ಮಂಗಳೂರು ಅದಾನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಯೋಗಗಳಿಂದ ಸ್ಥಳೀಯರು ಹೊರಕ್ಕೆ

Monday, October 11th, 2021
Adani Airport

ಮಂಗಳೂರು : ಮಂಗಳೂರು ವಿಮಾನ ನಿಲ್ದಾಣ ಅದಾನಿ ಕಂಪೆನಿಗೆ ವಹಿಸಿದ ಬಳಿಕ ವಿಮಾನ ನಿಲ್ದಾಣದ ಗುತ್ತಿಗೆ ಕಂಪೆನಿಗಳ ಅಡಿ ದುಡಿಯುತ್ತಿದ್ದ ಸ್ಥಳೀಯ ಕಾರ್ಮಿಕರನ್ನು ಹಲವು ನೆಪಗಳನ್ನು ಮುಂದಿಟ್ಟು ಕೈ ಬಿಡಲಾಗುತ್ತಿದೆ. ಹೊರ ರಾಜ್ಯದ ಗುತ್ತಿಗೆ ಕಾರ್ಮಿಕರ ಸೇರ್ಪಡೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಡಿವೈಎಫ್ಐ ಮುಖಂಡ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದ ಅಗ್ನಿಶಾಮಕ ದಳಕ್ಕೆ ಅದಾನಿ ಕಂಪೆನಿ ನೇರ ನೇಮಕಾತಿ ಮಾಡಬೇಕಿದ್ದು, 80 ಸಿಬ್ಬಂದಿಗಳ ನೇಮಕಾತಿಯ ಅಗತ್ಯ ಇದ್ದರೂ ಸದ್ಯ 20 ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಇಲ್ಲಿ ಆಘಾತಕಾರಿ ಸಂಗತಿಯೆಂದರೆ SSLC […]

ಎಕ್ಕಾರಿನಲ್ಲಿ ನಿರ್ಮಾಣಗೊಳ್ಳಬೇಕಿದ್ದ ಕ್ಷಿಪ್ರ ಕಾರ್ಯಾಚರಣೆ ಪಡೆ ಸ್ಥಳಾಂತರ, ಜಿಲ್ಲೆಗೆ ಮಾಡಿದ ಮೋಸ

Tuesday, January 19th, 2021
muneerKatialla

ಮಂಗಳೂರು : ನಗರ ಹೊರವಲಯದ ಬಡಗ ಎಕ್ಕಾರಿನಲ್ಲಿ ನಿರ್ಮಾಣಗೊಳ್ಳಬೇಕಿದ್ದ ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್ ಎಎಫ್) ಘಟಕ ಯಾರ ಅರಿವಿಗೂ ಬಾರದಂತೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಗೆ ಸ್ಥಳಾಂತರಿಸಿ  ಶಿಲಾನ್ಯಾಸ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಹಿಂದೆ ಕರಾವಳಿಯ ಬ್ಯಾಂಕುಗಳು ಉತ್ತರ ಭಾರತದ ಬ್ಯಾಂಕುಗಳೊಂದಿಗೆ ವಿಲೀನ, ಮಂಗಳೂರು ವಿಮಾನ ನಿಲ್ದಾಣ ಅದಾನಿ ಕಂಪೆನಿಗೆ ಹಸ್ತಾಂತರ, ಇದೀಗ ಕ್ಷಿಪ್ರ ಕಾರ್ಯಾಚರಣೆ ಪಡೆಯ ಘಟಕ ಸ್ಥಳಾಂತರ ಸಂಸದ ನಳಿನ್ ಕುಮಾರ್ ಕಟೀಲ್ ವೈಫಲ್ಯ ಎಂದು ಮುನೀರ್‌ ಕಾಟಿಪಳ್ಳ ಆರೋಪಿಸಿದ್ದಾರೆ. ಈ ವೈಫಲ್ಯದ ಜವಾಬ್ದಾರಿಯನ್ನು […]

