Blog Archive

ಮುಂಬಯಿಯಲ್ಲಿ ಕೊರೊನಾ ಕಾಯಿಲೆಯಿಂದ ಕಾರ್ಕಳ ರೋನಾಲ್ಡ್ ಡಿಮೆಲ್ಲೋ ಸಾವು

Monday, April 6th, 2020
Ronald-D-Mello-Karkala

ಮುಂಬಯಿ : ದ ತಾಜ್ ಮುಂಬಯಿ ಉದ್ಯೋಗಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ಕಾರ್ಕಳ ತಾಲೂಕು ಕೆಮ್ಮಣ್ಣುಗುಂಡಿ (ರಾಮಸಮುದ್ರ್ರ) ಮೂಲತಃ ರೋನಾಲ್ಡ್ ಡಿಮೆಲ್ಲೋ (60) ಕಳೆದ ಭಾನುವಾರ ಉಪನಗರ ನಲ್ಲಸೋಫರಾ ಪಶ್ಚಿಮದಲ್ಲಿನ ರಿದ್ಧಿ ವಿನಾಯಕ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕು ಪೀಡಿತರಾಗಿ ವಿಧಿವಶರಾದರು. ಬೃಹನ್ಮುಂಬಯಿ ಕೊಲಬಾ ಇಲ್ಲಿನ ಪ್ರತಿಷ್ಠಿತ ತಾರಾ ಹೊಟೇಲು ತಾಜ್‌ಮಹಲ್ ಪ್ಯಾಲೇಸ್ ಇಲ್ಲಿ ಸುಮಾರು 40 ವರ್ಷಗಳಿಂದ ಕ್ಯಾಪ್ಟನ್ ಆಗಿ ಶ್ರಮಿಸುತ್ತಿದ್ದ ರೋನಾಲ್ಡ್ ಕಳೆದ ಮಾ.24 ರಂದು ಅರ‍್ವತ್ತು ವರ್ಷಗಳನ್ನು ಪೂರೈಸಿದ್ದರು. ಇದೇ […]

ಮುಂಬಯಿ; ಆಹಾರ ಪೊಟ್ಟಣಗಳ ಉಪಚಾರಗೈಯುತ್ತಿರುವ ಉಡುಪಿ ಮೂಲದ ಕನ್ನಡಿಗ ಬಿ.ಆರ್ ಶೆಟ್ಟಿ

Wednesday, April 1st, 2020
B-R-Shetty-Help-

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್) ಮುಂಬಯಿ : ವಿಶ್ವದಾದ್ಯಂತ ತಾಂಡವವಾಡುತ್ತಿರುವ ಕೊರೋನಾ ಮಹಾ ಮಾರಿಯಿಂದ ಸ್ತಬ್ಧ ಗೊಂಡಿರುವ ರಾಷ್ಟ್ರದ ಆಥಿಕ ರಾಜಧಾನಿ ಮುಂಬಯಿನಲ್ಲಿ ಉಪನಗರ ಅಂಧೇರಿಯಲ್ಲಿನ ಹೆಸರಾಂತ ಬಿ.ಆರ್ ಹೊಟೇಲು ಸಮೂಹವು ದೈನಂದಿನವಾಗಿ ಲಕ್ಷಾಂತರ ಮೊತ್ತದ ಆಹಾರ ಪೊಟ್ಟಣಗಳ ಉಪಚರಗೈದು ಸೇವೆಯಲ್ಲಿ ತೊಡಗಿಸಿದೆ. ಬೃಹನ್ಮುಂಬಯಲ್ಲಿನ ಹೆಸರಾಂತ ಉದ್ಯಮಿ, ಕೊಡುಗೈದಾನಿ, ಸಮಾಜ ಸೇವಕ, ಉಡುಪಿ ಮೂಲದ ಮುಂಬಯಿವಾಸಿ ಬಿ.ಆರ್ ರೆಸ್ಟೋರೆಂಟ್ಸ್ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಬಿ.ಆರ್ ಶೆಟ್ಟಿ ಮತ್ತು ಸೇವಾಕರ್ತರು ಆಹಾರ ಸಿದ್ಧಪಡಿಸಿ ಜನತೆಗೆ […]

