ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಬಳಸಿ ಮುಸ್ಲಿಮೇತರ ಸಾರ್ವಜನಿಕರಿಗೆ ತೊಂದರೆ ಕೊಡುವುದನ್ನು ನಿಲ್ಲಿಸದಿದ್ದರೆ ಬೃಹತ್ ಪ್ರತಿಭಟನೆ : ಶ್ರೀರಾಮ ಸೇನೆ

Thursday, September 30th, 2021
Sri-Rama-Sene

ಮಂಗಳೂರು : ಸುಪ್ರೀಂ ಕೋರ್ಟ್ ಆದೇಶ ಇದೆ ಎಂದು ರಾಜ್ಯ ಸರಕಾರ ಹಿಂದೂಗಳ ದೇವಸ್ಥಾನ ಉರುಳಿಸಿದೆ. ಅದೇ ಸರಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ ಇದ್ದರೂ ಮುಸ್ಲಿಮರು ಮಸೀದಿಗಳಲ್ಲಿ ಐದು ಹೊತ್ತು ಕೂಗುವ ಬಾಂಗ್ ನಿಲ್ಲಿಸಲು ಧೈರ್ಯ ಇಲ್ಲ ಎಂದು ಶ್ರೀರಾಮ ಸೇನೆ ರಾಜ್ಯ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್ ಹೇಳಿದ್ದಾರೆ. ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಧಾರ್ಮಿಕ ಆಚರಣೆ ಎಂದು ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಬಳಸಿ ಮುಸ್ಲಿಮೇತರ ಸಾರ್ವಜನಿಕರಿಗೆ ತೊಂದರೆ ಕೊಡುವುದನ್ನು ಕೂಡಲೇ ನಿಲ್ಲಿಸಬೇಕು ಇಲ್ಲದಿದ್ದರೆ […]

ಮುಜರಾಯಿ ಇಲಾಖೆಯ ನೂತನ ಆದೇಶ ಜನರ ನಡುವೆ ಗೊಂದಲ ಮೂಡಿಸುತ್ತದೆ : ಯು.ಟಿ.ಖಾದರ್

Sunday, June 13th, 2021
UT Khader

ಮಂಗಳೂರು  : ಮುಜರಾಯಿ ಇಲಾಖೆಯ ನೂತನ ಆದೇಶ ಜನರ ನಡುವೆ ಗೊಂದಲ, ಸಂಶಯ ಮೂಡಿಸುತ್ತದೆ ಹೊರತು ಯಾವುದೇ ಧಾರ್ಮಿಕ ಕೇಂದ್ರಗಳಿಗೆ ನಷ್ಟವೂ ಇಲ್ಲ,ಲಾಭವೂ ಇಲ್ಲ ಎಂದು  ಯು.ಟಿ.ಖಾದರ್ ಹೇಳಿದ್ದಾರೆ. ಬಹಳ ಸಮಯದ ಹಿಂದಿನಿಂದ ರಾಜರ ಆಳ್ವಿಕೆ ಇದ್ದ ಸಂದರ್ಭದಲ್ಲಿ ಮಂದಿರ ಮಸೀದಿಗಳ ನಿರ್ವಹಣೆಗಾಗಿ ದುಡ್ಡಿನ ಬದಲು “ಇನಾಮು” ಮೂಲಕ ಈ ಜಮೀನು ನೀಡಲಾಗುತ್ತಿತ್ತು. ನಂತರ ಭಾರತ ಸ್ವತಂತ್ರಗೊಂಡ ಬಳಿಕ ಮೊದಲಿದ್ದ ಕಾನೂನನ್ನು ರದ್ದು ಪಡಿಸಿ “Inams Abolition Act” ನ್ನು ಜಾರಿಗೆ ತಂದು ಸರಕಾರದ ವತಿಯಿಂದಲೇ ಮಂದಿರ ಮಸೀದಿಗಳ […]

ಯಾಕೆ ಈ ಪಾರ್ಷಿಯಾಲಿಟಿ ? ಮಂದಿರ, ಮಸೀದಿ, ಚರ್ಚ್ ಸಂಪೂರ್ಣ ಬಂದ್ !

