ಹನಿಟ್ರ್ಯಾಪ್‌ ಗೆ ಒಳಗಾಗಿ 50 ಲಕ್ಷ ಕಳಕೊಂಡ ಮಂಗಳೂರು ಮೂಲದ ಉದ್ಯಮಿ

Tuesday, August 23rd, 2022
jagantha Shetty

”ಹನಿಟ್ರ್ಯಾಪ್‌ ಗೆ ಬಿಜೆಪಿ ಹಾಗೂ ಸಂಘಪರಿವಾರದಲ್ಲಿ ಗುರುತಿಸಿಕೊಂಡಿದ್ದ ವ್ಯಾಪಾರಿಯೊಬ್ಬರು ಬಲಿಯಾಗಿ ಬರೋಬ್ಬರಿ 50 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಮಂಡ್ಯದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.” ಮಂಡ್ಯ: ಹನಿಟ್ರ್ಯಾಪ್‌ಗೆ ಬಿಜೆಪಿ ಹಾಗೂ ಸಂಘಪರಿವಾರದಲ್ಲಿ ಗುರುತಿಸಿಕೊಂಡಿದ್ದ ವ್ಯಾಪಾರಿಯೊಬ್ಬರು ಬಲಿಯಾಗಿ ಬರೋಬ್ಬರಿ 50 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಮಂಡ್ಯದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಮಂಡ್ಯ ನಗರದಲ್ಲಿ ಚಿನ್ನಬೆಳ್ಳಿ ಹಾಗೂ ರಿಯಲ್ ಎಸ್ಟೇಟ್ ಬ್ಯುಸಿನೆಸ್‌ ಮಾಡ್ತಿದ್ದ ಮಂಡ್ಯದ ಪ್ರತಿಷ್ಠಿತ ಶ್ರೀನಿಧಿ ಗೋಲ್ಡ್ ಅಂಗಡಿ ಮಾಲೀಕ, ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಶೆಟ್ಟಿ […]

ಲಾಕ್‍ಡೌನ್ ನಡುವೆ ಗ್ರಾಮ ಪಂಚಾಯತ್ ಸದಸ್ಯನ ಮಗಳ ಅದ್ಧೂರಿ ಮದುವೆ, ಮುಂದೇನಾಯ್ತು ನೋಡಿ !

Monday, May 24th, 2021
Ambagilu Marraige

ಮಂಡ್ಯ:  ಬಿ.ಹೊಸೂರು ಗ್ರಾಮದ ಹೊರ ಹೊಲಯದಲ್ಲಿರುವ ಅಂಬೆಗಾಲು ಕೃಷ್ಣ ದೇವಾಲಯದಲ್ಲಿ ಗ್ರಾ.ಪಂ ಸದಸ್ಯರೊಬ್ಬರು ಲಾಕ್‍ಡೌನ್ ನಿಯಮ ಮೀರಿ  ಮಗಳ ಮದುವೆಯನ್ನು ಅದ್ಧೂರಿಯಾಗಿ ನಡೆಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಮದುವೆಗೆ ಯಾವುದೇ ಅನುಮತಿ ಪಡೆಯದೆ ಗ್ರಾ.ಪಂ ಸದಸ್ಯ ಮಹೇಶ್ ಎಂಬವರು ಲಾಕ್‍ಡೌನ್ ನಿಯಮ ಮೀರಿ ಮದುವೆ ಕಾರ್ಯಕ್ರಮ ನಡೆಸಿದ್ದರು. ಈ ಮದುವೆ ಕಾರ್ಯಕ್ರಮದಲ್ಲಿ ಸುಮಾರು 300ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಈ ವಿಚಾರ ತಿಳಿದು ಅಧಿಕಾರಿಗಳು ಮಂಡ್ಯ ತಹಶಿಲ್ದಾರ್ ಚಂದ್ರಶೇಖರ್ ಶಂಗಾಳಿ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಮದುವೆ ಕಾರ್ಯಕ್ರಮದ ಮೇಲೆ ದಾಳಿ ಮಾಡಿದ ತಹಶೀಲ್ದಾರ್ […]