ಸುರತ್ಕಲ್ : ಟೋಲ್ ಗುತ್ತಿಗೆ ನವೀಕರಿಸದಿರಲು ಹೋರಾಟ ಸಮಿತಿ ಆಗ್ರಹ

Saturday, October 26th, 2019
jayakumar

ಸುರತ್ಕಲ್ : ತಾತ್ಕಾಲಿಕ ನೆಲೆಯಲ್ಲಿ ಕಾರ್ಯಾಚರಿಸುತ್ತಿರುವ ಸುರತ್ಕಲ್(ಮುಕ್ಕ) ಅಕ್ರಮ ಟೋಲ್ ಕೇಂದ್ರದಲ್ಲಿ ಟೋಲ್ ಸಂಗ್ರಹದ ಗುತ್ತಿಗೆ ನವೆಂಬರ್ ಹದಿನೈದಕ್ಕೆ ಮುಕ್ತಾಯಗೊಳ್ಳುತ್ತದೆ. ಯಾವುದೇ ಕಾರಣಕ್ಕೂ ಟೋಲ್ ಗುತ್ತಿಗೆಯನ್ನು ನವೀಕರಿಸದೆ, ಹೆದ್ದಾರಿ ಪ್ರಾಧಿಕಾರ ತೆಗೆದು ಕೊಂಡ ತೀರ್ಮಾನದಂತೆ ಟೋಲ್ ಕೇಂದ್ರವನ್ನು ಅಲ್ಲಿಂದ ತೆರವುಗೊಳಿಸಬೇಕು, ಹಾಗೂ ಹೆದ್ದಾರಿ ಗುಂಡಿಗಳಿಂದ ಅಪಾಯಕಾರಿ ಸ್ಥಿತಿಗೆ ತಲುಪಿರುವ ಸುರತ್ಕಲ್, ನಂತೂರು ಹೆದ್ದಾರಿಯನ್ನು ತಕ್ಷಣ ದುರಸ್ತಿಗೊಳಿಸಬೇಕು, ದುರ್ಬಲಗೊಂಡು ಸಂಚಾರಕ್ಕೆ ಅಯೋಗ್ಯಗೊಂಡಿರುವ ಕೂಳೂರು ಸೇತುವೆಗೆ ಪರ್ಯಾಯವಾಗಿ ಹೊಸ ಸೇತುವೆಯನ್ನು ನಿರ್ಮಿಸಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ […]

ನಳಿನ್ ಕುಮಾರ್ ಕಟೀಲ್ ಸೋಲಿಸಿ . ಜಿಲ್ಲೆಯ ಜನಪರ ಸಂಘಟನೆಗಳ ಜಂಟಿ ಮನವಿ

Monday, April 15th, 2019
cpim

ಮಂಗಳೂರು  : ಒಂದು ಕಾಲದಲ್ಲಿ ಅಭಿವೃದ್ದಿ, ಸಾಮರಸ್ಯಕ್ಕೆ ಹೆಸರಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಕಳೆದ ಎರಡು ದಶಕಗಳಿಂದ ಅಭಿವೃದ್ದಿಯಲ್ಲಿ ಹಿನ್ನಡೆ ಕಾಣುತ್ತಿದೆ. ಮತೀಯ ಸಂಘರ್ಷದಿಂದ ಸಾಮರಸ್ಯಕ್ಕೆ ಧಕ್ಕೆಯಾಗಿದ್ದು ಪರಸ್ಪರ ಅಪನಂಬಿಕೆ ಹೆಚ್ಚಾಗಿದೆ. ಇದು ಇಲ್ಲಿನ ಜನಜೀವನದ ಮೇಲೆ ಗಂಭೀರ ಪರಿಣಾಮ ಮೂಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ ಈ ಸ್ಥಿತಿಗೆ ಕಳೆದ ಮೂರು ದಶಕಗಳಿಂದ ಬಿಜೆಪಿ ಸತತವಾಗಿ ಗೆಲ್ಲುತ್ತಿರುವುದೇ ಕಾರಣ. ಜಿಲ್ಲೆಯ ಜನತೆ ಈ ಬಾರಿಯ ಚುನಾವಣೆಯಲ್ಲಿ ಇಂತಹ ತಪ್ಪು ಮರುಕಳಿಸದಂತೆ ಎಚ್ಚರ ವಹಿಸಬೇಕು. ದೇಶದ ಪಾಲಿಗೆ […]