Thursday, April 22nd, 2021
mandhir

ಉಡುಪಿ : ಸರಕಾರದ ಆದೇಶದಂತೆ ಕೊವಿಡ್ -19 ಸೋಂಕು ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ  ಮೇ4 ರವರೆಗೆ ಕರೋನ ನೈಟ್ ಕರ್ಫ್ಯೂ ಮತ್ತು ವಾರಂತ್ಯ ಕರ್ಫ್ಯೂ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಜಾರಿ ಗೊಳಿಸಿದ್ದು, ಅದರಂತೆ ಮಸೀದಿ, ದೇವಸ್ಥಾನ, ಚಚ್೯ ಸೇರಿದಂತೆ ಎಲ್ಲಾ ಧಾರ್ಮಿಕ ಸ್ಥಳಗಳನ್ನು ಸಾರ್ವಜನಿಕರಿಗೆ ಮುಂದಿನ ಆದೇಶವರೆಗೆ ಮುಚ್ಚಬೇಕು ಎಂದು ಉಡುಪಿ ಜಿಲ್ಲಾಧಿಕಾರಿ‌ ಜಿ.ಜಗದೀಶ್ ತಿಳಿಸಿದ್ದಾರೆ. ಪೂಜಾ ಸ್ಥಳದ ಸೇವೆಯಲ್ಲಿ ತೊಡಗಿರುವ ಎಲ್ಲಾ ಸಿಬ್ಬಂದಿಗಳು ಯಾವುದೇ ಸಂದರ್ಶಕರನ್ನು ಒಳಗೊಳ್ಳದೆ ತಮ್ಮ ಆಚರಣೆ ಗಳನ್ನು ಮತ್ತು ಕರ್ತವ್ಯಗಳನ್ನು ನಿರ್ವಹಿಸಬಹುದಾಗಿದೆ. ಅಲ್ಲದೆ ಕಾನೂನು ಉಲ್ಲಂಘನೆ ಮಾಡಿದ್ದಲ್ಲಿ […]

ಮಸೀದಿಗಳಲ್ಲಿ ನಮಾಝ್ ಸದ್ಯಕ್ಕಿಲ್ಲ : ಮುಸ್ಲಿಂ ಸೆಂಟ್ರಲ್‌ ಕಮಿಟಿ

Sunday, June 7th, 2020
jamia masjid

ಮಂಗಳೂರು : ಮಸೀದಿಗಳನ್ನು ಜೂ. 8ರಿಂದ ತೆರೆಯಲು ಸರಕಾರ ಅವಕಾಶ ಮಾಡಿಕೊಟ್ಟರೂ ಮುಂದೆ ಮಸೀದಿಗೆ ಸಂಬಂಧಿಸಿದ ನಿರ್ದಿಷ್ಟ ಮಾರ್ಗಸೂಚಿಗ ಳನ್ನು ಪ್ರಕಟಿಸಿದ ಬಳಿಕವೇ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್‌ ಕಮಿಟಿಯ ಅಧ್ಯಕ್ಷ ಅಲ್‌ಹಾಜ್‌ ಕೆ.ಎಸ್‌. ಮುಹಮದ್‌ ಮಸೂದ್‌ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸೀನ್‌ ಮಲ್ಪೆ ಅವರು ಈ ವಿಚಾರವನ್ನು ತಿಳಿಸಿದ್ದಾರೆ. ಆದರೆ ಮಂಗಳೂರು ಬಂದರ್‌ನ ಝೀನತ್‌ ಭಕ್ಷ್ ಕೇಂದ್ರ ಜುಮ್ಮಾ ಮಸೀದಿಯ […]

ಜೂನ್‌ 8‌ ರ ವರೆಗೆ ದೇವಸ್ಥಾನ, ಚರ್ಚ್, ಮಸೀದಿಗಳು ತೆರೆಯಲ್ಲ, ಹೊಟೇಲ್‌‌, ಮಾಲ್‌‌ಗಳು ಓಪನ್ ಇಲ್ಲ