ಜ್ಯೋತಿಷಿಯಂತೆ ನಟಿಸಿ ಹಲವಾರು ಮಂದಿಗೆ ವಂಚನೆ

Friday, November 20th, 2020
Jyotishi

ಪುತ್ತೂರು :  ನಕಲಿ ಜ್ಯೋತಿಷಿಯೊಬ್ಬ ಜನರಿಂದ ಹಣ  ಪಡೆದು ವಂಚಿಸಿದ  ವಿಡಿಯೋವೊಂದು  ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮಂಡ್ಯದ  ವ್ಯಕ್ತಿ  ಜ್ಯೋತಿಷಿಯಂತೆ ನಟಿಸಿದನ್ನು ಹಲವಾರು  ಮಂದಿ ನಂಬಿದ್ದರು.  ಹಣ ಕೊಟ್ಟ ಬಳಿಕ ಅವರಿಗೆ ಮೋಸದ ಅರಿವಾಗಿದೆ ಎಂದು ಹೇಳಲಾಗಿದೆ. ಈ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಜ್ಯೋತಿಷಿ ಹಲವಾರು ಜನರಿಂದ ಹಣ ತೆಗೆದುಕೊಂಡು ವಂಚನೆ ಮಾಡಿದ್ದರಿಂದ , ಅವರು ಜ್ಯೋತಿಷಿಯ ಕಚೇರಿಗೆ ಧಾವಿಸಿ ತಮ್ಮ ಹಣವನ್ನು ಮರುಪಾವತಿಸುವಂತೆ ಒತ್ತಾಯಿಸಿದ್ದಾರೆ. ನಕಲಿ ಜ್ಯೋತಿಷಿ ಗೂಗಲ್‌ ಪೇ ಮೂಲಕ ಹಣವನ್ನು ಪಡೆಯುತ್ತಿದ್ದ ಎಂದು ಹೇಳಲಾಗಿದೆ. ವಿಡಿಯೋ  ವೈರಲ್ ಆಗುತ್ತಿದ್ದಂತೆ ಜ್ಯೋತಿಷಿ ಗೂಗಲ್‌ ಪೇ […]

ಮಂಡ್ಯ: ಅರ್ಚಕರ ಕೊಲೆ ಆರೋಪಿಗಳನ್ನುಗುಂಡು ಹಾರಿಸಿ, ಬಂಧಿಸಿದ ಪೊಲೀಸರು

Monday, September 14th, 2020
Accused

ಮಂಡ್ಯ: ಗುತ್ತಲು ಅರಕೇಶ್ವರಸ್ವಾಮಿ ದೇಗುಲದ ಅರ್ಚಕರ ಕೊಲೆ ಆರೋಪಿಗಳನ್ನು ಪೊಲೀಸರು ಸೋಮವಾರ ನಸುಕಿನಲ್ಲಿ ಗುಂಡು ಹಾರಿಸಿ, ಬಂಧಿಸಿದ್ದಾರೆ. ಮೂವರು ಆರೋಪಿಗಳು ಮದ್ದೂರು ತಾಲ್ಲೂಕು ಸಾದೊಳಲು ಗೇಟ್‌ನ ಬಸ್ ತಂಗುದಾಣದಲ್ಲಿ ಮಲಗಿದ್ದರು. ಸೋಮವಾರ ನಸುಕಿನಲ್ಲಿ ಆರೋಪಿಗಳನ್ನು ಸುತ್ತುವರಿದ ಪೊಲೀಸರು ಶರಣಾಗಲು ಸೂಚನೆ ನೀಡಿದರು ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗುಂಡು ಹರಿಸಿದ್ದಾರೆ. ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದರು. ಆರೋಪಿಗಳ ಕಾಲಿಗೆ ಗುಂಡು ಹಾರಿಸಿ, ಬಂಧಿಸಲಾಯಿತು. ಮದ್ದೂರು ತಾಲ್ಲೂಕು ಆಸ್ಪತ್ರೆಯಲ್ಲಿ ಆರೋಪಿಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೊಲೆ ಆರೋಪಿಗಳು ನಡೆಸಿದ ಹಲ್ಲೆಯಿಂದ ಗಾಯಗೊಂಡ ಒಬ್ಬರು ಸಬ್ […]