ಶಿಕ್ಷಕರು ನಮ್ಮ ಸಮಾಜದ ಶಿಲ್ಪಿಗಳು: ಶಿಕ್ಷಕರ ದಿನಾಚರಣೆಯ ಮಾತು

Wednesday, September 5th, 2018
teachers-day

ಮುಂಬಯಿ: ಪ್ರತಿ ವರ್ಷ ಸೆಪ್ಟೆಂಬರ್ 5 ನೇ ತಾರೀಕಿನಂದು ನಾವೆಲ್ಲಾ ನಮ್ಮ ದೇಶದ ಎರಡನೇ ರಾಷ್ಟ್ರಪತಿ ಡಾ| ಸರ್ವಪಳ್ಳಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನಾಚರಣೆ ಎಂದು ಆಚರಿಸುತ್ತೇವೆ.ಡಾ| ಸರ್ವಪಳ್ಳಿ ರಾಧಾಕೃಷ್ಣನ್ ಒಬ್ಬ ಶ್ರೇಷ್ಟ ತತ್ವಜ್ಞಾನಿ, ನೆನಪಿನಲ್ಲಿ ಅಚ್ಚಳಿಯದೆ ಉಳಿಯುವ ಶಿಕ್ಷಕ ಮಾತ್ರವಲ್ಲ ಹೃದಯವಂತಿಕೆಯಲ್ಲಿ ಒಬ್ಬ ಮಹಾನ್ ಮಾನವತಾವಾದಿ. ಹಾಗಾಗಿ ಈ ದೇಶದ ಭಾವೀ ನಾಯಕರನ್ನುಬೆಳೆಸಿ, ಪೋಷಿಸುವ, ಅವರಲ್ಲಿ ದೂರದೃಷ್ಟಿತ್ವ ಬೆಳೆಸುವ ಮತ್ತು ಜವಾಬ್ದಾರಿಯುತ ನಾಗರಿಕರನ್ನುಸೃಷ್ಟಿಸುವಲ್ಲಿ ಅಪಾರ ಕೊಡುಗೆಯನ್ನು ನೀಡುವ ಶಿಕ್ಷಕರಿಗೆ ಅವರಹುಟ್ಟಿದ ದಿನವನ್ನು ಅರ್ಪಿಸಲಾಗಿದೆ. ನಮ್ಮ ಎಲ್ಲಾ […]

ತಾಂತ್ರಿಕ ದೋಷ: ಏರ್‌ ಇಂಡಿಯಾ ವಿಮಾನ ರನ್‌ವೇಯಿಂದ ವಾಪಸ್‌

Monday, January 29th, 2018
rescheduled

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಿಂದ ಮುಂಬಯಿಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಪತ್ತೆಯಾಗಿ ರನ್‌ವೇಯಿಂದ ವಾಪಸಾದ ಘಟನೆ ರವಿವಾರ ಸಂಭವಿಸಿದ್ದು, ಏರ್‌ ಇಂಡಿಯಾ ಸಂಸ್ಥೆಯು ಪ್ರಯಾಣಿಕರಿಗೆ ಸೋಮವಾರ ಮುಂಬಯಿಗೆ ಪಯಣಿಸುವ ವ್ಯವಸ್ಥೆ ಮಾಡಿದೆ. ರವಿವಾರ ಮಧ್ಯಾಹ್ನ 12.20ಕ್ಕೆ ವಿಮಾನವು ಪ್ರಯಾಣಿಕರನ್ನು ಹೊತ್ತು ರನ್‌ವೇಯಲ್ಲಿ ಚಲನೆ ಆರಂಭಿಸಿತ್ತು. ಕೆಲವೇ ಮೀಟರ್‌ಗಳಷ್ಟು ದೂರ ಕ್ರಮಿಸಿದಾಗ ವಿಮಾನದ ಎಂಜಿನ್‌ನ ಸ್ಟಾರ್ಟರ್‌ನಲ್ಲಿ ಲೋಪ ಕಂಡುಬಂದಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವಿಮಾನ ರನ್‌ವೇಯಿಂದ ನಿಲ್ದಾಣಕ್ಕೆ ಮರಳಿದೆ. ವಿಮಾನದಲ್ಲಿ 116 ಮಂದಿ ಪ್ರಯಾಣಿಕರು […]

