Blog Archive

ಖಾಸಗಿ ಬಸ್ಸೊಂದು ಹರಿದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಸಾವು..!

Wednesday, November 28th, 2018
accident

ಮಂಗಳೂರು: ಖಾಸಗಿ ಬಸ್ಸೊಂದು ಹರಿದ ಪರಿಣಾಮ ಪಾದಚಾರಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಕೂಳೂರಿನಲ್ಲಿ ನಡೆದಿದೆ. ಕೂಳೂರು ನಿವಾಸಿ ಭೋಜ (45) ಮೃತಪಟ್ಟವರು. ಮೃತರು ನಗರದಲ್ಲಿ ಹಲವಾರು ವರ್ಷಗಳಿಂದ ಇಲೆಕ್ಟ್ರಿಶಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಮಂಗಳವಾರ ಸಂಜೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಮಂಗಳೂರಿನಿಂದ ಸುರತ್ಕಲ್ ಮಾರ್ಗವಾಗಿ ತೆರಳುತ್ತಿದ್ದ ಖಾಸಗಿ ಬಸ್ ನಿಯಂತ್ರಣ ತಪ್ಪಿ ಕೂಳೂರಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಭೋಜರವರ ಮೇಲೆಯೇ ಹರಿದು ಹೋಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ […]

ಜನಾರ್ದನ ಪೂಜಾರಿಗೆ ಅನಾರೋಗ್ಯ ವದಂತಿ: ಸುಳ್ಳು ಸುದ್ದಿ ಹರಿಡಿದವರ ವಿರುದ್ಧ ದೂರು

Tuesday, November 27th, 2018
janardhan-poojary

ಮಂಗಳೂರು: ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ತೀವ್ರ ಅನಾರೋಗ್ಯದಲ್ಲಿದ್ದಾರೆ ಸಾಮಾಜಿಕ ಜಾಲತಾಣಗಳಲ್ಲಿ ಎಂದು ಸುಳ್ಳು ಸಂದೇಶ ಹರಡಿದವರ ವಿರುದ್ಧ, ಬಂಟ್ವಾಳ ನಗರ ಠಾಣೆಯಲ್ಲಿ ದ.ಕ.ಜಿಲ್ಲಾ ಬಿಜೆಪಿ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ ದೂರು ನೀಡಿದ್ದಾರೆ. ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಅನಾರೋಗಕ್ಕೀಡಾಗಿರುವ ಜನಾರ್ದನ ಪೂಜಾರಿ, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸುಳ್ಳು ಸಂದೇಶ ಹರಡುತ್ತಿದ್ದಾರೆ. ಇದರ ಹಿಂದಿರುವ ಆರೋಪಿಳನ್ನು ಪತ್ತೆಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಪೊಲೀಸ್ ದೂರಿನಲ್ಲಿ ಒತ್ತಾಯಿಸಿದ್ದಾರೆ. ಜನಾರ್ದನ ಪೂಜಾರಿ ಆರೋಗ್ಯವಾಗಿದ್ದು ಬಂಟ್ವಾಳದ ಸ್ವಗೃಹದಲ್ಲಿ […]