ಡ್ರಗ್ಸ್ ದಂಧೆ : ಮಂಡ್ಯದ ಮಾಜಿ ಸಂಸದರ ಮಕ್ಕಳಿಬ್ಬರಿಗೆ ಲಿಂಕ್

Saturday, September 5th, 2020
Rahul

ಮಂಡ್ಯ :  ಸಿಸಿಬಿ ವಶದಲ್ಲಿರುವ ನಟಿ ಸಂಜನಾ ಆಪ್ತ ರಾಹುಲ್ ಜತೆ ನಿರಂತರ ಸಂಪರ್ಕ ಹೊಂದಿರುವ ಶಂಕೆಯ ಮೇರೆಗೆ ಮಂಡ್ಯ ಜಿಲ್ಲೆಯ ಮಾಜಿ ಸಂಸದರ ಮಗ ಹಾಗೂ ಮಗಳಿಗೆ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಬೆಂಗಳೂರಿನಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರ ಮಾಲೀಕರಾಗಿರುವ ಮಾಜಿ ಸಂಸದರ ಪುತ್ರ ಸಂಜನಾ ಆಪ್ತ ರಾಹುಲ್ ಜತೆ ನಿರಂತರ ಸಂಪರ್ಕದಲ್ಲಿದ್ದು ರಾಹುಲ್‍ನ ವಾಟ್ಸ್ ಆಪ್ ಚಾಟ್, ಕಾಲ್‍ಲಿಸ್ಟ್ ನಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ. ಜತೆಗೆ ಪಾರ್ಟಿ, ಕ್ಲಬ್‍ಗಳಲ್ಲಿ […]

ದೇವರಿಗೆ ಪೂಜೆ ಸಲ್ಲಿಸುವ ವಿಚಾರದಲ್ಲಿ ಬಿಜೆಪಿ‌, ಜೆಡಿಎಸ್ ಮುಖಂಡರ ನಡುವೆ ಜಗಳ

Friday, January 17th, 2020
mandya

ಮಂಡ್ಯ : ದೇವರಿಗೆ ಮೊದಲು ಪೂಜೆ ಸಲ್ಲಿಸುವ ವಿಚಾರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ‌ ಮುಖಂಡರ ನಡುವೆ ಜಗಳವಾಗಿದೆ. ಮಂಡ್ಯ ಜಿಲ್ಲೆಯ ಕೆ.ಆರ್‌. ಪೇಟೆ ತಾಲೂಕಿನ ಬಿಲ್ಲೇನಹಳ್ಳಿಯ ಗವಿರಂಗನಾಥಸ್ವಾಮಿ ದೇವಸ್ಥಾನದಲ್ಲಿ ಗಲಾಟೆ ನಡೆದಿದೆ. ಶುಕ್ರವಾರ ನಡೆದ ಗವಿರಂಗನಾಥಸ್ವಾಮಿಯ ರಥೋತ್ಸವ ಚಾಲನೆ ವೇಳೆ ತಾವೇ ಮೊದಲು ಪೂಜೆ ಸಲ್ಲಿಸುವುದಾಗಿ ಬಿಜೆಪಿ ಶಾಸಕ ನಾರಾಯಣಗೌಡ, ಬೆಂಬಲಿಗರು ಹಾಗೂ ಜೆಡಿಎಸ್ ತಾಲೂಕು ಪಂಚಾಯಿತಿ ಸದಸ್ಯ ರಾಜಹುಲಿ ದಿನೇಶ್ ಹಾಗೂ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ. ಮೊದಲು ನಾನು ಪೂಜೆ ಮಾಡಬೇಕು ಎಂದು ರಾಜಹುಲಿ […]