ಮುಂಬಯಿ ಹೈಕೋರ್ಟ್‌ಗೆ ಹಾಜರಾದ ರೇಶ್ಮಾ; ಹೆತ್ತವರ ಜತೆ ತೆರಳಲು ಅನುಮತಿ

Tuesday, January 23rd, 2018
reshma

ಮಂಗಳೂರು: ಅಪಹರಣ ಅರ್ಜಿ ಸಂಬಂಧಿಸಿ ಕಾನೂನು ವಿದ್ಯಾರ್ಥಿನಿ, ಕಾಸರಗೋಡಿನ ರೇಶ್ಮಾ ಸೋಮವಾರ ಮುಂಬಯಿ ಹೈಕೋರ್ಟ್‌ಗೆ ಹಾಜರಾದರು. ತನ್ನ ಪತ್ನಿ ರೇಶ್ಮಾಳನ್ನು ಅಪಹರಿಸಲಾಗಿದೆ ಎಂದು ಮುಂಬಯಿ ಹೈಕೋರ್ಟಿನಲ್ಲಿ ಮಹಮ್ಮದ್‌ ಇಕ್ಬಾಲ್‌ ಚೌಧುರಿ ದಾಖಲಿಸಿದ್ದ ಹೇಬಿಯಸ್‌ ಕಾರ್ಪಸ್‌ ರಿಟ್‌ ಅರ್ಜಿ ಸಂಬಂಧ ಪಟ್ಟಂತೆ ರೇಶ್ಮಾ ಸೋಮವಾರ ಮುಂಬಯಿ ಹೈಕೋರ್ಟ್‌ಗೆ ಹಾಜ ರಾಗಿ, ತನ್ನನ್ನು ಯಾರೂ ಅಪಹರಿಸಿಲ್ಲ. ತಾನು ಸ್ವಇಚ್ಛೆಯಿಂದ ತನ್ನ ಊರಿಗೆ ತೆರಳಿರುವುದಾಗಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದರು. ಅದನ್ನು ಪರಿಗಣಿಸಿ ಆಕೆಯ ಊರಿಗೆ ಮರಳಲು ನ್ಯಾಯಾಲಯ ಅನುಮತಿ ನೀಡಿತು. ರೇಶ್ಮಾ […]

ಪ್ರಿಯಾಂಕಾ ಮುಂಬಯಿಯಲ್ಲಿ?

Friday, December 22nd, 2017
priyanka

ಮಂಗಳೂರು: ಮದುವೆ ನಿಗದಿಯಾದ ಬಳಿಕ ನಾಪತ್ತೆಯಾಗಿದ್ದ ಯುವತಿ ಧರೆಗುಡ್ಡೆಯ ಪ್ರಿಯಾಂಕಾ (25) ತನಿಖೆಗೆ ತೆರಳಿದ ನಗರ ಪೊಲೀಸರಿಗೆ ಪ್ರಿಯಕರನ ಜತೆ ಪತ್ತೆಯಾಗಿದ್ದಾಳೆಂದು ಮೂಲಗಳಿಂದ ತಿಳಿದು ಬಂದಿದೆ. ಈಕೆಯ ಮದುವೆ ಡಿ. 11ರಂದು ನಿಗದಿಯಾಗಿತ್ತು. ಆದರೆ ಈ ನಡುವೆ ಡಿ. 9ರಂದು ಮೆಹಂದಿ ಕಾರ್ಯಕ್ರಮವಿತ್ತು. ಡಿ. 8ರಂದು ರಾತ್ರಿ ಮನೆಯವರು ಊಟ ಮಾಡಿ ಮಲಗಿದ ವೇಳೆ, ಆಕೆ ನಾಪತ್ತೆಯಾಗಿದ್ದಳು. ಪ್ರಿಯಾಂಕಾಳ ಕುಟುಂಬ 2 ವರ್ಷಗಳಿಂದ ಇನೋಳಿಯಲ್ಲಿ ವಾಸಿಸುತ್ತಿದ್ದು, ಅದೇ ಊರಿನ ನಿವಾಸಿ ಹೈದರ್‌ ಜತೆ ಆಕೆಗೆ ಪ್ರೀತಿ ವ್ಯವಹಾರವಿತ್ತೆಂದು […]

ಬಂಟ್ಸ್ ಸಂಘ ಮುಂಬಯಿ 2017-20 ಸಮಿತಿಗೆ ನೂತನ ಸಾರಥಿಗಳ ಆಯ್ಕೆ

Wednesday, November 1st, 2017
bunts sanga

ಮುಂಬಯಿ: ಬಂಟ ಸಮುದಾಯದ ರಾಷ್ಟ್ರದ ಪ್ರತಿಷ್ಠಿತ ಸಂಸ್ಥೆಯೆಂದೆಣಿಸಿದ ಬಂಟ್ಸ್ ಸಂಘ ಮುಂಬಯಿ ಇದರ ವಾರ್ಷಿಕ 89 ನೇ ಮಹಾಸಭೆಯು ಇಂದಿಲ್ಲಿ ಸೋಮವಾರ ಪೂರ್ವಾಹ್ನ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ ಅಧ್ಯಕ್ಷತೆಯಲ್ಲಿ ನೆರವೇರಿದ್ದು ಸಭೆಯಲ್ಲಿ ಸಂಘದ 2017-20 ನೇ ಸಾಲಿಗೆ ನೂತನ ಸಾರಥಿಗಳ ಆಯ್ಕೆ ನಡೆಸಲ್ಪಟ್ಟಿತು. ಸಂಘದ 29 ನೇ ಅಧ್ಯಕ್ಷರಾಗಿ ಪದ್ಮನಾಭ ಎಸ್.ಪಯ್ಯಡೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಆಗಿ ರಂಜನಿ ಸುಧಾಕರ ಹೆಗ್ಡೆ ಮತ್ತು ಯುವ […]

