ಸಲಿಲಸಲಿಲ ಜಲ ಧಾರೆ- ಅದರಿಲ್ಲಿ ಬಾವಿಗೆ ಮಣ್ಣಿನ ಧಾರೆ

Sunday, February 21st, 2016
mogral

ಕುಂಬಳೆ: ಶತಮಾನಗಳಿಂದ ನೂರಾರು ಜನರಿಗೆ ನೀರುಣಿಸುತ್ತಿದ್ದ ಸಾರ್ವಜನಿಕ ಬಾವಿಯೊಂದಕ್ಕೆ ಮಣ್ಣು ತುಂಬಿಸಿ ಮುಚ್ಚಿದ ಘಟನೆ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ. ಮೊಗ್ರಾಲ್ ಪೇರಾಲ್ ರಸ್ತೆ ಅಭಿವೃದ್ದಿಯ ಹೆಸರಲ್ಲಿ ರಸ್ತೆ ಹೆದ್ದಾರಿಯನ್ನು ಸಂಪರ್ಕಿಸುವಲ್ಲಿರುವ ಬಾವಿಯನ್ನು ಮಣ್ಣು ತುಂಬಿಸಿ ಮುಚ್ಚಲಾಗಿದೆ. 1913ರಲ್ಲಿ ಸಾರ್ವಜನಿಕರಿಗೆ,ದಾರಿ ಹೋಕರಿಗೆ ನೀರಡಿಕೆಯನ್ನು ತಣಿಸಲು ಅಂದಿನ ಆಡಳಿತ ನಿರ್ಮಿಸಿದ್ದ ಶತಮಾನದ ಬಾವಿಯನ್ನು ಅಭಿವೃದ್ದಿಯ ಹೆಸರಲ್ಲಿ ಮುಚ್ಚಿರುವುದು ಭಾರೀ ಜನಾಕ್ರೋಶಕ್ಕೆ ಕಾರಣವಾಗಿದೆ. ಪ್ರಾಕೃತಿಕ ಅಸಮತೋಲನದಿಂದ ಹದಗೆಟ್ಟ ವಾತಾವರಣದಲ್ಲಿ ಏರುತ್ತಿರುವ ಉಷ್ಣಾಂಶ ಹಾಗೂ ಕುಸಿಯುತ್ತಿರುವ ನೀರ ಸೆಲೆಗಳ ತೀವ್ರ ಆತಂಕಕಾರಿ ಸ್ಥಿತಿಯಲ್ಲೂ […]

ಕುಂಬಳೆ ಟೈಲರಿಂಗ್, ಜೀನಸು ಅಂಗಡಿ ಬೆಂಕಿಗಾಹುತಿ

Thursday, January 21st, 2016
tailor-Shop fire

ಕುಂಬಳೆ: ಮೊಗ್ರಾಲ್ ಪುತ್ತೂರು ಕಡವತ್‌ನಲ್ಲಿ ಎರಡು ಅಂಗಡಿಗಳು ಬೆಂಕಿ ತಗಲಿ ಉರಿದು ನಾಶಗೊಂಡಿದ್ದು, ಲಕ್ಷಾಂತರ ರೂ.ಗಳ ನಷ್ಟ ಸಂಭವಿಸಿದೆ. ಕಡವತ್‌ನ ಕಸಬ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಮೊಗ್ರಾಲ್ ಪುತ್ತೂರು ನಿವಾಸಿ ಕೃಷ್ಣ ಅವರ ಟೈಲರಿಂಗ್ ಅಂಗಡಿ ಹಾಗೂ ಮಾಲಿಂಗ ಶೆಟ್ಟಿ ಅವರ ಜೀನಸು ಅಂಗಡಿ ಉರಿದು ನಾಶಗೊಂಡಿದೆ. ಜ.19 ರಂದು ರಾತ್ರಿ ಈ ಘಟನೆ ನಡೆದಿದೆ. ಟೈಲರಿಂಗ್ ಅಂಗಡಿಯಲ್ಲಿ ಹೊಲಿಗೆಗೆಂದು ಇರಿಸಲಾಗಿದ್ದ ಸೀರೆಗಳು, ಪ್ಯಾಂಟ್, ಶರ್ಟ್, ಚೂಡಿದಾರ, ಎರಡು ಕಪಾಟುಗಳು, ಒಂದು ಕಟ್ಟಿಂಗ್ ಟೇಬಲ್, ಒಂದು ಟೈಲರಿಂಗ್ ಮೆಶಿನ್ […]

ಯುವ ಜನಾಂಗ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಿ : ಡಾ.ಅಬ್ದುಲ್ ಖಾದರ್