ಮದುವೆ ಮಾಡಿಸುವ ನೆಪದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ: ವ್ಯಕ್ತಿ ಅರೆಸ್ಟ್​​​

Friday, November 30th, 2018
mangaliuru

ಮಂಗಳೂರು: ಮದುವೆ ಮಾಡಿಸುವ ನೆಪದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಜಿಲ್ಲೆಯ ಕಡೂರು ಪೋಲಿಸರು ಬಂಧಿಸಿದ್ದಾರೆ. ಮಂಡ್ಯ ಮೂಲದ ರಾಮಕೃಷ್ಣ (52) ಬಂಧಿತ ಆರೋಪಿಯಾಗಿದ್ದಾನೆ. ಈತನನ್ನು ಬಂಧಿಸಲು ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿತ್ತು. ಈ ಖತರ್ನಾಕ್ ಆಸಾಮಿ ಎರಡನೇ ಮದುವೆ ಮಾಡಿಸುವ ನೆಪದಲ್ಲಿ ಹತ್ತಾರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿತ್ತಿದ್ದ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರ ಆಥಿತಿಯಾಗಿರುವ ರಾಮಕೃಷ್ಣನಿಗೆ ಹೆಚ್ಚು ಟಾರ್ಗೆಟ್ ಆಗಿರುವವರು ಸರ್ಕಾರಿ ನೌಕರಿಯ ಮಹಿಳೆಯರು. ಈತ ಚಿಕ್ಕಮಗಳೂರು ಮೂಲದ ಶಿಕ್ಷಕಿಗೆ ಮೋಸ […]

ಮಂಡ್ಯದಲ್ಲಿ ‘ಅಂಬಿ ನಿಂಗೆ ವಯಸ್ಸಾಯ್ತೋ’ ಮರು ರಿಲೀಸ್​..!

Tuesday, November 27th, 2018
ambarish

ಮಂಡ್ಯ: ಸೋಮವಾರ ಮಂಡ್ಯದ ಗಂಡು ಪಂಚಭೂತಗಳಲ್ಲಿ ಲೀನರಾದರು. ಅವರ ಅಗಲಿಕೆಯಿಂದ ಸ್ಯಾಂಡಲ್ವುಡ್ ಮಾತ್ರವಲ್ಲದೆ ಸಕ್ಕರೆ ನಾಡಿಗೂ ಸಹ ಅನಾಥ ಪ್ರಜ್ಞೆ ಕಾಡುತ್ತಿದೆ. ಈ ನಡುವೆ ಕರುನಾಡ ಕರ್ಣ ಅಂಬಿಯನ್ನು ಮತ್ತೆ ಇಂದು ತೆರೆಮೇಲೆ ಕಣ್ತುಂಬಿಕೊಳ್ಳುತ್ತಿದ್ದಾರೆ ಅಭಿಮಾನಿಗಳು. ಹೌದು, ಅಂಬರೀಶ್ ಅಭಿಮಾನಿಗಳ ಒತ್ತಾಯದ ಮೇರೆಗೆ ಮಂಡ್ಯದಲ್ಲಿ ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರವನ್ನು ಮರು ರಿಲೀಸ್ ಮಾಡಲು ನಿರ್ಧರಿಸಲಾಗಿದೆ. ಮಂಡ್ಯದ ಸಂಜಯ್ ಚಿತ್ರಮಂದಿರದಲ್ಲಿ ಇಂದಿನಿಂದ ಚಿತ್ರವನ್ನು ಮರು ರಿಲೀಸ್ ಮಾಡಲು ನಿರ್ಮಾಪಕ ಜಾಕ್ ಮಂಜು ನಿರ್ಧರಿಸಿದ್ದಾರೆ. ಅಲ್ಲದೆ ಇದರಿಂದ ಬರುವ […]