ಮುಂಬಯಿ ಬಿಲ್ಲವರ ಅಸೋಸಿಯೇಶನ್ ನೂತನ ಅಧ್ಯಕ್ಷರಾಗಿ ನಿತ್ಯಾನಂದ ಡಿ. ಕೋಟ್ಯಾನ್ ಅಯ್ಕೆ

Saturday, August 9th, 2014
Billava Mumbai

ಮುಂಬಯಿ: ನಗರದ ಹಿರಿಯ ಸಾಮಾಜಿಕ ಸಂಸ್ಥೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ನೂತನ ಅಧ್ಯಕ್ಷರಾಗಿ ನಿತ್ಯಾನಂದ ಡಿ. ಕೋಟ್ಯಾನ್ ಆಯ್ಕೆಯಾದರು. ಕಳೆದ ಶುಕ್ರವಾರ ಸಂಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದಲ್ಲಿ ಜರಗಿದ ಬಿಲ್ಲವರ ಅಸೋಸಿಯೇಶನ್ನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನಡೆಸಲಾದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನಿತ್ಯಾನಂದ ಡಿ.ಕೋಟ್ಯಾನ್ ನೂತನ ಅಧ್ಯಕ್ಷರಾಗಿ, ಜ್ಯೋತಿ ಕೆ.ಸುವರ್ಣ ಅವರು ಉಪಾಧ್ಯಕ್ಷ, ಡಾ| (ನ್ಯಾಯವಾದಿ) ಯು. ಧನಂಜಯ ಕುಮಾರ್ ಅವರು ನೂತನ ಗೌರವ ಪ್ರಧಾನ ಕಾರ್ಯ ದರ್ಶಿ ಆಗಿ ಆಯ್ಕೆಯಾದರು. ಕಳೆದ 23 […]

ಮುಂಬಯಿ- ಮಂಗಳೂರು ಖಾಸಗಿ ಬಸ್ಸಿನಲ್ಲಿ ಪ್ರಜ್ಞೆ ತಪ್ಪಿಸಿ ಪ್ರಯಾಣಿಕನ ಲೂಟಿ

Friday, August 5th, 2011
Bus-Passenger-Luted/ಬಸ್ಸಿನಲ್ಲಿ ಪ್ರಜ್ಞೆ ತಪ್ಪಿಸಿ ಪ್ರಯಾಣಿಕನ ಲೂಟಿ

ಮಂಗಳೂರು : ಮುಂಬಯಿನಿಂದ ಮಂಗಳೂರಿಗೆ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸಿದ್ದ ಕಾಸರಗೋಡಿನ ಕುಂಬಳೆಯ ವಿಶ್ವನಾಥ ಶೆಟ್ಟಿ (36) ಯವರನ್ನು ಬುಧವಾರ ರಾತ್ರಿ ಮತ್ತು ಬರುವ ಪದಾರ್ಥ ನೀಡಿ. ಪ್ರಜ್ಞೆ ತಪ್ಪಿಸಿ ನಗದು ಹಾಗೂ ಚಿನ್ನಾಭರಣಗಳನ್ನು ಲೂಟಿಗೈಯಲಾಗಿದೆ. ಮಂಗಳೂರಿಗೆ ತಲುಪುವಾಗ ಅರೆ ಪ್ರಜ್ಞಾವಸ್ಥೆಯಲ್ಲಿ ಉಟ್ಟ ಬಟ್ಟೆ ಮತ್ತು ಮೊಬೈಲ್‌ ಫೋನ್‌ ಹೊರತು ಪಡಿಸಿ ಉಳಿದೆಲ್ಲವನ್ನೂ ಕಳೆದುಕೊಂಡಿದ್ದಾರೆ. ಬುಧವಾರ ಮಧ್ಯಾಹ್ನ ಮುಂಬಯಿನ ಮಲಾಡ್‌ನಿಂದ ಖಾಸಗಿ ಸಂಸ್ಥೆಯ ವೋಲ್ವೊ ಬಸ್ಸನ್ನೇರಿದ ವಿಶ್ವನಾಥ ಶೆಟ್ಟಿ ಅವರು ಗುರುವಾರ ಪೂರ್ವಾಹ್ನ 10.30 ಕ್ಕೆ ಮಂಗಳೂರಿಗೆ ತಲುಪಿದಾಗ […]