Friday, January 15th, 2016
Kulapati

ಕುಂಬಳೆ: ಮಾನವೀಯ ಚಿಂತನೆಗಳಿಗಿಂತ ಮಿಗಿಲಾದ ಮಾನವ ಧರ್ಮ ಬೇರೊಂದಿಲ್ಲ.ಇಂದಿನ ಯಾಂತ್ರಿಕ ಯುಗದಲ್ಲಿ ಮಾನವೀಯತೆ, ಸಂಬಂಧಗಳು ಗಂಭೀರವಾಗಿ ಕುಸಿಯುತ್ತಿರುವುದು ಆತಂಕಾರಿ. ಯುವ ಜನಾಂಗ ಮಾನವೀಯ ಮೌಲ್ಯಗಳನ್ನು ರೂಢಿಸಿ ಸಮದೇಶಗಳನ್ನು ಸಮಾಜದಲ್ಲಿ ಪಸರಿಸಲು ಪ್ರಯತ್ನಿಸಬೇಕೆಂದು ಕಣ್ಣೂರು ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ.ಅಬ್ದುಲ್ ಖಾದರ್ ಆಶಯ ವ್ಯಕ್ತಪಡಿಸಿದರು. ಕುಂಬಳೆಯಲ್ಲಿ ಕಾರ್ಯಾಚರಿಸುತ್ತಿರುವ ರಾಜ್ಯ ಸರಕಾರದ ಮಂಜೇಶ್ವರ ಐಎಚ್‌ಆರ್‌ಡಿ ಕಾಲೇಜಿನಲ್ಲಿ ಆರಂಭಿಸಲಾದ ವಿವಿಧ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕಾಲೇಜು ಯೂನಿಯನ್ ಅಧ್ಯಕ್ಷ ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರಂಗಭೂಮಿ ನಿರ್ದೇಶಕ ರಾಜನ್ […]

ಗಾಂಜಾ ಮಾರಾಟ ಪ್ರಕರಣದ ಆರೋಪಿಗಳ ಬಂಧನ

Wednesday, January 13th, 2016
Ganja seller

ಮಂಜೇಶ್ವರ : ಗಾಂಜಾ ಪ್ರಕರಣದ ಆರೋಪಿ ಪಾವೂರು ಬಳಿಯ ಮಚ್ಚಂಪಾಡಿ ನಿವಾಸಿ ಮೊಹಮ್ಮದ್ ಹನೀಫ್(25)ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಈತನೊಂದಿಗಿದ್ದ ಇನ್ನೋರ್ವ ಪರಾರಿಯಾಗಿದ್ದು ಈತನಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಈತನನ್ನು ಮೊರತ್ತಣೆಯಿಂದ ಬಂಧಿಸಲಾಗಿದೆ. ಈತ ಸಂಚರಿಸಿದ ಬೈಕ್‌ನ್ನು ವಶಪಡಿಸಲಾಗಿದೆ. ಈ ಬೈಕ್‌ನ್ನು ಕಳವು ಮಾಡಿದ್ದಾಗಿ ಪೊಲೀಸರು ಶಂಕಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಕುಂಬಳೆ ಪೋಲಿಸರು ಮಂಗಳವಾರ ಸಂಜೆ ಕುಂಬಳೆ ಮೀನು ಮಾರುಕಟ್ಟೆ ಬಳಿ 150 ಗ್ರಾಂ ಗಾಂಜಾ ಸಹಿತ ಓರ್ವನನ್ನು ಸೆರೆಹಿಡಿದಿದ್ದಾರೆ. ಪೇರಾಲ್ ನಿವಾಸಿ ಉಮ್ಮರ್ ಶಾಫಿ (40)ಬಂಧಿತ. […]

ರಾಜಕೀಯ ತಂತ್ರಗಳ ಮೂಲಕ ಜನರನ್ನು ಮರುಳುಗೊಳಿಸುತ್ತಿರುವ ಬಿಜೆಪಿ : ಉಮ್ಮನ್‌ಚಾಂಡಿ

Tuesday, January 5th, 2016
omanchandi

ಕುಂಬಳೆ: ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ಹಾಗೂ ಮತ ನಿರಪೇಕ್ಷತೆಯನ್ನು ಉಳಿಸಿ ಬೆಳೆಸುವಲ್ಲಿ, ಜನಸಾಮಾನ್ಯರಿಗೆ ಸೌಖ್ಯ ಸಮಾಧಾನದಲ್ಲಿ ಬದುಕು ಸಾಗಿಸಲು ಅನುವು ಮಾಡಿಕೊಡುವ ಆಡಳಿತ ನೀಡಲು ಕಾಂಗ್ರೆಸ್ಸ್ ಪಕ್ಷದಿಂದ ಮಾತ್ರ ಸಾಧ್ಯ. ನರೇಂದ್ರ ಮೋದಿಯವರು ಪ್ರಧಾನಿಯಾದೊಡನೆ ಜನಸಾಮಾನ್ಯರು ಅವರ ಮೇಲಿರಿಸಿದ್ದ ನಂಬಿಕೆಗಳು ಇದೀಗ ಹುಸಿಯೆಂದು ಅನಿಸತೊಡಗಿದೆಯೆಂದು ರಾಜ್ಯದ ಮುಖ್ಯಮಂತ್ರಿ ಉಮ್ಮನ್‌ಚಾಂಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಕೇರಳ ಪ್ರದೇಶ್ ಕಾಂಗ್ರೆಸ್ಸ್ ಸಮಿತಿ(ಕೆಪಿಸಿಸಿ)ಅಧ್ಯಕ್ಷ ವಿ.ಎಂ ಸುಧೀರನ್ ನೇತೃತ್ವದಲ್ಲಿ ಆರಂಭಿಸಲಾದ ಜನಪಕ್ಷ ಯಾತ್ರೆಯನ್ನು ಸೋಮವಾರ ಸಂಜೆ ಕುಂಬಳೆಯಲ್ಲಿ ಪಕ್ಷದ ಧ್ವಜವನ್ನು ಸುಧೀರನ್ ರವರಿಗೆ ಹಸ್ತಾಂತರಿಸುವ ಮೂಲಕ […]