4ನೇ ದಿನಕ್ಕೆ ಕಾಲಿಟ್ಟ ಸುರತ್ಕಲ್ ಟೋಲ್ ಗೇಟ್ ವಿರೋಧಿ ಧರಣಿ

Friday, October 26th, 2018
surathkal

ಮಂಗಳೂರು: ಸುರತ್ಕಲ್ನಲ್ಲಿರುವ ಅಕ್ರಮ ಟೋಲ್ ಗೇಟ್ ಮುಚ್ಚಬೇಕೆಂದು ಒತ್ತಾಯಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಟೋಲ್ ಗೇಟ್ ಗುತ್ತಿಗೆ ನವೀಕರಣ ವಿರುದ್ಧ ಹೋರಾಟ ನಡೆಯುತ್ತಿರುವಂತೆಯೇ, ಹೆದ್ದಾರಿ ಪ್ರಾಧಿಕಾರ ಒಂದು ವರ್ಷಕ್ಕೆ ಟೋಲ್ ಗುತ್ತಿಗೆಯನ್ನು ಮತ್ತೊಮ್ಮೆ ನವೀಕರಿಸಿದೆ ಎಂಬ ಸುದ್ದಿ ಹರಡಿತ್ತು‌. ಇದರಿಂದ ಧರಣಿ ನಿರತರು ಆಕ್ರೋಶ ಭರಿತರಾಗಿ ಘೋಷಣೆ ಕೂಗಲಾರಂಭಿಸಿದರು. ಜಿಲ್ಲಾಧಿಕಾರಿ ಪರವಾಗಿ, ಎಸಿ ರವಿಚಂದ್ರ ನಾಯಕ್ ಅವರು ಧರಣಿ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿ ಬೇಡಿಕೆಗಳನ್ನು […]

ಟೋಲ್ ಗೇಟ್ ಮುಚ್ಚುತ್ತೇವೆ ಎಂದು ಹೇಳುತ್ತಾ ಬಂದಿರುವ ನಳಿನ್ ಮುಚ್ಚುವ ಪ್ರಯತ್ನ ಮಾಡಿಲ್ಲ: ಬಶೀರ್ ಬೈಕಂಪಾಡಿ

Thursday, October 25th, 2018
protest

ಮಂಗಳೂರು: ದ.ಕ.ಜಿಲ್ಲೆಯ ಹೆದ್ದಾರಿಗಳು ವಾಹನ ಸಂಚಾರಕ್ಕೆ ದುಸ್ತರವಾಗಿವೆ. ಹೊಂಡಗಳೇ ತುಂಬಿರುವ ಸುರತ್ಕಲ್ನಿಂದ ನಂತೂರುವರೆಗಿನ ಹೆದ್ದಾರಿಯಲ್ಲಿ ಅಕ್ರಮವಾಗಿ ಸುಂಕ ಸಂಗ್ರಹಿಸುತ್ತಿರುವುದನ್ನು ತಡೆಯಲು ಸಂಸದರು ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ ಎಂದು ಮಂಗಳೂರು ಮಾಜಿ ಉಪಮೇಯರ್ ಬಶೀರ್ ಬೈಕಂಪಾಡಿ ದೂರಿದ್ದಾರೆ. ಸುರತ್ಕಲ್ ಟೋಲ್ ಗೇಟ್ ಮುಚ್ಚುತ್ತೇವೆ ಎಂದು ಪದೇ ಪದೇ ಹೇಳುತ್ತಾ ಬಂದಿರುವ ನಳಿನ್ ಇದನ್ನು ಮುಚ್ಚುವ ಪ್ರಯತ್ನ ಮಾಡಿಲ್ಲ. ಆದ್ದರಿಂದ ಅ.30ಕ್ಕೆ ಟೋಲ್ ಗೇಟ್ ಮುಚ್ಚದಿದ್ದಲ್ಲಿ ಜನತೆಯ ಬೆಂಬಲದೊಂದಿಗೆ ಅದನ್ನು ಎತ್ತಂಗಡಿ ಮಾಡುವ ಕಾರ್ಯಾಚರಣೆ ನಡೆಸುತ್ತೇವೆ ಎಂದು ಮಾಜಿ ಉಪಮೇಯರ್ […]

ಟೋಲ್ ಗೇಟ್ ಮುಚ್ಚಲು ಆಗ್ರಹ: ಎರಡನೇ ದಿನಕ್ಕೆ ಮುಂದುವರೆದ ಧರಣಿ..!

