಟ್ (ಪ್ರಬಂಧ)ವಿಷಯವನ್ನು ವೆಬ್‌ಸೈಟ್‌ನಲ್ಲಿ ಹಾಕದೆ, ಸಂಪರ್ಕ ಕಾರ್ಯಕ್ರಮಕ್ಕೆ ಹಾಜರಾದವರಿಗೆ ಮಾತ್ರ ನೀಡುವುದಾಗಿ ಹೇಳಿದೆ. ಸಂಪರ್ಕ ಕಾರ್ಯಕ್ರಮಗಳನ್ನು ತನ್ನ ಪ್ರಾದೇಶಿಕ ಕೇಂದ್ರಗಳಲ್ಲಿ ಆಯೋಜಿಸುವ ಬದಲು ಒಂದೇ ಕಡೆ ಮೈಸೂರಿನಲ್ಲಿ ನಡೆಸುತ್ತಿದೆ. ವಿವಿಯ ದಿಢೀರ್ ಕ್ರಮಕ್ಕೆ ವಿದ್ಯಾರ್ಥಿ ಸಮೂಹದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಸಂಪರ್ಕ ಕಾರ್ಯಕ್ರಮಕ್ಕೆ ಹಾಜರಾಗದವರು ಅಸೈನ್‌ಮೆಂಟ್ ಬರೆಯುವಂತಿಲ್ಲ, ಅಸೈನ್‌ಮೆಂಟ್ […]

2.19 ಕೆ.ಜಿ ಚಿನ್ನ ವಶ– ಇಬ್ಬರ ಸೆರೆ

Wednesday, February 5th, 2014
G-Gold-Seizure

ಮಂಗಳೂರು: ‘ಹಪ್ಪಳ ರೂಪದಲ್ಲಿ ಬಂತು ಚಿನ್ನವಿದೇಶದಿಂದ’ ಚಿನ್ನವನ್ನು ಕಳ್ಳಸಾಗಣೆ ಮಾಡಿದ ಮೂರು ಪ್ರತ್ಯೇಕ ಪ್ರಕರಣಗಳನ್ನು ಕಸ್ಟಮ್ಸ್‌ ಅಧಿಕಾರಿಗಳು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಭೇದಿಸಿದ್ದಾರೆ. ಒಟ್ಟು ₨ 65.29 ಲಕ್ಷ ಮೌಲ್ಯದ 2,191.200 ಗ್ರಾಂ (2.19 ಕೆ.ಜಿ) ಚಿನ್ನವನ್ನು ವಶಪಡಿಸಿ­ಕೊಂಡಿದ್ದಾರೆ. ಆರೋಪಿಗಳು ಈ ಬಾರಿ  ಕಳ್ಳಸಾಗಣೆ ಮಾಡಲು ಚಿನ್ನವನ್ನು ಹಪ್ಪಳ ರೂಪಕ್ಕೂ ಪರಿ ವರ್ತಿಸಿದ್ದಾರೆ. ಅದಲ್ಲದೇ ಕಾಯಿಲ್‌ ಹಾಗೂ ಸರಿಗೆ ರೂಪಕ್ಕೆ ಪರಿವರ್ತಿಸಿ ಕಳ್ಳಸಾಗಣೆ ಮಾಡಿದ ಚಿನ್ನವೂ ಕಸ್ಟಮ್ಸ್‌ ಅಧಿ­ಕಾರಿಗಳ ಕಣ್ಣಿಗೆ ಬಿದ್ದಿದೆ. ಕಾಸರಗೋಡು ಮಧೂರಿನ […]

ಪುತ್ತೂರಿನಲ್ಲಿ ಮುಸ್ಲಿಂ ಧರ್ಮಗುರುಗಳ ಫತ್ವಾ

Wednesday, February 5th, 2014
Dance

ಮಂಗಳೂರು: ‘ಹೆಣ್ಣು ಮಕ್ಕಳು ವೇದಿಕೆಯ ಮೇಲೆ ನೃತ್ಯ ಮಾಡುವುದನ್ನು ಕುರಾನ್ ಸಂಪೂರ್ಣವಾಗಿ ವಿರೋಧಿಸುತ್ತದೆ. ಹೆಣ್ಣು ಮಕ್ಕಳು ನೃತ್ಯ ಮಾಡುವುದನ್ನು ಗಂಡು ಮಕ್ಕಳು ನೋಡುವುದು, ಹೆಣ್ಣು ಮಕ್ಕಳು ಗಂಡು ಮಕ್ಕಳನ್ನು  ನೋಡು­ವುದನ್ನು ಹದೀಸ್ ಮತ್ತು ಕುರಾನ್ ವಿರೋಧಿಸುತ್ತದೆ. ಆದ್ದರಿಂದ ಹೆಣ್ಮಕ್ಕಳು ಶಾಲೆಯಲ್ಲಿ ನೃತ್ಯ ಮಾಡ­ಬಾರದು’ ಎಂದು ಪುತ್ತೂರಿನ ಕೊಡಿಪ್ಪಾಡಿ ಮದ್ರಸದ ಧರ್ಮಗುರು ಅಬೂಬಕ್ಕರ್‌ ಮದನಿ ಫತ್ವಾ ಹೊರಡಿಸಿದ್ದಾರೆ. ಇದರಿಂದಾಗಿ ಪುತ್ತೂರಿನ ಕೊಡಿ­ಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವ­ಹಿಸುವ ಅವಕಾಶ ಕಳೆದುಕೊಂಡಿದ್ದಾರೆ. ಶಾಲೆಯ ಶಿಕ್ಷಕರೊಬ್ಬರು […]