Monday, June 1st, 2020
kaddri-temple

ಬಂಟ್ವಾಳ : ದೇಶಾದ್ಯಂತ ಲಾಕ್‌‌‌‌‌ಡೌನ್‌‌ 5.0 ಜಾರಿಯಲ್ಲಿರುವ ನಿಟ್ಟಿನಲ್ಲಿ ಜೂನ್‌ 1ರಿಂದ ತೆರೆಯಲು ಉದ್ದೇಶಿಸಿರುವ ದೇವಸ್ಥಾನ, ಮಸೀದಿ ಹಾಗೂ ಚರ್ಚ್‌‌ಗಳನ್ನು ತೆರೆಯಲು ಅವಕಾಶ ನೀಡದಿರಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಕೇಂದ್ರದ ಮಾರ್ಗಸೂಚಿಯಂತೆ ಜೂನ್‌ 8‌ ದೇವಸ್ಥಾನ, ಚರ್ಚ್, ಮಸೀದಿ, ಹೊಟೇಲ್‌‌, ಮಾಲ್‌‌ಗಳನ್ನು ತೆರೆಯಲು ರಾಜ್ಯ ಸರ್ಕಾರ ಮುಂದಾಗಿದೆ. ದೇವಸ್ಥಾನಗಳಲ್ಲಿ ಕೇವಲ ಅರ್ಚಕರು ಮಾತ್ರವೇ ಗರ್ಭಗುಡಿಗೆ ಪ್ರವೇಶಿಸಿ ಪೂಜೆ ಸಲ್ಲಿಸಬಹುದಾಗಿದೆ. ಇನ್ನು ದೇವಸ್ಥಾನ ಆರಂಭವಾದ ಬಳಿಕ ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಅಲ್ಲದೇ, ಮುಖಕ್ಕೆ ಮಾಸ್ಕ್‌‌‌‌ ಧರಿಸಿಯೇ ದೇವರ […]

ಮೈಕ್ ಹಾಕಿ ಅಜಾನ್ (ಬಾಂಗ್ ) ಕೊಡುವುದನ್ನು ಈಗಲಾದರೂ ನಿಲ್ಲಿಸಿ: ಜಾವೇದ್ ಅಖ್ತರ್

Tuesday, May 12th, 2020
Javed-Aktar

ಮುಂಬೈ :  ಮುಸಲ್ಮಾನರು ಅಜಾನ್ (ಬಾಂಗ್ ) ಕೊಡುವಾಗ ಧ್ವನಿವರ್ಧಕಗಳನ್ನು ಬಳಸಿ ಇತರರಿಗೆ ತೊಂದರೆಯಾಗುವ ಹಿನ್ನಲೆಯಲ್ಲಿ ಹಲವಾರು ದೂರುಗಳಿವೆ. ಹೈಕೋರ್ಟ್ ಸಹ ಅಜಾನ್ ಮೈಕ್ ಬಳಸಿ ಕೊಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಇದು ಉಲ್ಲಂಘನೆಯಾಗಬಾರದು ಎಂದು ಜಾವೇದ್ ಅಖ್ತರ್ ಧ್ವನಿ ಎತ್ತಿದ್ದಾರೆ. ಮತ್ತೊಬ್ಬರಿಗೆ ಧಕ್ಕೆಯಾಗುವ ಧ್ವನಿವರ್ಧಕಗಳನ್ನು ಬಳಸಿ ಪ್ರಾರ್ಥನೆ ಮಾಡುವುದನ್ನು ನಿಲ್ಲಿಸಬೇಕು ಎಂದು ಹಿರಿಯ ಬರಹಗಾರ ಗೀತರಚನೆಕಾರ ಜಾವೇದ್ ಅಖ್ತರ್ ಹೇಳಿದ್ದು, ಟ್ವೀಟ್ ಮಾಡಿದ್ದಾರೆ. ಶನಿವಾರ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಭಾರತದಲ್ಲಿ ಸುಮಾರು 50 ವರ್ಷಗಳ ಕಾಲ ಅಜಾನ್ ಹರಾಮ್ ಎಂದು […]