Wednesday, October 24th, 2018
tollgate

ಮಂಗಳೂರು: ಸುರತ್ಕಲ್ ಎನ್.ಐ.ಟಿ.ಕೆ ಬಳಿ ಇರುವ ಟೋಲ್ ಗೇಟ್ ಮುಚ್ಚುವಂತೆ ಆಗ್ರಹಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ನಡೆಸುತ್ತಿರುವ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ. ಎನ್.ಐ.ಟಿ.ಕೆ ಟೋಲ್ ಗೇಟ್ ನಲ್ಲಿ ಸುಂಕ ವಸೂಲಿ ಒಪ್ಪಂದ ಅಕ್ಟೋಬರ್ 30 ಕ್ಕೆ ಕೊನೆಗೊಳ್ಳಲಿದೆ. ಮುಂದೆ ನವೀಕರಣಕ್ಕೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿ ನಿನ್ನೆಯಿಂದ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಅನಿರ್ಧಿಷ್ಠಾವಧಿ ಮುಷ್ಕರ ಆರಂಭಿಸಿದೆ. ಹೋರಾಟ ಸಮಿತಿಯ ಮುಖಂಡ, ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಮಾಜಿ ಶಾಸಕ ವಿಜಯಕುಮಾರ್ […]

ಟೋಲ್‌ಗೇಟ್‌ ಅಧಿಕಾರಿಗಳಿಗೆ ಹಣ ಮಾಡುವ ಸ್ಕೀಮ್‌: ಮಾಜಿ ಶಾಸಕ ವಿಜಯ ಕುಮಾರ್‌ ಶೆಟ್ಟಿ

Tuesday, October 23rd, 2018
surathkal

ಸುರತ್ಕಲ್‌: ಕಾನೂನಿಗೆ ವಿರುದ್ಧವಾಗಿ ಸುರತ್ಕಲ್‌ನಲ್ಲಿ ಟೋಲ್‌ಗೇಟ್‌ ನಿರ್ಮಿಸಿ ಹಲವು ವರ್ಷಗಳಿಂದ ಜನರ ಹಣ ಸುಲಿಗೆ ಮಾಡಲಾಗುತ್ತಿದೆ. ಟೋಲ್‌ಗೇಟ್‌ ಅಧಿಕಾರಿಗಳಿಗೆ ಹಣ ಮಾಡುವ ಸ್ಕೀಮ್‌ ಎಂದು ಮಾಜಿ ಶಾಸಕ ವಿಜಯ ಕುಮಾರ್‌ ಶೆಟ್ಟಿ ಹೇಳಿದರು. ಎನ್‌ಐಟಿಕೆ ಸಮೀಪ ಇರುವ ಟೋಲ್‌ಗೇಟ್‌ನ ಪರವಾನಿಗೆ ನವೀಕರಣ ವಿರೋಧಿಸಿ ಹಾಗೂ ಮುಚ್ಚುವಂತೆ ಆಗ್ರಹಿಸಿ ಟೋಲ್‌ಗೇಟ್‌ ವಿರೋಧಿ ಹೋರಾಟ ಸಮಿತಿ ಸುರತ್ಕಲ್‌ನಲ್ಲಿ ಪ್ರಾರಂಭಿಸಿರುವ ಅನಿರ್ಧಿಷ್ಟಾವಧಿ ಹಗಲು ರಾತ್ರಿ ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಟೋಲ್‌ಗೇಟ್‌ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್‌ ಕಾಟಿಪಳ್ಳ ಮಾತನಾಡಿ, […]