ಸಾಲಬಾಧೆ ತಾಳಲಾರದೆ ಜೆಡಿಎಸ್ ಮುಖಂಡ ಆತ್ಮಹತ್ಯೆ

Tuesday, October 16th, 2018
sucide

ಮಂಡ್ಯ: ಸಾಲಬಾಧೆ ತಾಳಲಾರದೆ ಜೆಡಿಎಸ್ ಮುಖಂಡ ಹಾಗೂ ಉದ್ಯಮಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸ್ವರ್ಣಸಂದ್ರ ಫ್ಯಾಕ್ಟರಿ ವೃತ್ತದಲ್ಲಿ ನಡೆದಿದೆ. ಚಿಕ್ಕೇಗೌಡನದೊಡ್ಡಿಯ ನಿವಾಸಿ ಲೋಕೇಶ್ (35) ಆತ್ಮಹತ್ಯೆಗೆ ಶರಣಾಗಿರುವ ಉದ್ಯಮಿ. ಲೋಕೇಶ್ ಮಹಿಂದ್ರಾ ಟ್ರ್ಯಾಕ್ಟರ್ ಶೋರೂಂ ನಡೆಸುತ್ತಿದ್ದರು. ಕಳೆದ ನಗರಸಭೆ ಚುನಾವಣೆಯಲ್ಲಿ 34 ನೇ ವಾರ್ಡ್ ನಿಂದ ಜೆಡಿಎಸ್ ಅಭ್ಯರ್ಥಿಯಗಿ ಸ್ಪರ್ಧಿಸಿ ಸೋಲನುಭವಿಸಿದ್ದರು. ಲೋಕೇಶ್ ವ್ಯವಹಾರದ ಸಲುವಾಗಿ 5 ಕೋಟಿ ರೂಪಾಯಿ ಸಾಲ ಮಾಡಿಕೊಂಡಿದ್ದು, ಆದ್ರೆ ವ್ಯವಹಾರದಲ್ಲಿ ನಷ್ಟ ಉಂಟಾಗಿ ಸಾವಿನ ಹಾದಿ ಹಿಡಿದಿದ್ದಾರೆ. ಸಾಲದ ಒತ್ತಡ‌ […]

ತಾಯಿಯನ್ನು ಕೆಟ್ಟದ್ದಾಗಿ ನಿಂದಿಸಿದಕ್ಕೆ ವ್ಯಕ್ತಿಯ ತಲೆ ಕಡಿದ ಮಗ

Saturday, September 29th, 2018
mandya

ಮಂಡ್ಯ: ತನ್ನ ತಾಯಿಗೆ ಬೈದನೆಂದು ಮಗನೋರ್ವ ವ್ಯಕ್ತಿಯ ರುಂಡ ಕತ್ತರಿಸಿ ಪೊಲೀಸ್ ಠಾಣೆಗೆ ತಂದು ಶರಣಾಗತನಾಗಿರುವ ಘಟನೆ ಮಳವಳ್ಳಿ ತಾಲೂಕಿನ ಚಿಕ್ಕಬಾಗಿಲು ಗ್ರಾಮದಲ್ಲಿ ನಡೆದಿದೆ. ಚಿಕ್ಕಬಾಗಿಲು ಗ್ರಾಮದ ಪಶುಪತಿ (24) ತಲೆ ಕಡಿದುಕೊಂಡು ಮಳವಳ್ಳಿ ಪೊಲೀಸ್ ಠಾಣೆಗೆ ಬಂದ ಯುವಕ‌. ಅದೇ ಗ್ರಾಮದ ಗಿರೀಶ್(35)ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ. ಆರೋಪಿ ಪಶುಪತಿಯು ತನ್ನ ತಾಯಿಗೆ ಗಿರೀಶ್ ಬೈದನೆಂದು ಆತನ ರುಂಡ ಕತ್ತರಿಸಿದ್ದಾನೆ ಎನ್ನಲಾಗಿದೆ. ಆರೋಪಿ ಕಡಿದು ತಂದ ರುಂಡ ಕಂಡು ಪೊಲೀಸ್ ಸಿಬ್ಬಂದಿ ಹೌಹಾರಿದ್ದಾರೆ. ಈ ಬಗ್ಗೆ […]