ಮಂಗಳೂರು ಕೋಮು ಸೌಹಾರ್ದತೆಯ ವಿಷಯದಲ್ಲೂ ಬ್ರಾಂಡ್ ಆಗಬೇಕಾಗಿದೆ: ಅಪರ ಜಿಲ್ಲಾಧಿಕಾರಿ ಕುಮಾರ್

Tuesday, November 27th, 2018
kumar

ಮಂಗಳೂರು: ಶಿಕ್ಷಣ, ಆರೋಗ್ಯ, ವಾಣಿಜ್ಯ ಕ್ಷೇತ್ರದಲ್ಲಿ ಬ್ರಾಂಡ್ ಆಗಿ ಗುರುತಿಸಿಕೊಂಡಿರುವ ಮಂಗಳೂರು ಕೋಮು ಸೌಹಾರ್ದತೆಯ ವಿಷಯದಲ್ಲೂ ಬ್ರಾಂಡ್ ಆಗಬೇಕಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ಅಭಿಪ್ರಾಯಿಸಿದ್ದಾರೆ. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಮುಖ ಯೋಜನೆಯಾಗಿ ನಗರದ ಪೆÇಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಇಂದು `ಬ್ರ್ಯಾಂಡ್ ಮಂಗಳೂರು’ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಸ್ವಚ್ಛ ಮಂಗಳೂರಿನ ಪರಿಕಲ್ಪನೆಯಂತೆ ಸ್ವಚ್ಚ ಮನಸ್ಸುಗಳನ್ನು ಕಟ್ಟುವ ಕೆಲಸ ಆಗಬೇಕಾಗಿದೆ. ಪ್ರಾಕೃತಿಕ ವಿಕೋಪ ಹಾಗೂ ಮನಸ್ಸುಗಳ ವಿಕೋಪ […]

ಮಂಗಳೂರು ಬೀಚ್‌ನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ: 6 ಯುವಕರ ಬಂಧನ

Tuesday, November 27th, 2018
commissioner

ಮಂಗಳೂರು: ಬೀಚಿಗೆ ವಿಹಾರಕ್ಕೆ ಬಂದಿದ್ದ ಯುವತಿಯನ್ನು ಏಳು ಜನರ ದುಷ್ಕರ್ಮಿಗಳ ತಂಡ ಗ್ಯಾಂಗ್ ರೇಪ್ ಮಾಡಿದ ಪೈಶಾಚಿಕ ಕೃತ್ಯ ಮಂಗಳೂರಿನ ತೋಟಬೆಂಗ್ರೆಯಲ್ಲಿ ನಡೆದಿದೆ. ನವೆಂಬರ್ 18ರಂದು ಈ ಘಟನೆ ನಡೆದಿದ್ದು, ಯುವತಿ ನೀಡಿದ ದೂರಿನ ಮೇಲೆ ಇಂದು ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ದೂರಿನ ಹಿನ್ನೆಲೆಯಲ್ಲಿ ಕಾರ್ಯಚರಿಸಿದ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅತ್ಯಾಚಾರಕ್ಕೊಳಗಾದ ಯುವತಿ ಯುವಕನೊಂದಿಗೆ ವಿಹಾರಕ್ಕೆಂದು ತೋಟಬೆಂಗ್ರೆ ಬೀಚಿಗೆ ಬಂದಿದ್ದರು. ಆ ವೇಳೆ ಬೀಚಿನಲ್ಲಿ ಏಳು ಜನ ಯುವಕರ […]

ಯುವಕನ ನಾಪತ್ತೆ ಪ್ರಕರಣ: ಹೆತ್ತವರಿಂದ ಹೇಬಿಯಸ್​ ಕಾರ್ಪಸ್​ ದಾವೆ

Friday, November 23rd, 2018
young-boy

ಮಂಗಳೂರು: ಮಾಜಿ ಪಿಎಸ್ಐ ಮದನ್ ಜತೆಗಿದ್ದ ಪುತ್ರ ವಿನಾಯಕ್ ನಾಪತ್ತೆಯಾಗಿದ್ದು, ಆತನನ್ನು ಪತ್ತೆ ಮಾಡಿಕೊಡುವಂತೆ ಹೆತ್ತವರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಶಕ್ತಿನಗರದ ನಿವಾಸಿ ಶಿವಕುಮಾರ್ ಹಾಗೂ ಸಾಕಮ್ಮ ದಂಪತಿ ಪುತ್ರ ವಿನಾಯಕ ನವೆಂಬರ್ 8ರಂದು ಬಿಜೈನ ಅಪಾರ್ಟ್ಮೆಂಟ್ನಿಂದ ನಾಪತ್ತೆಯಾಗಿದ್ದ. ನ. 15ರಂದು ವಿನಾಯಕ ನಾಪತ್ತೆ ಯಾಗಿರುವು ದಾಗಿ ಮದನ್ ದೂರವಾಣಿ ಕರೆ ಮಾಡಿ ಆತನ ಹೆತ್ತವರಿಗೆ ತಿಳಿಸಿದ್ದರು. ಬಳಿಕ ಹೆತ್ತವರು ಉರ್ವ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಬಜ್ಪೆ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿದ್ದ […]