ಸತ್ಯಜಿತ್ ಕಣ್ಣೀರು ಬಿಜೆಪಿಯ ಯುವಕರಿಗೆ ಪಾಠವಾಗಲಿ – ಮುನೀರ್ ಕಾಟಿಪಳ್ಳ

Thursday, May 10th, 2018
satyajith

ಮಂಗಳೂರು: “ಬಿಜೆಪಿಯಿಂದ ಧರ್ಮರಾಜಕಾರಣಕ್ಕೆ ಬಳಸಲ್ಪಡುವ ಹಿಂದುಳಿದ ವರ್ಗದ ಯುವಕರನ್ನು ರಾಜಕೀಯ ಪ್ರಾತಿನಿಧ್ಯದ ಪ್ರಶ್ನೆ ಬಂದಾಗ ಕ್ರಿಮಿನಲ್ ಗಳೆಂದು ದೂರ ಇಡಲಾಗುತ್ತದೆ. ಬಿಜೆಪಿ ಹಿರಿಯ ಮುಖಂಡ ಸತ್ಯಜಿತ್ ಸುರತ್ಕಲ್ ಇದಕ್ಕೊಂದು ಉದಾಹರಣೆ” ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸಿಪಿಐಎಂ ಅಭ್ಯರ್ಥಿ ಮುನೀರ್ ಕಾಟಿಪಳ್ಳ ಹೇಳಿದ್ದಾರೆ. ಅವರು ಸಂಜೆ ಕೋಡಿಕಲ್ ನಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತಾಡುತ್ತಿದ್ದರು. “ಬಿಜೆಪಿ ಹಿಂದುಳಿದ ವರ್ಗಗಳ ಯುವಕರಿಗೆ ಪ್ರಚೋದನೆ ಕೊಟ್ಟು ಅವರನ್ನು ಹಿಂಸಾ ರಾಜಕೀಯಕ್ಕೆ ಬಳಸಿಕೊಳ್ಳುತ್ತದೆ. ಧರ್ಮದ ಅಮಲಿನಲ್ಲಿ ಕೊಲೆ ಆರೋಪ […]

ಸಿಪಿಎಂ ಮುಖಂಡನ ಅಂಗಡಿಗೆ ಮತ್ತೆ ಬೆಂಕಿ ಹಚ್ಚಲು ಯತ್ನ!

Monday, May 7th, 2018
cpm-leader

ಮಂಗಳೂರು: ಸಿಪಿಎಂ ಪಕ್ಷದ ಮುಖಂಡನ ಅಂಗಡಿಗೆ ದುಷ್ಕರ್ಮಿಗಳು ಎರಡನೇ ಬಾರಿ ಬೆಂಕಿ ಹಚ್ಚಲು ಯತ್ನಿಸಿರುವ ಘಟನೆ ಸುರತ್ಕಲ್‌‌ನ ಕುಳಾಯಿಯಲ್ಲಿ ನಡೆದಿದೆ. ಸುರತ್ಕಲ್ ಭಾಗದ ಸಿಪಿಎಂ ಮುಖಂಡ ಶ್ರೀನಾಥ್ ಕುಲಾಲ್ ಎಂಬವರಿಗೆ ಸೇರಿದ ಗೋಡೌನ್ ಇದಾಗಿದ್ದು, ಮಂಗಳೂರು ಉತ್ತರ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಮುನೀರ್ ಕಾಟಿಪಳ್ಳ ಪ್ರಚಾರದಲ್ಲಿ ಇವರು ತೊಡಗಿದ್ದಾರೆ. ಕಳೆದ ಶನಿವಾರ ರಾತ್ರಿ ಬೆಂಕಿ ಹಚ್ಚಲು ಯತ್ನಿಸಿದ್ದ ದುಷ್ಕರ್ಮಿಗಳು ಮತ್ತೆ ನಿನ್ನೆ ಸಂಜೆಯೂ ಸಹ ಬೆಂಕಿ ಹಚ್ಚಲು ಯತ್ನಿಸಿದ್ದು, ಚುನಾವಣಾ ದ್ವೇಷದಿಂದ ಈ ಕೃತ್ಯ ನಡೆದಿರುವ ಶಂಕೆ […]