ಮಸೀದಿಗಳಲ್ಲಿ ಶುಕ್ರವಾರದ ನಮಾಝ್ ನಿಲ್ಲಿಸಲು ವಕ್ಫ್ ಇಲಾಖೆಯ ಆದೇಶ

Monday, March 23rd, 2020
sindhu b

ಮಂಗಳೂರು : ಧಾರ್ಮಿಕ ಕೇಂದ್ರಗಳಲ್ಲಿ ಜನಜಂಗುಳಿ ಸೇರುವುದನ್ನು ನಿಯಂತ್ರಿಸಲು  ಎಲ್ಲಾ ಮಸೀದಿಗಳಲ್ಲಿ ಶುಕ್ರವಾರದ ಜುಮಾ ನಮಾಝ್ ಸಹಿತ ದಿನದ ಐದು ಬಾರಿಯ ನಮಾಝ್‌ಗಳನ್ನು ಮಾ.31ರವರೆಗೆ ನಿಲ್ಲಿಸಲು ವಕ್ಫ್ ಇಲಾಖೆಯ ಕಾರ್ಯದರ್ಶಿ ಆದೇಶಿಸಿದ್ದಾರೆ. ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಕಾರ್ಯದರ್ಶಿಯ ಉಲ್ಲೇಖದಂತೆ ಎಲ್ಲರೂ ಮನೆಯಲ್ಲೇ ನಮಾಝ್ ನಿರ್ವಹಿಸಬೇಕು ಮತ್ತು ತುರ್ತು ಹೊರತುಪಡಿಸಿ ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬಾರದು ಎಂದು ಸೂಚಿಸಿದ್ದಾರೆ. ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಈ ಬಗ್ಗೆ ಪ್ರಕಟನೆ ಹೊರಡಿಸಿ ವಕ್ಫ್ ಇಲಾಖೆಯ ಕಾರ್ಯದರ್ಶಿ ಆದೇಶವನ್ನು ಪಾಲಿಸಲು ಸೂಚಿಸಿದ್ದಾರೆ.

9ನೇ ತರಗತಿಯಲ್ಲಿ ವಿವಾದಾತ್ಮಕ ಪಠ್ಯ, ಹಿಂದೂ ಸಂಘಟನೆಗಳ ಆಕ್ರೋಶ

Monday, June 4th, 2018
social-science

ಮಂಗಳೂರು: ರಾಜ್ಯದಲ್ಲಿ ಶಾಲೆ ಆರಂಭವಾಗಿವೆ. ಮಕ್ಕಳಿಗೆ ಸಮರ್ಪಕವಾಗಿ ಪಠ್ಯ ಪುಸ್ತಕಗಳೂ ಸರಬರಾಜಾಗಿವೆ . ಅದರ ಬೆನ್ನಲೇ ವಿವಾದಗಳು ಕೂಡ ಸುತ್ತಿಕೊಳ್ಳಲಾರಂಭಿಸಿವೆ. ಈ ಬಾರಿಯ 9 ನೇ ತರಗತಿಯ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಸಮಾಜ ವಿಜ್ಞಾನ ಪುಸ್ತಕದಲ್ಲಿ ಕ್ರೈಸ್ತ ಹಾಗು ಇಸ್ಲಾಂ ಧರ್ಮಗಳನ್ನು ವೈಭವೀಕರಿಸುವ ಪ್ರಯತ್ನಗಳು ನಡೆದಿದೆ ಎನ್ನುವ ಆರೋಪ ವ್ಯಕ್ತವಾಗಿದೆ. ಈ ಕುರಿತು ಹಿಂದೂ ಸಂಘಟನೆಗಳು ಖಂಡನೆ ವ್ಯಕ್ತಪಡಿಸಿದ್ದು ರಾಜ್ಯ ಸರಕಾರದ ವಿರುದ್ದ ಹೋರಾಟಕ್ಕೆ ಅಣಿಯಾಗುತ್ತಿವೆ. 9ನೇ ತರಗತಿಯ ಪ್ರಥಮ ಅಧ್ಯಾಯದಲ್ಲೇ ಇಸ್ಲಾಂ ಹಾಗೂ ಕ್ರಿಶ್ಚಿಯನ್ […]