ಸ್ನೇಹಿತರ ಬೈಕ್ ಗಳು ಪರಸ್ಪರ ಢಿಕ್ಕಿ: ನದಿಗೆ ಬಿದ್ದು ಬೈಕ್ ಸವಾರರಿಬ್ಬರು ಜಲಸಮಾಧಿ

Friday, November 23rd, 2018
accident

ಮಂಗಳೂರು: ಬೈಕ್ ನಲ್ಲಿ ಚಲಿಸುತ್ತಿದ್ದ ಸ್ನೇಹಿತರ ಬೈಕ್ ಗಳು ಪರಸ್ಪರ ಢಿಕ್ಕಿಯಾಗಿ ಒಂದು ಬೈಕ್ ಕೂಳೂರು ಸೇತುವೆಯಿಂದ ನದಿಗೆ ಬಿದ್ದ ಪರಿಣಾಮ ಬೈಕ್ ಸವಾರರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ರಾತ್ರಿ 8.30ರ ಸುಮಾರಿಗೆ ನಡೆದಿದೆ. ಮೃತ ದುರ್ದೈವಿಗಳನ್ನು ಆಕಾಶ್ ಭವನ ನಿವಾಸಿ ನಿಖಿಲ್ (21) ಹಾಗೂ ಕುಳೂರಿನ ವಿಜಯ್ (22) ಎಂದು ಗುರುತಿಸಲಾಗಿದೆ.

ಶಾಸಕ ವೇದವ್ಯಾಸ ಕಾಮತ್‌ರಿಂದ ಪ್ರಕೃತಿ ವಿಕೋಪ ಪರಿಹಾರನಿಧಿಯ ಚೆಕ್ ವಿತರಣೆ

Thursday, November 22nd, 2018
vedvyas-kamath

ಮಂಗಳೂರು: ಕಳೆದ ಮಳೆಗಾಲದಲ್ಲಿ ಪ್ರಕೃತಿ ವಿಕೋಪದಿಂದ ತೀವ್ರ ನಷ್ಟ ಅನುಭವಿಸಿದ 32 ನೇ ಮರೋಳಿ ವಾರ್ಡಿನ ದೊಡ್ಡಮನೆ ನಿವಾಸಿ ಹರೀಶ್ ಚಂದ್ರ ಅವರಿಗೆ ಶಾಸಕ ವೇದವ್ಯಾಸ ಕಾಮತ್ ಪರಿಹಾರ ನಿಧಿಯ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕಾಮತ್ ಅವರು ಕಳೆದ ಬಾರಿ ಸುರಿದ ಭಾರಿ ಮಳೆಗೆ ಮಂಗಳೂರು ನಗರ ದಕ್ಷಿಣದಲ್ಲಿ ಅನೇಕ ಮನೆಗಳು ಭಾಗಶ: ಕುಸಿದು ಹೋಗಿದ್ದವು. ಅಲ್ಲಿ ತಾವು ಸ್ವತ: ಪರಿಶೀಲಿಸಿ ಸರಕಾರದಿಂದ ಪರಿಹಾರನಿಧಿಗೆ ಹೆಚ್ಚಿನ ಬೇಡಿಕೆ ಕೂಡ ಇಡಲಾಗಿತ್ತು. ಬಂದಿರುವ ಪರಿಹಾರನಿಧಿಯಲ್ಲಿ […]

ನಗರದ ಜೋಕಟ್ಟೆ ಪ್ರದೇಶದಲ್ಲಿ ಮತ್ತೆ ಹಾರು ಬೂದಿ ಸಮಸ್ಯೆ..!

Wednesday, November 21st, 2018
manglore

ಮಂಗಳೂರು: ನಗರದ ಜೋಕಟ್ಟೆ ಪ್ರದೇಶದಲ್ಲಿ ಮತ್ತೆ ಹಾರು ಬೂದಿ ಕಾಣಿಸಿಕೊಂಡಿದ್ದು, ಸ್ಥಳೀಯರು ಆತಂಕಗೊಳಗಾಗಿದ್ದಾರೆ. ಮರಗಿಡಗಳು, ಮನೆ ಮತ್ತು ವಾಹನಗಳ ಮೇಲೆ ಹಾರು ಬೂದಿ ಕಾಣಿಸಿಕೊಂಡಿದೆ. ಇಲ್ಲಿ ಎಂಆರ್ಪಿಎಲ್ನ ಕೋಕ್ ಮತ್ತು ಸಲ್ಪರ್ ಘಟಕದ ಆರಂಭದ ಬಳಿಕ ಈ ಹಾರು ಬೂದಿ ಸಮಸ್ಯೆ ಎದುರಾಗಿದ್ದು, ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎನ್ನಲಾಗಿದೆ. ಇದರ ವಿರುದ್ಧವಾಗಿ ಕೆಲ ದಿನಗಳ ಹಿಂದೆ ಸ್ಥಳೀಯರು ಪ್ರತಿಭಟನೆ ನಡೆಸಿದ ಬಳಿಕ ಈ ಸಮಸ್ಯೆ ಕಡಿಮೆಯಾಗಿತ್ತು. ಆದರೆ ಈಗ ಎಂಆರ್ಪಿಎಲ್ ಕೋಕ್ ಮತ್ತು […]

ನಂತೂರು ಸರ್ಕಲ್ ಬಳಿ ಉರುಳಿ ಬಿದ್ದ ಗ್ಯಾಸ್​ ತುಂಬಿದ ಟ್ಯಾಂಕರ್​..!

Wednesday, November 21st, 2018
tankar

ಮಂಗಳೂರು: ನಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಗ್ಯಾಸ್ ತುಂಬಿದ ಟ್ಯಾಂಕರ್ ಮಗುಚಿ ಬಿದ್ದಿರುವ ಘಟನೆ ನಂತೂರು ಬಳಿ ನಡೆದಿದೆ. ಭಾರತ್ ಗ್ಯಾಸ್ ತುಂಬಿದ ಈ ಟ್ಯಾಂಕರ್ ನಂತೂರಿನಿಂದ ಬಿಕರ್ನಕಟ್ಟೆ ಕಡೆಗೆ ತೆರಳುತ್ತಿರುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ನಗರದ ಕದ್ರಿ ಪೊಲೀಸರು ಭೇಟಿ ನೀಡಿ ಕ್ರೇನ್ ಮೂಲಕ ಟ್ಯಾಂಕರ್ನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಹಳ್ಳಿಗಳಲ್ಲಿ ವೈದ್ಯಕೀಯ ಸೇವೆಗೆ ಒತ್ತು ನೀಡಿ: ಎಸ್ ಗಣೇಶ್ ರಾವ್

Monday, November 19th, 2018
karavali

ಮಂಗಳೂರು: ಆರೋಗ್ಯ, ಸದೃಢ ಭಾರತ ನಿರ್ಮಾಣವಾಗಬೇಕಾದರೆ ವೈದ್ಯರು, ಫಾರ್ಮಾಸಿಸ್ಟ್‌ಗಳು ಹಳ್ಳಿಗಳಲ್ಲಿ ಸೇವೆ ಸಲ್ಲಿಸಲು ವಿಶೇಷ ಒತ್ತು ನೀಡಬೇಕು. ಪ್ರತಿಯೊಬ್ಬರಲ್ಲೂ ಆರೋಗ್ಯಕ್ಕಾಗಿ ಜಾಗೃತಿ, ಮಾಹಿತಿ ನೀಡುವ ಮೂಲಕ ಸದೃಢ ಭಾರತ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿ ಜಿ.ಆರ್.ಎಜ್ಯುಕೇಶನ್ ಟ್ರಸ್ಟ್(ರಿ)ನ ಸ್ಥಾಪಕಾಧ್ಯಕ್ಷರಾದ ಶ್ರೀ ಎಸ್ ಗಣೇಶ್ ರಾವ್‌ರವರು ಕರಾವಳಿ ಫಾರ್ಮಸಿ ಕಾಲೇಜಿನ ರಾಷ್ಟ್ರೀಯ ಫಾರ್ಮಸಿ ಸಪ್ತಾಹದ 2018 ಅಂಗವಾಗಿ ಭಾನುವಾರ ನಡೆದ ಆರೋಗ್ಯ ಜಾಗೃತಿ ರ‍್ಯಾಲಿಯನ್ನು ಉದ್ಫಾಟಿಸಿ ಮಾತನಾಡಿದರು. ಅವರು ಮುಂದುವರೆದು ’ಆರೋಗ್ಯ ಭಾರತಕ್ಕಾಗಿ […]