ಇಮೇಜ್ ಟ್ರಸ್ಟ್ ಮಸೀದಿಗೆ ಉಚ್ಛನ್ಯಾಯಾಲಯ ತಡೆಯಾಜ್ಞೆ

Wednesday, March 9th, 2016
Image Masjid

ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ಬಿ.ಸಿ.ರೋಡಿನ ಮುಖ್ಯ ವೃತ್ತ ಬಳಿ ನಿರ್ಮಾಣ ಹಂತದಲ್ಲಿರುವ ಮೆ! ಇಮೇಜ್ ಟ್ರಸ್ಟ್ ಎಂಬ ಹೆಸರಿನ ಮಸೀದಿಗೆ ರಾಜ್ಯ ಉಚ್ಛನ್ಯಾಯಾಲಯ ತಡೆಯಾಜ್ಞೆ ನೀಡಿ ಆದೇಶಿಸಿದೆ. ಇಲ್ಲಿ ಮಸೀದಿ ನಿರ್ಮಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಘಟಕ ದ.ಕ.ಜಿಲ್ಲಾಧಿಕಾರಿ ಅವರ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಆದರೆ ಜಿಲ್ಲಾಧಿಕಾರಿಯವರ ನ್ಯಾಯಾಲಯ ಇದಕ್ಕೆ ತಡೆಯಾಜ್ಞ್ಲೆ. ಬಳಿಕ ಇವರ ಆದೇಶವನ್ನು ರಾಜ್ಯ ಉಚ್ಛನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಈ ಸಂದರ್ಭದಲ್ಲಿ ರಾಜ್ಯ ಉಚ್ಛನ್ಯಾಯಾಲಯ […]

ಕೊಲೆಯತ್ನ : ಆರು ಮಂದಿ ಆರೋಪಿಗಳ ಬಂಧನ

Tuesday, February 9th, 2016
6accused

ಮಂಗಳೂರು: ಮಸೀದಿಯೊಂದರ ವಿಷಯಕ್ಕೆ ಸಂಬಂದಿಸಿ ಯುವಕನೋರ್ವನ ಕೊಲೆಗೆ ಯತ್ನಿಸಿದ ಆರು ಮಂದಿ ಆರೋಪಿಗಳ ತಂಡವೊಂದನ್ನು ನಗರದ ಪೊಲೀಸರು ಬಂಧಿಸಿದ್ದಾರೆ. ಕಾಪ್ರಿಗುಡ್ಡೆ ನಿವಾಸಿ ಸಿ.ಅಬ್ದುಲ್ ಹಮೀದ್ (20), ಅತ್ತಾವರ ನಿವಾಸಿ ಎಂ.ಇಸ್ಮಾಯಿಲ್ ರಿಹಾನ್ (20), ಬೋಳಾರ ನಿವಾಸಿ ಉನೀಝ್ ಅಹಮ್ಮದ್ (20), ಅತ್ತಾವರ ನಿವಾಸಿ ಶಾಬಾನ್ ಮಿಷಾಬ್ (23), ಕುದ್ರೋಳಿ ನಿವಾಸಿ ನೌಫಲ್ (20) ಮತ್ತು ಕಾಸರಗೋಡಿನ ನಿವಾಸಿ ಸೊಹೈಲ್ ಎಂ.ಪಿ. ಬಂದಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಹಲ್ಲೆಗೊಳಗಾದ ಮೊಹಮ್ಮದ್ ಫೈಝಿಲ್ ಮತ್ತು ಆತನ ತಂದೆ ಹಾಗೂ ಆರೋಪಿ […]